ಉನ್ನತ ಶಿಬಿರಗಳು

ಅನುಗ್ರಹ ಕಾರ್ಯಕ್ರಮ

“ಯಾವುದೇ ಬಯಕೆಗಳಿರದ ಆ ಒಂದು ಸ್ಥಿತಿಯಲ್ಲಿ  ..........  ಹೊರ ಹರಿಯುವ ಆಶಿರ್ವಾದವು ಫಲಪ್ರದವಾಗಿರುತ್ತದೆ. " -   ಶ್ರೀ ಶ್ರೀ

ಅನುಗ್ರಹಿಸುವ ಕಾರ್ಯಕ್ರಮವು ಒಂದು ಸೂಕ್ಷ್ಮವಾದ ಆದರೆ  ಶಕ್ತಿಶಾಲಿಯಾದ ಕಾರ್ಯಕ್ರಮ.  ಒಬ್ಬ ವ್ಯಕ್ತಿಯನ್ನು ಆಳವಾದ ಕೃತಜ್ಞತೆಯ  ಭಾವ ಮತ್ತು ಪೂರ್ಣತೆಯ ಕಡೆಗೆ ಕೊಂಡೊಯ್ಯಲು ಬೇಕಾದ ವಿಶಿಷ್ಟ ಪ್ರಕ್ರಿಯೆಗಳು ಮತ್ತು ಧ್ಯಾನಗಳನ್ನು ಒಳಗೊಂಡಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ.

ಶಿಬಿರಾರ್ಥಿಗಳು ಹೇಳುತ್ತಾರೆ, ಅವರು ಭಾಗವಹಿಸಿದ ಬೇರೆ ಯಾವುದೇ ಕಾರ್ಯಕ್ರಮಗಳಿಗಿಂತ  ಹೆಚ್ಚಾಗಿ ಈ ಒಂದು ಕಾರ್ಯಕ್ರಮದಲ್ಲಿ  ಅಗಾಧ ಕೃಪೆಯೊಂದು ಅವರೆಡೆಗೆ ಪ್ರವಹಿಸಿದ ಅನುಭವವಾಗಿದೆ ಮತ್ತು ಈ ಧಾರೆಯು ತಮ್ಮ ಮೂಲಕ  ಹರಿಯುವುದು ಕೂಡ  ಅವರ ಗಮನಕ್ಕೆ ಬಂದಿದೆ.

ಅರ್ಹತೆ:  
ಎರಡು ಜೀವನಕಲೆಯ (ಭಾಗ 2) ಕಾರ್ಯಕ್ರಮಗಳು

ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ದಿವ್ಯ ಸಮಾಜ ನಿರ್ಮಾಣ (ಡಿ. ಎಸ್. ಎನ್)

ಡಿ. ಎಸ್. ಎನ್ ಒಂದು ಅತ್ಯಂತ ಸಂಪೂರ್ಣವಾದ ಮತ್ತು ಪರಿವರ್ತನಾಕಾರಿ ಕಾರ್ಯಕ್ರಮ. ಶಿಬಿರಾರ್ಥಿಗಳನ್ನು ಶಕ್ತಿವಂತರನ್ನಾಗಿ ಮಾಡಿ ವೈಯಕ್ತಿಕ ಪ್ರತಿಬಂಧ ಮತ್ತು ತಡೆಗಳನ್ನು ಭೇದಿಸಿ ಒಳಗಿನ ಸ್ಥಿರತೆ ಮತ್ತು ಶಕ್ತಿಗಳಿಗೆ ಹಾದಿ ಮಾಡಿಕೊಡುತ್ತದೆ.

ನಾನು ಉತ್ತಮವಾದುದನ್ನು ಮಾಡಬೇಕು - ನನಗೆ, ಕುಟುಂಬಕ್ಕೆ, ಸಮಾಜಕ್ಕೆ ಮತ್ತು ನಮ್ಮ ವಿಶ್ವಕ್ಕೆ - ಅನ್ನುವ ಆಳವಾದ ಆಶೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ನಮ್ಮಲ್ಲಿ ತುಂಬಾ ಜನರಿಗೆ ತಮ್ಮ ವೈಯಕ್ತಿಕ ತಡೆಗಳು, ಹಳೆಯ ಅಭ್ಯಾಸಗಳು, ಭಾವನಾತ್ಮಕ ಗಾಯಗಳು, ಭಯ ಮತ್ತು ಪ್ರತಿಬಂಧಗಳು - ಇವುಗಳಿಂದ ತಮ್ಮ ಜೀವನದಲ್ಲಿ ಪರಿಪೂರ್ಣವಾಗಿ ಭಾಗವಹಿಸದಂತೆ ತಡೆಯಾಗುತ್ತದೆ.

ಡಿ. ಎಸ್. ಎನ್ - ಕಾರ್ಯಕ್ರಮವು ಯೋಗ, ಶಕ್ತಿಶಾಲಿಯಾದ ಪ್ರಕ್ರಿಯೆಗಳು ಮತ್ತು ಆಳವಾದ ಆಧ್ಯಾತ್ಮಿಕ ಜ್ಞಾನಗಳ ಸುಂದರವಾದ ಮಿಶ್ರಣವಾಗಿದ್ದು ಎಲ್ಲ ತಡೆಗಳನ್ನು ಬೇಧಿಸಿ ನಮ್ಮನ್ನು ಶಕ್ತಿವಂತರನ್ನಾಗಿ ಮಾಡುವುದರಿಂದ, ನಾವು ನಮಗೆ ಒಳಿತನ್ನು ಮಾಡಿಕೊಳ್ಳುವುದರ ಜೊತೆಗೆ ಇತರರ ಸೇವೆಯನ್ನೂ ಪೂರ್ಣತರಹದಲ್ಲಿ ಮಾಡಬಹುದು.

ಅರ್ಹತೆಗಳು :
ಜೀವನಕಲೆಯ  ಸಂತಸದ ಕಾರ್ಯಕ್ರಮ (ಭಾಗ ೧) ಅಥವಾ ವೈಇ.ಎಸ್! + ಕಾರ್ಯಕ್ರಮ.

ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಗುರು ಪೂಜಾ (ಭಾಗ 1 ಮತ್ತು ಭಾಗ 2)

ಆತ್ಮಜ್ಞಾನವನ್ನು ಪೋಷಿಸುವ ಆಧ್ಯಾತ್ಮಿಕ ಗುರು ಪರಂಪರೆಯನ್ನು  ಕೃತಜ್ಞತಾಪೂರ್ವಕವಾಗಿ ಗೌರವಿಸುವ ಸಾಂಪ್ರದಾಯಿಕ ವಿಧಿಯಾಚರಣೆಯೇ ಗುರುಪೂಜೆ. ಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಸಹೋದರಿಯಾದ ಶ್ರೀಮತಿ ಭಾನುವತಿ ನರಸಂಹನ್ ಅವರ ಪ್ರೋತ್ಸಾಹಕರ ಮಾರ್ಗದರ್ಶನದಲ್ಲಿ ಗುರು ಪೂಜೆಯ ಮಂತ್ರಗಳನ್ನು ಕಲಿಯಬಹುದು.
ಗುರು ಪೂಜೆಯ ಮಂತ್ರಾಭ್ಯಾಸವು ನಮ್ಮ ಮನಸ್ಸನ್ನು  ಗುರು ಪರಂಪರೆಯೊಂದಿಗೆ ಒಂದಾಗಿಸುತ್ತದೆ. ಈ  ಪೂಜೆಯಲ್ಲಿ ಭಾಗವಹಿಸುವ ಹೆಚ್ಚಿನ ಜನರು ಉನ್ನತವಾದ ದಿವ್ಯ ಅನುಭೂತಿಗೆ ಒಳಗಾಗಿದ್ದಾರೆ.
ಈ ಶಿಬಿರವು ನಮ್ಮ ಸುಂದರ ಪ್ರಾಚೀನ ಜ್ಞಾನ, ಕಥೆಗಳು ಹಾಗು ಗುರುಗಳ ಆಳವಾದ ಅನುಭವಗಳನ್ನು ಒಳಗೊಂಡಿದೆ.
ಈ ಗುರು ಪೂಜೆಯನ್ನು  ೨ ಭಾಗಗಳಾಗಿ ವಿಂಗಡಿಸಲಾಗಿದೆ:
ಭಾಗ ೧ - ಇದರಲ್ಲಿ ಗುರು ಪೂಜೆಯ ಮಂತ್ರೋಚ್ಛಾರಣೆಯನ್ನು ಕಲಿತು, ವೇದಜ್ಞಾನ ಹಾಗು ಪರಂಪರೆಯ ರಹಸ್ಯಗಳನ್ನು ಅರಿಯಬಹುದು.
ಭಾಗ ೨ - ಇದರಲ್ಲಿ ಭಾಗ ೧ರಲ್ಲಿ ಕಲಿಯಲ್ಪಟ್ಟ ಮಂತ್ರಾಭ್ಯಾಸದೊಂದಿಗೆ  ಗುರು ಪರಂಪರೆಯನ್ನು ಆಹ್ವಾನಿಸಿ ಪೂಜೆಯನ್ನು ನೆರವೇರಿಸಲು ಅರ್ಹತೆಗಳನ್ನು ಒದಗಿಸಲಾಗುತ್ತದೆ.

ಅರ್ಹತೆ:
ನಾಲ್ಕು ಜೀವನ ಕಲೆ ಉನ್ನತ ಶಿಬಿರ (ಭಾಗ ೨) + ಸಹಜ ಸಮಾಧಿ ಧ್ಯಾನ ಶಿಬಿರ

ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಮರತ್ವದ ಪ್ರಕ್ರಿಯೆ

ಆತ್ಮವು ಅಮರವಾಗಿದ್ದು ನಮ್ಮ ಇಂದಿನ ಶರೀರರೂಪವನ್ನುಹೊಂದುವುದಕ್ಕೆ ಮೊದಲೂ ಇತ್ತು, ದೇಹವು ನಶಿಸಿದ ನಂತರವೂ ಇರುತ್ತದೆ. ಅಮರತ್ವದ ಪ್ರಕ್ರಿಯೆಯು ಪೂರ್ವಜನ್ಮಕ್ಕೆ ಮರಳುವ ತಂತ್ರವಾಗಿದ್ದು ಇದು ನಮಗೆ ನಮ್ಮ ಇಂದಿನ ನಡವಳಿಕೆಯ ರೀತಿಗೆ ಮೂಲಭೂತ ಕಾರಣವಾದ ಹಿಂದಿನ ಜನ್ಮಗಳ ಸಂಗತಿಗಳನ್ನು ನೆನಪಿಗೆ ತಂದುಕೊಳ್ಳಲು ಸಾಧನವನ್ನು ಒದಗಿಸುತ್ತದೆ. ಈ ವರ್ತನಾ ಮಾದರಿಗಳು ಮಾನಸಿಕ ಅಥವಾ ದೈಹಿಕವಾಗಿರಬಹುದು. ಬದಲಾವಣೆ ಮಾಡಿಕೊಳ್ಳಬೇಕಾದಂತಹದೇನೋ ಇರಬಹುದು ಅಥವಾ ಕೆಲವೊಮ್ಮೆ ಅರ್ಥ ಮಾಡಿಕೊಂಡರೂ ಸಾಕಾಗಬಹುದು. ವ್ಯಕ್ತಿಯ ಬದುಕಿನ ವಿಕಾಸಕ್ಕೆ ತಡೆಯೊಡ್ಡುವ ಪೂರ್ವ ಜನ್ಮದ ಗುರುತುಗಳನ್ನು ಅಳಿಸಿಹಾಕಲು ಮತ್ತು ಬದುಕನ್ನು ಸಂಪೂರ್ಣವಾಗಿ ಹಾಗೂ ಹೆಚ್ಚು ಆನಂದದಿಂದ ಕಳೆಯಲು ಈ ಪ್ರಕ್ರಿಯೆ ಸಹಾಯ ಮಾಡುತ್ತದೆ.

ಅಮರತ್ವದ ಪ್ರಕ್ರಿಯೆಯು ೨ ರಿಂದ ೩ ಗಂಟೆಗಳ ಅವಧಿಯದಾಗಿದ್ದು ವ್ಯಕ್ತಿಕೇಂದ್ರಿತವಾಗಿರುತ್ತದೆ( ಒಬ್ಬರ ಎದುರು ಇನ್ನೊಬ್ಬರು). ಅನುಭವವು ಆಳವಾದ ನಿರ್ದೇಶಿತ ಧ್ಯಾನದಂತೆ ಇರುತ್ತದೆ.

ಅರ್ಹತೆಗಳು:

೩ ಜೀವನ ಕಲೆಯ ಉನ್ನತ ಶಿಬಿರ (ಭಾಗ ೨), ಒಂದು ಶ್ರೀ ಶ್ರೀ ಯವರೊಂದಿಗೆ

ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ