ಆರೋಗ್ಯವಾದ ಹೃದಯವನ್ನು ಪಡೆಯಲು 20 ಯೋಗಾಸನಗಳು

ಯೋಗವೆಂದರೆ ವಿವಿಧ ಭಂಗಿಗಳನ್ನು ಮಾಡುತ್ತಾ ಉಸಿರಿನ ಮೇಲೆ ಗಮನವಿಟ್ಟು ವಿಶ್ರಮಿಸುವುದು. ಇದರಿಂದಾಗಿ ಪ್ರತಿಯೊಂದು ಯೋಗಾಸನವೂ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಒಂದು ನಿರ್ದಿಷ್ಟವಾದ ಪ್ರಭಾವವನ್ನು ಬೀರುತ್ತದೆ. ಇದರಿಂದಾಗಿ ಹೃದಯದ ಮೇಲೂ ಅದೇ ಪರಿಣಾಮವುಂಟಾಗುತ್ತದೆ.

ಕೆಳಗೆ ನೀಡಿರುವ ಯೋಗಾಸನದ ಸರಣಿಗಳು ಆರಂಭದಲ್ಲಿ ಸರಳವಾಗಿದ್ದು, ಮುಂದುವರಿಯುತ್ತಾ ಹೋದಂತೆ ಹೆಚ್ಚು ದಾಢ್ಯತೆ ಮತ್ತು ಬಲವು ಅವಶ್ಯಕವಾದ ಕ್ಲಿಷ್ಟವಾದ ಆಸನಗಳಾಗಿವೆ. ಆಸನಗಳ ಸರಣಿಗಳ ಅಂತ್ಯದಲ್ಲಿ ದೇಹವು ವಿಶ್ರಾಮಿತ ಸ್ಥಿತಿಗೆ ತಲುಪಿ, ಪುನಶ್ಚೇತವಾಗುತ್ತದೆ.

1. ತಾಡಾಸನ

ತಾಡಾಸನ ಅಥವಾ ಪರ್ವತದ ಭಂಗಿಯು ಹೃದಯವನ್ನು ಬಲಿಷ್ಟವಾಗಿಸುವದಲ್ಲದೆ ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ..

TRee pose

2. ವೃಕ್ಷಾಸನ (ವೃಕ್ಷದ ಭಂಗಿ)

ವೃಕ್ಷಾಸನವು ಮನಸ್ಸನ್ನು ಪ್ರಶಾಂತಗೊಳಿಸಿ, ಮನಸ್ಸಿಗೆ ಸಮಚಿತ್ತತೆಯನ್ನು ತರುತ್ತದೆ. ಈ ಯೋಗಾಸನದಲ್ಲಿ ವಿಶ್ರಮಿಸುವುದರಿಂದ ಮನಸ್ಸು ಪ್ರಶಾಂತವಾಗುವುದರಿಂದ ಹೃದಯವು ಆರೋಗ್ಯಕರವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

 
Utthita Hastapadasana

3. ಉತ್ತಿಥ ಹಸ್ತಪಾದಾಸನ

ಈ ಯೋಗಾಸನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹೆಚ್ಚು ಏಕಾಗ್ರತೆ ಮತ್ತು ಬಲ ಅವಶ್ಯಕ.

Trikonasana

4. ತ್ರಿಕೋನಾಸನ

ಹೃದಯವನ್ನು ತೆರೆಯುವ, ನಿಂತುಕೊಂಡು ಮಾಡಬೇಕಾದ ಭಂಗಿಯಲ್ಲಿ ಮಾಡಬೇಕಾದ ಈ ಆಸನವು ಹೃದಯದ ವ್ಯಾಯಾಮವಾಗಿದೆ. ಆಳವಾಗಿ ಉಸಿರಾಡಿದಾಗ ಎದೆಯ ವಿಸ್ತಾರವಾಗುತ್ತದೆ ಮತ್ತು ಲಯಬದ್ಧವಾದ ಉಸಿರಾಟದಿಂದ ದಾಢ್ರ್ಯತೆ ಹೆಚ್ಚುತ್ತದೆ.

 
warrior pose

5. ವೀರಭದ್ರಾಸನ

ವೀರಭದ್ರಾಸನ ಅಥವಾ ವೀರ ಭಂಗಿಯು ದೇಹದ ಸಮತೋಲನವನ್ನು ಹೆಚ್ಚಿಸಿ, ದಾಢ್ರ್ಯತೆಯನ್ನೂ ಹೆಚ್ಚಿಸುತ್ತದೆ. ಒತ್ತಡವನ್ನು ಈ ಆಸನವನ್ನು ನಿವಾರಿಸಿ ಮನಸ್ಸನ್ನು ಪ್ರಶಾಂತವಾಗಿಡುವುದರಿಂದ ಹೃದಯದ ಬಡಿತವನ್ನು ನಿಯಂತ್ರಣದಲ್ಲಿ ಇಡುತ್ತದೆ.

Chair pose

6.ಉತ್ಕಟಾಸನ

ಉತ್ಕಟಾಸನ ಅಥವಾ ಕುರ್ಚಿಯ ಭಂಗಿಯಲ್ಲಿ ಹೃದಯದ ಬಡಿತ ಮತ್ತು ಉಸಿರಾಟವೂ ಹೆಚ್ಚಾಗುವುದನ್ನು ಅನುಭವಿಸಬಹುದು. ದೇಹದ ಉಷ್ಣತೆಯನ್ನು ಹೆಚ್ಚಿಸಿ ಬಲವನ್ನೂ ಈ ಆಸನವು ವರ್ಧಿಸುತ್ತದೆ.

 
Cat pose

7.ಮಾರ್ಜರಿ ಆಸನ (ಬೆಕ್ಕಿನ ಭಂಗಿ)

ಈ ಯೋಗಾಸನವನ್ನು ಉತ್ಕಟಾಸನದ ನಂತರ ಮಾಡುವುದರಿಂದ ಹೃದಯದ ಬಡಿತವು ಮತ್ತೆ ಸಾಮಾನ್ಯ ಸ್ಥಿತಿಗೆ ಬಂದು, ಮೃದುವಾಗಿ ಮತ್ತೆ ಲಯಬದ್ಧವಾಗುತ್ತದೆ.

Dog Pose

8. ಅಧೋಮುಖಶ್ವಾನಾಸನ

ಅಧೋಮುಖವಾಗಿ ನೋಡುವ ಈ ಶ್ವಾನದ ಭಂಗಿಯನ್ನು ವಿಶ್ರಮಿಸಲು ಬಳಸುತ್ತಾರೆ. ಇದರಿಂದ ವ್ಯವಸ್ಥೆಯು ಪ್ರಶಾಂತವಾಗಿ, ಶಕ್ತಿಯುತವಾಗಿಯೂ ಆಗುತ್ತದೆ.

 
Cobra Pose

9. ಭುಜಂಗಾಸನ

ಈ ಆಸನವು ಎದೆಯ ವಿಸ್ತರಣವನ್ನು ಹೆಚ್ಚಾಗಿ ಮಾಡುತ್ತದೆ ಮತ್ತು ಈ ಆಸನವನ್ನು ಮಾಡಲು ಸ್ಫಿಂಕ್ಸ್ ಭಂಗಿಗಿಂತಲೂ ಹೆಚ್ಚು ಬಲ ಮತ್ತು ದಾಢ್ರ್ಯತೆ ಅವಶ್ಯಕ.

Bow pose

10.ಧನುರಾಸನ

ಇಡಿ ದೇಹವನ್ನು ಪ್ರಚೋದಿಸಿ ವಿಸ್ತರಣಗೊಳಿಸುವ ಧನುರಾಸನವು ಎದೆಯ ಭಾಗವನ್ನು ತೆರೆಯುವುದಲ್ಲದೆ ಅದನ್ನು ಬಲಿಷ್ಟವಾಗಿಯೂ ಮಾಡುತ್ತದೆ.

 
Bridge Pose

11. ಸೇತು-ಬಂಧಾಸನ

ಧನುರಾಸನಕ್ಕಿಂತಲೂ ಸುಲಭವಾದ ಸೇತುಬಂಧಾಸನವು ಆಳವಾದ ಉಸಿರಾಟದೊಂದಿಗೆ ಮಾಡಿದಾಗ ಎದೆಯ ಭಾಗವನ್ನು ತೆರೆದು, ರಕ್ತಚಲನೆಯನ್ನು ಹೆಚ್ಚಿಸುತ್ತದೆ.

Half Shoulder stand

12. ಸಲಂಬ ಸರ್ವಾಂಗಾಸನ

ಅರ್ಧ ಭುಜದ ಹಲಗೆಯ ಭಂಗಿಯಾದ ಈ ಆಸನವು ಪ್ಯಾರಾಸಿಂಪ ಥೆಟಿಕ್ ನರವ್ಯವಸ್ಥೆಯನ್ನು ಪ್ರಚೋದಿಸಿ, ಪ್ರಶಾಂತಗೊಳಿಸಿ ಎದೆಯ ವಿಸ್ತರಣವನ್ನು ಮಾಡುತ್ತದೆ. ಇದರಿಂದಾಗಿ ವಿಶ್ರಾಂತಿಯೂ ಉಂಟಾಗಿ, ದೇಹವು ಪುನಶ್ಚೇತವಾಗುತ್ತದೆ.

 
Sitting Half Spinal twist

13. ಅರ್ಧಮತ್ಸ್ಯೇಂದ್ರಿಯಾಸನ

ಕುಳಿತು ಅರ್ಧ ಬೆನ್ನಲುಬನ್ನು ತಿರುಚುವ ಈ ಯೋಗಾಸನವು ಇಡೀ ಬೆನ್ನೆಲುಬಿನ ಮೇಲೆ ಪರಿಣಾಮ ಬೀರಿ, ಎದೆಯ ಒಂದು ಭಾಗದ ನಂತರ ಮತ್ತೊಂದು ಭಾಗವನ್ನು ತೆರೆಯುತ್ತದೆ.

Paschimottanasana (Two-legged forward bend)

14. ಪಶ್ಚಿಮೋತ್ತಾಸನ

ವಿಶ್ರಾಂತಿಯನ್ನು ನೀಡುವ ಈ ಆಸನವನ್ನು ಕುಳಿತುಕೊಂಡು ಮುಂದೆ ಬಗ್ಗುವುದರಿಂದ ತಲೆಯನ್ನು ಹೃದಯದ ಮಟ್ಟಕ್ಕಿಂತಲೂ ಕೆಳತರುವುದರಿಂದ ಹೃದಯದ ಬಡಿತ ಮತ್ತು ಉಸಿರಾಟ ಕಡಿಮೆಯಾಗಿ, ವ್ಯವಸ್ಥೆಗೆ ವಿಶ್ರಾಂತಿಯನ್ನು ಕೊಡುತ್ತದೆ.

 
Stick Pose

15. ದಂಡಾಸನ

ದಂಡಾಸನ ಅಥವಾ ಕೋಲಿನ ಆಸನವು ಇತರ ಯೋಗಾಸನಗಳಿಗಿಂತಲೂ ವ್ಯತಿರಿಕ್ತವಾಗಿದ್ದು, ಒಳ್ಳೆಯ ಭಂಗಿಯನ್ನು ಇದು ನೀಡಿ, ಬೆನ್ನನ್ನು ಬಲಿಷ್ಟವಾಗಿ, ಅದೇ ಸಮಯದಲ್ಲಿ ಭುಜಗಳ ಮತ್ತು ಎದೆಯ ವಿಸ್ತರಣವನ್ನೂ ಮಾಡುತ್ತದೆ.

16. ಡಾಲ್ಫಿನ್ ಭಂಗಿ

ಅಧೋಮುಖವಾಗಿ ನೋಡುವ ಶ್ವಾನದ ಭಂಗಿಗಿಂತಲೂ ಡಾಲ್ಫಿನ್ ಭಂಗಿಯು ಸ್ವಲ್ಪ ಕಷ್ಟಕರವಾಗಿದ್ದು, ದೇಹದಾಢ್ರ್ಯತೆಯನ್ನು ಹೆಚ್ಚಿಸುವುದಲ್ಲದೆ, ದೇಹದ ಮೇಲ್ಭಾಗವು ಹೆಚ್ಚಾಗಿ ತೆರೆದುಕೊಳ್ಳಲು ಸಹಾಯ ಮಾಡುತ್ತದೆ.

 

17. ಡಾಲ್ಫಿನ್ನ ಹಲಗೆ ಭಂಗಿ

ಡಾಲ್ಫಿನ್ನ ಹಲಗೆ ಭಂಗಿಯಿಂದ ಮತ್ತೆ ಹೃದಯದ ಬಡಿತವು ಹೆಚ್ಚುತ್ತದೆ

 

18. ಸ್ಫಿಂಕ್ಸ್ ಭಂಗಿ

ಸ್ಫಿಂಕ್ಸ್ ಭಂಗಿಯಿಂದ ಎದೆಯ ಭಾಗ ಮತ್ತೆ ತೆರೆದುಕೊಳ್ಳುತ್ತದೆ. ಮಂದವಾಗಿ ಹಿಂದಕ್ಕೆ ಬಗ್ಗುವ ಈ ಭಂಗಿಯು ನಿಧಾನವಾಗಿ ಎದೆಯನ್ನು ತೆರೆಯುವುದಲ್ಲದೆ, ಶ್ವಾಸಕೋಶಗಳ, ಭುಜಗಳ ವಿಸ್ತರಣವನ್ನೂ ಮಾಡುತ್ತದೆ.

 

Shavasana  

 

19. ಶವಾಸನ

ಆಳವಾದ ವಿಶ್ರಾಂತಿಯು ಎಲ್ಲಾ ಯೋಗಾಸನಗಳಿಗೂ ವ್ಯತಿರಿಕ್ತವಾಗಿದ್ದು, ನಮ್ಮ ವ್ಯವಸ್ಥೆಯ ಉತ್ತಮ ಆರೋಗ್ಯಕ್ಕಾಗಿ ದೇಹ ಮತ್ತು ಮನಸ್ಸಿಗೆ ಅವಶ್ಯಕವಾದ ಸೂಕ್ಷ್ಮ ಜೋಡಣೆಗಳನ್ನು ಮಾಡಿಕೊಳ್ಳುವ ಅವಕಾಶ ಸಿಗುತ್ತದೆ.

20. ಅಂಜಲಿ ಮುದ್ರ

ಅಂಜಲಿ ಮುದ್ರೆಯು ಹೃದಯವನ್ನು ತೆರೆಯುತ್ತದೆ, ಮೆದುಳನ್ನು ಪ್ರಶಾಂತವಾಗಿ ಇಡುತ್ತದೆ, ಒತ್ತಡವನ್ನು  ಆತಂಕವನ್ನು ಕಡಿಮೆ ಮಾಡುತ್ತದೆ. ಪ್ರಾಣಾಯಾಮ ಮತ್ತು ಧ್ಯಾನ ಮಾಡಲು ದೇಹವನ್ನು ಸಿದ್ಧ ಮಾಡುತ್ತದೆ.