ಯೋಗದಿಂದ ಹೃದಯ ತುಂಬಿ ನರ್ತಿಸಿ

ನೃತ್ಯವು ಒಂದು ಸೂಕ್ಷ್ಮವಾದ ಕಲೆಯಾಗಿದ್ದು, ಅದನ್ನು ಅಭಿವ್ಯಕ್ತಿಯ ಉತ್ತಮ ರೀತಿಯೆಂದು ಪರಿಗಣಿಸಲಾಗಿದೆ. ಪ್ರಾಚೀನ ನೃತ್ಯ ಪದ್ಧತಿಗಳೆಲ್ಲವೂ ಅಮೂಲ್ಯವಾದವು ಮತ್ತು ಇವುಗಳಿಂದಾಗಿ ಜನರು ತಮ್ಮ ಸಮೃದ್ಧ ಪರಂಪರೆಯೊಡನೆ ಇನ್ನೂ ಸಂಬಂಧವನ್ನು ಹೊಂದಿದ್ದಾರೆ. ಉತ್ಸಾಹಭರಿತವಾದ ಭಾಂಗ್ರಾ ಆಗಲಿ, ಮನಸೂರೆಗೊಳ್ಳುವ ಬ್ಯಾಲೆ ನೃತ್ಯ ಆಗಲಿ ಅಥವಾ ಪ್ರೇಮಿಗಳ ಸಾಲ್ಸ ನೃತ್ಯವಾಗಲಿ, ಎಲ್ಲವೂ ತಮ್ಮದೇ ಅನುಪಮತೆಯನ್ನು ಹೊಂದಿದ್ದು, ನಮ್ಮ ಗಮನವನ್ನು ಸೆರೆಹಿಡಿಯುತ್ತವೆ. ನೀವು ರಹಸ್ಯಮಯವಾಗಿ ನರ್ತಿಸಲು ಬಯಸಿದರೂ ಅಥವಾ ಸಾರ್ವಜನಿಕವಾಗಿ ನರ್ತಿಸಲು ಬಯಸಿದರೂ, ನೀವು ಹಿಪ್ಹಾಪ್ನ ಪ್ರಿಯರಾಗಲಿ ಅಥವಾ ಟ್ಯಾಪ್ ನೃತ್ಯದ ಉತ್ಸಾಹಿಗಳಾಗಿರಲಿ, ನರ್ತನದ ಆನಂದವನ್ನು ಅನುಭವಿಸಿರುತ್ತೀರಿ ಮತ್ತು ಅದು ಎಷ್ಟು ತೃಪ್ತಿಕರವೆಂದು ನಿಮಗೆ ಗೊತ್ತು.

ಉತ್ತಮವಾಗಿ ಹೇಗೆ ನರ್ತಿಸುವುದು?

ನರ್ತಕರು ನರ್ತನವನ್ನು ಬಹಳವಾಗಿ ಆನಂದಿಸಿದಾಗ, ಹೃದಯತುಂಬಿ ನರ್ತಿಸಿದಾಗ ಯಾವುದೇ ನೃತ್ಯವನ್ನು ಆನಂದಿಸಬಹುದು. ದೇಹವು ಆರೋಗ್ಯಕರವಾಗಿದ್ದಾಗ ಮತ್ತು ಮನಸ್ಸು ಮುಕ್ತವಾಗಿದ್ದಾಗ ಮಾತ್ರ ಒಳ್ಳೆಯ ನರ್ತನವಾಗಲು ಸಾಧ್ಯ. ನೃತ್ಯದ ಅಭಿನಯನವನ್ನು ನೀಡುವ ಮೊದಲು ಬಹಳ ಒತ್ತಡಲ್ಲಿದ್ದರೆ ಅಥವಾ ನರ್ತನದ ಅಭ್ಯಾಸದ ಸಮಯದಲ್ಲಿ ದೇಹವು ಬಿಗಿಯಾಗಿದ್ದರೆ ಉತ್ತಮವಾಗಿ ನರ್ತಿಸಲಾಗದೆ ಕೊನೆಗೆ ನಿರಾಶೆಯಾಗುತ್ತದೆ. ಈ ರೀತಿಯ ಅಡಚಣೆಗಳು ನಿಮ್ಮ ಅಭಿನಯನಕ್ಕೆ ಅಡ್ಡಿಯಾಗುವುದರಿಂದ ಅದನ್ನು ಪರಿಣಾಮಕಾರಕವಾದ ರೀತಿಯಲ್ಲಿ ನಿಭಾಯಿಸಬೇಕು.

ಯೋಗವನ್ನೇಕೆ ಮಾಡಬೇಕು?

ಯೋಗಾಸನಗಳು ದೈಹಿಕ ಹಾಗೂ ಉಸಿರಾಟದ ವ್ಯಾಯಾಮಗಳ ಮಿಶ್ರಣ. ಇದರಿಂದ ದೇಹವು ಆರೋಗ್ಯಕರವಾಗಿರುವುದಲ್ಲದೆ ಮನಸ್ಸು ಪ್ರಶಾಂತವಾಗುತ್ತದೆ. ನರ್ತಕರು ತಮ್ಮ ಅಭಿವ್ಯಕ್ತಿಯನ್ನು ಹೆಚ್ಚಿಸಿಕೊಳ್ಳಲು, ಹೆಚ್ಚಿನ ದೇಹದ ನಮ್ಯತೆಯನ್ನು ಪಡೆದುಕೊಳ್ಳಲು, ಹೆಚ್ಚು ಲಾವಣ್ಯವನ್ನು ಹೊಂದಲು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಯೋಗವು ಸಹಾಯ ಮಾಡುತ್ತದೆ. “ಯೋಗವೆಂದರೆ ನಿಧಾನವಾದ ನರ್ತನವಲ್ಲದೆ ಬೇರೇನೂ ಅಲ್ಲ. ದೇಹದ ದಾಢ್ರ್ಯತೆಯನ್ನು ಹೆಚ್ಚಿಸುತ್ತಾ ದೇಹಕ್ಕೆ ಅವಶ್ಯಕವಾದುದನ್ನು ಯೋಗ ನೀಡುತ್ತದೆ” ಎಂದು ಹೇಳುತ್ತಾರೆ ಮೋನಿಕ.

ನಿಮ್ಮ ನೃತ್ಯಾಭ್ಯಾಸದ ಸಹಾಯಕ್ಕೆ ಬರುವ ಕೆಲವು ಯೋಗಾಸನಗಳನ್ನು ನೋಡೋಣ:

ಸಾಮಾನ್ಯವಾಗಿ ಮಾಡುವ ದೇಹವನ್ನು ಸಡಿಲಗೊಳಿಸುವ ವ್ಯಾಯಾಮಗಳಾದ ಕತ್ತನ್ನು ತಿರುಗಿಸುವುದು, ಭುಜಗಳನ್ನು ಸುತ್ತುವುದು, ಮಂಡಿಯನ್ನು, ಕಣಕಾಲನ್ನು ಸುತ್ತುವುದನ್ನು ಮಾಡಿ.

ತ್ರಿಕೋಣಾಸನ

ತ್ರಿಕೋಣಾಸನದಿಂದ ನರ್ತಕರ ಕಾಲುಗಳು, ಮಂಡಿಗಳು, ಕಣಕಾಲು, ತೋಳುಗಳು ಮತ್ತು ಎದೆಯು ಬಲಿಷ್ಠವಾಗುತ್ತವೆ. ಸೊಂಟ, ಕಾಲುಗಳ ಹಿಂಭಾಗ, ಭುಜಗಳು ಮತ್ತು ಬೆನ್ನೆಲುಬೂ ಬಲಿಷ್ಠವಾಗುತ್ತವೆ. ಈ ಯೋಗಾಸನದಿಂದ ದೈಹಿಕ ಹಾಗೂ ಮಾನಸಿಕ ಸಮತೋಲನ ಹೆಚ್ಚಿ, ನರ್ತಕರಲ್ಲಿ ಒತ್ತಡ, ಆತಂಕ ಮತ್ತು ಬೆನ್ನುನೋವನ್ನು ನಿವಾರಿಸುತ್ತದೆ.

ಉತ್ಕಟಾಸನ

ಉತ್ಕಟಾಸನದಿಂದ ಬೆನ್ನೆಲುಬು, ಸೊಂಟ ಮತ್ತು ಎದೆಯ ಸ್ನಾಯುಗಳ ವ್ಯಾಯಾಮವು ಉತ್ಕಟಾಸನದಿಂದ ಉಂಟಾಗುತ್ತದೆ. ಕೆಳಬೆನ್ನು ಮತ್ತು ದೇಹದ ಭಾಗವನ್ನು ಬಲಿಷ್ಠವಾಗಿಸುತ್ತದೆ. ಈ ಯೋಗಾಸನದಿಂದ ನರ್ತಕರಿಗೆ ದೇಹದ ಸಮತೋಲನ ಉಂಟಾಗುವುದಲ್ಲದೆ, ಮನಸ್ಸಿನ ದೃಢತೆಯೂ ಹೆಚ್ಚುತ್ತದೆ.

ಪೂರ್ವೋತ್ತಾಸನ

ಪೂರ್ವೋತ್ತಾಸನದಿಂದ ಕಣಕೈ, ತೋಳುಗಳು, ಭುಜಗಳು, ಬೆನ್ನು ಮತ್ತು ಬೆನ್ನೆಲುಬು ಬಲಿಷ್ಠವಾಗುತ್ತದೆ. ಕಾಲುಗಳ, ಸೊಂಟ ಹಿಗ್ಗಿಗುತ್ತದೆ

ಅಧೋಮುಖಶ್ವಾನಾಸನ

ಅಧೋಮುಖಶ್ವಾನಾಸನವು ಪುನಶ್ಚೇತಕರವಾದ ಯೋಗಾಸನವಾಗಿದ್ದು, ಇಡೀ ದೇಹ, ತೋಳುಗಳು, ಭುಜಗಳು, ಕೈಗಳು ಮತ್ತು ಕಾಲುಗಳು ಇದರಿಂದ ಬಲಿಷ್ಠವಾಗುತ್ತವೆ. ಸ್ನಾಯುಗಳನ್ನು ಸುಸ್ಥಿತಿಯಲ್ಲಿಡುತ್ತವೆ, ಮೆದುಳಿಗೆ ರಕ್ತಚಲನೆಯನ್ನು ಹೆಚ್ಚಿಸುತ್ತದೆ, ಬೆನ್ನೆಲುಬಿನ ಹಿಗ್ಗಿಸುತ್ತದೆ. ಎದೆಯ ಸ್ನಾಯುಗಳೂ ಬಲಿಷ್ಠವಾಗುತ್ತವೆ. ಈ ಯೋಗಾಸನದಿಂದ ನರ್ತಕರ ಮನಸ್ಸು ಪ್ರಶಾಂತವಾಗುತ್ತದೆ ಮತ್ತು ಅವರ ದಣಿವು ಅಥವಾ ತಲೆನೋವಿನ ನಿವಾರಣೆಯಾಗುತ್ತದೆ.

ಸೇತುಬಂಧಾಸನ

ಸೇತುಬಂಧಾಸನದಿಂದ ಬೆನ್ನಿನ ಸ್ನಾಯುಗಳು ಬಲಿಷ್ಠವಾಗುತ್ತವೆ, ಎದೆ, ಕತ್ತು ಮತ್ತು ಬೆನ್ನುಮೂಳೆಯ ವಿಸ್ತರಣವಾಗುತ್ತದೆ. ಬೆನ್ನು ನೋವು ಕಡಿಮೆಯಾಗಿ, ಮೆದುಳನ್ನೂ ಪ್ರಶಾಂತವಾಗಿಡುತ್ತದೆ.

ಶವಾಸನ

ಶವಾಸನದಿಂದ ದೇಹವು ಆಳವಾದ ವಿಶ್ರಾಂತಿಯ ಸ್ಥಿತಿಗೆ ಹೊಕ್ಕು, ಧ್ಯಾನಸ್ಥ ಸ್ಥಿತಿಗೆ ತೆರಳುತ್ತದೆ. ಇದು ದೇಹವು ಪುನಶ್ಚೇತಗೊಳಿಸುತ್ತದೆ. ನಿಮ್ಮ ಯೋಗಾಭ್ಯಾಸ ಮುಗಿದ ನಂತರ ಎರಡು ನಿಮಿಷಗಳು ಮಲಗಿ ಶವಾಸನದೊಳಗೆ ಹೊಕ್ಕಿ.

ನೃತ್ಯ ಪ್ರದರ್ಶನದ ಮೊದಲು ಏನು ಮಾಡಬೇಕು?

ಕೆಲವು ದೇಹದ ಸುತ್ತುಗಳನ್ನು ಮಾಡಿ ಯೋಗಾಸನಗಳನ್ನು ಮಾಡಿದರೆ ನಿಮ್ಮ ದೇಹವು ನೃತ್ಯಪ್ರದರ್ಶನಕ್ಕೆ ಸಿದ್ಧವಾಗುತ್ತದೆ. ಎರಡು ಸುತ್ತುಗಳ ಸೂರ್ಯನಮಸ್ಕಾರಗಳ ನಂತರ ದೇಹವು ಸಡಿಲವಾಗುವುದಲ್ಲದೆ, ದೇಹದಲ್ಲಿ ಹೆಚ್ಚು ಶಕ್ತಿ ಬರುತ್ತದೆ. ನಿಮಗೆ ಭಯವಾಗುತ್ತಿದ್ದರೆ ಭ್ರಮರಿ ಪ್ರಾಣಾಯಾಮವನ್ನು ಮಾಡಿ ನಿಮ್ಮಲ್ಲಿರುವ ಭಯವನ್ನು ಹೋಗಲಾಡಿಸಿಕೊಳ್ಳಿ.

ನಿಮ್ಮ ಪ್ರದರ್ಶನವನ್ನು ಮತ್ತಷ್ಟು ಉತ್ತಮವಾಗಿ ಮಾಡಿಕೊಳ್ಳಿ

ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಹಂತದಲ್ಲಿ ಹೆಚ್ಚು ಪ್ರಯತ್ನವನ್ನು ಹಾಕಿದಾಗ ನಿಮ್ಮ ನೃತ್ಯವು ಪೂರ್ಣವಾಗಿ ಪ್ರಯತ್ನರಹಿತವಾಗಿ ಆಗಿಬಿಡುತ್ತದೆ. ನೀವು ಮುಂದಕ್ಕೆ ಏಳುತ್ತಿರುವ ನರ್ತಕರಾಗಿದ್ದರೂ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಪರಿಸ್ಥಿತಿಗಳಿಗೆ ನೀವು ಸುಲಭವಾಗಿ ಒಗ್ಗಿಕೊಳ್ಳಬಹುದು. ನೀವು ವೃತ್ತಿಯಲ್ಲಿ ನರ್ತಕರಾಗಿದ್ದರೆ ಯೋಗಾಸನಗಳಿಂದ ನಿಮ್ಮ ದೇಹದ ದಾಢ್ರ್ಯತೆ ಮತ್ತಷ್ಟು ಹೆಚ್ಚುತ್ತದೆ ಮತ್ತು ದೇಹವು ಸದಾ ಸುಸ್ಥಿತಿಯಲ್ಲಿ ಇರುತ್ತದೆ.

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.

ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.inನಲ್ಲಿ ಸಂಪರ್ಕಿಸಿ.