ಶ್ರೀ ಶ್ರೀ ರವಿ ಶಂಕರ್

ಶ್ರೀ ಶ್ರೀ ರವಿ ಶಂಕರ್ : ಪರಿಚಯ

ಶ್ರೀ ಶ್ರೀ ರವಿ ಶಂಕರ್ ರವರು ಒಬ್ಬ ಮಾನವತೆಯ ನಾಯಕರು, ಆಧ್ಯಾತ್ಮ ಗುರುಗಳು ಮತ್ತು ಶಾಂತಿದೂತರು. ಓತ್ತಡ ರಹಿತ ಮತ್ತು ಹಿಂಸಾ ವಿಹೀನ ಸಮಾಜದ ಅವರ ನೋಟವು( ದೃಷ್ಟಿ) ಜೀವನ ಕಲಾ ಶಿಬಿರ ನಡೆಸುವ ಸೇವಾ ಕಾರ್ಯಕ್ರಮಗಳು ಮತ್ತು ಶಿಬಿರಗಳ ಮೂಲಕ ಜಗತ್ತಿನ ಕೋಟ್ಯಾಂತರ ಜನರನ್ನು ಒಟ್ಟುಗೂಡಿಸಿದೆ

ಪ್ರಾರಂಭ

1956ನೇ ಇಸವಿಯಲ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿದ ಶ್ರೀ ಶ್ರೀ ರವಿ ಶಂಕರ್ ರವರು ಒಬ್ಬ ದೈವತ್ವವಾದ ಸಹಜ ಪ್ರತಿಭೆಯುಳ್ಳ ಮಗುವಾಗಿದ್ದರು. ಇವರು ನಾಲ್ಕನೇ ವಯಸ್ಸಿನಲ್ಲಿರುವಾಗಳೆ ಇವರಿಗೆ ಪುರಾತನ ಗ್ರಂಥವಾದ "ಭಗವತದ್ಗೀತೆ"ಯು ಇವರಿ ಕಂಠ ಪಾಠವಾಗಿತ್ತು ,ಆ ಚಿಕ್ಕ ವಯಸ್ಸಿನಲ್ಲಿಯೇ ಅವರು ಅನೇಕ ವೇಳೆ ಧ್ಯಾನಸ್ಥರಾಗಿರುತ್ತಿದ್ದದು ಸಾವಾನ್ಯವಾಗಿ ಕಂಡು ಬರುತ್ತಿತು. ಬಹುದೀರ್ಘಕಾಲ ಮಹಾತ್ಮ ಗಾಂಧಿಯವರ ನಿಕಟ ಸಂಪರ್ಕದಲ್ಲಿದ್ದ ಸುಧಾಕರ ಚತುರ್ವೇದಿಯವರು ಇವರ ಮೊದಲನೇ ಗುರುಗಳು. ಇವರು ಸನಾತನ ಧರ್ಮ ಪರಂಪರೆಯ ವೇದ ವಿಜ್ಞಾನ ಮತ್ತು ನವೀನ ಪದ್ಧತಿಯ ಭೌತಶಾಸ್ತ್ರಗಳೆರಡರಲ್ಲಿಯೂ ಪದವಿಯನ್ನು ಪಡೆದಿದ್ದಾರೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು

ಪ್ರಮುಖ ಭಾಷಣಗಳು

ಗುರಿ

ಜೀವನ ಕಲಾ ಶಿಬಿರ ಮತ್ತು ಅಂತರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆಗಳ ಸ್ಥಾಪನೆ

ಶ್ರೀ ಶ್ರೀ ರವಿ ಶಂಕರ್ ರವರು ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ೧೦ ದಿನಗಳ ಕಾಲ ತಪ್ಪಸ್ಸನ್ನಾಚರಿಸಿದಾಗ. ಅವರಿಗೆ ಶಕ್ತಿಶಾಲಿಯಾದ ಉಸಿರಾಟದ ಪ್ರಕ್ರಿಯೆಯಾದ ಸುದರ್ಶನ ಕ್ರಿಯೆಯ ಜ್ಞಾನೋದಯವಾಯಿತು. ಕಾಲ ಕಳೆದಂತೆ ಈ ಸುದರ್ಶನ ಕ್ರಿಯೆಯು ಜೀವನ ಕಲಾ ಶಿಬಿರದ ಜೀವನಾಡಿಯಾಯಿತು.

ಶ್ರೀ ಶ್ರೀ ರವಿ ಶಂಕರ್ ರವರು ಜೀವನ ಕಲಾ ಸಂಸ್ಥೆಯನ್ನು ಅಂತಾರಾಷ್ಟ್ರೀಯ, ಲಾಭರಹಿತ, ಶೈಕ್ಷಣಿಕ ಮತ್ತು ಮಾನತೆಯ ಸಂಸ್ಥೆಯಾಗಿ ಸ್ಥಾಪಿಸಿದರು. ಈ ಸಂಸ್ಥೆಯು ನೀಡುವ ಶೈಕ್ಷಣಿಕ ಮತ್ತು ಸ್ವಯಂ ಅಭಿವೃದ್ಧಿ ಕಾರ್ಯಕ್ರಮಗಳು ಒತ್ತಡ ನಿವಾರಣೆ ಮತ್ತು ಸಮಗ್ರ ಜೀವನದ ಉನ್ನತಿಯನ್ನು ಸಾಧಿಸಲು ಬೇಕಾಗುವ ಸುಂದರ ಶಕ್ತಿಶಾಲಿ ಸಲಕರಣೆಗಳನ್ನು ನೀಡುತ್ತವೆ. ಇಲ್ಲಿ ನಡೆಯುವ ಅಭ್ಯಾಸಗಳು ಸಾಮಾಜಿದ ಕೇವಲ ಒಂದು ವರ್ಗದ ಜನರಿಗೆ ಮಾತ್ರವಲ್ಲದೆ ಇಡೀ ವಿಶ್ವದ ಎಲ್ಲಾ ಜನರ ಉನ್ನತಿಗೆ ಇದು ಸಹಾಯವಾಗಿದೆ.

1997 ರಲ್ಲಿ ಇವರು ಅಂತರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಉದ್ದೇಶ ದೀರ್ಘಕಾಲದ ಅಭಿವೃದ್ಧಿ ಕಾರ್ಯಕ್ರಮಗಳ ಹೊಂದಾಣಿಕೆ ಮಾನವೀಯ ಮೌಲ್ಯಗಳ ಪುನರುತ್ಥಾನ, ವಿವಾದಾತ್ಮಕ ಗೊತ್ತುವಳಿ, ವಿಚಾರಗಳಲ್ಲಿ ಜೀವನ ಕಲಾ ಶಿಬಿರದೊಂದಿಗೆ ಹೊಂದಾಣಿಕೆ. ಭಾರತ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾ ರಾಷ್ಟ್ರಗಳಲ್ಲಿ ಈ ಸೋದರಿ ಸಂಸ್ಥೆಯ ಸ್ವಯಂ ಸೇವಕರು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರವಾದ ಬೆಳವಣಿಗೆಗಳನ್ನು ತಂದಿದ್ದಾರೆ. ಈಗಾಗಲೇ ಈ ಯೋಜನೆಯು 40,212 ಹಳ್ಳಿಗಳನ್ನು ತಲುಪಿದೆ.

ಸೇವೆಗಾಗಿ ಪ್ರೇರೇಪಣೆ ಮತ್ತು ಇಡೀ ವಿಶ್ವದಲ್ಲಿ ಜ್ಞಾನದ ಸ್ಥಾಪನೆ

ಒಬ್ಬ ಪ್ರಮುಖ ಮಾನವೀಯ ನಾಯಕನಾಗಿ ಶ್ರೀ ಶ್ರೀ ರವಿಶಂಕರ್ ರವರು ನಡೆಸುವ ಕಾರ್ಯಕ್ರಮಗಳು ಸಮಾಜದ ಎಲ್ಲಾ ಶ್ರೇಣಿಯ ಜನರಿಗೂ ಸಹಾಯ ನೀಡಿದೆ. ಪ್ರಾಕೃತಿಕ ವಿಕೋಪಕ್ಕೆ ಗುರಿಯಾದ ಸಂತ್ರಸ್ತರು ಭಯೋತ್ಪಾದನೆ ಮತ್ತು ಯುದ್ಧಗಳಲ್ಲಿ ಬಲಿಯಾಗಿ ಬದುಕುಳಿದ ಜನರು ಸಮಾಜದಿಂದ ತ್ಯಕ್ತರಾದ ಜನರ ಮಕ್ಕಳು( ಹಿಂದುಳಿದ ವರ್ಗದ ಮಕ್ಕಳು) ಮತ್ತು ವಿವಾದಗಸ್ತ್ರ ಕೋಮಗಳ ಮಕ್ಕಳು ಎಲ್ಲರಿಗೂ ತಮ್ಮ ಸಹಾಯ ಹಸ್ತ ನೀಡಿದೆ. ಅವರ ಸಂದೇಶದ ಶಕ್ತಿಯು ಆಧ್ಯಾತ್ಮಿಕ ತಳಹದಿಯುಳ್ಳ ಸ್ವಯಂಸೇವಕರನ್ನು ಪ್ರೇರೇಪಿಸಿದೆ. ಈ ಸ್ವಯಂ ಸೇವಕರ ಬಲಿಷ್ಟವಾದ ಅಲೆಯು ಈ ಸೇವಾ ಕಾರ್ಯಕ್ರಮಗಳನ್ನು ವಿಶ್ವದ ಎಲ್ಲೆಡೆ ಎಂಥಹ ಕಠಿಣ ಪರಿಸ್ಥಿತಿಗಳಲ್ಲಿಯೂ ನಿರಂತವಾಗಿ ನಡೆಯುತ್ತಿವೆ.
ಒಬ್ಬ ಆಧ್ಯಾತ್ಮಿಕ ಗುರುವಾಗಿ ಶ್ರೀ ಶ್ರೀ ರವಿಶಂಕರ್ ರವರು ಭಾರತೀಯ ಸನಾತನ ಧರ್ಮಗಳ ಅಂಗಗಳಾದ ಯೋಗ ಮತ್ತು ಧ್ಯಾನಗಳನ್ನು ಪುನರುಜ್ಜೀವನಗೊಳಿ ಅವುಗಳನ್ನು ಈಗಿನ 21ನೇಯ ಶತಮಾನಕ್ಕೆ ಅನುಗುಣವಾಗಿ ಪ್ರಸ್ತುತಪಡಿಸಿದ್ದಾರೆ. ನಮ್ಮ ಪರಾತನ ಸಂಸ್ಕೃತಿಯ  ಮತ್ತು ವೇದ ವಿಜ್ಞಾನವನ್ನು ಪುನಶ್ಚೇತನಗೊಳಿಸುವದರ ಜೊತೆಗೆ ಶ್ರೀ ಶ್ರೀ ರವಿಶಂಕರ್ ರವರು ಜನರ ವೈಯ್ಯಕ್ತಿಕ ಹಾಗೂ ಸಾಮಾಜಿಕ ಪರಿವರ್ತನೆಗೆ ಸಹಾಯವಾಗುವಂತಹ ನವೀನ ಪ್ರಕ್ರಿಯೆಗಳನ್ನು ನೀಡುತ್ತಿದ್ದಾರೆ. ಇವುಗಳಲ್ಲಿ ಸುದರ್ಶನ ಕ್ರಿಯೆಯು ಪ್ರಮುಖವಾದದ್ದು. ಈ ಸುದರ್ಶನ ಕ್ರಿಯೆಯು ಕೋಟ್ಯಾಂತರ ಜನರು ಒತ್ತಡದಿಂದ ಮುಕ್ತರಾಗಿ ತಮ್ಮೊಳಗೆ ಇರುವ ಆನಂದದ ಚಿಲುಮೆಯನ್ನು ಅನುಭವಿಸಿ ದೈನಂದಿನ ಬದುಕಿನಲ್ಲಿ ಶಾಂತಿ ಮತ್ತು ಶಕ್ತಿಗಳನ್ನು ಪಡೆಯಲು ಸಹಾಯ ಮಾಡಿದೆ. ಕೇವಲ 21 ವರ್ಷಗಳ ಅವಧಿಯಲ್ಲಿ ಅವರ ಕಾರ್ಯಕ್ರಮಗಳು ಮತ್ತು ಉಪಪ್ರಮಗಳು ಜಗತ್ತಿನ 152 ರಾಷ್ಟ್ರಗಳ 370 ದಶಲಕ್ಷ ಜನರನ್ನು ತಲಿಪಿದೆ.

ಶಾಂತಿಯ ಪ್ರತಿರೂಪ

ಶಾಂತಿಯ ದೂತರಾಗಿ ಶ್ರೀ ಶ್ರೀ ರವಿ ಶಂಕರ್ ರವರು ವಿವಾದಾತ್ಮಕ ಗೊತ್ತುವಳಿಗಳನ್ನು ತಮ್ಮ ವಿಚಾರಧಾರೆಯಿಂದ ಸರಿಗೊಳಿಸಿ ತಮ್ಮ ಗುರಿಯಾದ ಅಹಿಂಸೆಯ ದೃಷ್ಟಿಯನ್ನು ಸಾಮಾಜಿಕ ವೇದಿಕೆ ಮತ್ತು ಜನ ಸಮೂಹದಲ್ಲಿ ನೀಡಿ ಪ್ರತಿಪಾದನೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ತಟಸ್ಥ ನೀತಿಯನ್ನು ಅನಿಸರಿಸಿ ಕೇವಲ ಶಾಂತಿಯೊಂದನ್ನೆ ಏಕೈಕ ಕಲಾಪವನ್ನಾಗಿಟ್ಟು ಕೊಂಡಿರುವ ಇವರು ವಿವಾದಗ್ರಸ್ಥ ಜನರಿಗೆ ಒಂದು ಆಶಾಕಿರಣವಾಗಿದ್ದಾರೆ. ಇರಾಕ್, ಐವರಿ ಕೋಸ್ಟ್, ಕಾಶ್ಮೀರ, ಬಿಹಾರಗಳಲ್ಲಿ ವಿರುದ್ಧ ಮತಗಳನ್ನು ಒಂದು ಗೂಡಿಸಲು ಪರಸ್ಪರ ಮಾತುಕತೆಗೆ ಒಪ್ಪಿಸುವ ಕಾರ್ಯಗಳನ್ನು ಮಾಡಿದ ಹೆಗ್ಗಳಿಕೆಯೂ ಇವರಿಗೆ ಸೇರುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು "ಕೋರೋನೇಷನ್ ಆಫ್ ಕೃಷ್ಣದೇವರಾಯ" ಸ್ವಾಗತ ಸಮಿತಿಯ ಅಧ್ಯಾಕ್ಷರಾಗಿ ಆ ಸಂಸ್ಥೆಯ ೫೦೦ನೇ ವಾರ್ಷಿಕೋತ್ಸವದಲ್ಲಿ ಇವರನ್ನು ನೇಮಿಸಿದ್ದರು. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರವು " ಅಮನಾಥ್ " ತೀರ್ಥಕ್ಷೇತ್ರದ ಮಂಡಳಿಗೆ ಸದಸ್ಯರ ಸದಸ್ಯರನ್ನಾಗಿ ನೇಮಿಸಿದೆ.

ಅವರ ಪ್ರೇರೇಪಣೆ ಮತ್ತು ಪ್ರವಚನಗಳ ಮೂಲಕ ಶ್ರೀ ಶ್ರೀ ರವಿಶಂಕರ್ ರವರು ನಿರಂತರವಾಗಿ ಮಾನವೀಯ ಮೌಲ್ಯಗಳ ಪುನರುತ್ಥಾನದ ಅವಶ್ಯಕತೆಯನ್ನು ಹೇಳುತ್ತಿದ್ದಾರೆ ಮತ್ತು ಮಾನವತೆಯೇ ಎಲ್ಲಕ್ಕಿಂತ ಹೆಚ್ಚಿನ ಹೆಗ್ಗುರತಾಗಿ ಗುರುತಿಸಬೇಕೆನ್ನುತ್ತಾರೆ. ಪರಸ್ಪರರಲ್ಲಿ ನಂಬಿಕೆ , ಹೊಂದಾಣಿಕೆಗಾಗಿ ಕರೆ ನೀಡುತ್ತಾ ವಿವಿಧ ಸಂಸ್ಕೃತಿಗಳ ಶಿಕ್ಷಣ ಮಾತ್ರವೇ ಇದ್ದಕ್ಕೆ ಪರಿಹಾರ ಎಂದು ಅವರು ಮಾಡುತ್ತಿರುವ ಪ್ರಯತ್ನ ಭೂಮಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲು ಬಹಳ ಮಟ್ಟಿಗೆ ಕಾರಣವಾಗಿದೆ

ಅವರ ಈ ಅವಿರತ ಪ್ರಯತ್ನ ಜಗತ್ತಿನಾದ್ಯಂತ ಕೋಟ್ಯಾಂತರ ಜನರನ್ನು ಜಾತಿ, ಮತ, ರಾಷ್ಟ್ರೀಯತೆ, ಧರ್ಮ ಎಂದ ಎಲ್ಲಾ ಸಹರದ್ದುಗಳನ್ನು ದಾಟಿ " ವಸುಧೈವ ಕುಟುಂಬಕಮ್" ಇಡೀ ಜಗತ್ತು ಒಂದೇ ಮಾನವೀಯ ಮೌಲ್ಯಗಳ ಪುನರ್ ಜಾಗೃತಿಯಿಂದ ಮಾತ್ರ ಆಂತರಿಕ ಮತ್ತು ಬಾಹ್ಯ ಶಾಂತಿ ಸಾಧ್ಯ ಮತ್ತು ಇವುಗಳ ಮೂಲಕ ಒತ್ತಡ ರಹಿತ ಮತ್ತು ಹಿಂಸಾವಿಹೀನ ಸಮಾಜದ ಸೃಷ್ಟಿಯ ಸಾಧ್ಯ ಎನ್ನುವುದೇ ಅವರ ಸಂದೇಶ