ಧ್ಯಾನ ಮಾಡಿ ! ತಲೆ ನೋವಿನಿಂದ ಬಿಡುಗಡೆ ಪಡೆಯಿರಿ

ತಲೆನೋವು - ಇದನ್ನು ಕೇಳಿದರೇ, ಹಿಂದೆ ಬಂದು ಹೋದ ತಲೆನೋವು ಮರುಕಳಿಸುತ್ತದೆ !  ಸ್ವಲ್ಪ ನೋವಿನಿಂದ ಶುರು ಆಗಿ, ಹಾಗೇ ಹೆಚ್ಚಾಗುತ್ತ ಬಂದು ಕೆಲವೊಂದು ಬಾರಿ ತಡೆಯಲು ಅಸಾಧ್ಯವಾಗುವಷ್ಟು ಆಗುತ್ತದೆ ಅಲ್ಲವೇ ?  ಇದು ವಿಪರೀತಕ್ಕೆ ಹೋದಾಗ, ಕೈಗಳಲ್ಲಿ ತಲೆ ಗಟ್ಟಿಯಾಗಿ ಹಿಡಿದು, ತಲೆ ಚಚ್ಚಿಕೊಳ್ಳಬೆಕೆಂದು ಅನಿಸುವುದೂ ಸಾಮಾನ್ಯವು!

ನೀವು ಕೇವಲ ಬಿಗಿ ಮುಷ್ಟಿ ಸಡಲಿಸಿದರೆ ತಲೆನೋವಿನಿಂದ  ಬಿಡುಗಡೆ ಹೊಂದಬಹುದು ಎಂದು ನಾವು ಹೇಳಿದರೆ ಏನಂತೀರ ? ಹೌದು, ಮುಂದಿನ ಬಾರಿ ನಿಮಗೆ ತಲೆನೋವು ಬಂದರೆ, ಕಣ್ಣುಗಳನ್ನು ಮುಚ್ಚಿ, ಅಂಗೈ ಮೇಲ್ಮುಖವಾಗಿಟ್ಟಿಕೊಂಡು ಕೆಲವು ಸಾರಿ ದೀರ್ಘವಾದ ಉಸಿರಾಟ ಮಾಡಿ.  ಸಾಧ್ಯವಾದಷ್ಟು ಎಷ್ಟಾಗುತ್ತೋ ಅಷ್ಟು ವಿಶ್ರಾಮ ಮಾಡಿ - ಈ ಸ್ಥಿತಿಯನ್ನು ನಾವು ಧ್ಯಾನ ಎಂದು ಕರೆಯುತ್ತೇವೆ.

ತಲೆನೋವು ಬರುವದಕ್ಕೆ ಕೆಲವು ಸಾಮಾನ್ಯ  ಕರಣಗಳು ಹಾಗೂ ಧ್ಯಾನದಿಂದ ಅದನ್ನು ನಿವಾರಿಸುವ ವಿವರಗಳನ್ನು, ಈ ಕೆಳಗೆ ಓದಿ:

1

ಕಾರಣ  - ಒತ್ತಡ

ಧ್ಯಾನದಿಂದ ರಕ್ಷಣೆ - ದೇಹಕ್ಕೆ ಮತ್ತು ಮನಸ್ಸಿಗೆ ತೆಗೆದುಕೊಳ್ಳಲು ಆಗದಷ್ಟು ಒತ್ತಡ, ತಲೆನೋವಿನ ರುಪದಲ್ಲಿ ಪ್ರಕಟವಾಗಬಹುದು.  ಒತ್ತಡ ಹಾಗು ಧ್ಯಾನ ಒಂದೊಕ್ಕೊಂದು ವ್ಲೋಮವಾಗಿ ಅನುಪಾತದ ರೀತಿಯಲ್ಲಿ ಕೆಲಸಮಾಡುತ್ತದೆ.  ಧ್ಯಾನ ಮಾಡಿದಷ್ಟೂ, ಒತ್ತಡ ನಿಮ್ಮಲ್ಲಿ ಬಿಡುಗಡೆಯಾಗುತ್ತದೆ. ಈ ಕಥೆಯ ನೈತಿಕ ಪಾಠ: ದಿನ ನಿತ್ಯ 10 - 20 ನಿಮಿಷಗಳಾದರೂ ಧ್ಯಾನ ಮಾಡಿ.

2

ಕಾರಣ – ದೈಹಿಕ ಮತ್ತು ಮಾನಸಿಕ ಪರಿಶ್ರಮ

 

ಧ್ಯಾನದಿಂದ ರಕ್ಷಣೆ – ದಿನವಿಡೀ ಮನೆಯಲ್ಲಿ ಮತ್ತು ಕೆಲಸದಲ್ಲಿ ತುಂಬಾ ಓಡಾಟ - ಮುಗಿಸಬೇಕಾದ ಕೆಲಸದ ದೊಡ್ಡ ಪಟ್ಟಿ.  ಕೆಲವು ನಿಮಿಷಗಳ ಧ್ಯಾನ ನಿಮ್ಮನು ಹುರದುಂಬಿಸುತ್ತದೆ. ೨೦ ನಿಮಿಷಗಳ ಧ್ಯಾನ ನಿಮ್ಮ ಮುಖ ಮೇಲೆ ನಗೆ ಮುಡಿಸಿ , ದಿನದ ಯಾವುದೇ ಸಮಯದಲ್ಲಿ ನಿಮಗೆ ಮುಂಜಾನೆಯ ತಾಜಾತನವನ್ನು ತರುತ್ತದೆ. ನಿಮಗೆ ವಿಶ್ರಾಂತಿ ಕೊಟ್ಟು, ನಿಮ್ಮ ಕುಟುಂಬದೊಂದಿಗಿನ ಸಂಜೆಯ ಸಮಯವನ್ನು ನೀವು ಹೆಚ್ಚಾಗಿ ಆನಂದಿಸುವಂತೆ ಮಾಡುತ್ತದೆ

3

ಕಾರಣ – ದೇಹದಲ್ಲಿ ಏರುಪೇರು

 

ಧ್ಯಾನದಿಂದ ರಕ್ಷಣೆ – ನೀವು ಗಮನಿಸಿರಬಹುದು, ನಿಮಗೆ ಅಸಮಾಧಾನವಾದಗ ಅಥವ ಹೊಟ್ಟೆ ಸರಿಯಿಲ್ಲದಿರುವಾಗ, ತಲೆನೋವು ಶುರುವಾಗಬಹುದು.   ನಮ್ಮ ದೇಹ ವ್ಯವಸ್ಥೆ ಒಂದಕ್ಕೊಂದು ಹೊಂದಿಕೊಂಡಿದೆ ಮತ್ತು ಒಂದು ವ್ಯವಸ್ಥೆಯಲ್ಲಿನ ಅಸಮತೋಲನ ಇನ್ನಿತರ ವ್ಯವಸ್ಥ್ಯ್ಯಲ್ಲೂ ಏರುಪೇರಿಗೆ ನೇರವಾಗುತ್ತದೆ.

ಧ್ಯಾನದಿಂದ ನಮ್ಮ  ಇರುವಿಕೆಯ ಬೇರೆ ಬೇರೆ ಭಾಗಗಳಲ್ಲಿ ಒಳಗೆ ಸೇರಿಕೊಂಡಿರುವ  ಒತ್ತಡ ಮಾತು ಕಲ್ಮಷಗಳ್ಳನ್ನು ಹೊರಗೆ ನೂಕಿ ಸಮತೋಲನ ಪುನಃಸ್ಥಾಪಿಸುತ್ತದೆ.  ಇದು ನಮ್ಮ ದೇಹದ ಪಚನ ಕ್ರಿಯೆಯ ವ್ಯವಸ್ಥೆಯನ್ನೂ ನಿಯಂತ್ರಿಸುತ್ತದೆ. ದಿನವೂ ಧ್ಯಾನಮಾಡಿದಾಗ ನೀವು ಏನು ತಿನ್ನಬೇಕು ಎಷ್ಟು ತಿನ್ನಬೇಕು, ಆಹಾರ ಸೇವನೆಯಲ್ಲಿ ಅರಿವು ಮೂಡುತ್ತದೆ.   ಇದರಿಂದ ನಿಮ್ಮ ಆಹಾರ ಪದ್ಧತಿಯಲ್ಲಿ ಸರಿಯಾದ ಅಭ್ಯಾಸಮಾಡಿಕೊಂದರೆ, ಪಚನ ಶಕ್ತಿ ಸುಧಾರಿಸಿ, ನಿಮ್ಮ ದೇಹದಲ್ಲಿ ಸಾಮರಸ್ಯ ಬರುತ್ತದೆ. ಇದರಿಂದ ತಲೆನೋವು ಬರುವ ಸಂಭವ ತೀರಾ ಕಡಿಮೆ.

4

ಕಾರಣ – ತಲೆಯ ಭಾಗಕ್ಕೆ ಕಡಿಮೆ ರಕ್ತ ಸಂಚಾರ

 

ಧ್ಯಾನದಿಂದ ರಕ್ಷಣೆ – ಧ್ಯಾನದಿಂದ ರಕ್ಷಣೆ: ನಿತ್ಯವೂ ಎರಡು ಬಾರಿ 10 - 20 ನಿಮಿಷ ಧ್ಯಾನ ಮಾಡುವುದರಿಂದ, ಮನಸ್ಸು ಹಾಗು ದೇಹಕ್ಕೆ ವಿಶ್ರಾಂತಿ ಸಿಗುವುದಲ್ಲದೆ, ಇದರಿಂದ ತಲೆಯ ಕಡೆ ರಕ್ತದ ಹರಿವು ಹೆಚ್ಚಿ, ತಲೆನೋವಿನ ಸಂಭವವನ್ನು ಕಡಿಮೆ ಮಾಡುತ್ತದೆ

ಧ್ಯಾನದ ಜೊತೆಗೆ, ರಕ್ತ ಸಂಚಾರ ಹೆಚ್ಚಿಸಲು, ಕೆಲವು  ಯೋಗಾಸನಗಳನ್ನೂ ಮಾಡಬಹುದು.  ಉ.ದಾ: ಹಸ್ತಪಾದಾಸನ (ಮುಂದೆ ಬಗ್ಗುವುದು), ಸರ್ವಾಂಗಾಸನ ಮತ್ತು ಹಲಾಸನ.

5

ಕಾರಣ - ರಾತ್ರಿಯಲ್ಲಿ ನಿದ್ದೆಯ ಅಭಾವ

 

ಧ್ಯಾನದಿಂದ ರಕ್ಷಣೆ – ಅತಿಯಾದ ಹಾಗೂ ದೀರ್ಘಗಂಟೆಗಳ ಕೆಲಸ, ಮಿತಿಮೀರಿದ ಜೀವನ ಕೆಲಸ ಅಥವ ಶೈಲಿ, ಟಿವಿ ಅಥವ ಅಂತರ್ಜಾಲದಲ್ಲಿ ಸಮಯ ಕಳೆಯುವುದು, ಇವಲ್ಲವೂ ನಿದ್ರೆ ಸರಿಯಾಗಿ ಮಾಡದಿರುವುದಕ್ಕೆ ಅಡಚಣೆ ಅಥವ ನೆವಗಳು.  ಇವಲ್ಲವನ್ನೂ ಮಿತಿಯಲ್ಲಿಡುವುದು ಒಳ್ಳೆಯ ಅಭ್ಯಾಸವಾದರೂ ಕೆಲವೊಮ್ಮೆ ಅನಿವಾರ್ಯ. ಕೆಲವೊಮ್ಮೆ ಪ್ರಾಜೆಕ್ಟಿನ ಕಡಿಮೆ ಗಡುವು ಅಥವ ತಡವಾದ ಕೆಲಸದ ಸಭೆ - ಇದರ ಪರಸ್ಥಿತಿಯಲ್ಲಿ ಪ್ರಭಾವ ಬೀರಲು ನಮ್ಮ ಕೈಯಲ್ಲಿ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಒಂದಿಪ್ಪತ್ತು ನಿಮಿಷಗಳ ಧ್ಯಾನ ಮಾಡುವುದರಿಂದ, ಈ ಅನಿವಾರ್ಯದ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಬಹುದು.

ಇದು ನಿಮ್ಮ ಮನಸ್ಸನ್ನು, ವಿರಾಮಗೊಳಿಸುತ್ತದೆ, ನಿಮ್ಮಲ್ಲಿ  ಚೈತ್ಯನ್ಯಪೂರಿತ ಲವಲವಿಕೆ ತುಂಬುತ್ತದೆ ಮತ್ತೆ ನಿಮ್ಮ ಕೆಲಸದೆ ಕೌಶಲತೆ ಹೆಚ್ಚುತ್ತದೆ.  ವಾಸ್ತವವಾಗಿ, ನಿಯಮಿತವಾದ ಧ್ಯಾನಾಭ್ಯಾಸದಿಂದ ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನಿಮ್ಮ ಕೆಲಸವನ್ನು ಮುಂಚೆಗಿಂತಲೂ ಬಹು ನಿರಾಯಾಸವಾಗಿ ಮಾಡಬಲ್ಲಿರಿ ಇದರಿಂದ ನೀವು ನಿದ್ದೆ ಕೆಡುವ ಪರಿಸ್ಥಿತಿಯನ್ನು ತುಂಬಾ ಕಡಿಮೆ ಮಾಡಬಲ್ಲಿರಿ.

ಧ್ಯಾನದಿಂದ ನಿಮ್ಮ ನಿದ್ದೆಯ ಗುಣಮಟ್ಟ ಚೆನ್ನಾಗಿರುತ್ತದೆ.  ನಿಮಗೆ ಗೊತ್ತಿತ್ತೇ, ೨೦ ನಿಮಿಷಗಳ ಆಳವಾದ ಧ್ಯಾನ ನಿಮಲ್ಲಿ ೮ ಗಂಟೆಗಳ ನಿದ್ರೆಯನ್ನೂ ಮೀರುವ ವಿಶ್ರಾಮ ಒದಗಿಸುತ್ತದೆಯೆಂದು ? ನಾವು ನಿದ್ದೆಯ ಬದಲು ಧ್ಯಾನ ಮಾಡಿ ಎಂದು ಹೇಳುತ್ತಿಲ್ಲ.  ಆದರೆ, ನೀವು ಧ್ಯಾನ ಮಾಡಿದರೆ, ನಿಮ್ಮ ನಿದ್ದೆ ಆಳವಾದ ವಿಶ್ರಾಂತಿಯನ್ನು ಕೊಡುತ್ತದೆ..

6

ಕಾರಣ - ಶಬ್ದಗಳ ಮಾಲಿನ್ಯ

 

ಧ್ಯಾನದಿಂದ ರಕ್ಷಣೆ – ಇದು ನಮ್ಮ ಅನುಭವಕ್ಕೆ ಯವಾಗಾದರೂ ಬಂದಿರಬಹುದು.  ನಮ್ಮಲ್ಲಿ ಇಂತಹ ಪರಿಸ್ಥಿತಿಯನ್ನು ತೆಗೆದುಕೊಳ್ಳಲಾಗದೆ, ತಲೆನೋವಿನ ಸಮಸ್ಯೆಯೆಂದು ಕೊರಗುತ್ತಿರುತ್ತೇವೆ.

ಧ್ಯಾನದ ಒಂದು ಫಲ, ಪರಿಸ್ಥಿತಿಯನ್ನು ಸ್ವೀಕರಿಸಲು ಸಹಾಯಮಾಡುತ್ತದೆ ಮತ್ತೆ ಎಂತಹ ಪರಿಸ್ಥಿತಿಯಲ್ಲೂ, ಸಮಯದಲ್ಲೂ, ನಾವು ಶಾಂತಿಯುತವಾಗಿ, ಆರಾಮದಿಂದಿರುತ್ತೇವೆ.  ನಿಮ್ಮ ಪರಿಸರದಲ್ಲಿ, ದೊಡ್ಡ ಶಬ್ದ ಆಗುತ್ತಿದ್ದರೂ, ನೀವು ಧ್ಯಾನಸ್ಥ ಸ್ಥಿತಿಯಲ್ಲಿರುವ ಕಾರಣ, ನಿಮಲ್ಲಿ ನೀವು ವಿಶ್ರಾಂತಿಯಲ್ಲಿರುವ ಕಾರಣ, ಈ ಪರಿಸ್ಥಿತಿ, ನಿಮ್ಮ ಮೇಲೆ ಪ್ರತಿಕೂಲ ಪರಿಣಾಮ ಮಾಡುವುದಿಲ್ಲ.

ವಿ.ಸೂ: ನಿಮ್ಮಲ್ಲಿ ನಿತ್ಯ ಧ್ಯಾನ ಮಾಡುವ ಜೀವನ ಶೈಲಿಯಿದ್ದಾಗ,  ಸಾಮರಸ್ಯ ಸಮಗ್ರ ಭಾವನೆ ಉಂಟಾಗುತ್ತದೆ. ಕೆಲವು ಪರಿಸ್ಥಿತಿಯಲ್ಲಿ, ತೀವ್ರ ಶಬ್ದ ಪರಿಸರದಲ್ಲಿ ಇದ್ದಾಗ, ನಿಮಗೆ ತಲೆನೋವು ಕಾಣಬಹುದು, ಆದರೆ, ನಿರಂತರ ಧ್ಯಾನದ ಸ್ಫೂರ್ತಿಯಿದ್ದಾಗ, ನಿಮಗೆ ಈ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಪರಿಸ್ಥಿತಿಯನ್ನು ಸ್ವೀಕರಿಸುವ ಶಕ್ತಿ ಬರುತ್ತದೆ..

7

ಕಾರಣ – ದೂರವಾಣಿಯಲ್ಲಿ ದೀರ್ಘಕಾಲದ ಸಂಭಾಷಣೆ

 

ಧ್ಯಾನದಿಂದ ರಕ್ಷಣೆ – ಕೆಲವು ಬಾರಿ ಈ ಪರಿಸ್ಥಿ ನಿಭಾಯಿಸಲು ಕಷ್ಟ. ಕೆಲಸದಲ್ಲಿ ಅಗತ್ಯವಿರುವ ಕಾರಣ, ಅಥವ ಸ್ನೇಹಿತರ ಜೊತೆ ನಮ್ಮ ವ್ಯವಹಾರದಲ್ಲಿ ಎಲ್ಲರೂ ಮಾಡುತ್ತೇವೆ !  ಇದು ಅತಿಯಾದಾಗ ತಲೆನೋವು ಉಂಟಾಗಬಹುದು.

ಚಿಂತೆ ಬೇಡ.  ಕೆಲವು ನಿಮಿಷಗಳು ಧ್ಯಾನ ಮಾಡಿ.  ಇದರಿಂದ ಒತ್ತಡದಿಂದ ಬಿಡುಗಡೆ ಆಗಿ, ಎಲೆಕ್ಟ್ರಾನಿಕ್ ವಸ್ತುಗಳ ಜಾಸ್ತಿಹೊತ್ತು ಉಪಯೋಗದಿಂದ ಪರಿಣಾಮಹೊಂದಿರುವ ನಿಮ್ಮ ನರಗಳ ವ್ಯವಸ್ಥ್ಗೆ ಆಳವಾದ ವಿಶ್ರಾಂತಿ ಒದಗಿಸುತ್ತದೆ.

8

ಕಾರಣ - ತುಂಬಾ ಚಿಂತೆ ಮಾಡುವುದು

 

ಧ್ಯಾನದಿಂದ ರಕ್ಷಣೆ – ತುಂಬಾ ಚಿಂತೆ ಮಾಡಬೇಡಿ !  ಕೆಲವು ಸಮಯಗಳಲ್ಲಿ, ಇದು ಅನಿವಾರ್ಯವಿರಬಹುದು.  ದಿನನಿತ್ಯದ ಒತ್ತಡ ಇರಬಹುದು, ಕೆಲಸದ ಒತ್ತಡ, ಸಂಸಾರದ ಸಮಸ್ಯೆಗಳು, ಸಂಬಂಧಗಳ ಸಮಸ್ಯೆ - ಇಷ್ಟರ ಮದ್ಯೆ ಹೇಗೆ ಚಿಂತೆ ಮಾಡದೇ ಇರುವುದು ?  ಇರಬಹುದು ! ಆದರೆ, ನೀವು ಖಂಡಿತವಾಗಿಯೂ ಮಾಡಬಹುದು - ದಿನದಲ್ಲಿ, ಕೇವಲ ನಿಮಗಾಗಿಯೇ, ಕೆಲವು ನಿಮಷಗಳು ತಗೆದಿಟ್ಟಿರುವುದು - ಇದನ್ನು ನಿಮ್ಮದೆ ಮತ್ತು ನಿಮಗಾಗಿ ಮೀಸಲಿಟ್ಟಿರುವ ಸಮಯ - ಈ ಸಮಯದಲ್ಲಿ, ಎಲ್ಲವನ್ನೂ, ಈ ಪ್ರಪಂಚವನ್ನೂ ಬದಿಗಿಟ್ಟು, ನಿಮ್ಮಲ್ಲಿಯೇ ವಿಶ್ರಮಿಸಿರಿ.  ಈ ಸಲಹೆ ಪಾಲಿಸಿ ಮತ್ತೆ ನೀವೇ ದೊಡ್ಡ ಬದಲಾವಣೆಯನ್ನು ನೋಡುವಿರಿ.

ತಲೆನೋವಿಗೆ ಮತ್ತೆ ಇನ್ನೇನು ಪರಿಹಾರ ?

 
  • ನಿಯಮಿತವಾದ ಯೋಗಾಸನಗಳ ನಿತ್ಯ ಅಭ್ಯಾಸ  (ಕೆಲವು ಆಸನಗಳ ವಿವರ ಈಗಾಗಲೇ ಮೇಲೆ ವಿವರಿಸಿದ್ದೇವೆ), ಪ್ರಾಣಾಯಾಮದಿಂದ - ನಾಡಿ ಶೋಧನ (ಪರ್ಯಾಯವಾಗಿ ಒಂದು  ಮೂಗಿನ ಹೊಳ್ಳೆಯಿಂದ ಊಸಿರಾಡುವುದು)  ಮತ್ತು ಬ್ರಾಹ್ಮಿರಿ ಉಸಿರಾಟ  (ಜೇನು ಹುಳದ ಝೇಂಕಾರದಂತೆ), ನಂತರ ೨೦ ನಿಮಿಷಗಳ ಧ್ಯಾನ - ಇವು ತುಂಬಾ ಪರಿಣಾಮಕಾರಿ.
  • ನೀರನ್ನು ಹೆಚ್ಚಾಗಿ ಸೇವಿಸಿ – ಕೆಲವು ಸಾರಿ ನೀವು ಯೋಗಾಸನಗಳನ್ನು ಮತ್ತು ಧ್ಯಾನ ಮಾಡಿಯೂ ಕೂಡ ತಲೆನೋವು ಬರಬಹುದು. ಇದು ಏಕೆಂದರೆ, ಧ್ಯಾನದಲ್ಲಿ, ಕ್ಲೇಶ, ಕಲ್ಮಶಗಳ ಬಿಡುಗಡೆಯಾಗಿ, ಅದು ಹೊರ ಹೊಗಲು ನೀರಿನ ಅಗತ್ಯವಿದೆ.  ಆದ್ದರಿಂದ, ನಿಮ್ಮ ದೇಹ ಮನಸ್ಸು ನಿರ್ಮಲವಾಗಿರಿಸಲು, ಸಾಕಷ್ಟು ನೀರನ್ನು ಕುಡಿಯಬೇಕು - ಇದರಿಂದ ತಲೆನೋವು ಬರುವುದು ತಪ್ಪುತ್ತದೆ.
  • ಆಯುರ್ವೇದವೂ ಸಹಾಯಮಾಡುತ್ತದೆ – ಕೆಲವು ಔಷದ ಮೂಲಿಕೆಗಳು ತಲೆನೋವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೆಲವು ಉದಾಹರಣೆಗಳು, ವೀಳ್ಯದೆಲೆ, ಲವಂಗ, ಬಳ್ಳುಳ್ಳಿ, ಶುಂಠಿ ಮತ್ತು ಗೋರಂಟಿ.

ಶ್ರೀ ಶ್ರೀ ರವಿಶಂಕರ ಅವರ ಪ್ರವಚನದ ಜ್ಞಾನಗಂಗೆಯಿಂದ ಪ್ರಭಾವಿತಗೊಂಡು ಬಂದ ಲೇಖನ.

ಲೇಖಕರು: ರವಿ ರಾಮಚಂದ್ರ

ಸಹಾಯ: ರಾಜಲಕ್ಷ್ಮೀ, ಸಹಜ ಸಮಾಧಿ ಧ್ಯಾನದ ಶಿಕ್ಷಕರು ಮತ್ತು ಡಾ||ನಿಶಾ ಮಣಿಕಂಠನ್, ಆಯುರ್ವೇದ ಪಂಡಿತರು