ಧ್ಯಾನ ಮಾಡುವ ಸ್ನೇಹಿತರಿಗೆ ನೀಡಬಹುದಾದ ಉಡುಗೊರೆಗಳು

ಧ್ಯಾನ ಮಾಡುವ ನಿಮ್ಮ ಸ್ನೇಹಿತರಿಗೆ ಏನಾದರೂ ಉಡುಗೊರೆಗಳನ್ನು ಕೊಡಬೇಕು, ಆದರೆ ಏನು ಕೊಡಬೇಕೆಂದು ನಿಮಗೆ ತಿಳಿಯುತ್ತಿಲ್ಲವೆ?

ಕೆಳಗೆ ನೀಡಲಾಗಿರುವ ಕೆಲವು ಸಲಹೆಗಳು ಸಹಾಯ ಮಾಡಬಲ್ಲವು. ಇವುಗಳಿಗೆ ಅಲ್ಪ ವೆಚ್ಚವಾಗಬಹುದು ಮತ್ತು ಸ್ವಲ್ಪ ಬದ್ಧತೆಯೂ ಬೇಕಾಗಬಹುದು.

ಸಾಮಾನ್ಯವಾಗಿ ನಾವು ಪಡೆಯುವ ಅಥವಾ ಕೊಡುವ ಉಡುಗೊರೆಗಳು ಅμÉ್ಟೀನೂ ಮಹತ್ವವಾಗಿರುವುದಿಲ್ಲ ಅಥವಾ ಪಡೆದುಕೊಳ್ಳುವವರಿಗೆ ಅμÉ್ಟೀನೂ ಉಪಯುಕ್ತವಾಗಿರುವುದಿಲ್ಲ. ಆದರೆ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಲಾದ, ಧ್ಯಾನಕ್ಕೆ ಸಂಬಂಧಪಟ್ಟ ಉಡುಗೊರೆಯು, ಕೊಡುವವರಿಗೂ ಮತ್ತು ಪಡೆಯುವವರಿಗೂ ವಿಶೇಷವಾಗಿರುತ್ತದೆ.

ಆದ್ದರಿಂದ, ದೀರ್ಘಕಾಲ ಸಂತೋಷವನ್ನು ತರುವಂತಹ ಏನೋ ಒಂದನ್ನು ನಿಮ್ಮ ಹೃದಯ ಮತ್ತು ತಲೆಯಿಂದ ಆಯ್ಕೆ ಮಾಡಿ.

ಉಡುಗೊರೆ #1 : ಧ್ಯಾನದ ದಿಂಬುಗಳು

ನಿಮಗೊಂದು ಸೂಚಿ :- ಸ್ನೇಹಿತರಿಗೆಂದು ಕೊಳ್ಳಲು ಹೋದಾಗ, ನಿಮ್ಮನ್ನು ಅವರ ಸ್ಥಾನದಲ್ಲಿ ಮೊದಲು ಇರಿಸಿಕೊಳ್ಳಿ. ನೀವು ಅವರ ಸ್ಥಾನದಲ್ಲಿದ್ದಿದ್ದರೆ ಏನನ್ನು ಇಷ್ಟ ಪಡುತ್ತಿದ್ದಿರಿ?

ಧ್ಯಾನ ಮಾಡುವವರಿಗೆ, ಸುಖಕರವಾದ, ಆದರೆ ನೇರವಾದ ಭಂಗಿಯು ಧ್ಯಾನಕ್ಕೆ ಬಹಳ ಮುಖ್ಯ. ಮೃದುವಾದ ದಿಂಬು ಆಧಾರಕ್ಕಿದ್ದರೆ ಇದಾಗಲು ಸಾಧ್ಯ. ಈ ಉಡುಗೊರೆಯು ನಿಮ್ಮ ಕೈಗೆ ಎಟುಕುವಂತಹ ವೆಚ್ಚದಲ್ಲಿರುತ್ತದೆ ಮತ್ತು ಬೇಗನೆ ಸವೆಯುವುದಿಲ್ಲ, ಎಲ್ಲೆಂದರಲ್ಲಿಗೆ ಎತ್ತಿಕೊಂಡು ಹೋಗಬಹುದು ಮತ್ತು ದೀರ್ಘಕಾಲದ ಲಾಭಗಳನ್ನೂ ನೀಡುತ್ತದೆ.

ಈ ಉಡುಗೊರೆಯನ್ನು ಮತ್ತಷ್ಟು ಆಕರ್ಷಕವಾಗಿ ಮಾಡಲು, ನಿಮ್ಮ ಸ್ನೇಹಿತರಿಗೆ ಇಷ್ಟವಾದ ಬಣ್ಣವನ್ನೆ ಅಥವಾ ನಿಮ್ಮ ಸ್ನೇಹಿತರ ಮನೆಗೆ ಒಪ್ಪುವಂತಹ ಬಣ್ಣವನ್ನೆ ದಿಂಬಿನ ಅಥವಾ ಕುರ್ಚಿಯ ಬಣ್ಣವಾಗಿ ಆಯ್ದುಕೊಳ್ಳಬಹುದು.

ಉಡುಗೊರೆ #2 : ಧ್ಯಾನದ ಜ್ಞಾನದ ಪುಸ್ತಕಗಳು

ಧ್ಯಾನದ ಗುರುಗಳ ಮಾತುಗಳನ್ನು, ಅದರಲ್ಲೂ ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕರಾದ, ಶ್ರೀ ಶ್ರೀ ರವಿಶಂಕರರಂತಹ ಗುರುಗಳ ಸುಂದರವಾದ ಮಾತುಗಳನ್ನು ಕೇಳಿಸಿಕೊಳ್ಳುವುದು ಸ್ಫೂರ್ತಿದಾಯಕವಾಗಿರುತ್ತದೆ. ಅವರು ನೀಡಿರುವ ಅನೇಕ ಗಹನವಾದ ಪ್ರವಚನಗಳು ಪುಸ್ತಕ ರೂಪದಲ್ಲಿ ಅಥವಾ ವಿಡಿಯೊ ರೂಪದಲ್ಲಿ ಮತ್ತು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಮೂರು ಡಿವಿಡಿಗಳ ಸರಣಿಯನ್ನು ಕೊಳ್ಳಲು ನಾವು ನಿಮಗೆ ಸಲಹೆ ನೀಡುತ್ತೇವೆ – ಡಿಸ್ಪಾಷನ್ ಆಂಡ್ ಪ್ರಾಕ್ಟೀಸ್, ಹೈಯರ್ ಸ್ಟೇಟ್ಸ್ ಆಫ್ ಕಾನ್ಷ್‍ಯಸ್‍ನೆಸ್, ವಾಟ್ ಈಸ್ ಮೆಡಿಟೇಷನ್? ಲಭ್ಯವಿರುವ ಪುಸ್ತಕಗಳೆಂದರೆ ದಿ ಸ್ಪೇಸ್ ವಿತಿನ್, ಆಂತರ್ಯದ ಆಕಾಶ ಶ್ರೀ ಶ್ರೀಯವರ ಪತಂಜಲಿ ಯೋಗ ಸೂತ್ರಗಳ ಅನುಪಮವಾದ ಭಾಷ್ಯವು ಎರಡು ಸಂಪುಟಗಳಲ್ಲಿ ಲಭ್ಯವಾಗಿದೆ, ಶಿವ ಸೂತ್ರಗಳ ಭಾಷ್ಯ

ಲಭ್ಯವಾಗಿದೆ. ಆರ್ಟ್ ಆಫ್ ಲಿವಿಂಗ್‍ನ ಅಂಗಡಿಗೇಕೆ ಭೇಟಿ ಮಾಡಬಾರದು? ಇದರೊಡನೆ ಋಷಿಮುಖ ಮಾಸ ಪತ್ರಿಕೆಯ ಚಂದವನ್ನು ನೀಡಬಹುದು. ಇದನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಪ್ರಕಟಿಸುತ್ತದೆ ಮತ್ತು ಧ್ಯಾನದ ಬಗ್ಗೆ, ಆಧ್ಯಾತ್ಮಿಕ ಪಥದ ಬಗ್ಗೆ, ಶ್ರೀ ಶ್ರೀಯವರ ಪ್ರವಚನಗಳ ಬಗ್ಗೆ, ಯೋಗದ ವಿವಿಧ ಅಂಶಗಳನ್ನು ಅಭ್ಯಾಸ ಮಾಡುವ ಬಗ್ಗೆ, ಪರಿಪೂರ್ಣವಾದ ಮತ್ತು ವಿಕಾಸನಾತ್ಮಕ ಜೀವನ ಶೈಲಿಯ ಬಗ್ಗೆ ಮಾಹಿತಿ, ಅಡುಗೆಯ ರುಚಿಗಳು ಮತ್ತು ಇನ್ನಷ್ಟು ವಿಷಯಗಳನ್ನು ಹೊಂದಿದೆ. ಇದನ್ನು ಆನ್‍ಲೈನ್‍ನಲ್ಲಿ ಚಾಂದಾದಾರಿಕೆಯನ್ನು ಮಾಡಬಹುದು ಮತ್ತು ಈ ಮಾಸಪತ್ರಿಕೆಯನ್ನು ಆನ್‍ಲೈನ್‍ನಲ್ಲಾದರೂ ಓದಬಹುದು ಅಥವಾ ಅಂಚೆಯ ಮೂಲಕವೂ ನಿಮ್ಮ ಕೈ ಸೇರುತ್ತದೆ.

ಉಡುಗೊರೆ #3 : ಧ್ಯಾನದ ಚಾಪೆ

ಚಾಪೆಯನ್ನು ಹರಡಿ, ಮಡಚಿ ಎತ್ತಿಡಿ. ಇದನ್ನು ಬಳಸಲು ಸರಳ, ಎತ್ತಿಕೊಂಡು ಹೋಗಲು ಸುಲಭ. ನಿಮ್ಮ ಸ್ನೇಹಿತರಿಗೆ ಕೊಡಲು ಇದೊಂದು ಉತ್ತಮವಾದ ಆಯ್ಕೆ.

ಯೋಗದಿಂದ ಧ್ಯಾನವು ಆಳವಾಗುತ್ತದೆ, ಮತ್ತಷ್ಟು ಗಹನವಾಗುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವಲ್ಲವೆ? ಅನೇಕ ಉಪಯುಕ್ತತೆಯುಳ್ಳ ಈ ಚಾಪೆಯನ್ನು ಯೋಗಕ್ಕೆ ಮತ್ತು ಧ್ಯಾನಕ್ಕೆ ಬಳಸಲ್ಪಡುತ್ತದೆ. ಎರಡೂ ಕಾರ್ಯಗಳಿಗೆ ಉಪಯುಕ್ತವಾದ್ದರಿಂದ ನಿಮ್ಮ ಸ್ನೇಹಿತರಿಗೆ ಇದರಿಂದ ಉಪಯೋಗವಾಗುತ್ತದೆ ಮತ್ತು ಇದನ್ನು ಸ್ವಚ್ಛವಾಗಿ ಮತ್ತು ಶುದ್ಧವಾಗಿಡಲು ಅದಕ್ಕೊಂದು ಚಾಪೆಯ ಹೊದಿಕೆಯನ್ನು ಹೊಂದಿಸಿ.

ಇದರಿಂದ ನಿಮ್ಮ ಸ್ನೇಹಿತರು ಬಲು ಬೇಗನೆ ದೈಹಿಕವಾಗಿ, ಮಾನಸಿಕವಾಗಿ, ಆತ್ಮದಲ್ಲಿ ಸುಸ್ಥಿತಿಯಲ್ಲಿರುತ್ತಾರೆ.

ಉಡುಗೊರೆ #4 : ಸಹಜ ಸಮಾಧಿ ಧ್ಯಾನ

ನಿಮ್ಮ ಸ್ನೇಹಿತರು ಈ ಧ್ಯಾನದ ಶಿಬಿರವನ್ನು ಇನ್ನೂ ಮಾಡದಿದ್ದರೆ, ಅವರಿಗೆ ಈ ಶಿಬಿರವನ್ನು ಮಾಡಿಸುವುದು ಬಹುಶಃ ನೀವು ನೀಡಬಹುದಾದ ಅತೀ ದೊಡ್ಡ ಉಡುಗೊರೆ. ಆರ್ಟ್ ಆಫ್ ಲಿವಿಂಗ್‍ನ ಈ ಧ್ಯಾನದ ಶಿಬಿರವನ್ನು ಸಹಜ ಸಮಾಧಿ ಧ್ಯಾನ ಎಂದು ಕರೆಯುತ್ತಾರೆ. ಗಹನವಾದ ಆಂತರಿಕ ಪರಿವರ್ತನೆ ಮತ್ತು ಉನ್ನತ ಚೈತನ್ಯದ ಸ್ಥಿತಿಯನ್ನು ಪಡೆಯುವ ಅದ್ಭುತವಾದ ದಾರಿಯಿದು. ಶಿಬಿರಾರ್ಥಿಗಳು ಶಿಕ್ಷಕರಿಂದ ಒಂದು ಅನುಪಮವಾದ ಮಂತ್ರವನ್ನು ಪಡೆಯುತ್ತಾರೆ ಮತ್ತು ಅದನ್ನು ಬಳಸುವ ರೀತಿಯನ್ನೂ ಬೋಧಿಸುತ್ತಾರೆ. ಈ ಪ್ರಕ್ರಿಯೆಯು ಪೂರ್ಣವಾಗಿ ಪ್ರಯತ್ನರಹಿತವಾದದ್ದು, ಸೂಕ್ಷ್ಮವಾದದ್ದು, ನವಿರಾದ್ದದ್ದು ಮತ್ತು ಇದನ್ನು ಪುಸ್ತಕದಿಂದ ಅಥವಾ ಅಂತರ್ಜಾಲದಿಂದ ಪಡೆಯಲು ಸಾಧ್ಯವಿಲ್ಲ.

ಈ ಶಿಬಿರವನ್ನು ಮಾಡುವುದರಿಂದ ನಿಮ್ಮ ಸ್ನೇಹಿತರಿಗೆ ಧ್ಯಾನವನ್ನು ಮಾಡುವವರ ಗುಂಪಿನ ಪರಿಚಯವೂ ಆಗುತ್ತದೆ. ಒಬ್ಬರೇ ಧ್ಯಾನ ಮಾಡುವುದಕ್ಕಿಂತಲೂ ಗುಂಪಿನಲ್ಲಿ ಧ್ಯಾನ ಮಾಡಿದರೆ ಹೆಚ್ಚು ಬಲವಾದ ಅನುಭವವಾಗುತ್ತದೆ. ಪ್ರಯತ್ನವಿಲ್ಲದೆಯೇ ಮನಸ್ಸಿನ ಉನ್ನತ ಸ್ಥಿತಿಯನ್ನು ಪಡೆಯುವ ಅದ್ಭುತವಾದ ಕೊಡುಗೆ ದೊರೆತಿದ್ದರಿಂದ ನಿಮ್ಮ ಸ್ನೇಹಿತರು ನಿಮಗೆ ಚಿರಋಣಿಗಳಾಗಿರುತ್ತಾರೆ.

ಈ ಶಿಬಿರವನ್ನು ನೀವಿನ್ನೂ ಮಾಡದಿದ್ದರೆ, ನಿಮ್ಮ ಸ್ನೇಹಿತರೊಡನೆ ನೀವೂ ಸಹ ಈ ಶಿಬಿರವನ್ನೇಕೆ ಮಾಡಬಾರದು? ನೀವು ಈ ಶಿಬಿರವನ್ನು ಮಾಡಿದ್ದರೆ, ಭಾರತದಲ್ಲಿ ಉಚಿತವಾಗಿ ಮತ್ತೆ ಮಾಡಬಹುದು ಮತ್ತು ಬಹುತೇಕ ದೇಶಗಳಲ್ಲಿ ಸ್ವಲ್ಪ ಶುಲ್ಕವನ್ನು ಕೊಟ್ಟು ಮಾಡಬಹುದು ನಿಮ್ಮ ಸ್ನೇಹಿತರ ಶಿಬಿರದ ಅನುಭವದ ಭಾಗವೂ ಆಗಬಹುದು ಮತ್ತು ಈ ಪ್ರಕ್ರಿಯೆಯನ್ನು ಮತ್ತೆ ನೆನಪಿಸಿಕೊಂಡಂತೆಯೂ ಆಗುತ್ತದೆ.

ಒಂದು ದಿನ ಇದಕ್ಕಾಗಿ ನಿಮ್ಮ ಸ್ನೇಹಿತರು ಖಂಡಿತವಾಗಿಯೂ ನಿಮಗೆ ಧನ್ಯವಾದಗಳನ್ನು ಹೇಳುತ್ತಾರೆ.

ನಿಮ್ಮ ಸ್ನೇಹಿತರನ್ನು ಈಗಲೇ ನೊಂದಾಯಿಸಲು ಬಯಸುತ್ತೀರೆ?

ಉಡುಗೊರೆ #5 : ಒಂದು ಧ್ಯಾನದ ಕಂಬಳಿ

ಧ್ಯಾನದ ಉನ್ನತ ಸ್ಥಿತಿಗೆ ದೇಹವು ಹೊಕ್ಕುತ್ತಿದ್ದಂತೆಯೇ ಬೆಚ್ಚನೆಯ, ಸುಂದರವಾದ ಊನದ ಅಥವಾ ಕಾಶ್ಮೀರಿ ಕಂಬಳಿಯನ್ನು ಧ್ಯಾನ ಮಾಡುವ ಯಾರು ತಾನೆ ಮೆಚ್ಚದೆ ಇರುತ್ತಾರೆ? ನಿಮ್ಮ ಸ್ನೇಹಿತರ ಬಳಿ ಒಂದು ಈಗಾಗಲೇ ಇದ್ದರೂ, ಪ್ರಯಾಣಕ್ಕೆ, ಶಿಬಿರಗಳಲ್ಲಿ ಭಾಗವಹಿಸಲು, ಇತ್ಯಾದಿ ಕಾರಣಗಳಿಗಾಗಿ ಇನ್ನೊಂದನ್ನು ಖಂಡಿತ ಮೆಚ್ಚುತ್ತರೆ. ನಮ್ಮ ಬಹುತೇಕ ಆರ್ಟ್ ಆಫ್ ಲಿವಿಂಗ್‍ನ ಡಿವೈನ್ ಶಾಪ್‍ಗಳಲ್ಲಿವೆ ಮತ್ತು ಇವು ಆನ್‍ಲೈನ್ ಮೂಲಕವೂ ಲಭ್ಯವಾಗಿವೆ.

ಉಡುಗೊರೆ #6 : ನಿರ್ದೇಶಿತ ಧ್ಯಾನದ ಸಿಡಿ

ನಿಮ್ಮ ಸ್ನೇಹಿತರಿಗೆ ಪುನಃ ತೆರಳಬೇಕಾದ ಧ್ಯಾನದ ಕಕ್ಷೆಗಳು ಇಲ್ಲದಿರುವ ಸಮಯದಲ್ಲಿ, ನಿರ್ದೇಶಿತ ಧ್ಯಾನದ ಸಿಡಿಯು ಅವರಿಗೆ ಆಪ್ತಮಿತ್ರನಂತಾಗುತ್ತದೆ ಮತ್ತು ಮನೆಯಲ್ಲೇ ಕುಳಿತು ಗುರುಗಳಿಂದ ಅಥವಾ ಧ್ಯಾನದ ತಜ್ಞರಿಂದ ನಿರ್ದೇಶಿತವಾದ ಧ್ಯಾನವನ್ನು ಮಾಡಲು ಖಂಡಿತವಾಗಿಯೂ ಇಷ್ಟ ಪಡುತ್ತಾರೆ. ಮನೆಯ ಚಿರಪರಿಚಿತ ವಾತಾವರಣದಲ್ಲೆ ಹಿತವಾಗಿ ಧ್ಯಾನ ಮಾಡಬಹುದು. ಇದರಿಂದ ನಿಮಗೆ ಅμÉ್ಟೀನೂ ವೆಚ್ಚವಾಗುವುದಿಲ್ಲ. ಶ್ರೀ ಶ್ರೀ ರವಿಶಂಕರರು ಜಗತ್ತಿಗೆ ನೀಡಿರುವ ಅದ್ಭುತವಾದ ಧ್ಯಾನಗಳನ್ನು ಸಿಡಿಯ ಮೂಲಕ ಸೆರೆ ಹಿಡಿಯಲಾಗಿದೆ. ನಿಮ್ಮ ಸ್ನೇಹಿತರಿಗೆ ಇಂತಹ ಒಂದು ಸಿಡಿಯನ್ನು ನೀಡಬಹುದು - ಹರಿ ಓಂ, ಶಾಂತಿ, ಪಂಚಕೋಶ, ಓಂ, ರಾಮ್, ಹರ, ಮತ್ತಿನ್ನಿತರ ಧ್ಯಾನಗಳು. ನಿತ್ಯಾಭ್ಯಾಸಕ್ಕೆ ಹರಿ ಓಂ ಧ್ಯಾನ ಮಾಡಬೇಕೆಂಬುದು ನಮ್ಮ ಸಲಹೆ.

ಉಡುಗೊರೆ #7 : ಆಧ್ಯಾತ್ಮಿಕ ಪ್ರವಾಸ

ನಮ್ಮ ಅಂತಾರಳದೊಳಗಿನ ಧ್ಯಾನದ ಪ್ರವಾಸದ ಬಗ್ಗೆ ಮಾತನಾಡಿದೆವು. ಹೊರಗಿನ ಪ್ರಯಾಣವೂ ಮಾಡಿದರೆ ಹೇಗೆ? ನಿಮ್ಮಲ್ಲಿ ಹಣದ ಕೊರತೆಯಿಲ್ಲದಿದ್ದರೆ, ಮತ್ತು ಸ್ವಲ್ಪ ಹಣವನ್ನು ನಿಮ್ಮ ಸ್ನೇಹಿತರಿಗಾಗಿ ವೆಚ್ಚ ಮಾಡಲು ನೀವು ಸಿದ್ಧರಾಗಿದ್ದರೆ, ನಿಮ್ಮ ಸ್ನೇಹಿತರಿಗೆ ಮತ್ತು ಅವರ ಕುಟುಂಬದವರಿಗೆ ಒಂದು ಪ್ರವಾಸವನ್ನು ಆಯೋಜಿಸುವುದು ಆಸಕ್ತಕರವಾಗಿರುತ್ತದೆ.

ನಿಮ್ಮ ಸ್ನೇಹಿತರಿಗೆ ಇಷ್ಟವಾದ ಸ್ಥಳಗಳನ್ನು ರಹಸ್ಯವಾಗಿ ತಿಳಿದುಕೊಳ್ಳಿ ಮತ್ತು ಅದರಲ್ಲಿ ಸುಂದರವಾದ, ಆಧ್ಯಾತ್ಮಿಕ ಮೌಲ್ಯವನ್ನುಳ್ಳ ಸ್ಥಳವನ್ನು ಆಯ್ಕೆ ಮಾಡಿ. ಸುಂದರವಾದ ತಾಣ ಕಣ್ಣುಗಳಿಗೆ ಇಂಪಾಗಿರುತ್ತದೆ ಮತ್ತು ಅದರ ಆಧ್ಯಾತ್ಮಿಕ ಮೌಲ್ಯವು ಪ್ರವಾಸದ, ಜೀವನದ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರು ಇನ್ನೂ ಉತ್ತಮವಾಗಿ ಧ್ಯಾನ ಮಾಡಬಲ್ಲರು.

ಅವರನ್ನು ಜಗತ್ತಿನ ಎಲ್ಲೆಡೆಯೂ ಇರುವ ಆರ್ಟ್ ಆಫ್ ಲಿವಿಂಗ್‍ನ ಆಶ್ರಮಗಳ ಒಂದು ವಾರದ ಪ್ರಯಾಣಕ್ಕಾಗಿಯೂ ಕಳುಹಿಸಬಹುದು. ನಿಮ್ಮ ಸ್ಥಳಕ್ಕೆ ಹತ್ತಿರವಿರುವ ಆಶ್ರಮವನ್ನು ಆಯ್ಕೆ ಮಾಡಿ, ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ, ಟಿಕೆಟನ್ನು ಕಾಯ್ದಿರಿಸಿ, ಆಶ್ರಮದಲ್ಲಿ ಅವರಿಗೆಂದು ಒಂದು ಕೋಣೆಯನ್ನು ಕಾಯ್ದಿರಿಸಿ ಮತ್ತು ನೀವು ಬಯಸಿದರೆ ಅವರನ್ನು ಯಾವುದಾದರೊಂದು ಧ್ಯಾನದ ಶಿಬಿರಕ್ಕೆ ನೊಂದಾಯಿಸಿ. ಧ್ಯಾನವನ್ನು ಪ್ರೀತಿಸುವವರು ಇಂತಹ ಉಡುಗೊರೆಯನ್ನು ಬಹಳ ಮೆಚ್ಚುತ್ತಾರೆ.

ಉಡುಗೊರೆಯ ಆಯ್ಕೆಯನ್ನು ಮಾಡುವ ಕಲೆಯು ಸುಲಭವೆ. ಅದಕ್ಕಾಗಿ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿರಬೇಕು. ನಂತರ ಕೊಂಡುಕೊಳ್ಳುವುದು ಸಂತಸವನ್ನು ತರುತ್ತದೆ. ಚಾಕಲೇಟುಗಳನ್ನು, ಗುಲಾಬಿಗಳನ್ನು ನಿಮ್ಮ ಉಡುಗೊರೆಯ ಭಾಗವಾಗಿ ಮಾಡಿಕೊಳ್ಳಿ. ಇವೆರಡು ಯಾವುದೇ ಉಡುಗೊರೆ ಅಂಗವಾಗಿವೆ.

ಸಂತೋಷವಾಗಿ ಕೊಳ್ಳಿ ಮತ್ತು ಸಂತಸದಿಂದ ಉಡುಗೊರೆಯನ್ನು ನೀಡಿ!

ಶ್ರೀ ಶ್ರೀ ರವಿಶಂಕರರ ಜ್ಞಾನದ ಪ್ರವಚನಗಳಿಂದ ಸ್ಫೂರ್ತಿ ಪಡೆಯಲಾಗಿದೆ.

ಲೇಖಕಿ : ರವಿಷ ಕಥುರಿಯ

ಭಾರತಿ ಹರೀμï ಮತ್ತು ಕ್ರಿಸ್ ಡೇಲ್,

ಧ್ಯಾನದ ಶಿಕ್ಷಕರು ಈ ಲೇಖನಿಗೆ ಸ್ಫೂರ್ತಿ.