ಪೂರ್ಣತೆಯ ಅನುಭವ ಗುರುನಿನೊಂದಿಗೆ

ನಾನು ನನ್ನ ದ್ವಿತೀಯ ಪಿ ಯು ಮುಗಿಸಿ ಸಿ.ಇ.ಟಿ. ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿರುವಾಗ. ನನ್ನ ಸ್ನೇಹಿತನು ಸ್ವಾಮಿ ವಿವೇಕಾನಂದರ ಬಗ್ಗೆ ಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಲು ಕೆಲಸ ಮಾಡುತ್ತಿದ್ದ ನನ್ನನ್ನು ಆ ಸೇವೆಯಲ್ಲಿ ಪಾಲ್ಗೊಳ್ಳಲು ಕೇಳಿದಾಗ ನಾನು ಅದಕ್ಕೆ ಒಪ್ಪಿ ಬೆಂಗಳೂರು ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿರುವ ಶಾಲೆಗಳಲ್ಲಿ ಸ್ವಾಮಿ ವಿವೇಕಾನಂದರ ಬಗ್ಗೆ ಅರಿವನ್ನು ಮೂಡಿಸಲು ತೊಡಗಿದೆ ಸುಮಾರು 3000 ಕ್ಕೂ ಹೆಚ್ಚು ಮಕ್ಕಳು ಈ ಪರೀಕ್ಷೆ ತೆಗೆದುಕೊಂಡರು ಈ ಸೇವೆಯು ಅಂದುಕೊಂಡದಕ್ಕಿಂತ ಹೆಚ್ಚು ಯಶಸ್ಸು ಕಂಡಿತು ಇದರ ಕಾರಣ ನಮಗೆಲ್ಲ ಒಂದು ಪಾರ್ಟಿ ಕೊಡಿಸುವುದಾಗಿ ಸ್ನೇಹಿತನು ಹೇಳಿದನು. ನಮಗೆ ಆಗ ಪಾರ್ಟಿ ಎಂದರೆ ಆಟ ಮತ್ತು ಊಟ. ನಾವು 5 ಸ್ನೇಹಿತರು ಪಾರ್ಟಿಗೆಂದು ಹೊರಟೆವು ಆದರೆ ಒಬ್ಬ ಸ್ನೇಹಿತನಿಗೆ ಮಾತ್ರ ನಾವು ಎಲ್ಲಿ ಹೋಗುವೆವು ಎಂದು ತಿಳಿದಿತ್ತು. ಹಾಗೆ ಹೊರಟು ಸುಮಾರು ದೂರ ಹೋದ ಮೇಲೆ ಒಂದು ಮನೆಯ ಬಳಿ ಬಂಡಿಯನ್ನು ನಿಲ್ಲಿಸಿ ನನ್ನ ಸ್ನೇಹಿತನು ಮನೆಯ ಒಳಕ್ಕೆ ಹೊರಟನು ಬೇರೆ ದಾರಿ ಇಲ್ಲದೆ ನಾವು ಅವನನ್ನು ಹಿಂಬಾಲಿಸಿದೆವು ಅಲ್ಲಿ ಶುರುವಾಯ್ತು ನಮ್ಮ ಮೊದಲ ಬೇಟೆ ಪ. ಪೂ. ಶ್ರೀ ಶ್ರೀ ರವಿಶಂಕರ ಗುರುಗಳೊಂದಿಗೆ (ಸೆಪ್ಟೆಂಬರ್ 1993) ಆ ಮನೆಯಲ್ಲಿ ಸುಮಾರು 15 ರಿಂದ 20 ಮಂದಿ ಗುರುವಿನ ಸಾನಿಧ್ಯದಲ್ಲಿ ಭಜನೆ ಮಾಡುತ್ತಿದ್ದರು ಭಜನೆ ತುಂಬಾ ಇಷ್ಟವಾಯ್ತು. ನನ್ನ ಜೀವನ ಕಾಲಾ ಕೇಂದ್ರದಲ್ಲಿ ಜೀವನ ಹೀಗೆ ಶುರುವಾಯಿತು.

ಪರಮ ಪೂಜ್ಯ ಗುರುಗಳ ಸಾನಿಧ್ಯಕ್ಕೆ ಒಂದು ಸುಮಾರು ಎರಡು ದಶಕಗಳು ಕಳೆದಿದೆ ಗುರುಪ್ರವೇಶದಿಂದ ನನ್ನ ಜೀವನವೇ ಬದಲಿಸಿದೆ ನನ್ನ ಜೀವನಕ್ಕೆ ಅರ್ಥ ಹಾಗೂ ಪ್ರರ್ಣತೆಯನ್ನು ಕೊಟ್ಟ ಎನ್ನ ದೇವರ ಜೊತೆ ಇದ್ದ ಕೆಲವು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ನಾನು 1993 ರಲ್ಲಿ ಸಂಸ್ಥೆಗೆ ಬಂದರು, ಜೀವನ ಕಲೆ ಶಿಬಿರವನ್ನು ಮಾಡಿದ್ದು 1995 ರಲ್ಲಿ ಸುದರ್ಶನ ಕ್ರಿಯೆಯ ಅನುಭವ ಅದರಲ್ಲೂ ಸ್ವರ್ಗದಂತೆ ಸುಂದರವಾಗಿರುವ ನಮ್ಮ ಬೆಂಗಳೂರು ಆಶ್ರಮದಲ್ಲಿ ಕಲೆತದ್ದು ಇಂದಿಗೂ ಮರೆಯಲಾಗದು.

ಗುರುಗಳ ಕೃಪೆಯಿಂದ ಜೀವನ ಕಲೆಯ ಎಲ್ಲಾ ಕಾರ್ಯಕ್ರಮಗಳನ್ನು ಕಲೆತು 2002 ರಲ್ಲಿ ಜೀವನ ಕಲೆಯ ಶಿಕ್ಷಕನಾಗಿದ್ದೇನೆ, ಜೀವನಕಲೆ ಶಿಕ್ಷಕನಾಗುವುದು ಎಂದರೆ ಒಂದು ಎತ್ತರದ ಶಿಖರವನ್ನು ಏರಿದ ತೃಪ್ತಿ ಸಾವಿರಾರು ಜನರಿಗೆ ನಾನು ಕಲೆತ ಈ ಜೀವನ ಕಲೆಯನ್ನು ಹಂಚುವಾಗ ಆಗುವ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಶಿಬಿರ ಮುಗಿದಾಗ ಬರುವ ಒಂದು ಭಾವನೆ ಎಂದರೆ ಕೃತಜ್ಞತೆ ಮತ್ತು ಪೂರ್ಣತೆ. ಈ ನನ್ನ ಜೀವನವನ್ನು ಉದ್ಧರಿಸಿದ ಎನ್ನ ದೇವನ ಚರಣಕ್ಕೆ ಕೋಟಿ ಕೋಟಿ ಪ್ರಣಾಮ.

ನಾನು ಜೀವನ ಕಲೆ ಶಿಕ್ಷಕರ ಸಂಯೋಜಕನಾಗಿ, ಆಗಿ ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಈ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ವರ್ಷಕ್ಕೊಮ್ಮೆ ಪ್ರತಿಯೊಂದು ರಾಜ್ಯಕ್ಕೆ ಗುರುಗಳ ಸಾನಿಧ್ಯದಲ್ಲಿ ಉನ್ನತ ಧ್ಯಾನ ಶಿಬಿರ ಮಾಡುವ ಅವಕಾಶವನ್ನು ಬೆಂಗಳೂರು ಆಶ್ರಮ ಮಾಡಿಕೊಡುತ್ತದೆ. ಕರ್ನಾಟಕಕ್ಕೆ ನವೆಂಬರ್ ತಿಂಗಳಲ್ಲಿ ಈ ಒಂದು ಸದಾವಕಾಶ ಲಭಿಸಿತು ರಾಜ್ಯದ ಶಿಕ್ಷಕರ ಸಂಯೋಜಕನಾಗಿ ಆದ ನನ್ನಲ್ಲಿ ಒಂದು ಹಂಬಲ ಮೂಡಿ ಬಂತು ಹೇಗಾದರೂ ಮಾಡಿ ಈ ವರ್ಷದ ಶಿಬಿರ ಅತಿ ದೊಡ್ಡ ಶಿಬಿರವನ್ನಾಗಿಸಬೇಕೆಂದು ಮನಸ್ಸಿನಲ್ಲಿ ಸಂಕಲ್ಪ ಇಟ್ಟು ಬೇರೆ ಶಿಕ್ಷಕರನ್ನು ಹಾಗೂ ಸ್ವಯಂ ಸೇವಕರನ್ನು ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಶಿಬಿರಕ್ಕೆ ತಯಾರಿ ನಡೆಸುತ್ತಿರುವಾಗ ಟಿ.ಟಿ.ಪಿ ಶಿಬಿರಕ್ಕೆ ನನ್ನನ್ನು ಮಾತನಾಡಲು ಆಹ್ವಾನಿಸಿದ್ದರು ಅಲ್ಲಿ ಒಬ್ಬ ವ್ಯಕ್ತಿ ನನಗೆ ಜೀವನದಲ್ಲಿ ಏನು ಆಸೆ ಎಂದು ಕೇಳಿದ ಆಗ ನಾನು ಕೇಳಿದ. ಗುರುಗಳು ಎಲ್ಲವನ್ನೂ ನನಗೆ ಕರುಣಿಸಿದ್ದಾರೆ ಆದ್ದರಿಂದ ಏನು ಆಸೆ ಇಲ್ಲ. ಒಂದು ಪಕ್ಷ ಏನಾದರೂ ಆಸೆ ಇದೆ ಎಂದಲ್ಲಿ ಅದು ಒಂದು ದಿನ ಅವರ ಆಪ್ತ ಕಾರ್ಯದರ್ಶಿಯಾಗಿರುವುದು ಮತ್ತು ನನ್ನ ಕಛೇರಿ ವಿಮಾನ ನಿಲ್ದಾಣದ ಬಳಿ ಇದ್ದ ಕಾರಣ ಹೆಲಿಕಾಪ್ಟರ್ ತರಬೇತಿಯನ್ನು ದಿನ ನೋಡುತ್ತಿದೆ. ಎಲ್ಲೋ ಒಂದು ಕಡೆ ಹೆಲಿಕಾಪ್ಟರ್ ನಲ್ಲಿ ಪಯಣ ಹೇಗಿರುತ್ತದೆ ಎಂಬ ಕುತೂಹಲ ಇಷ್ಟ ನನ್ನ ಇಚ್ಛೆ ಎಂದಿದ್ದೆ.
ಉನ್ನತ ಧ್ಯಾನ ಶಿಬಿರವು ಶುರುವಾಯ್ತು ಕರ್ನಾಟಕದ ಅತಿ ದೊಡ್ಡ ಶಿಬಿರವಾಗಿತ್ತು. ಶಿಬಿರ ನಡೆಯುತ್ತಿದ್ದಾಗ ಗುರುಗಳ ಆಪ್ತಕಾರ್ಯದರ್ಶಿಯಿಂದ ಒಂದು ಕರೆ ಬಂತು. ಅವರು ಗುರುಗಳು ನಮ್ಮನ್ನು ಈ ಕೂಡಲೆ ಗಂಗಾ ಕುಠೀರಕ್ಕೆ ಬರಹೇಳಿದ್ದಾಗಿ ತಿಳಿಸಿದರು. ನಾವು ಗಂಗಾ ಕುಠೀರಕ್ಕೆ ದಡಾಯಿಸಿ ಗುರುಗಳನ್ನು ಭೇಟಿ ಮಾಡಿದಾಗ ಗುರುಗಳು ತಮ್ಮ ಸುಂದರ ನಗುವಿನೊಂದಿಗೆ ನಾಳೆ ನಿನ್ನ ಕಾರ್ಯಕ್ರಮವೇನು ಎಂದು ಕೇಳಿದರು. ನಾವು ವಿಶೇಷ ಕಾರ್ಯಕ್ರಮ ಏನಿಲ್ಲ ಕಛೇರಿಗೆ ಹೋಗುವುದೆ ನನ್ನ ಕಾರ್ಯಕ್ರಮ ಎಂದೆ, ಆಗ ಅವರು ನಾಳೆ ನನ್ನ ಜೊತೆಯಲ್ಲಿ ಪ್ರಯಾಣ ಮಾಡುವೆಯ ಎಂದರು. ಸಂತೋಷದಿಂದ ಆಯಿತು ಗುರೂಜಿ ಎಂದೆ ಅದಾದ ತಕ್ಷಣ ತುಂಟ ನಗುವಿನೊಂದಿಗೆ ಎಂದಾದರೂ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿರುವೆಯ ಎಂದರು. ಇಲ್ಲ ಗುರೂಜಿ ಎಂದೆ ಆಗ ಗುರುಗಳು ಸರಿ ನಾಳೆ ಹೆಲಿಕಾಪ್ಟರ್ ನಲ್ಲಿ ಒಂದು ಜಾಗಕ್ಕೆ ಹೋಗಿ ಬರೋಣ ಎಂದರು. ಎರಡಾಸೆ ಹೇಳಿ ಎರಡು ವಾರಗಳು ಕಳೆದಲ್ಲಿ ಆಗಲೆ ಅದನ್ನು ನನ್ನ ಗುರುಗಳು ಪೂರ್ಣಗೊಳಿಸಿದರು. ಇಂದಿಗೂ ಅದನ್ನು ನೆನೆದರೆ ಕೃತಜ್ಞತೆಯಿಂದ ಮೈ ಜುಂ ಎನ್ನುತ್ತದೆ.

ಪರಮ ಪೂಜ್ಯರ ಜೊತೆ ಹಂಪಿ ಉತ್ಸವಕ್ಕೆ (500 ನೇ ವರ್ಷಾಚರಣೆ) ಹೋಗಿದ್ದೆ ಕಾರ್ಯಕ್ರಮದಲ್ಲಿ ಮುಗಿಸಿ ಒಂದು ಟಿ.ಬಿ. ಡ್ಯಾಂನ ವೈಕುಂಠ ವಿಶ್ರಾಂತಿ ಗೃಹದಲ್ಲಿ ವಿಶ್ರಮಿಸಿದೆವು ಎಲ್ಲರೂ ಮಲಗಿದಾಗ ಗುರುಗಳು ವಿಹಾರಕ್ಕೆಂದು ಹೊರ ಹೊರಟರು ನಾವು 4 ಶಿಕ್ಷಕರು ಅವರನ್ನು ಹಿಂಬಾಲಿಸಿ ಹೊರಟೆವು. ತಡ ರಾತ್ರಿ ಆದ ಕಾರಣ ಗುರುಗಳು ನಮ್ಮನ್ನು ವಿಶ್ರಮಿಸಿ ಎಂದರು. ನಾವು ಇಲ್ಲ ಗುರೂಜಿ ನಿಮ್ಮೊಂದಿಗಿರುವುದೆ ದೊಡ್ಡ ವಿಶ್ರಾಮ ಎಂದು ಅವರ ಜೊತೆ ಹೊರಟೆವು.
ಟಿ.ಬಿ. ಡ್ಯಾಂನ ನಲ್ಲಿ ನಡೆಯುತ್ತಿದ್ದಾಗ ಗುರುಗಳು ಒಮ್ಮೆ ನಿಂತು, ನಮಗೆ ಒಂದು ಪ್ರಶ್ನೆ ಕೇಳಿದರು ವಿರೂಪಾಕ್ಷ ಎಂದರೇನೆಂದು ನಾವು ಅವರನ್ನು ನೋಡುತ್ತಾ ನಿಂತೆವು ಅವರ ತಲೆಯ ಮೇಲೆ ಚಂದ್ರ ಇದ್ದ ನಾವು ಇದಕ್ಕೆ ಸರಿಯಾದ ಉತ್ತರ ಏನೆಂದು ಯೋಚಿಸುತ್ತಿದ್ದಾಗ ಹಾಗೆ ಗುರುಗಳು ವಿರೂಪಾಕ್ಷ ಎಂದರೆ ಏನು ಎಂದು ವರ್ಣಿಸಲು ಆರಂಭಿಸಿದರು. ಅವರು ಮಾತನಾಡುತ್ತಿದ್ದಂತೆ ಒಂದು ಕ್ಷಣ ನಮಗೆ ಅವರ ಎರಡು ಕಣ್ಣುಗಳು ಬಿಟ್ಟರೆ ಏನೂ ಕಾಣಲಿಲ್ಲ ಆ ಕ್ಷಣ ನಾವು ಗಾಬರಿಗೊಂಡು, ನಮ್ಮ ಜೊತೆಯಲ್ಲಿದ್ಧ ಇನ್ನೊಬ್ಬ ಶಿಕ್ಷಕನಿಗೆ ಕೇಳಿದೆವು ನಿಮಗೆ ಗುರುಗಳು ಪೂರ್ಣವಾಗಿ ಕಾಣಿಸುತ್ತಿರುವರೆ ಎಂದು ಅದಕ್ಕೆ ಅವರು ಕೂಡ ಇಲ್ಲ ಬರೀ ಕಣ್ಣು ಮಾತ್ರ ಕಾಣುತ್ತಿದೆ ಎಂದರು ಆ ದಿನದಂದು ನಾವು ನಿಜವಾದ ವಿರೂಪಾಕ್ಷನ ದರ್ಶನವನ್ನೇ ಮಾಡಿದೆವು ಪೂಜ್ಯ ಗುರುಗಳ ಜೊತೆ ಆದ ಈ ದಿವ್ಯ ಅನುಭವ ವ್ಮರೆಯಲು ಅಸಾಧ್ಯ.

ವಿರೂಪಾಕ್ಷ ಎಂದರೆ ಯಾವ ಕಣ್ಣುಗಳಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೂ ಯಾರೂ ಜಗತ್ತನ್ನೇ ತನ್ನ ದೃಷ್ಠಿಯಿಂದ ಕಾಯುತ್ತಿರುವನೋ.