ಜೀವನ ಕಲೆ ಭಾಗ 2 ಉನ್ನತ ಧ್ಯಾನ ಶಿಬಿರ

ಜೀವನ ಕಲೆಯ ಉನ್ನತ ಕಾರ್ಯಕ್ರಮವು ಸಾಮಾನ್ಯವಾಗಿ ವಸತಿ ಶಿಬಿರವಾಗಿರುತ್ತದೆ. ಮನಸ್ಸಿನ ವಟಗುಡುವಿಕೆಯನ್ನು ಶಾಂತಗೊಳಿಸಿ ಆಳವಾದ ವಿಶ್ರಾಂತಿ ಹಾಗೂ ಮೌನವನ್ನು ಅನುಭವಿಸುವಂತೆ ಮಾಡಲು ಮನಸ್ಸನ್ನು ಒಳಮುಖವಾಗಿಸಲು ಅಗತ್ಯವಿರುವ ವಾತಾವರಣವನ್ನು ಒದಗಿಸುತ್ತದೆ. ಈ ಶಿಬಿರವನ್ನು ಜೀವನಕಲೆ ಕಾರ್ಯಕ್ರಮ (ಭಾಗ -೧) ರಲ್ಲಿ ಕಲಿಸಲಾಗುವ ಸುದರ್ಶನ ಕ್ರಿಯೆ ಎಂಬ ಉಸಿರಾಟ ತಂತ್ರವನ್ನು ಆಧರಿಸಿ ರೂಪಿಸಲಾಗಿದೆ.

ಮೌನಾಚರಣೆಯನ್ನು - ನಮ್ಮ ಶಕ್ತಿ ಹಾಗೂ ಗಮನವನ್ನು ಪ್ರಜ್ಞಾಪೂರ್ವಕವಾಗಿ ಬಾಹ್ಯ ಆಕರ್ಷಣೆಗಳಿಂದ ವಿಮುಖಗೊಳಿಸುವುದನ್ನು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ನವೀಕರಣದ ಮಾರ್ಗವಾಗಿ ವಿವಿಧ ಸಂಪ್ರದಾಯಗಳಲ್ಲಿ ಎಂದಿನಿಂದಲೂ ಬಳಸಲಾಗಿದೆ. ಸಾಮಾನ್ಯವಾಗಿ ಸದಾ ಕಾರ್ಯನಿರತವಾದ ಮನಸ್ಸಿನಿಂದ ನಮ್ಮನ್ನು ಆಚೆ ಕೊಂಡೊಯ್ಯಲು ವಿಶೇಷವಾಗಿ ವಿನ್ಯಾಸಗೊಳಿಸಿದ ವಿವಿಧ ಶಿಬಿರ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದರ ಮೂಲಕ ನಾವು ಅಸಾಧಾರಣವಾದ ಶಾಂತಿಯನ್ನು ಅನುಭವಿಸಬಹುದು ಹಾಗೂ ಚೈತನ್ಯವನ್ನು ಮರಳಿ ಪಡೆಯುವುದರ ಜೊತೆಗೆ ನಮ್ಮ ನಮ್ಮ ಮನೆಗಳಿಗೂ ದೈನಂದಿನ ಕಾರ್ಯಗಳಿಗೂ ಅದನ್ನು ಕೊಂಡೊಯ್ಯಬಹುದು.

ಅರ್ಹತೆ 
ಜೀವನಕಲೆಯ ಅನಂದದ ಅನುಭೂತಿಯ ಕಾರ್ಯಗಾರ

ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡ

  • ಉಪಯೋಗಗಳು
  • ಅನಿಸಿಕೆಗಳು
  • ವಿಧಾನ/ ತಂತ್ರಗಳು
    • ಶರೀರ ಹಾಗೂ ಮನಸ್ಸಿನ ಸಮತೋಲನೆ, ಲವಲವಿಕೆ
    • ಸಹಜಶಕ್ತಿ ಹಾಗೂ ಗುಣದ ಅರಿವು
    • ಆಂತರಂಗ ಬಹಿರಂಗದ ಆಹ್ಲಾದಕರ ಉತ್ಸಾಹ
    • ಮಾನಸಿಕ ಚೇತನದ ಅಂಕುಕ
    • ಪ್ರಜ್ಞೆಯ ವೈಶಾಲ್ಯತೆ, ನವೀನತೆಯ ಅನುಭವ
    • ಅಧ್ಯಾತ್ಮಿಕ ವಿಚಾರಧಾರೆ
    • ಭಾವನೆಗಳ ಸ್ಥಿಮಿತ
  • &quotಈ ಶಿಬಿರದಲ್ಲಿ ನನಗೆ ಪ್ರತಿ ಕ್ಷಣವು ಹೊಸತನದ ಅಬುಭವವನ್ನು ಕೊಟ್ಟಿತು- ರಾಜು


    "ಖಂಡಿತವಾಗಿಯೂ ಈ ಶಿಬಿರವನ್ನು ಮಾಡಿದ್ದರಿಂದ ನನ್ನಲ್ಲಿ ಬದಲಾವಣೆಯನ್ನು ತಂದಿದದೆ. ನನಗೆ ಹೊಸ ಮನುಜನಾದಂದೆ ಅನುಭವವಾಗುತ್ತಿದೆ. ನಿಜವಾಗಿಯೂ ಇದು ಹೊಸ ಬಾಳಿಗೆ ನಾಂದಿಯನ್ನು ಕೊಡಬಹುದು ನನ್ನೊಳಗಿನ ಹೊಸತನ ಬಹಳ ಆರಮವಾಗಿದ್ದು ನಾನು ಅದೃಷ್ಟವಂತ ಎನಿಸುತ್ತದೆ. ಅಂತಯೇ ಈ ಶಿಬಿರವನ್ನು ಹಾಗೂ ಕಾರ್ಯಗಾರವನ್ನು ಏರ್ಪಡಿಸಿ ಅವಕಾಶ ಕೊಟ್ಟ ಎಲ್ಲಾರಿಗೂ ನನ್ನ ಕೃತಜ್ಞತೆಗಳು - ವೆಂಕಟೇಶ್

  • ಈ ಶಿಬಿರವು ಸಾಮಾನ್ಯವಾಗಿ ಒಂದು ಸುಂದರ ಪ್ರಕೃತಿಯ ಮಡಿನಲ್ಲಿ ವ್ಯವಸ್ಥಿತವಾದ ವಸತಿಯೊಂದಿಗೆ ಏರ್ಪಡಿಸಲಾಗುವುದು, ಸಹಜವಾಗಿಯೇ ಎಲ್ಲಾರಿಗೂ ದೀರ್ಘವಾದ ರಜೆಯ ಅನುಭವದೊಂದಿಗೆ ದೇಹ, ಆತ್ಮ, ಹಾಗೂ ಮನಸ್ಸುನ್ನು ನವೀಕರಿಸುತ್ತದೆ ಅಥವಾ ಚೇತನಗೊಳಿಸುತ್ತದೆ.

    • ವಿಶಿಷ್ಟ ಧ್ಯಾನಗಳನ್ನು ಸ್ವತಃ ಶ್ರೀ ಶ್ರೀ ರವಿಶಂಕರ್ ಜೀ ರವರೇ ರೂಪಿಸಿರುವಂತಹದು
    • ಉನ್ನತ ಉಸಿರಾಟದ ಕ್ರಿಯೆಗಳನ್ನು ಕಲಿಸಿಕೊಡಲಾಗುವುದು