ಧ್ಯಾನದ ರಹಸ್ಯಗಳು : ಧ್ಯಾನವು ಆತ್ಮನ ಆಹಾರ

ನಮ್ಮನ್ನು ನಾವು ಧ್ಯಾನಕ್ಕೆ ಹೇಗೆ ಸಿದ್ಧಪಡಿಸಿಕೊಳ್ಳುತ್ತೇವೆ? ನಾವು ನಮ್ಮ ಮನೆಯಲ್ಲಿ ನಾವು ಬಿಗುಮಾನವಿಲ್ಲದೆ, ತುಂಬ ಸಹಜವಾಗಿದ್ದೀವಿ ಎನ್ನುವಂತಹ ಭಾವನೆಯಿಂದ ಇರುವುದರಿಂದ; ನೀವು ತುಂಬ ಬಿಗುಮಾನದಿಂದಿದ್ದರೆ ನಿಮಗೆ ಧ್ಯಾನ ಮಾಡುವುದು ಸಾಧ್ಯವಾಗುವುದಿಲ್ಲ! ಧ್ಯಾನಿಸಲು ನೀವು ಅನಿರ್ಬಂಧವಾಗಿರುವುದನ್ನೂ ಹಾಗೂ ಸಹಜವಾಗಿ ನಿಮ್ಮ ಸಗೃಹದಲ್ಲಿರುವತಹ ಭಾವನೆಯನ್ನೂ ಹೊಂದಿರುವ ಅವಶ್ಯಕತೆಯಿದೆ.

ನಾವಿಂದು, ' ನಮಗೇಕೆ ಧ್ಯಾನಮಾಡುವ ಅವಶ್ಯಕತೆಯಿದೆ? ನಾವು ಹೇಗೆ ಪರಿಣಾಮಕಾರಿಯಾಗಿ ಧ್ಯಾನಮಾಡಬಹುದು? ' ಮತ್ತು ವಿವಿಧ ರೀತಿಯ ಧ್ಯಾನಗಳ ಬಗ್ಗೆ ವಿಚಾರ ಮಾಡೋಣ.

ಪ್ರತಿಯೊಬ್ಬ ಮಾನವನಿಗೂ ಧ್ಯಾನ ಮಾಡುವ ಅವಶ್ಯಕತೆಯಿದೆ, ಏಕೆಂದರೆ ಪ್ರತಿಯೊಬ್ಬ ಮನುಷ್ಯನ ಸಹಜ ಪ್ರವೃತ್ತಿಯೇ ಅವನು ಜೀವನದಲ್ಲಿ ಎಂದೂ ಕುಂದದ ಸಂತೋಷವನ್ನು ಪಡೆಯಬೇಕು, ವಿರೂಪ ಹೊಂದದ ಅಥವಾ ನಕಾರಾತ್ಮಕವಾದ ಭಾವನೆಯಾಗಿ ಬದಲಾಗದಂತಹ ಪ್ರೀತಿಯನ್ನು ಪಡೆಯಬೇಕು ಎಂದು ಆಶಿಸುವುದೇ ಆಗಿದೆ.

ಧ್ಯಾನವು ನಮಗೆ ಹೊರಗಿನದೇ? ಪರದೇಶದ್ದೇ? ಖಂಡಿತವಾಗಿ ಅಲ್ಲ! ನೀವು ಹುಟ್ಟುವ(ಜನಿಸುವ) ಒಂದೆರಡು ತಿಂಗಳು ಮೊದಲು ನೀವು ಧ್ಯಾನದಲ್ಲಿಯೇ ಇದ್ದಿರಿ! ನೀವು, ನಿಮ್ಮ ತಾಯಿಯ ಗರ್ಭದಲ್ಲಿ ಏನೂ ಮಾಡದೆ ಇದ್ದಿರಿ. ನಿಮ್ಮ ಅಹಾರವನ್ನು ನೀವು ಅಗಿಯುವ ಅಗತ್ಯವೂ ಕೂಡ ಇರಲಿಲ್ಲ; ಅದು ನೇರವಾಗಿ ನಿಮ್ಮ ಹೊಟ್ಟೆಗೇ ಬಂದು ಸೇರುತ್ತಿತ್ತು, ಮತ್ತು ನೀವು ಅಲ್ಲಿಯೇ ಇರುವ ದ್ರವದಲ್ಲಿ ಕೆಲವು ಸಾರಿ ಅಲ್ಲಿ, ಇಲ್ಲಿ ಬಡಿಯುತ್ತಾ ತಿರುಗುತ್ತಾ ಖುಷಿಯಾಗಿ ತೇಲುತ್ತಿದ್ದಿರಿ....ಅದೇ ಧ್ಯಾನ! ನೀವು ಏನೂ ಮಾಡುತ್ತಿರಲಿಲ್ಲ; ಎಲ್ಲವೂ ನಿಮಗಾಗಿ ಮಾಡಲ್ಪಡುತ್ತಿತ್ತು. ಆದುದರಿಂದಲೇ ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಪ್ರತಿಯೊಂದು ಆತ್ಮನಲ್ಲಿಯೂ ಆ ಪರಮಶೇಷ್ಠ ಸುಖಕ್ಕಾಗಿ ಹಾತೊರೆಯುವ ಪ್ರವೃತ್ತಿ, ಸಹಜವಾಗಿಯೇ ಇದೆ. 

ನೀವೇಕೆ ನೆಮ್ಮದಿಯನ್ನು, ಸುಖವನ್ನು ಬಯಸುವಿರಿ ಎಂಬುದು ನಿಮಗೀಗ ಅರ್ಥವಾಯಿತೇ ?! ಒಂದು ನಿರ್ದಿಷ್ಟ ಸಮಯದಲ್ಲಿ ನೀವು ಸುಖ ಸಂತೋಷದಿಂದ ಇದ್ದಿರಿ, ಅಲ್ಲದೆ 'ಧ್ಯಾನ' ವೆಂಬ ಶಾಂತಿಯುತ, ಸಮಾಧಾನದ ಸ್ಥಿತಿಯನ್ನು ಈ ಮೊದಲೇ ಅನುಭವಿಸಿದ್ದೀರಿ. ಧ್ಯಾನವು ಪರಮಶ್ರೇಷ್ಠವಾದ ಸುಖ ಆದುದರಿಂದ, ಈ ಗಲಾಟೆ, ಗಲಿಬಿಲಿ ಪ್ರಪಂಚಕ್ಕೆ ಬರುವ ಮುನ್ನ ನೀವು ಇದ್ದಂತಹ ಪ್ರಶಾಂತ ಸ್ಥಿತಿಗೆ ಮರಳಿ ಹಿಂತಿರುಗಲು ಬಯಸುವುದು ತುಂಬಾ ಸಹಜ. ಏಕೆಂದರೆ ಈ ವಿಶ್ವದಲ್ಲಿ ಎಲ್ಲವೂ ಚಕ್ರಗತಿಯಲ್ಲಿ(cyclic) ಆವರ್ತಿಸುತ್ತಿರುತ್ತವೆ. ಪ್ರತಿಯೊಂದೂ ತನ್ನ ಮೂಲಸ್ರೋತಕ್ಕೆ ಹಿಂತಿರುಗಲು ಬಯಸುತ್ತಿರುತ್ತದೆ. ಇದು ಜಗತ್ತಿನ ಸ್ವಭಾವ.

ಶರತ್ಕಾಲದಲ್ಲಿ, ಎಲೆಗಳು ಉದುರಿ ಮಣ್ಣಿಗೆ ಹಿಂತಿರುಗುತ್ತವೆ. ಪ್ರಕೃತಿ ಅದನ್ನು ಮತ್ತೆ ರೀ-ಸೈಕಲ್ ಮಾಡಿ, ಉಪಯೋಗಕ್ಕೆ ಬರುವಂತೆ ಮಾಡುವ ತನ್ನದೇ ವಿಧಾನವನ್ನು ಹೊಂದಿದೆ. ಹಾಗೆಯೇ ನೀವು ಜೀವನದಲ್ಲಿ ಪ್ರತಿದಿನವೂ ಶೇಖರಿಸಿಟ್ಟುಕೊಂಡಿರುವ, ಮನಸ್ಸಿನಮೇಲೆ ಅಚ್ಚೊತ್ತಿರುವ ಪರಿಣಾಮಕಾರೀ ಭಾವನೆಗಳಿಂದ ನಿಮ್ಮನ್ನು ಮುಕ್ತರನ್ನಾಗಿಸಿ, ಪುನಃ ನೀವು ಈ ಭೂಗ್ರಹಕ್ಕೆ ಬಂದಾಗ ಇದ್ದಂಥ ಸಹಜ ಸ್ಥಿತಿಗೆ ಹಿಂತಿರುಗುವಂತೆ ಮಾಡುವುದೇ ಧ್ಯಾನ. ಈ ರೀ-ಸೈಕಲ್ ಕೂಡ ಸಹಜವಾದ ಪ್ರವೃತ್ತಿಯೇ!
ಉತ್ಸಾಹಭರಿತರಾಗಿ, ಚೈತನ್ಯಭರಿತರಾಗಿ ಆಗುವುದೇ ಧ್ಯಾನ.

ನಿಮ್ಮದೇ ಸಹಜ ಸ್ವಭಾವವಾದ ಪ್ರಸನ್ನತೆ ಪ್ರಶಾಂತತೆಗೆ ಮರಳಿ ಹಿಂತಿರುಗುವುದೇ ಧ್ಯಾನ. ಪರಮಶ್ರೇಷ್ಠವಾದ ಆನಂದ ಮತ್ತು ಸುಖ ಸಂತೋಷವನ್ನು ಪಡೆಯುವುದೇ ಧ್ಯಾನ. 


ಭಾವೋದ್ರೇಕವಿಲ್ಲದ ಸಂತೋಷವೇ ಧ್ಯಾನ.
ಉದ್ವೇಗವಿಲ್ಲದ, ರೋಮಾಂಚನಕಾರಿ ಅನುಭವವೇ ಧ್ಯಾನ.
ದ್ವೇಷವಿಲ್ಲದೆ(ಹಗೆತನ), ಪ್ರೇಮದ ಅನುಭವವೇ ಧ್ಯಾನ.
ಜೀವಾತ್ಮನ ಆಹಾರ, ಪೋಷಕ ದ್ರವ್ಯವೇ ಧ್ಯಾನ.


ಆಹಾರಕ್ಕಾಗಿ ಸಹಜವಾದ ತೃಷ್ಣೆಯಿರುತ್ತದೆ. ನಿಮಗೆ ಹಸಿವಾದಾಗ ನೀವು ಏನನ್ನಾದರೂ ತಿನ್ನುವಿರಿ. ಹಾಗೆಯೇ ಬಾಯಾರಿಕೆಯಾದಾಗ ಸ್ವಲ್ಪ ನೀರು ಕುಡಿಯುವಿರಿ.


ಇದರಂತೆಯೇ ಆತ್ಮವೂ ಕೂಡಾ ಧ್ಯಾನಕ್ಕಾಗಿ ಹಂಬಲಿಸುತ್ತದೆ, ಹಾಗೂ ಈ ಪ್ರವೃತ್ತಿಯು ಪ್ರತಿಯೊಬ್ಬರಲ್ಲಿಯೂ ಇರುತ್ತದೆ.
ಈ ಭೂಮಿಯಲ್ಲಿ 'ಅನ್ವೇಷ'ನಾಗಿಲ್ಲದಿರುವ(seeker) ಒಂದೇ ಒಂದು ವ್ಯಕ್ತಿಯೂ ಇಲ್ಲ, ಅದನ್ನವರು ಗುರುತಿಸಿಕೊಂಡೇ ಇಲ್ಲ, ಅಷ್ಟೆ. ನಮಗೆ ಸಿಗದೇ ಇರುವಂತಹ ಕಡೆಯಲ್ಲಿ ನಾವು ಆ ಅಹಾರವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ, ಅದೇ ಸಮಸ್ಯೆ!

'ಧ್ಯಾನದ ರಹಸ್ಯಗಳು' ಎಂಬುದರ ಬಗ್ಗೆ ಗುರೂಜಿಯವರು ಕ್ಯಾಲಿಫ್ಹೋರ್ನಿಯಾದಲ್ಲಿ ಮಾತನಾಡಿರುವ  ಜ್ಞಾನಧಾರೆ ಆಧಾರಿತ. ಈ ಭಾಷಣಗಳನ್ನು ಗುರೂಜಿಯವರ 'ಜ್ಞಾನಪತ್ರ'ಗಳನ್ನಾಗಿ ಮಾಡಿದ್ದಾರೆ.