ಯೋಗದಿಂದ ಇರಿಟೆಬಲ್ ಬವಲ್ ಸಿಂಡ್ರೋಮ್ ಮಾಯ

ಇರಿಟೆಬಲ್ ಬವಲ್ ಸಿಂಡ್ರೋವ್ (ಐಬಿಎಸ್) ದೀರ್ಘಾವಧಿಯ ಹೊಟ್ಟೆಯ ನೋವನ್ನು, ಬಾಧೆಯನ್ನು, ಹೊಟ್ಟೆಯ ಉಬ್ಬರವನ್ನು ಮತ್ತು ಮಲಬದ್ಧತೆ ಹಾಗೂ ಭೇದಿಯಂತಹ ಅಸಹಜವಾದ ಕರುಳಿನ ಚಲನೆಯನ್ನೂ ಉಂಟು ಮಾಡುತ್ತದೆ. ದೊಡ್ಡ ಕರುಳಿನ ರೋಗವೆಂದು ಪರಿಗಣಿಸಲ್ಪಟ್ಟಿರುವ ಈ ರೋಗವು ಯಾವ ವಯಸ್ಸಿನಲ್ಲಾದರೂ ಪ್ರಾರಂಭವಾಗಬಹುದು, ಗಂಡಸರಿಗಿಂತಲೂ ಹೆಚ್ಚಾಗಿ ಮಹಿಳೆಯರಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಐಬಿಎಸ್ ಜೀವನದ ಗುಣಮಟ್ಟವನ್ನು ಕುಗ್ಗಿಸಿ, ಭಾವನಾತ್ಮಕ ಒತ್ತಡವನ್ನುಂಟು ಮಾಡುತ್ತದೆಂದು ಸಂಶೋಧನೆಗಳು ತಿಳಿಸಿವೆ.

ಈ ರೋಗವನ್ನು ನಿವಾರಿಸುವ ಉಪಾಯಗಳು

ಇರಿಟೆಬಲ್ ಬವಲ್ ಸಿಂಡ್ರೋಮ್ನಿಂದ ಬಳಲುತ್ತಿರುವವರು ತಮ್ಮ ಆಹಾರದ ಬದಲಾವಣೆಗೆ ಮುಂದಾಗಬೇಕು, ಏಕೆಂದರೆ ಕೆಲವು ರೀತಿಯ ಆಹಾರಗಳು ಇವರಿಗೆ ಒಗ್ಗುವುದಿಲ್ಲ. ನಾರಿನಾಂಶವುಳ್ಳ ಆಹಾರಗಳನ್ನು ಹಾಗೂ ವಿರೇಚಕಗಳನ್ನು ಬಳಸಬೇಕೆಂಬುದಾಗಿ ಸೂಚಿಸಲಾಗಿದೆ. ಎಲ್ಲಾ ಕಾಲದಲ್ಲೂ ಸಫಲವಾಗಿರುವ ಒಂದು ಚಿಕಿತ್ಸೆಯಂದರೆ ಯೋಗ! ಎಲ್ಲಾ ಇತರ ಚಿಕಿತ್ಸೆಗಳಿಗಿಂತಲೂ ಇದು ಹೆಚ್ಚು ಪರಿಣಾಮಕಾರಕವಾಗಿದೆ.

ಯೋಗಾಭ್ಯಾಸ ಏಕೆ?

ಯೋಗ ಒಂದು ಪ್ರಾಚೀನವಾದ ಪ್ರಕ್ರಿಯೆಯಾಗಿದ್ದು, ದೈಹಿಕ ಹಾಗೂ ಮಾನಸಿಕ ಹಂತದಲ್ಲೂ ಇದು ತನ್ನ ಪ್ರಭಾವವನ್ನು ಬೀರಿ ಇರಿಟೆಬಲ್ ಬವಲ್ ಸಿಂಡ್ರೋಮ್ನಂತಹ ರೋಗಗಳನ್ನು ನಿವಾರಿಸುತ್ತದೆ. ಯೋಗಾಭ್ಯಾಸ ಮಾಡುವುದರಿಂದ ವಿವಿಧ ಅಂಗಾಂಗಗಳನ್ನು ತೀಡಿದಂತೆ ಆಗಿ, ಅಂಗಾಂಗಗಳು ಬಲಿಷ್ಠವೂ ಆಗುತ್ತವೆ. ಇದರಿಂದ ರೋಗದ ಸ್ಥಿತಿಯಿಂದ ದೇಹಕ್ಕೆ ಹೊರಬರಲು ಸಾಧ್ಯವಾಗಿ ದೇಹವು ಉತ್ತಮ ಸ್ಥಿತಿಗೆ ಮರಳುತ್ತದೆ. ಯೋಗವು ಆತಂಕ ಮತ್ತು ಒತ್ತಡವನ್ನು ನಿವಾರಿಸುವ ಅತ್ಯುತ್ತಮ ಪ್ರಕ್ರಿಯೆಯಾದ್ದರಿಂದ ಐಬಿಎಸ್ನಿಂದ ಉಂಟಾಗುವ ಭಾವನಾತ್ಮಕ ಒತ್ತಡವನ್ನು ನಿವಾರಿಸಬಹುದಾಗಿದೆ.

ಈ ಯೋಗಾಸನಗಳಿಂದ ನೋವಿನ ಉಪಶಮನವಾಗಿ, ಐಬಿಎಸ್ನಿಂದ ನೀವು ಬಿಡುಗಡೆಯನ್ನು ಹೊಂದಬಹುದು:

ಮಾರ್ಜರಿ ಆಸನ

 



ಬೆಕ್ಕಿನ ಭಂಗಿಯು ಹೊಟ್ಟೆಯನ್ನು ಸುಸ್ಥಿತಿಯಲ್ಲಿಟ್ಟು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮನಸ್ಸನ್ನು ವಿಶ್ರಾಂತಗೊಳಿಸಿ, ಇರಿಟೆಬಲ್ ಬವಲ್ ಸಿಂಡ್ರೋಮ್ನಿಂದ ಉಂಟಾಗುವ ಭಾವನಾತ್ಮಕ ಒತ್ತಡವನ್ನು ನಿವಾರಿಸುತ್ತದೆ.

ಪವನಮುಕ್ತಾಸನ

ವಾಯುವನ್ನು ಹೊರಬಿಡಲು ಸಹಾಯ ಮಾಡುವ ಈ ಯೋಗಾಸನವು ದೊಡ್ಡಕರುಳನ್ನು ಮತ್ತಿತರ ಹೊಟ್ಟೆಯ ಅಂಗಾಂಗಗಳನ್ನು ತೀಡಿ ದೇಹದಲ್ಲಿರುವ ಹೆಚ್ಚಿನ ವಾಯು ಹೊರಗೆ ಹೋಗಲು ಸಹಾಯ ಮಾಡುತ್ತದೆ.

 

ಅಧೋಮುಖಶ್ವಾನಾಸನ

ಕೆಳಮುಖದ ನಾಯಿಯ ಭಂಗಿಯು ಬೆನ್ನೆಲುಬನ್ನು ವಿಸ್ತಾರಗೊಳಿಸಿ ಹೊಟ್ಟೆಯ ಸ್ನಾಯುಗಳನ್ನು ಸುಸ್ಥಿತಿಯಲ್ಲಿಡುತ್ತದೆ. ರಕ್ತ ಚಲನೆಯನ್ನು ಹೆಚ್ಚಿಸಿ ದೇಹವನ್ನು ಪುನಶ್ಚೇತಗೊಳಿಸಲು ಈ ಯೋಗದ ಭಂಗಿಯು ಸಹಾಯ ಮಾಡುತ್ತದೆ.

ಅರ್ಧ ಮತ್ಸ್ಯೇಂದ್ರಿಯಾಸನ

 

ಅರ್ಧ ಮತ್ಸ್ಯೇಂದ್ರಿಯಾಸನದ ತಿರುವಿನಿಂದ ಬೆನ್ನೆಲುಬು ವಿಸ್ತಾರಗೊಂಡು ಖಲಿಜ ಮತ್ತು ಮೂತ್ರ ಪಿಂಡಗಳಿಗೆ ಸಹಾಯಕವಾಗುತ್ತದೆ. ಅಡ್ರೀನಲ್ ಗ್ರಂಥಿಯನ್ನೂ ಈ ಯೋಗಾಸನವು ಪ್ರಚೋದಿಸುತ್ತದೆ.

 

ಭುಜಂಗಾಸನ

ಹಾವಿನ ಭಂಗಿಯು ಹೊಟ್ಟೆಯ ಸ್ನಾಯುಗಳನ್ನು ವಿಸ್ತಾರಗೊಳಿಸಿ ಅವುಗಳನ್ನು ಸುಸ್ಥಿತಿಯಲ್ಲಿಡುತ್ತವೆ. ಇದರಿಂದ ದಣಿವು ಹಾಗೂ ಒತ್ತಡದ ನಿವಾರಣೆಯಾಗಿ ರಕ್ತಚಲನೆಯೂ ಹೆಚ್ಚುತ್ತದೆ.

ಧನುರಾಸನ

ಧನುಸ್ಸಿನ ಭಂಗಿಯಿಂದ ಹೊಟ್ಟೆಯ ಸ್ನಾಯುಗಳು ಬಲಿಷ್ಠವಾಗಿ ದೇಹದ ಒತ್ತಡದ ನಿವಾರಣೆಯಾಗುತ್ತದೆ. ಇರಿಟೆಬಲ್ ಬವಲ್ ಸಿಂಡ್ರೋಮ್ನೊಡನೆ ಮಾಸಿಕ ಚಕ್ರದ ಅಹಿತವಾದ ಸಂವೇದನೆಯನ್ನೂ ಈ ಯೋಗಾಸನವು ನಿವಾರಿಸುತ್ತದೆ.

 

 

ಆಹಾರ ಮತ್ತು ಜೀವನಶೈಲಿಯ ಬಗ್ಗೆ ಕೆಲವು ಮಾರ್ಗಸೂಚಿಗಳು

ಅನಿಯಮಿತವಾದ ಅಭ್ಯಾಸದಿಂದಾಗಿ ಅಥವಾ ಕೃಶವಾದ ಪಾಚಕ ವ್ಯವಸ್ಥೆಯಿಂದಾಗಿ ಇರಿಟೆಬಲ್ ಬವಲ್ ಸಿಂಡ್ರೋಮ್ ಉಂಟಾಗುತ್ತದೆ. ಒತ್ತಡಕರವಾದ ಕೆಲಸದಿಂದ ಹಾಗೂ ಅನಾರೋಗ್ಯಕರವಾದ ಜೀವನಶೈಲಿಯ ಆಯ್ಕೆಗಳಿಂದಲೂ ಈ ಸ್ಥಿತಿಯು ಉಲ್ಬಣಗೊಳ್ಳುತ್ತದೆ. ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ಮತ್ತು ಆಹಾರದಲ್ಲೂ ಬದಲಾವಣೆ ಮಾಡುವುದರಿಂದ ಐಬಿಎಸ್ಅನ್ನು ಸುಲಭವಾಗಿ ನಿವಾರಿಸಬಹುದು. “ಆಯುರ್ವೇದ” ಎಂದರೆ “ಜೀವನದ ವಿಜ್ಞಾನ”. ಇದು ಅತೀ ಪ್ರಾಚೀನವಾದ ಭಾರತೀಯ ಔಷಧೀಯ ಪದ್ಧತಿಯಾಗಿದ್ದು ಪ್ರಾಕೃತಿಕ ಔಷಧಿಗಳನ್ನು ಬಳಸುವ ಒಂದು ಸಮಗ್ರವಾದ ಚಿಕಿತ್ಸೆಯ ಪದ್ಧತಿ. ದೇಹದ ವಿವಿಧ ಧಾತುಗಳನ್ನು, ಪ್ರಕೃತಿಗಳನ್ನು ಇದು ಸಮತೋಲನದಲ್ಲಿರುಸುವುದಲ್ಲದೆ, ರೋಗಗಳನ್ನು ತಡೆಗಟ್ಟುವ ಮತ್ತು ರೋಗಗಳನ್ನು ನಿವಾರಿಸುವ ಜ್ಞಾನವನ್ನೂ ಕೊಡುತ್ತದೆ.

ಸಹನೆಯೇ ರಹಸ್ಯ

ಐಬಿಎಸ್ ವೇದನಕರವಾಗಿರುತ್ತದೆ. ಯೋಗಾಭ್ಯಾಸವನ್ನು ಪ್ರಾರಂಭಿಸುವುದರಿಂದ ನೋವಿನ ನಿವಾರಣೆಯು ಖಂಡಿತವಾಗಿಯೂ ಆಗುತ್ತದೆ. ಯೋಗವು ಅತೀ ಪರಿಣಾಮಕಾರಿಯಾದರೂ ತನ್ನ ಚಿಕಿತ್ಸಾ ಸಾಮಥ್ರ್ಯವು ಪ್ರಕಟವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಯೋಗಾಭ್ಯಾಸವನ್ನು ಎಡೆಬಿಡದೆ ನಿರಂತರವಾಗಿ ಅಭ್ಯಾಸ ಮಾಡಬೇಕು ಮತ್ತು ಯಾವ ಕಾರಣಕ್ಕೂ ಈ ಅಭ್ಯಾಸವನ್ನು ತ್ಯಜಿಸಬಾರದೆಂಬುದೇ ನಮ್ಮ ಸಲಹೆ. ಕಾಲಕ್ರಮೇಣವಾಗಿ ನಿಮ್ಮ ನೋವಿನ ನಿವಾರಣೆಯಾಗಿ ದೊಡ್ಡ ಕರುಳಿನ ಚಲನೆಯು ಕಾಲೋಚಿತವಾಗಿ ಆಗಲು ಪ್ರಾರಂಭಿಸುತ್ತದೆ.

ಎಚ್ಚರಿಕೆಯಿಂದ ಮುಂದುವರೆಸಿ

ನಿಮ್ಮ ಹೊಟ್ಟೆ ನೋವಿನಿಂದಾಗಿ ಮತ್ತಷ್ಟು ವಿಸ್ತಾರ ಮಾಡುವ ನಿಮ್ಮ ದೈಹಿಕ ಸಾಮಥ್ರ್ಯ ಸೀಮಿತವಾಗಬಹುದು. ಆದರೂ ಎದೆಗುಂದಿ ಅಭ್ಯಾಸವನ್ನು ನಿಲ್ಲಿಸಿಬಿಡಬೇಡಿ! ನಿತ್ಯಾಭ್ಯಾಸದಿಂದ ದೇಹವು ವಿಸ್ತರಣೆಗೆ ಒಗ್ಗುತ್ತದೆ ಮತು ನಿಮ್ಮ ವಿಸ್ತರಣಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಲ್ಲಿರಿ. ಆದರೆ ನಿಮ್ಮ ದೈಹಿಕ ಸೀಮಿತತೆಯನ್ನು ಗೌರವಿಸಿ ನಿಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಮಾತ್ರ ವಿಸ್ತಾರ ಮಾಡಿ.

ಆದ್ದರಿಂದ, ದೇಹವನ್ನು ವಿಸ್ತರಿಸಿ ಮತ್ತು ನಿಮ್ಮ ಇರಿಟೆಬಲ್ ಬವಲ್ ಸಿಂಡ್ರೋಮ್, ಯೋಗಾಭ್ಯಾಸದಿಂದ ಹೇಗೆ ಮಾಯವಾಗುತ್ತದೆಂದು ಕಂಡುಕೊಳ್ಳಿ!

 

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು  iಟಿಜಿo@sಡಿisಡಿiಥಿogಚಿ.iಟಿ ನಲ್ಲಿ ಸಂಪರ್ಕಿಸಿ.