ಎಲ್ಲರೂ ಸಿಹಿಗಾಗಿ ಹುಡುಕುತ್ತಿದ್ದಾರೆ, ಯಾರಿಗೆ ಅದು ಸಿಗುತ್ತದೆಯೋ, ಅವರು ಅದನ್ನು ಕೊಟ್ಟು ಬಿಡುತ್ತಾರೆ.

ಗುರುಗಳು ಕುಟೀರದ ಮುಂದಿನ ಛಾವಣಿಯಲ್ಲಿ, ಕೆಲವು ಜನರೊಂದಿಗೆ ಗುಂಪಿನಲ್ಲಿದ್ದರು. ಕುಟೀರದೊಳಗಡೆ ಹೋಗಿ ಅಲ್ಲಿರುವ ಸಿಹಿಯನ್ನು ತರುವಂತೆ ಕಾಶಿಗೆ ಹೇಳಿದರು, ಆದರೆ ಆ ಸಿಹಿ ಸಿಗಲಿಲ್ಲವೆಂದು ಕಾಶಿ ವಾಪಸ್ ಬಂದು ಹೇಳಿದರು. ಅವರು ಮತ್ತೆ ಮತ್ತೆ ಮೂರು ಸಾರಿ ಕುಟೀರದೊಳಗೆ ಹೋಗಿ ಬಂದರು ಆದರೂ ಅವರಿಗೆ ಆ ಸಿಹಿ ಸಿಗಲಿಲ್ಲ. ಕಡೆಗೆ ಗುರೂಜಿಯವರು ತಾವೇ ಖುದ್ದಾಗಿ ಒಳಗೆ ಹೋದರು. ಅವರು ಸಿಹಿಯೊಂದಿಗೆ ಹೊರ ಬಂದರು ಮತ್ತು ಆ ಸಿಹಿಯನ್ನು ಎಲ್ಲರಿಗೂ ಹಂಚಿದರು.

ಜೀವನದಲ್ಲಿಯೂ ನಿಜವಾಗಿ ಇದೇ ರೇತಿ ಆಗುತ್ತದೆ. ತುಂಬಾ ಜನರು ಜೀವನ ಸಿಹಿಯಂತೆ ಸುಖವಾಗಿರಬೇಕೆಂದು ಬಯಸುತ್ತರೆ. ಕೆಲವರು ಅದಕ್ಕಾಗಿ ತುಂಬಾ ಕಷ್ಟಪಟ್ಟು ಹುಡುಕುತ್ತಾರೆ, ಆದರೆ ಕೇವಲ ಒಬ್ಬರು ಮಾತ್ರ ಅದನ್ನು ಪಡೆಯುತ್ತಾರೆ. ಆದರೆ ಯಾರಿಗೆ ಅದು ಸಿಗುತ್ತದೆಯೋ ಅವರು ಅದನ್ನು ಎಲ್ಲರಿಗೂ ಹಂಚುತ್ತರೆ.

ಎಲ್ಲರೂ ಆನಂದದ ಪರಮಾವಧಿಯಲ್ಲಿದ್ದಾರೆ, ಮತ್ತೆ ಕೆಲವರು ಆ ಆನಂದದ ಪರಿಧಿಯನ್ನೂ ದಾಟಿಹೋಗಿಬಿಟ್ಟಿದ್ದಾರೆ!