ಬೆಂಗಳೂರಿನಲ್ಲಿ ಧ್ಯಾನದ ತರಗತಿಗಳು

ನೀವು ವಿಭಿನ್ನ ಅಭಿರುಚಿಗಳುಳ್ಳ, ಹೂದೋಟಗಳಿಂದ ಕೂಡಿದ, ಜಯನಗರದ ಪ್ರಶಾಂತ ವಾತಾವರಣದಿಂದ ಈಗಿನ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಕೇಂದ್ರಬಿಂದು ಎಂದು ಹೆಸರಾದ ಇಲೆಕ್ಟ್ರಾನಿಕ್ ಸಿಟಿಯವರೆಗೆ, ಕ್ರಿಯಾಶೀಲ ಬೆಂಗಳೂರಿನ ಜೀವನವನ್ನು ಅನುಭವಿಸಬೇಕಾದರೆ ಇದೋ! ಇಲ್ಲಿದೆ ಉಪಾಯ. ಕೇವಲ ಇಪ್ಪತ್ತು ನಿಮಿಷಗಳ ಧ್ಯಾನ.

ಒಬ್ಬ ಬೆಂಗಳೂರಿನ ನಿವಾಸಿಯಾಗಿ ದಿನದ ಹೆಚ್ಚು ಸಮಯವನ್ನು ಅಂದರೆ ೧೦-೧೨ ಗಂಟೆಗಳ ಕಾಲವನ್ನು ನಿಮ್ಮ ಕೆಲಸಕಾರ್ಯದಲ್ಲಿ ಕಳೆಯುವುದು ಅಭ್ಯಾಸವಾಗಿರಬಹುದು. ಇತರ ಬೆಂಗಳೂರುವಾಸಿಗಳಂತೆ ನೀವೂ ಕೂಡ ಕಷ್ಟಪಟ್ಟು ದುಡಿದು ಕೆಲಸದ ಉತ್ಸಾಹದಲ್ಲಿ ತುಂಬು ಜೀವನ ನಡೆಸಲು ಇಚ್ಛಿಸುತ್ತೀರಿ. ಆದರೆ, ಒಂದು ವಾರದ ಸತತ ದುಡಿಮೆಯ ನಂತರ ನೀವು ನಿಮ್ಮ ಮನೆಯವರೊಂದಿಗೆ, ಗೆಳೆಯರೊಂದಿಗೆ ಒಂದು ವಾರಾಂತ್ಯವನ್ನು ಸಂತೋಷದಿಂದ ಕಳೆಯಲು ಕುತೂಹಲದಿಂದ ಎದುರು ನೋಡುವುದಿಲ್ಲವೇ?

ಯೋಚಿಸಿ- ನಿಮ್ಮ ಸ್ನೇಹಿತರೊಂದಿಗೆ ಒತ್ತಡವನ್ನು ಕಳೆದುಕೊಂಡಿದ್ದೇನೋ ಸರಿ. ಆದರೆ, ಅದು ಆಯಾಸದಿಂದ ಕೂಡಿದ ತಾತ್ಕಾಲಿಕ ವಿಶ್ರಾಮವಾಗಿರಲಿಲ್ಲವೇ? ನೀವು ಸೋಮವಾರ ಬೆಳಿಗ್ಗೆ ಯಾವ ರೀತಿಯ ಸಂವೇದನೆಯಿಂದ ಇರುತ್ತೀರಿ? ಅದು ಬೇರೆ ದಿನಗಳಂತೆ ಒಂದು ದಿನವಾಗಿರುತ್ತಾ? ಅಥವಾ ಉತ್ಸಾಹದಿಂದ ಕೆಲಸಕ್ಕೆ ಹೊರಡುತ್ತೀರಾ?

ನೀವು ಪ್ರಪಂಚವನ್ನು ಯಾವ ದೃಷ್ಠಿಕೋನದಿಂದ ನೋಡಿ ಆನಂದಿಸುತ್ತೀರಿ ಎಂಬುದು ನಿಮ್ಮ ನಿರ್ಣಯವಾಗಿರುವುದರಿಂದ, ನೀವು ನಿಮ್ಮ ಜೊತೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದು ಒಳ್ಳೆಯ ಉಪಾಯ

ಇದನ್ನು ಮಾಡುವುದಕ್ಕೆ ಒಂದು ಒಳ್ಳೆಯ ದಾರಿ, ಸಹಜ ಸಮಾಧಿ ಧ್ಯಾನಸುಲಭವಾದ ಧ್ಯಾನ ಪ್ರಕ್ರಿಯೆ. ನಿಗದಿತ ಸಮಯದಲ್ಲಿ ಮಾಡಿ ಮುಗಿಸಲಾಗದ ಕೆಲಸದ ತವಕದಿಂದಿರುವಾಗಲೂ ಸಾಧಾರಣ ಮನಸ್ಥಿತಿ ಇದ್ದಾಗಲೂ ನಿಮ್ಮಲ್ಲಿ ಉತ್ಸಾಹವನ್ನು ಉನ್ನತ ಮಟ್ಟಕ್ಕೇರಿಸಿ, ಸ್ಥಿರತೆಯನ್ನು ತುಂಬುವ ಒಂದು ಸಾಧನ ತಂತ್ರ, ಸಹಜ ಸಮಾಧಿ ಧ್ಯಾನ

 

ಸಹಜ ಸಮಾಧಿಯನ್ನು ಯಾಕೆ ಕಲಿಯಬೇಕು?

  1. ಅದ್ವಿತೀಯ ಮಂತ್ರಧ್ಯಾನದ ಕ್ರಮ ಮಾರ್ಗ
  2. ಕಲಿಯುವುದು ಸುಲಭ
  3. ಬೆಂಗಳೂರಿನಲ್ಲಿ ಸಹಜ ತರಗತಿಯನ್ನು ಕಂಡುಕೊಳ್ಳುವುದು ಸುಲಭ
  4. ಇದು ಕೇವಲ 20 ನಿಮಿಷಗಳ ಧ್ಯಾನ
  5. ಒಂದು ಬಾರಿ ಕಲಿತರೆ ನಂತರ ನೀವೇ ಮಾಡಬಹುದು
  6. ಅತ್ಯಧಿಕ ಉಪಯೋಗ, ಲಾಭ
  7. ವ್ಯವಸ್ಥಿತ ಅನುಸರಣಾ (follow-up) ತರಗತಿಗಳು

ಹತ್ತು ಗಂಟೆಗಳ ಕಾಲ ಕೆಲಸ ಮಾಡಿ ಹಿಂತಿರುಗುವಾಗ, ಹಾವಿನ ತರಹದ ವಾಹನ ಸಂಚಾರದಲ್ಲಿ ರಸ್ತೆಯನ್ನು ದಾಟುವಾಗಲೂ ಕೂಡ ಧ್ಯಾನದ ಅಭ್ಯಾಸವು ನಿಮ್ಮನ್ನು ಶಾಂತಿಯಿಂದ, ತಾಳ್ಮೆಯಿಂದ ಇರಲು ಸಹಾಯ ಮಾಡುತ್ತದೆ. ನೀವು ಹೊಸದಾಗಿ ಬೆಂಗಳೂರಿಗೆ ಬಂದವರಾಗಿದ್ದರೆ ಅದು ನಿಮ್ಮನ್ನು ಇಲ್ಲಿಯ ವಾತಾವರಣಕ್ಕೆ ಮತ್ತು ಆಹಾರಕ್ಕೆ ಹೊಂದಿಕೊಳ್ಳುವ ಹಾಗೆ ಮಾಡುತ್ತದೆ

“ನನಗೆ ನಿಜವಾಗಿ ಒತ್ತಡ ಹೆಚ್ಚಾದಾಗ ನಾನು ಧ್ಯಾನ ಮಾಡುವುದಕ್ಕಾಗಿ ಒಂದು ನಿಶ್ಶಬ್ದ ಜಾಗವನ್ನು ಹುಡುಕುತ್ತೇನೆ.” ಎಂದು ಹೇಳುತ್ತಾರೆ ಒಬ್ಬ ಅವಿಶ್ರಾಂತ ಜೀವನ ಶೈಲಿಯ ಜಯನಗರ ನಿವಾಸಿ. “ಕೇವಲ ೨೦ ನಿಮಿಷಗಳ ಸಹಜ ಸಮಾಧಿ ಧ್ಯಾನ ನನ್ನಲ್ಲಿ ವಿಶ್ರಾಮವನ್ನು ತುಂಬಿ ಉತ್ಸಾಹಭರಿತಳನ್ನಾಗಿ ಮಾಡುತ್ತದೆ. ಈ ತಂತ್ರವನ್ನು ನಾನು ಐದು ವರ್ಷಗಳ ಮೊದಲು ಕಲಿತೆ. ಅದೇ ಈಗ ನನಗೆ ಪ್ರತಿಬಾರಿಯೂ ತಕ್ಕ ಪರಿಹಾರವಾಗಿದೆ.”

ಸಹಜ ಸಮಾಧಿ ಧ್ಯಾನದ ಮಾರ್ಗವು ಅದ್ವಿತೀಯವಾಗಿರುವುದಕ್ಕೆ ಕಾರಣಗಳೇನು?

(ಸಹಜ ಸಮಾಧಿ ಧ್ಯಾನದ ನುರಿತ ಅನುಭವಿಗಳು ಹಂಚಿಕೊಂಡ ಅಭಿಪ್ರಾಯಗಳು)

#1 ಸರಳ ಆದರೂ ಅಗಾಧ ಆಳ

ನಾವು ಯಾವುದೇ ಗಾಢವಾದ ವಿಷಯವನ್ನು ಕಲಿಯಬೇಕಾದರೂ ತುಂಬಾ ಕಷ್ಟ ಪಡಬೇಕು. ಮತ್ತು ಸುಲಭವಾಗಿ ಸಿಗುವ ಯಾವುದೇ ವಿಷಯವೂ ಗಾಢವಾಗಿರುವುದಿಲ್ಲ. ಎಂಬುದು ಹಲವರ ಅಭಿಪ್ರಾಯ. ಸಹಜ ಸಮಾಧಿ ಧ್ಯಾನದ ಪಥವು ಅಗಾಧ ಆದರೂ ಸರ್ವರನ್ನೂ ಮುಟ್ಟುವ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ ಮತ್ತು ಇದು ಕಲಿಯುವುದಕ್ಕೆ ತುಂಬ ಸರಳ

#2 ಆಳದಲ್ಲಿ ಹೋಗುವುದಕ್ಕೆ ಇದು ಒಂದು ವಾಹನ.

ಬೆಂಗಳೂರಿನಲ್ಲಿ ಜಯನಗರದಿಂದ ಕೋರಮಂಗಲಕ್ಕೆ ಹೋಗಬೇಕಾದರೆ ನೀವು ನಡೆದು ಹೋಗಬಹುದು. ಆದರೆ ಮೋಟಾರು ಗಾಡಿಯಲ್ಲಿ ಹೋಗುವುದು ಸುಲಭ, ತ್ವರಿತ ಮತ್ತು ಒಳ್ಳೆಯ ಅನುಭವ. ಅದೇ ರೀತಿ ಧ್ಯಾನದ ತರಗತಿಯಲ್ಲಿ ಕೊಟ್ಟ ಮಂತ್ರದೀಕ್ಷೆಯು ಶಕ್ತಿಯುತವಾದ ವಾಹನವಾಗಿ ಕೆಲಸ ಮಾಡಿ ಧ್ಯಾನದಲ್ಲಿ  ಸುಗಮವಾಗಿ ಆಳಕ್ಕಿಳಿಯುವ ಹಾಗೆ ಮಾಡುತ್ತದೆ.

#3 ಪ್ರಾಚೀನ ಋಷಿಗಳಿಂದ ಸಿಕ್ಕ ವರದಾನ.

ಧ್ಯಾನವು ನಮ್ಮ ಶರೀರ ಮತ್ತು ಮನಸ್ಸು ಎರಡೂ ವಿಶ್ರಮಿಸುವ ಹಾಗೆ ಮಾಡುತ್ತದೆ. ಆದರೂ ವಿಶ್ರಮಿಸುವಾಗ ಕೆಲವೊಮ್ಮೆ ತೂಕಡಿಸಿರುತ್ತೇವೆ. ಇದನ್ನು ಅರಿತ ಋಷಿಗಳು ಸಹಜ ಸಮಾಧಿ ಧ್ಯಾನದ ಮಾರ್ಗವನ್ನು ಒಂದು ಶಬ್ದದ ಕಂಪನದಿಂದ ಅಂದರೆ ಮಂತ್ರದ ಒಂದು ನಿಶ್ಚಿತ ಉಚ್ಛಾರಣೆಯಿಂದ ಕಲಿಸಿದ್ದಾರೆ. ಅದು ನಮ್ಮನ್ನು ಆಳ ವಿಶ್ರಾಮಕ್ಕೆ ಕೊಂಡೊಯ್ದರೂ ಜಾಗ್ರತವಾಗಿಯೂ ಇರಿಸುತ್ತದೆ.

#4 ಎಲ್ಲಿಯಾದರೂ ಯಾವಾಗಲಾದರೂ ಮಾಡಬಹುದಾದದ್ದು

ಸಹಜ ಧ್ಯಾನವನ್ನು ಎಲ್ಲಿ ಕಲಿಯಬಹುದು?

  1. . ನೀವು ವಾಸಿಸುವ ಸ್ಥಳಕ್ಕೆ ಸಮೀಪವಿರುವ ಯಾವುದೇ ಸಹಜ ಧ್ಯಾನದ ಕೇಂದ್ರದಲ್ಲಿ
  2. ಯಾವುದೇ ವಾರಾಂತ್ಯದಲ್ಲಿ ಜೀವನಕಲೆ ಸಂಸ್ಥೆ ಅಂತರ್ರಾಷ್ಟ್ರೀಯ ಕೇಂದ್ರ ಬೆಂಗಳೂರು

ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಯಾರನ್ನು ಸಂಪರ್ಕಿಸಬಹುದು?

sahajsamadhi@vvmvp.org  ಈ ವಿಳಾಸಕ್ಕೆ  ಇ-ಮೇಲ್ ಕಳುಹಿಸಿ.

ನೀವು ಈ ಸಾಧನೆಯನ್ನು ಎಲ್ಲಿ ಬೇಕಾದರೂ ಆರಾಮವಾಗಿ ಕುಳಿತು ಮಾಡಬಹುದು. ವೈದ್ಯರ ಹತ್ತಿರ ಕಾದು ಕುಳಿತಿರುವಾಗ, ವಾಹನ ಸಂಚಾರದ ರಭಸದಲ್ಲಿ ಸಿಕ್ಕಿಕೊಂಡಾಗ, ಗೆಳೆಯನಿಗೋಸ್ಕರ ಕಾಯುತ್ತಿರುವಾಗ, ಅದರಲ್ಲೂ ಮುಖ್ಯವಾಗಿ ಮನೆ ಮತ್ತು ಕಛೇರಿಯಲ್ಲಿ..

ಹಾಗಾದರೆ,  ಧ್ಯಾನದ ತರಬೇತಿ ಶಿಬಿರ ಬೆಂಗಳೂರಿನಲ್ಲಿ ಎಲ್ಲಿ ಕಾಣಬಹುದೆಂದು ಆಶ್ಚರ್ಯಪಡುತ್ತಿದ್ದೀರಾ?

ಬೆಂಗಳೂರಿನ ಸದಾ ಕಾರ್ಯನಿರತ ಸ್ಥಳಗಳ ಪೈಕಿ  ಅರಿವನ್ನು ಜಾಗ್ರತಗೊಳಿಸುವ ಸ್ಥಳವೊಂದಿದೆ

ನೀವು ಸಹಜ ಸಮಾಧಿ ತರಗತಿಗೆ ಸೇರುವವರಿದ್ದರೆ ಮತ್ತು ಶಾಂತಿ, ನೆಮ್ಮದಿ ಹಾಗೂ ನಿಶ್ಶಬ್ದತೆಯನ್ನು ಅರಸುವವರಿದ್ದರೆ “ಜೀವನ ಕಲೆ ಸಂಸ್ಥೆ ಬೆಂಗಳೂರು ಕೇಂದ್ರ’ ನಿಮ್ಮ ಸರಿಯಾದ ಆಯ್ಕೆಯಾಗಿರುತ್ತದೆ. ಕೇಂದ್ರದ ಆವರಣದಲ್ಲಿ ಸುತ್ತಮುತ್ತಲೂ ತುಂಬಿರುವ ಹಚ್ಚ ಹಸಿರು ಮರಗಳು ಉತ್ಸಾಹವನ್ನು ತುಂಬುತ್ತವೆ. ನಿಮ್ಮ ಕಿವಿಗಳು ಪಕ್ಷಿಗಳ ಇಂಪಾದ ಚಿಲಿಪಿಲಿಯಿಂದ ತುಂಬುತ್ತವೆ. ವಿಶಾಲಾಕ್ಷಿ ಮಂಟಪದ ಸುತ್ತಲಿನ ಪ್ರಶಾಂತ, ಸೌಮ್ಯ, ಪರಿಸರ ವಾತಾವರಣವು ನೀವು ಧ್ಯಾನದಲ್ಲಿ ಆಳವಾಗಿ ಹೋಗಲು ಅವಕಾಶ ಮಾಡಿಕೊಡುತ್ತದೆ ಹಾಗೂ ಇದು ಧ್ಯಾನದ ಏಕಾಂತತೆಗೆ ಪೂರಕವಾಗಿರುತ್ತದೆ.

“ಇದು ಪ್ರಕೃತಿಯ ಜೊತೆ ಮತ್ತು ನಿಮ್ಮ ಜೊತೆಯಲ್ಲಿ ನೀವಿರಲು ಒಂದು ಸ್ಥಳ.” ಎಂದು ಇಲ್ಲಿ ತರಬೇತಿ ಪಡೆದ ‘ಗುಂಜನ್’
ಅವರ ಅಭಿಪ್ರಾಯ.

ಆದ್ದರಿಂದ ಇಂದೇ ಸಹಜ ಸಮಾಧಿ ತರಗತಿಗೆ ನಿಮ್ಮ ಹೆಸರನ್ನು ನೋಂದಾಯಿಸಲು ತಪ್ಪಬೇಡಿ. ದಿನನಿತ್ಯದ ಬದುಕಿನ ಪ್ರಾಮುಖ್ಯತೆಗಳ, ಆಸೆಗಳ ಗಡಿಬಿಡಿಯಲ್ಲಿ ಶಾಂತಿಯಿಂದ, ನೆಮ್ಮದಿಯಿಂದ ಇರಲು ಇದು ಒಂದು ಮಾರ್ಗ. ಖಂಡಿತ ಮಾಡಿ.

ಶ್ರೀ ಶ್ರೀ ರವಿಶಂಕರ್ ಅವರ ಜ್ಞಾನ ವಾಹಿನಿ’ಇಂದ ಪ್ರೇರಿತ ಲೇಖನ.