ಕತ್ತುನೋವನ್ನು ಹೋಗಲಾಡಿಸುವ ಏಳು ಸುಲಭವಾದ ಯೋಗದಭಂಗಿಗಳು

“ಪುಟ್ಟದು ಒಳ್ಳೆಯದು” ಎನ್ನುವ ಸೂಕ್ತಿ ಹ ಳೇ ಕಾಲದಲ್ಲಿ ಇತ್ತು. ಆ ದಿನಗಳು ಹೋದವು. ಈಗಿನ ಕಾಲದಲ್ಲಿ ನಮಗೆ ಎಲ್ಲವು ಉತ್ತಮವಾಗಿರಬೇಕು, ಒಳ್ಳೆಯದೇ ಬೇಕು. ಒಳ್ಳೆಯ ಮನೆ, ಸಂಬಳ, ಹುದ್ದೆ; ಪ್ರಪಂಚವೂ ಕೂಡ ಒಳ್ಳೆಯದಾಗಿರಬೇಕು. ನಾವು ಎಲ್ಲದರಲ್ಲು ಪರಿಪೂರ್ಣತೆಯನ್ನು ಸಾಧಿಸಬೇಕೆನ್ನುವ ಪ್ರಯತ್ನದಿಂದ ಜನರು ಹುಚ್ಚರಂತಾಗುತ್ತಿದ್ದಾರೆ. ನೀವು ಹೇಳಬಹುದು ಇದು “ಪರಿವರ್ತನೆಯ ಪ್ರಭಾವ! ಆದರೆ ನಾವು ಪರಿವರ್ತನೆಯ ಕಡೆಗೆ ಹಾಕುತ್ತಿರುವ ದಾಪುಗಾಲು ಮನುಷ್ಯನ ಆರೋಗ್ಯದ ಮೇಲೆ; ದ್ಯೆಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಕೆಟ್ಟ ಪರಿಣಾಮ ಆಗಿತ್ತಿದೆ.

ನಮ್ಮ ಅಪೇಕ್ಷೆಗಳು ಬೇಕು ಎನ್ನುವ ರೂಪ ತಾಳಿದೆ ಮತ್ತು ಅದನ್ನು ನೆರವೇರಿಸಲು ಅಥವಾ ಬೇಕುಗಳನ್ನು ಪೂರೈಸಲು ನಾವು ಕಷ್ಟ ಪಟ್ಟು ಕೆಲಸವನ್ನು ಮಾಡಲೇಬೇಕಾಗಿದೆ. ಈ ಬೇಕುಗಳ ಪೂರೈಸುವಿಕೆಯಿಂದ ನಮ್ಮ ದೇಹಕ್ಕೆ ಹೆಚ್ಚು ಶ್ರಮವಾಗುತ್ತದೆ ಮತ್ತು ನಮ್ಮ ದೇಹವನ್ನು ಕಾರ್ಖಾನೆಯನ್ನಾಗಿ ಪರಿವರ್ತಿಸುತ್ತದೆ. ನಂತರ ದೇಹದ ಸವೆತ ಮತ್ತು ಹರಿತ ಶುರುವಾಗುತ್ತದೆ. ಎಲ್ಲರಿಗೂ ಸಾಮಾನ್ಯವಾಗಿ ಕಾಡುವ ಖಾಯಿಲೆ ಎಂದರೆ ಕತ್ತುನೋವು.

ಕತ್ತು ನೋವಿಗೆ ವ್ಯೆದ್ಯಕೀಯ ಹೆಸರು “ ಸರ್ವಿಕಾಲ್ಜಿಯಾ” ಎಂದು. ಇದು ಶುರುವಾಗುವುದು ನಾವು ತುಂಬ ಹೊತ್ತು ಒಂದೇ ಕಡೆಯಲ್ಲಿ ಮತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ, ಅಥವಾ ರಾತ್ರಿ ನಿದ್ದೆಕೆಡುವುದರಿಂದ ಮತ್ತು ವ್ಯಾಯಾಮ ಮಾಡŒದೇ ಇರುವುದರಿಂದ. ಇಷ್ಟು ಸುಲಭವಾಗಿ ಕತ್ತು ನೋವು ಬರಬೇಕಾದರೆ ಅದನ್ನು ಗುಣಪಡಿಸುವುದು ಅಷ್ಟೇ ಸುಲಭವಾಗಿರಬೇಕು ಅಲ್ಲವೆ?

ಹೌದು ಸರಿಯಾಗಿ ಯೋಚಿಸಿದ್ದೀರಾ! ಕತ್ತಿನ ನೋವನ್ನು ಹೋಗಲಾಡಿಸಲು ನಾವು ನಿಮಗೆ ಏಳು ಸುಲಭವಾದ ಸರಣಿ ಆಸನಗಳನ್ನು ಹೇಳುತ್ತೇವೆ. ಇದನ್ನು ತುಂಬ ಸುಲಭವಾಗಿ ಮಾಡಬಹುದು ಮತ್ತು ದಿನ ನಿತ್ಯದ ಗಡಿಬಿಡಿಯಲ್ಲಿ ಜಾಸ್ತಿ ಸಮಯವನ್ನು ತಿನ್ನುವುದಿಲ್ಲ.ಯೋಗದ ಮುಖ್ಯ ಪಾತ್ರವೆಂದರೆ: ಇದಕ್ಕೆ ಐದು ಸಾವಿರ ವರ್ಷದ ಇತಿಹಾಸ ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ.

1. ಬಾಲಾಸನ : ಮಂಡಿಯೂರಿ ನೆಲದ ಮೇಲೆ ಕುಳಿತುಕೊಳ್ಳಿ/ ನಿಮ್ಮ ಗಲ್ಲವನ್ನು ಮುಂದಕ್ಕೆ ಬಾಗಿಸಿ ನೆಲಕ್ಕೆ ಮುಟ್ಟಿಸಿ, ಕಾಲಿನ ಬೆರಳುಗಳು ಒಂದಕ್ಕೊಂದು ತಾಕುತ್ತಿರŒಬೇಕು. ನಿಮ್ಮ ಹಿಮ್ಮಡಿಯ ಮೇಲೆ ಕುಳಿತುಕೊಳ್ಳಿ, ಕೈಗಳು ನಿಮ್ಮ ಪಕ್ಕದಲ್ಲಿ ಇರಲಿ. ಉಸಿರನ್ನು ಬಿಡುತ್ತ ನಿಮ್ಮ ದೇಹದ ಮೇಲ್ಭಾಗವನ್ನು ಎರಡೂ ತೊಡೆಗಳ ಮಧ್ಯ ತನ್ನಿರಿ. ನಿಧಾನವಾಗಿ ನಿಮ್ಮ ತಲೆಯನ್ನು ನೆಲಕ್ಕೆ ಮುಟ್ಟಿಸಿ. ನಿಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟನ್ನೇ ಮಾಡಿ. ಹೆಚ್ಚು ಶ್ರಮ ಪಡಬೇಡಿ. ನಿಮ್ಮ ಕೈಗಳು ದೇಹದ ಪಕ್ಕದಲ್ಲಿರಲಿ. ಅದನ್ನು ಉದ್ದಕ್ಕೆ ಮುಂದಕ್ಕೆ ಚಾಚಿ ಅಂಗೈಗಳು ಮೇಲ್ಮುಖವಾಗಿರಲಿ. ಇದೇ ಭಂಗಿಯಲ್ಲಿ ಎಷ್ಟು ಹೊತ್ತಾಗುತ್ತೊ ಅಷ್ಟು ಹೊತ್ತಿರಿ ನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ನಿಮ್ಮ ದೇಹದ ಮೇಲ್ಭಾಗವನ್ನು ಮೇಲಕ್ಕೆ ತನ್ನಿ. ನಿಮ್ಮ ಕೈಗಳ ನಿಮ್ಮ ತೊಡೆಯ ಮೇಲಿರಲಿ, ಅಂಗೈಗಳು ಆಕಾಶ ನೋಡುತ್ತಿರಲಿ, ದೇವರಿಗೆ ಶರಣಾಗುವ ರೀತಿಯಲ್ಲಿ. ಈ ಭಂಗಿ ಬರೀ ಕತ್ತುನೋವನ್ನು ಮಾತ್ರ ಹೋಗಲಾಡಿಸುವುದಿಲ್ಲಜೊತೆಗೆ ತಲೆಯನ್ನು (ಮೆದುಳನ್ನು) ಶಾಂತಗೊಳಿಸುತ್ತದೆ. ನಮ್ಮ ಟೊಂಕವನ್ನು ಹಿಗ್ಗಿಸುತ್ತದೆ. ತೊಡೆಗಳನ್ನು ಮತ್ತು ಕಾಲಿನ ಹರಡನ್ನು ಮಗುವಿನಂತೆ ತಾಜತನವನ್ನು ತರುತ್ತದೆ.

2. ನಟರಾಜಸನ : ನೆಲದ ಮೇಲೆ ನೇರವಾಗಿ ಬೆನ್ನು ಕೆಳಗೆ ಮಲಗಿ ನಿಧಾನವಾಗಿ ನಿಮ್ಮ ಬಲಗಾಲನ್ನು ಎತ್ತಿ ನಿಮ್ಮ ಎಡಗಾಲಿನ ಪಕ್ಕಕ್ಕೆ ತನ್ನಿ, ಇದನ್ನು ಮಾಡುವಾಗ ನಿಮ್ಮ ಎಡಗಾಲು ನೇರವಾಗಿರಬೇಕು, ಮತ್ತು ಬಲಗಾಲು ನೆಲದ ಮೇಲೆ ಬಲ ಕೋನದಂತಿರಬೇಕು. ನಿಮ್ಮ ಕೈಗಳನ್ನು ಪಕ್ಕಕ್ಕೆ ಚಾಚಿ ಮತ್ತು ತಲೆಯನ್ನು ಬಲಭಾಗಕ್ಕೆ ತಿರುಗಿಸಿ. ಕೆಲವು ಧೀರ್ಘ ಉಸಿರಾಟ ಮಾಡಿ. ಇದೇ ಭಂಗಿಯಲ್ಲಿ ಇದನ್ನೇ ಪುನಃ ಎಡಗಾಲಿನಲ್ಲಿ ಪುನರಾವರ್ತಿಸಿ. ಇದರಿಂದ ನಿಮ್ಮ ಸ್ನಾಯುಗಳನ್ನು ಸುಲಭವಾಗಿ ಬಗ್ಗಿಸಲು ಸಾಧ್ಯವಾಗುತ್ತದೆ. ಈ ಸ್ಥಿತಿ ನಿಮ್ಮನ್ನು ಪರಮ ಸುಖ ಮತ್ತು ಸಮಾಧಾನದ ಅವಸ್ಥೆಗೆ ಕರೆದೊಯ್ಯುತ್ತದೆ. ಕುತೂಹಲದ ವಿಷಯ ಏನೆಂದರೆ ಇದು ಶಿವನ ನೃತ್ಯದ ಭಂಗಿ. ಶಿವ ತತ್ವವನ್ನು ಎಲ್ಲಡೆ ಕಾಣಿರಿ

3. ಓಟಿಲಿಯಾಸನ ಅಥವಾ ಹಸುವಿನ ಭಂಗಿ: ಇದನ್ನು ಶುರು ಮಾಡುವಾಗ ನಿಮ್ಮ ಗಲ್ಲವನ್ನು ನೆಲಕ್ಕೆ ತಾಗಿಸಿ ಮತ್ತು ಶರೀರವನ್ನು ಮೇಜಿನ ಸ್ಥಿತಿಗೆ ತನ್ನಿ, ಗಮನವಿರಲಿ, ನಿಮ್ಮ ಮೊಣಕಾಲುಗಳನ್ನು ತೊಡೆಯ ಕೆಳಗೆ ಇಡಿ, ನಿಮ್ಮ ಮೊಣಕೈ ಮತ್ತು ಭುಜ ಸಮಾನಾಂತರವಾಗಿರಬೇಕು, ನಿಮ್ಮ ಇಡೀ ದೇಹ ನೆಲಕ್ಕೆ ಸಮಾನಾಂತರವಾಗಿರಬೇಕು. ಇದೇ ಸ್ಥಿತಿಯಲ್ಲಿ ಉಸಿರನ್ನು ತೆಗೆದುಕೊಳ್ಳಿ ಜೊತೆಗೆ ನಿಮ್ಮ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಳ್ಳಿ ಮತ್ತು ತಲೆಯನ್ನು ಮೇಲಕ್ಕೆತ್ತಿ. ಇದೇ ಸ್ಥಿಯಲ್ಲಿ ಸ್ವಲ್ಪ ಹೊತ್ತಿರಿ ನಂತರ ಕೆಳಗೆ ಕೊಟ್ಟಿರುವ ಬೆಕ್ಕಿನ ಭಂಗಿಗೆ ಬನ್ನಿ.

4. ಮರ್ಜರಿ ಆಸನ ಅಥವ ಬೆಕ್ಕಿನಭಂಗಿ: ಅದೇ ಸರಣಿಯಲ್ಲಿ ಉಸಿರನ್ನು ಬಿಡುತ್ತಾ ನಿಮ್ಮ ಬೆನ್ನು ಹುರಿಯನ್ನು ಬಗ್ಗಿಸಿ ತಲೆಯನ್ನು ಮೇಲಕ್ಕೆ ಮಾಡಿ ಮತ್ತೆ ತಲೆಯನ್ನು ಒಳಕ್ಕೆ ತನ್ನಿ ಅಂದರೆ ನಿಮಾ ಗಲ್ಲವನ್ನು ಗಂಟಲಿಗೆ ತಾಗಿಸಿ. ಮೇಲಿನ ಎರಡು ಭಂಗಿಗಳನ್ನು ಸರಣಿಯಲ್ಲಿ ಮಾಡಿ ಉಸಿರಾಟದ ಜೊತೆಗೆ. ಈ ಭಂಗಿಯನ್ನು ಮಾಡುವುದರಿಂದ ಬೆನ್ನು ಹುರಿಗೆ ಮಸಾಜ್ ಮಾಡಿದ ಹಾಗಾಗುತ್ತದೆ, ಜೊತೆಯಲ್ಲಿ ಕತ್ತು ನೋವು ಕಡಿಮೆ ಆಗುತ್ತದೆ. ತಮಾಷೆಗಾಗಿ 

ನೀವು ಆಸನ ಮಾಡುವಾಗ ಹಸು ಮತ್ತು ಬೆಕ್ಕಿನ ಧ್ವನಿಯನ್ನು ಮಾಡಿ, ಮಜಾ ಇರುತ್ತದೆ.

5. ವಿಪರೀತ ಕರ್ಣಿ ಅಥವಾ ಗೋಡೆಗೆ ಕಾಲನ್ನು ತಾಕಿಸುವುದುಇದು ತುಂಬಾ ಸುಲಭ! ಬೆನ್ನ ಮೇಲೆ ಮಲಗಿ ಮತ್ತು ನಿಮ್ಮ ಕಾಲುಗಳನ್ನು  ಗೋಡೆಗೆ ತಾಕಿಸಿ ಸೊಂಟವನ್ನು ಗೋಡೆಗೆ ತಾಕಿಸಿ. ನಿಮ್ಮ ಪಾದ ಆಕಾಶ ನೋಡುತ್ತಿರಬೇಕು, ಪೂರ್ಣ ಕಾಲಿನ ಭಾಗ ನೆತ್ತಗಿರಬೇಕು. ನಿಮ್ಮ ಕೈಗಳನ್ನು ದೇಹದ ಪಕ್ಕಕ್ಕೆ ಇರಿಸಿ ಮತ್ತು ಹಸ್ತಗಳು ಮೇಲ್ಮುಖವಾಗಿರಲಿ. ದೀರ್ಘವಾದ ಉಸಿರಾಟ ಮಾಡಿ ಹದಿನೈದು ಬಾರಿ ಮಾಡಿ, ನಂತರ ಮುಂದಿನ ಆಸನಕ್ಕೆ ಹೋಗಿ. ಈ ಭಂಗಿ ನಿಮ್ಮ ಕತ್ತನ್ನು ಎಳೆಯುತ್ತದೆ. ಬೆನ್ನು ನೋವು ಕಡಿಮೆ ಇದ್ದರೆ ನಿವಾರಣೆ ಆಗುತ್ತದೆ. ಬಿಗಿದ ನೋವು ಕಾಲುಗಳಲ್ಲಿದ್ದರೆ ಕಮ್ಮಿ ಆಗುತ್ತದೆ.

6. ಉತ್ತಿಷ್ತ ತ್ರಿಕೊನಾಸನ ಅಥವಾ ವಿಸ್ತರಿಸಿದ ತ್ರಿಕೊನಾಸನಮೊದಲಿಗೆ ನೇರವಾಗಿ ಅಥವಾ ನೆಟ್ಟಗೆ ನಿಲ್ಲಿ ನಂತರ ಎರಡು ಕಾಲುಗಳನ್ನು ಸಾಧ್ಯವಾದಷ್ಟು ದೂರ ಮಾಡಿ, ಬೆನ್ನು ನೆಟ್ಟಗಿರಲಿ, ಕೈಗಳನ್ನು ಉದ್ದಕ್ಕೆ, ಪಕ್ಕಕ್ಕೆ ಚಾಚಿ, ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಬಲಭಾಗಕ್ಕೆ ಬಾಗಿ, ಬಲಗೈ ನಿಮ್ಮ ಬಲಗಾಲನ್ನು ಮುಟ್ಟಬೇಕು ಮತ್ತು ಎಡಗೈ ಮೇಲಕ್ಕೆ ಎತ್ತಬೇಕು ಮತ್ತು ದೃಷ್ಟಿ ಎಡಗೈಯನ್ನು ನೋಡಬೇಕು. ಇದೇ ಭಂಗಿಯಲ್ಲಿ ಸಾಧ್ಯವಾಗುವಷ್ಟು ಹೊತ್ತು ಇರಿ.  ಜ್ಞಾಪಕವಿರಲಿ ನಿಮ್ಮ ಕೈಲಾದಷ್ಟೇ ಮಾಡಿ, ಯೋಗದಿಂದ ನಿಮ್ಮ ನೋವು ಕಮ್ಮಿ ಆಗಬೇಕು ಜಾಸ್ತಿ ಆಗಬಾರದು.

ಮುಂದೆ ಏನೆಂದು ನೋಡೋಣವೆ!

7. ಶವಾಸನ ಇದು ಎಲ್ಲಕ್ಕಿಂತ ಸುಲಭವಾದದ್ದು. ಇದನ್ನು ಮಾಡಬೇಕಾದರೆ ಏನೂ ಮಾಡಬೇಕಾಗಿಲ್ಲ! ದೇಹವನ್ನು ತಟಸ್ಥ ಸ್ಥಿತಿಯಲ್ಲಿ ಇಟ್ಟಿಕೊಳ್ಳಬೇಕು. ನೆಲದ ಮೇಲೆ ನೆಟ್ಟಗೆ ಮಲಗಿ, ಕತ್ತು ಮತ್ತು ಬೆನ್ನು ನೆಟ್ಟಗಿರಲಿ, ಪಾದಗಳ ಮಧ್ಯೆ ಅಂತರವಿರಲಿ, ಕೈಗಳು ದೇಹದ ಪಕ್ಕದಲ್ಲಿರಲಿ, ಅಂಗೈ ಮೇಲ್ಮುಖವಾಗಿರಲಿ. ಇದೇ ಯೋಗದಲ್ಲಿ ಕೊನೆಯ ಭಂಗಿ. ಕನಿಷ್ಠ ಪಕ್ಷ ಐದು ನಿಮಿಷವಾದರು ಈ ಆಸನದಲ್ಲಿರಬೇಕು. ಇದು ಸ್ನಾಯುಗಳಿಗೆ ಮತ್ತು ಮನಸ್ಸಿಗೆ ವಿಶ್ರಾಂತಿ ಕೊಡುತ್ತದೆ.

ನಾವು ಆಶಿಸುತ್ತೇವೆ ನೀವು ನಿಮ್ಮ ಕತ್ತುನೋವಿಗೆನಾವು ಆಶಿಸುತ್ತೇವೆ ನೀವು ನಿಮ್ಮ ಕತ್ತುನೋವಿಗೆ “ವಿದಾಯ” ಹೇಳಬಹುದು. ಈ ಸುಲಭವಾದ ಯೋಗಾಸನದ ಭಂಗಿಗಳನ್ನು ದಿನಾ ಅಭ್ಯಾಸ ಮಾಡಿ, ಒತ್ತಡರಹಿತವಾದ ವಿಶ್ರಾಂತಿಯ ಜೀವನವನ್ನು ನಡೆಸಿ. ಅಲ್ಲಿಯವರೆಗೆ ಭಂಗಿಗಳಲ್ಲಿ ಖುಷಿಪಡಿ.