ಮನಸ್ಸಿನ ನೆಮ್ಮದಿಗೆ ಧ್ಯಾನ

ಪ್ರತಿಕ್ರಿಯೆಗೆ ಬದಲು ಪ್ರತಿಸ್ಪಂದಿಸು

ಪ್ರಕ್ಷುಬ್ಧ ಪರಿಸ್ಥಿತಿಗಳಲ್ಲಿ ಮನಸ್ಸನ್ನು ಗಮನಿಸಿದ್ದೀರಾ? ಈ ಪರಿಸ್ಥಿತಿಗಳು ನಮ್ಮಲ್ಲಿ ಪ್ರಬಲ ಉದ್ರೇಕಗಳನ್ನು ಉಂಟುಮಾಡುತ್ತವೆ. ಉದ್ರೇಕಗಳು ಹೆಚ್ಚಾದಾಗ ನಾವು ಒಮ್ಮೆಲೇ ಪ್ರಚೋದಿತರಾಗಿ ಪ್ರತಿಕ್ರಿಯಿಸುವ ಪ್ರವೃತ್ತಿ ಉಂಟಾಗುತ್ತದೆ. ಇದರಿಂದ ನಾವು ಹತೋಟಿ ತಪ್ಪಿ ಭಾವುಕರಾಗಿ ವರ್ತಮಾನದ ಕ್ಷಣಗಳ ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ. ನನಗೆ ಏಕೆ ಹೀಗಾಯಿತು? ನಾನು ಏನು ಮಾಡಿದೆ? ಎಂದು ಕಾರ್ಯದ ಮೇಲೆ ಗಮನವನ್ನು ಕೇಂದ್ರೀಕರಿಸದೇ ಯೋಚಿಸಲು ಆರಂಭಿಸುತ್ತೇವೆ. ಮುಂದೆ ಹೇಗೆ ಕಾರ್ಯವನ್ನು ಸಾಮಾನ್ಯ ಸ್ಥಿತಿಗೆ ತೆಗೆದುಕೊಂಡು ಬರುವುದೆಂಬ ಚಿಂತೆಯಿಂದ ತವಕದಿಂದ ಬಳಲುತ್ತೇವೆ. ಈ ನಿರಂತರ ಯೋಚನೆಗಳ ಸುರಿತ ನಮ್ಮ ಆಲೋಚನಾ ಶಕ್ತಿ, ಸಾಮರ್ಥ್ಯವನ್ನು ಕಡಿಮೆ ಮಾಡಿ ನಾವು ಪರಿಸ್ಥಿತಿಗೆ ಪ್ರತಿಸ್ಪಂದಿಸುವ ಬದಲು ಪ್ರತಿಕ್ರಿಯಿಸುವ ಹಾಗೆ ಮಾಡುತ್ತದೆ.

ಮನಸ್ಸನ್ನು ಸ್ತಬ್ಧವಾಗಿಡಲು (ಸ್ಥಿಮಿತ) ಸಿದ್ಧಪಡಿಸು

ಹಿಡಿತವಿಲ್ಲದ, ಯೋಚನೆಗಳಿಂದ ತುಂಬಿದ ವಿಲಕ್ಷಣ ಮನಸ್ಸು ನಮ್ಮ ಜೀವಸತ್ವವನ್ನು, ಪ್ರಾಣಶಕ್ತಿಯನ್ನು ಬರಿದುಮಾಡಿ, ನಮ್ಮನ್ನು ಸಂಪೂಣ ಆಯಾಸದಿಂದ ಬಳಲಿ, ಹತಾಶರಾಗುವಂತೆ ಮಾಡುತ್ತದೆ. ಈ ಪ್ರಕ್ಷುಬ್ಧತೆಯಿಂದ ಪ್ರಶಾಂತತೆಯ ಕಡೆ ಹೇಗೆ ಚಲಿಸಬಲ್ಲೆವು? ಆ ರೀತಿಯ ಪರಿಸ್ಥಿತಿಗೆ, ಸನ್ನಿವೇಶಕ್ಕೆ ಶಾಂತ ಮನಸ್ಸಿನಿಂದ ಹೇಗೆ ಪ್ರತಿಸ್ಪಂದಿಸಬಲ್ಲೆವು? ಹಿರಿಯ ಅಧ್ಯಾಪಕರಾದ ಶ್ರೀರಾಮ ಸರ್ವೋತ್ತಮ ವಿವರಿಸುತ್ತಾರೆ, “ನಾವು ಮಾನಸಿಕ ನೆಮ್ಮದಿಯನ್ನು ನೇರವಾಗಿ, ಕಡ್ಡಾಯವಾಗಿ,  ಹಕ್ಕಿನಿಂದ ಪಡೆಯಲಾಗದು. ಆದರೆ, ಮನಸ್ಸನ್ನು ಸ್ತಬ್ಧವಾಗಿರಲು ಸಿದ್ಧಪಡಿಸಬಹುದು.” ಧ್ಯಾನವು ಮನಸ್ಸನ್ನು ಅಪ್ರಯತ್ನವಾಗಿ ಶಾಂತಿಯಿಂದಿರಲು ತಯಾರು ಮಾಡುತ್ತದೆ.

ಸಂಪೂರ್ಣ ಅರಿವಿನಿಂದ ಕಾರ್ಯೋನ್ಮುಖರಾಗಿ

ಧ್ಯಾನವು ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುವ ಒತ್ತಡಗಳನ್ನು ಹೊರಹಾಕಿ ತಾಜಾತನ ಹಾಗೂ ಸ್ಪಷ್ಟತೆಯನ್ನು ಕೊಡುತ್ತದೆ. ಅದು ಮನಸ್ಸನ್ನು, ಕ್ರಿಯಾಕ್ಷೇತ್ರವಾದ ವರ್ತಮಾನದ ಕ್ಷಣಕ್ಕೆ ತರುತ್ತದೆ. ನಾವು ನಿನ್ನೆ ನಗಲು ಸಾಧ್ಯವೇ? ನಾವು ಎರಡು ಗಂಟೆಗಳ ನಂತರ ನಗಲು ಸಾಧ್ಯವೇ? ಅದಕ್ಕೆ ನಾವು ಯೋಜನೆ ಮಾಡಬಹುದು. ಆದರೆ, ನಾವು ಈಗ ನಗಲು ಸಾಧ್ಯ. ಅದು ನಮ್ಮ ಕೈಯಲ್ಲಿದೆ. ಯಾವುದೇ ಕಾರ್ಯವು ವರ್ತಮಾನದಲ್ಲಿ ಮಾತ್ರ ಸಾಧ್ಯ. ಯಾವಾಗ ನಾವು ಸಂಪೂರ್ಣ ಅರಿವಿನೊಂದಿಗೆ ಕಾರ್ಯಗತರಾಗುತ್ತೇವೆ, ಯಾವಾಗ ಮನಸ್ಸು ಗಮನದಿಂದಿರುತ್ತದೆ ಆಗ ಕಾರ್ಯವು ಉತ್ತಮವಾಗಿದ್ದು, ತಪ್ಪುಗಳು ನಡೆಯುವುದಿಲ್ಲ

ಶಾಂತಿಯ ಅಲೆಗಳನ್ನು ಹಬ್ಬಿಸಿ

ಒಂದು ಕುತೂಹಲಕಾರಿಯಾದ ವಿಷಯವೆಂದರೆ, ನಮಗೆ ನಮ್ಮ ಪರಿಸರದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವಿದೆ. ಕಾದಾಟ ನಡೆಯುತ್ತಿರುವ ಒಂದು ಕೋಣೆಯೊಳಗೆ ಪ್ರವೇಶಿಸಿದಾಗ ತಳಮಳಗೊಳ್ಳುತ್ತೇವೆ. ಆದರೆ, ಒಂದು ಮಗು ಆಟ ಆಡುತ್ತಿರುವ ಕೋಣೆಯೊಳಗೆ ಪ್ರವೇಶಿಸಿದಾಗ ನಾವು ಆಯಾಸದಿಂದಿದ್ದರೂ ಅದರ ಉತ್ಸಾಹ ಮತ್ತು ಸಂತೋಷ ನಮ್ಮನ್ನು ಆವರಿಸುತ್ತದೆ. ಅದೇ ರೀತಿ ಒಂದು ಗದ್ದಲದ ಪರಿಸರದಲ್ಲಿ ನಮ್ಮೊಳಗೆ ಶಾಂತಿ ಇದ್ದರೆ, ನಾವು ಶಾಂತಿಯ ಕಂಪನವನ್ನು, ಮಿಡಿತವನ್ನು, ನಮ್ಮ ಸುತ್ತಲೂ ಹರಡಿ, ಗೊಂದಲ ಕಡಿಮೆಯಾಗಲು ಸಹಾಯ ಮಾಡಬಹುದು. ದಿನನಿತ್ಯ ಮಾಡುವ ಕೆಲವು ನಿಮಿಷಗಳ ಧ್ಯಾನ, ಯಾವುದೇ ಪರಿಸ್ಥಿತಿಯಲ್ಲಿ ಶಾಂತಿಯಿಂದಿರಲು ಸಹಾಯ ಮಾಡುತ್ತದೆ..

ಧ್ಯಾನ

  1. ಧ್ಯಾನವು ನಮ್ಮನ್ನು ಮಾನಸಿಕವಾಗಿ ಸಬಲರನ್ನಾಗಿ ಮಾಡಿ ಯಾವುದೇ ಪರಿಸ್ಥಿತಿಯನ್ನು ನಗುತ್ತಾ ಎದುರಿಸುವ ಹಾಗೆ ಮಾಡುತ್ತದೆ
  2. ಶಾಂತಿಯುತರನ್ನಾಗಿ ಮಾಡುತ್ತದೆ - ಅಂತರ್ಗತ ಶಾಂತಿ.
  3. ಹೊರಗಿನ ಸನ್ನಿವೇಶದಲ್ಲಿಯೂ ಪ್ರತಿಬಿಂಬಿಸುತ್ತದೆ.
  4. ಭಾವನಾತ್ಮಕ ಚೇತರಿಕೆಯ ಗುಣವನ್ನು ಹೆಚ್ಚಿಸುತ್ತದೆ
  5. ತಕ್ಷಣ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ
  6. ಪ್ರತಿಸ್ಪಂದಿಸುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ.
  7. ಒತ್ತಡರಹಿತರಾಗಲು ಪ್ರಭಾವಶಾಲಿ ಸಾಧನ

ಕೆಲವು ನಿಮಿಷಗಳು ನಿಮಗಾಗಿ ಮಾತ್ರ- ನಿಮ್ಮ ಧ್ಯಾನದ ಸಮಯ

ದೈನಂದಿನ ಕೆಲಸಗಳ ತೊಡಕುಗಳಿಂದ , ಬೇರೆ ಜವಾಬ್ದಾರಿಗಳಿಂದ ಬಿಡಿಸಿಕೊಂಡು ಧ್ಯಾನಕ್ಕಾಗಿ ಕೆಲವು ನಿಮಿಷಗಳನ್ನು ಹೇಗೆ ಪಡೆಯಬಹುದು ಎಂದು ಆಶ್ಚರ್ಯ ಪಡುತ್ತಿದ್ದಿರಲ್ಲವೇ? ಧ್ಯಾನ ಮಾಡುವುದಕ್ಕೆ ಒಳ್ಳೆಯ ಸಮಯ , ಪ್ರಾತಃಕಾಲ. ಅದು ನೀವು ದಿನಪೂರ್ತಿ ಶಾಂತಿಯಿಂದಿರಲು ಸಹಾಯ ಮಾಡುತ್ತದೆ. ನಿಮ್ಮ ಕೆಲಸದ ಬಿಡುವಿನಲ್ಲೂ ಧ್ಯಾನ ಮಾಡಬಹುದು. ಉದಾಹರಣೆಗೆ, ಸಾಯಂಕಾಲದ ಕಾಫಿಗೆ ಮುಂಚೆ. ಇದು ನೀವು ನಿಮ್ಮಲ್ಲೇ ಇರುವ ಸಮಯ, ನಿಮ್ಮ ಮನಸ್ಸಿನಲ್ಲಾಗುವ ಒಣಹರಟೆಗಳ ಬಾಗಿಲನ್ನು ಮುಚ್ಚಿ, ಸಂಪೂರ್ಣವಾಗಿ ವಿಶ್ರಮಿಸಬಹುದು. ನೀವು ನಿಮ್ಮ ಈ ಸಮಯವನ್ನು ಉಪಯೋಗಿಸಿಕೊಂಡು ಧ್ಯಾನದ ಅನುಭವಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೆಲವು ಉಪಾಯಗಳು.

ಧ್ಯಾನದ ಸುಲಭ ಮಾರ್ಗ; ಈ ಉಪಾಯಗಳನ್ನು ಅನುಸರಿಸಿ

  • ಹಿತಕರವಾದ ಪರಿಸರ - ನಿಶ್ಶಬ್ದ ಸ್ಥಳದಲ್ಲಿ ಧ್ಯಾನ ಮಡುವುದು ಉಚಿತ. ಇದು ನಿಮ್ಮ ಗಮನ ಬೇರೆ ಕಡೆ ಹರಿಯದಂತೆ ಮಾಡಿ, ನೀವು ಆಳವಾದ ಧ್ಯಾನದ ಅನುಭವವನ್ನು ಹೊಂದಲು ಸಹಾಯ ಮಾಡುತ್ತದೆ.
  • ನಿತ್ಯವೂ ತಪ್ಪದೇ ಧ್ಯಾನ ಮಾಡುವ ಅಭ್ಯಾಸ- ದಿನಕ್ಕೆ ಎರಡು ಬಾರಿ ಧ್ಯಾನ ಮಾಡುವುದು ಮತ್ತು ಅದನ್ನು ರೂಢಿಸಿಕೊಳ್ಳುವುದು ಒಳ್ಳೆಯ ಉಪಾಯ. ಆಗಲೇ ನೀವು ದಿನ ಕಳೆದಂತೆ ಧ್ಯಾನದ ಸಕಾರಾತ್ಮಕ ಪರಿಣಾಮಗಳನ್ನು ಗಮನಿಸಬಹುದು.
  • ನಿಮ್ಮ ಗೆಳೆಯರ ಜೊತೆ ಧ್ಯಾನ- ನೀವು ನಿಮ್ಮ ಹತ್ತಿರದ ಸ್ನೇಹಿತರ ಜೊತೆಗೂಡಿ ಗುಂಪಿನಲ್ಲೂ ಧ್ಯಾನ ಮಾಡಬಹುದು. ಇದು ನಿಮ್ಮ ಅನುಭವವನ್ನು ಹೆಚ್ಚಿಸುತ್ತದೆ. ಅಲ್ಲದೇ ಅಭ್ಯಾಸವನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಧ್ಯಾನಕ್ಕೆ ಮೊದಲು ಚಿಕ್ಕ ಚಿಕ್ಕ ವ್ಯಾಯಾಮಗಳು –ಇದು ನಮ್ಮ ಶರೀರದ ವಿಭಿನ್ನ ಭಾಗಗಳಲ್ಲಿ ಉಂಟಾಗುವ ಒತ್ತಡಗಳನ್ನು, ಮಾನಸಿಕ ಉದ್ವೇಗಗಳನ್ನು ಶಮನಗೊಳಿಸಿ, ನಾವು ವಿಶ್ರಾಮದಿಂದ ಧ್ಯಾನವನ್ನು ಅನುಭವಿಸುವ ಹಾಗೆ ಮಾಡುತ್ತದೆ.
  • ಯೋಚನೆಗಳನ್ನು, ವಿಚಾರಗಳನ್ನು ಗಮನಿಸಿ - ನಿಮ್ಮಲ್ಲಿ ಬರುವ ವಿಚಾರಗಳನ್ನು ತಡೆಹಿಡಿಯಲು ಪ್ರಯತ್ನಿಸಬೇಡಿ. ಅವುಗಳು ಹಾಗೇ ಹರಿದು ಬರಲಿ. ಧ್ಯಾನವು ಅಪ್ರಯತ್ನ..
  • ಇದನ್ನು ಸರಳವಾಗಿ ತೆಗೆದುಕೊಳ್ಳಿ -ನೀವು ಹತ್ತರಿಂದ ಹದಿನೈದು ನಿಮಿಷಗಳವರೆಗಾದರೂ ಧ್ಯಾನ ಮಾಡುತ್ತೀರೆಂದು ಖಚಿತ ಪಡಿಸಿಕೊಳ್ಳಿ. ಕಣ್ಣುಗಳನ್ನು ತೆರೆಯುವುದಕ್ಕೆ ಆತುರ ಪಡಬೇಡಿ..
  • ನಿಮ್ಮ ಹೊಟ್ಟೆಯು ಪೂರ್ಣ ತುಂಬಿರದ ಹಾಗೆ ನೋಡಿಕೊಳ್ಳಿ – ಇದು ನೀವು ಧ್ಯಾನದ ಸಮಯದಲ್ಲಿ ನಿದ್ರಿಸುವುದನ್ನು ತಡೆಯುತ್ತದೆ.

ಶ್ರೀ ಶ್ರೀ ರವಿ ಶಂಕರ್ ಅವರ ‘ಜ್ಞಾನ ವಾಹಿನಿ ಇಂದ ಪ್ರೇರಿತ

ಲೇಖಕರು: ಲೀಲಾ, ಗ್ರಾಫಿಕ್ಸ್- ನೀಲಾದ್ರಿ ದತ್ತಾ.

ನಿಮ್ಮ ಅಭಿಪ್ರಾಯಗಳಿಗೆ ಮತ್ತು ಸಲಹೆಗಳನ್ನು, ಇ-ಮೇಲ್ ಮಾಡಿ: webteam.india@artofliving.org