ಆರ್ಟ್ ಎಕ್ಸೆಲ್ ಶಿಬಿರ (ಆಲ್ ರೌಂಡ್ ಟ್ರೈನಿಂಗ್ ಇನ್ ಎಕ್ಸೆಲೆನ್ಸ್)

ನಿಮ್ಮ ಮಕ್ಕಳು ತಮಗೆ ಹಾಗೂ ಮತ್ತೊಬ್ಬರಿಗೆ ಆರೋಗ್ಯಪೂರಕ ಗೌರವವನ್ನು ಬೆಳೆಸಿಕೊಳ್ಳಲು ಈ ಶಿಬಿರವು ನೆರವಾಗುತ್ತದೆ. ಈ ಶಿಬಿರದಲ್ಲಿ ಕಲಿಸುವ ಸುದರ್ಶನ-ಕ್ರಿಯಾ-ಸಹಿತ ಸರಳವಾದ ಉಸಿರಾಟದ ಪ್ರಕ್ರಿಯೆಯು ನಿಮ್ಮ ಮಗುವು ಭಯ, ಆತಂಕ, ಚಟಪಟಿಕೆ, ಹತಾಶೆ, ಮತ್ಸರ ಇನ್ನಿತರ ನಕಾರಾತ್ಮಕ ಭಾವನೆಗಳಿಂದ ಸುಲಭವಾಗಿ ಹೊರಬರಲು ಸಾಧನ.

ಈ ಇಡೀ ಕಾರ್ಯಕ್ರಮವು ನಿರಾಯಾಸವಾಗಿ, ವಿನೋದವಾಗಿ, ಕ್ರೀಡೆ, ಚಟುವಟಿಕೆಗಳು ಹಾಗು ಪ್ರಕ್ರಿಯೆಗಳಿಂದ ಆ ವಯಸ್ಸಿನ ಮಕ್ಕಳಿಗೆಂದೇ ರೂಪಿಸಲಾಗಿದೆ.

ಇದರಲ್ಲಿ ಮಕ್ಕಳು ದಿನನಿತ್ಯದ ಜೀವನದಲ್ಲಿ ಕ್ಷಮೆ, ಗೌರವ, ಸ್ನೇಹಮಯ ಜೀವನವನ್ನು ಅಳವಡಿಸಿಕೊಳ್ಳಲು ಸುಲಭವಾದ ತತ್ವಗಳನ್ನು ಕಲಿಯುವರು.

ನೀವು ಒಬ್ಬ ಶಿಕ್ಷಕ ಅಥವಾ ಪೋಷಕ ಆಗಿದ್ದಲ್ಲಿ ಈ ಕಾರ್ಯಕ್ರಮವು ನಿಮ್ಮ ಮಕ್ಕಳನ್ನು ಆಧ್ಯಾತ್ಮಿಕ , ಮಾನವೀಯ ಮೌಲ್ಯಗಳು, ಶಿಸ್ತು ಹಾಗು ಅವರ ಆರೋಗ್ಯಪೂರ್ಣ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ಬೆಳೆಯಲು ಇದೊಂದು ಉತ್ತಮ ಮಾರ್ಗ.

ನಿಮ್ಮ ಸಮೀಪದ ಆರ್ಟ್ ಎಕ್ಸೆಲ್ ಕಾರ್ಯಕ್ರಮವನ್ನು ಕಂಡುಕೊಳ್ಳಿ

  • ಲಾಭಗಳು
  • ಅವಲೋಕನೆ
  • ಕಾರ್ಯಕ್ರಮದ ವಿಷಯಗಳು
    • ನಕಾರಾತ್ಮಕ ಭಾವನೆಗಳಾದ ಭಯ, ಆತಂಕ, ಕೋಪ, ಹತಾಶೆಗಳಿಂದ ಹೊರಬರಬಹುದು .
    • ನೆನಪಿನಶಕ್ತಿ ಹಾಗೂ ಗಮನಶಕ್ತಿಯನ್ನು ಅಭಿವೃಧ್ಧಿ ಪಡಿಸಬಹುದು
    • ಕ್ರಿಯಾಶೀಲತೆ, ಆನಂದ, ಯೋಗಕ್ಷೇಮವನ್ನು ಉತ್ತಮಗೊಳಿಸಬಹುದು
    • ಸಭಾಕಂಪನದಿಂದ ಹೊರಬರಬಹುದು
    • ಗುಂಪಿನೊಂದಿಗೆ ಕೆಲಸಮಾಡಿ ತೊಡಕುಗಳನ್ನು (ಅಡ್ಡಿಗಳನ್ನು) ಧೈರ್ಯದಿಂದ ಎದುರಿಸಬಹುದು
    • ಸಹಭಾಗಿತ್ವವನ್ನು ಹೆಚ್ಚಿಸಬಹುದು
    • ಸುಲಭವಾದ ಸೂತ್ರಗಳಿಂದ ದಿನನಿತ್ಯದ ತೊಂದರೆಗಳನ್ನು ನಿಭಾಯಿಸಬಹುದು
    • ಉಸಿರಾಟ, ಯೋಗ, ಮತ್ತು ಧ್ಯಾನದ ಮಹತ್ವಗಳನ್ನು ತಿಳಿದುಕೊಳ್ಳಬಹುದು
    • ಪ್ರತಿನಿತ್ಯ ಒಬ್ಬ ಹೊಸ ಸ್ನೇಹಿತನನ್ನು ಮಾಡಿಕೊಳ್ಳಬಹುದು
    • ಪರಿಪೂರ್ಣ ವ್ಯಕ್ತಿತ್ವ ಸುಧಾರಣೆ ಪಡೆಯಬಹುದು
    • ಭಾರತದ ಸಂಸ್ಕೃತಿ ಹಾಗೂ ಆಧ್ಯಾತ್ಮಿಕದ ಪರಿಚಯವಾಗುವುದು
    • ಮನಸ್ಸು ತಾಜಾವಾಗುವುದು
    • ಉಸಿರಾಟದ ತೊಂದರೆಗಳಿಂದ ಹೊರಬರಬಹುದು
    • ವಯೋಮಿತಿ: 8 ರಿಂದ 13 ವರ್ಷಗಳು
    • ಶಿಬಿರದ ಅವಧಿ 4 ರಿಂದ 6 ದಿನಗಳು
    • ಸಮಯ: ದಿನಕ್ಕೆ 3 ರಿಂದ 4 ಘಂಟೆಗಳು
    • ಸುದರ್ಶನ ಕ್ರಿಯಾ
    • ಧ್ಯಾನ ಮತ್ತು ಉಸಿರಾಟದ ಕೌಶಲ್ಯಗಳು
    • ಸುಲಭವಾದ ದಿನನಿತ್ಯದ ಸೂತ್ರಗಳು
    • ಭಯ ಹಾಗೂ ಆತಂಕದಿಂದ ಹೊರಬರಲು ಸಾಧನೆಗಳು
    • ಸಂವಹನ ಪ್ರಕ್ರಿಯೆಗಳು
    • ಗುಂಪಿನೊಂದಿಗೆ ಆಟಗಳು
    • ಆಹಾರದ ಬಗ್ಗೆ ಅರಿವು
    • ವಿಚಾರ ವಿನಿಮಯ ಗುಂಪಿನೊಂದಿಗೆ
    • ಹೊರಾಂಗಣ ಚಟುವಟಿಕೆಗಳು (ಸಾಧ್ಯವಾದಲ್ಲಿ)
    • ವಿನೋದ ಹಾಗೂ ಆಟಗಳ ಮೂಲಕ ಕಲಿಯುವಿಕೆ
    • ಸೇವಾ ಮನೋಭಾವ