ನಿಯಂತ್ರಣವನ್ನು ಬಿಡುವುದು

ಕೆಲವರಿಗೆ ತಮ್ಮ ಹಿಡಿತವನ್ನು, ನಿಯಂತ್ರಣವನ್ನು ಬಿಡುವುದು ಒಂದು ಸಮಸ್ಯೆಯಾಗಿದೆ. ಆದರೆ ಇದರಿಂದ ಗಾಬರಿ, ಕಾತರತೆ(anxiety), ಚಡಪಡಿಕೆ(restlessness) ಉಂಟಾಗುತ್ತದೆ ಮತ್ತು ಬಾಂಧವ್ಯವನ್ನು ಹುಳಿಯಾಗಿಸುತ್ತದೆ

ಎಚ್ಚತ್ತುಕೊಂಡು ನೋಡಿ, ನಿಜವಾಗಿಯೂ ನೀವು ನಿಯಂತ್ರಣದಲ್ಲಿಟ್ಟುಕೊಂಡಿದ್ದೀರಾ? ಯಾವುದು ನಿಮ್ಮ ನಿಯಂತ್ರಣದಲ್ಲಿದೆ? ಬಹುಷಃ ನಿಮ್ಮ ಜಾಗೃತಾವಸ್ಥೆಯ ಒಂದು ಸಣ್ಣ ಭಾಗ! ಹೌದಲ್ಲವೇ?

ನೀವು ಮಲಗಿರುವಾಗ ಅಥವಾ ಕನಸು ಕಾಣುವಾಗ ಹಿಡಿತವಿರುವುದಿಲ್ಲ.ನಿಮಗೆ ಬರುತ್ತಿರುವ ಅಲೋಚನೆ, ಮತ್ತು ಭಾವನೆಗಳ ಮೇಲೆ ನಿಮ್ಮ ನಿಯಂತ್ರಣವಿಲ್ಲ, ನೀವು ಅವುಗಳನ್ನು ಹೊರಗೆ ವ್ಯಕ್ತಪಡಿಸಬಹುದು ಅಥವಾ ಇಲ್ಲದಿರಬಹುದು. ಆದರೆ ಅವುಗಳು ನಿಮ್ಮನ್ನು ಹೇಳಿ ಕೇಳಿ ನಿಮ್ಮ ಒಪ್ಪಿಗೆಯನ್ನು ಪಡೆದು ಬರುವುದಿಲ್ಲ! ನಿಮ್ಮ ದೇಹದಲ್ಲಾಗುವ ಎಷ್ಟೊಂದು ಕ್ರಿಯಗಳ ಮೇಲೆ ನಿಮ್ಮ ಹಿಡಿತವಿಲ್ಲ. ಹಾಗೆಯೇ ನಿಮ್ಮ ಜೀವನದಲ್ಲಿ ಮತ್ತು ವಿಶ್ವದಲ್ಲಾಗುವುದರ ಮೇಲೆಯೂ ಯಾವ ಹಿಡಿತವೂ ಇಲ್ಲ. ನೀವು ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಮೇಲಾಗಲಿ ಅಥವಾ ಹೊರ ಪ್ರಪಂಚದಲ್ಲಿಯಾಗಲಿ ನಿಮ್ಮ ಹತೋಟಿ(ನಿಯಂತ್ರಣ) ಇದಯೆಂದು ತಿಳಿದಿದ್ದೀರಾ? ಇದು ಒಂದು ಹಾಸ್ಯ!(joke).

ಈ ದೃಷ್ಟಿಕೋಣದಿಂದ ನೋಡಿದಾಗ ನೀವು ನಿಮ್ಮ ನಿಯಂತ್ರಣವನ್ನು ಕಳದುಕೊಳ್ಳುವ ಭಯದಿಂದ ಮುಕ್ತರಾಗುತ್ತೀರಿ, ಏಕೆಂದರೆ ಅದ್ಯಾವುದೂ(ಯಾವ ನಿಯಂತ್ರಣವೂ) ನಿಮ್ಮಲಿಲ್ಲ! ನೀವು ಇದನ್ನು ಅರ್ಥ ಮಾಡಿಕೊಳ್ಳಿ ಅಥವಾ ಬಿಡಿ, ಆದರೆ ನೀವು ನಿಮ್ಮ ಈ ನಿಯಂತ್ರಣದ ಭಾವನೆಯನ್ನು ಬಿಟ್ಟಾಗ ನಿಜವಾಗಿಯೂ ನೀವು ವಿಶ್ರಾಮದಿಂದಿರುತ್ತೀರಿ. ನಾನು ' ಇದು, ಇಂತಹವನು ' ಎಂದು ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಈ ಪ್ರವೃತ್ತಿ ನಿಮ್ಮನ್ನು ಪೂರ್ಣವಾಗಿ ವಿಶ್ರಮಿಸಲು ಬಿಡುವುದಿಲ್ಲ ಮತ್ತು ಅದು ನಿಮ್ಮ ತಿಳುವಳಿಕೆಯ ವ್ಯಾಪ್ತಿಯನ್ನು ಮಿತಿಗೊಳಿಸುತ್ತದೆ.