ಮಹಿಳೆಯರಿಗೆ ಪುಲ್-ಅಪ್ಗಳನ್ನು ಮಾಡಲು ಸಹಾಯ ಮಾಡುವ ಯೋಗ

ಪುಲ್-ಅಪ್ ಎಂದರೆ ಕೈಗಳನ್ನು, ತೋಳುಗಳನ್ನು ಹಾಗೂ ಭುಜಗಳನ್ನು ಬಲಿಷ್ಠವಾಗಿಸುವ ದೇಹದ ಮೇಲ್ಭಾಗದ ವ್ಯಾಯಾಮಗಳು. ದೇಹದ ಮೇಲ್ಭಾಗದ ಹಾಗೂ ಹೊಟ್ಟೆಯ ಭಾಗದ ಸ್ನಾಯುಗಳನ್ನೂ ಬಲಿಷ್ಠಗೊಳಿಸುವ ಈ ವ್ಯಾಯಾಮಗಳು, ಸದೃಢಕಾಯರಾಗ ಬಯಸುವವರಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿರುವ ಕೈಗಳ ವ್ಯಾಯಾಮಗಳಾಗಿವೆ.

ಪುಲ್-ಅಪ್ಗಳು ಬಹಳ ಸಹಾಯಕವಾಗಿರುತ್ತವೆ ಮತ್ತು ಪುರುಷರ ದೇಹದ ಮೇಲೆ ಪರಿಣಾಮವನ್ನು ಬೀರುವಂತೆಯೇ ಮಹಿಳೆಯರ ದೇಹದ ಮೇಲೂ ಇವು ಅದೇ ರೀತಿಯ ಪರಿಣಾಮವನ್ನು ಬೀರುತ್ತವೆ. ಪುರುಷರಿಗೆ ಸಹಜವಾಗಿಯೇ ಹೆಚ್ಚು ಸ್ನಾಯುವಿನ ಪ್ರಮಾಣ ಮತ್ತು ದೇಹದ ಮೇಲ್ಭಾಗವು ಹೆಚ್ಚು ಬಲಿಷ್ಠವಾಗಿರುವುದರಿಂದ ಪುರುಷರು ಮಹಿಳೆಯರಿಗಿಂತಲೂ ಒಂದು ಕೈ ಮುಂದಾದರೂ, ಮಹಿಳೆಯರು ಇದರಿಂದ ಎದೆಗುಂದದೆ ಪುಲ್-ಅಪ್ಗಳನ್ನು ಪ್ರಾರಂಭಿಸಿ ಬಿಡಬೇಕು.ಮಹಿಳೆಯರ ಹಾಗೂ ಪುರುಷರ ದೇಹಗಳ ವ್ಯತ್ಯಾಸವನ್ನು, ಪುಲ್-ಅಪ್ಗಳನ್ನು ಮಾಡದಿರಲು ಒಂದು ನೆಪವಾಗಿ ಬಳಸದೆ, ಅದನ್ನೇ ಕಾರಣವಾಗಿಟ್ಟುಕೊಂಡು ಪುಲ್-ಅಪ್ಗಳನ್ನು ಮಹಿಳೆಯರು ಪ್ರಾರಂಭಿಸಿಬಿಡಬೇಕು. 

ನವೀನವಾಗಿ ಪುಲ್-ಅಪ್ಗಳನ್ನು ಆರಂಭಿಸುವವರಿಗೆ ಎರಡು-ಮೂರು ಪುಲ್ ಅಪ್ಗಳಿಗಿಂತಲೂ ಹೆಚ್ಚಾಗಿ ಮಾಡಲಾಗುವುದಿಲ್ಲ. ಇದು ಕೃಶವಾದ ತೋಳುಗಳಿಂದ, ಹೆಚ್ಚಿನ ದೇಹದ ತೂಕದಿಂದ, ನೋವಿನಿಂದ ಅಥವಾ ಶುದ್ಧ ಶೋಂಭೇರಿತನದಿಂದಲೂ ಆಗಿರಬಹುದು. ಮಹಿಳೆಯರು ಜಿಮ್ಗೆ ತೆರಳಿದಾಗ ಹೃದಯಕ್ಕೆ ಸಂಬಂಧಪಟ್ಟ ಕಾರ್ಡಿಯೊ ವ್ಯಾಯಾಮಗಳನ್ನು ಮಾಡಿ, ತೂಕವನ್ನು ಎತ್ತದೆ ಸುಮ್ಮನಿದ್ದು ಬಿಡುತ್ತಾರೆ. ತೂಕಗಳನ್ನು ಎತ್ತುವುದು ಎಲ್ಲರ ಸ್ವಂತ ಅಯ್ಕೆಗೆ ಬಿಟ್ಟಿದ್ದರೂ, ನಮ್ಮ ತೂಕವನ್ನು ನಾವೇ ಎತ್ತುವಷ್ಟು ಸಮರ್ಥರಾಗಿರಬೇಕು. ಇದರಿಂದ ದೇಹದ ಮೇಲ್ಭಾಗವು ಸುಸ್ಥಿತಿಯಲ್ಲಿರುವುದಲ್ಲದೆ ಬಲಿಷ್ಠವಾಗಿಯೂ ಆಗುತ್ತದೆ.

 

ಮಹಿಳೆಯರಿಗೆ ಪುಲ್-ಅಪ್ಗಳು ಸುರಕ್ಷಿತವಾಗಿರುತ್ತವೆಯೆ?

ಪುಲ್-ಅಪ್ಗಳು ಹೊಟ್ಟೆಯ ಸ್ನಾಯುಗಳ ಮೇಲೆ ಕೆಲಸ ಮಾಡುತ್ತವೆ ಮತ್ತು ಕೆಲವು ಮಹಿಳೆಯರಿಗೆ ಇದರಿಂದ ತೀವ್ರ ವೇದನೆಯುಂಟಾಗಬಹುದಾದರೂ ಇದರಿಂದ ಯಾವ ಹಾನಿಯೂ ಆಗುವುದಿಲ್ಲ. ನಿಮ್ಮ ವ್ಯಾಯಾಮದಲ್ಲಿ ಯೋಗಾಭ್ಯಾಸವನ್ನು ಸೇರಿಸಿಕೊಂಡರೆ ಕೆಲಸ ಬಹಳ ಸುಲಭವಾಗಿ ಆದಂತೆಯೆ.

 

ಉತ್ತಮ ಪುಲ್-ಅಪ್ಗಳಿಗಾಗಿ ಯೋಗ

ಯೋಗ ಒಂದು ಪ್ರಾಚೀನವಾದ ಪ್ರಕ್ರಿಯೆಯಾಗಿದ್ದು, ಪ್ರಾಣಾಯಾಮ ಹಾಗೂ ದೈಹಿಕ ವ್ಯಾಯಾಮಗಳ ಮೂಲಕ ಸಮಗ್ರವಾದ ಜೀವನಶೈಲಿಯನ್ನು ಇದು ಪ್ರೋತ್ಸಾಹಿಸುತ್ತದೆ. ಈ ಸರಳವಾದ ಯೋಗಾಭ್ಯಾಸಗಳನ್ನು ಮಾಡುವುದರಿಂದ ಮಹಿಳೆಯರು ಸುಲಭವಾಗಿ ಪುಲ್-ಅಪ್ಗಳನ್ನು ಮಾಡಬಹುದು:

ಅಧೋಮುಖಶ್ವಾನಾಸನ

ಕೆಳಮುಖ ಮಾಡಿ ನಾಯಿಯ ಭಂಗಿಯಲ್ಲಿರುವ ಈ ಯೋಗಾಸನವು ತೋಳುಗಳನ್ನು ಹಾಗೂ ಭುಜಗಳನ್ನು ಬಲಪಡಿಸುತ್ತದೆ. ಈ ಯೋಗಾಸನವು ಸ್ನಾಯುಗಳನ್ನು ಸುಸ್ಥಿತಿಯಲ್ಲಿಟ್ಟು ದೇಹವನ್ನು ಪುನಶ್ಚೇತಗೊಳಿಸುತ್ತದೆ.

ಪೂರ್ವೋತ್ತಾಸನ

ಪೂರ್ವೋತ್ತಾಸನವು ಕಣಕೈಗಳನ್ನು, ತೋಳುಗಳನ್ನು, ಭುಜಗಳನ್ನು, ಬೆನ್ನನ್ನು ಮತ್ತು ಬೆನ್ನಮೂಳೆಯನ್ನು ಬಲ ಪಡಿಸುತ್ತದೆ. ಹೊಟ್ಟೆಯ ಅಂಗಾಂಗಗಳನ್ನು ಇದು ವಿಸ್ತರಣಗೊಳಿಸುವುದರಿಂದ ಪುಲ್-ಅಪ್ಗಳನ್ನು ಮಾಡುವಾಗ ಉಂಟಾಗುವ ಅಹಿತ ವೇದನೆಯನ್ನು ಕಡಿಮೆ ಮಾಡುವುದು.

ಭುಜಂಗಾಸನ

ಭುಜಂಗಾಸನ ಅಥವಾ ಹಾವಿನ ಭಂಗಿಯು ಭುಜಗಳನ್ನು ತೆರೆಸುತ್ತದೆ, ಹೊಟ್ಟೆಯ ಸ್ನಾಯುಗಳನ್ನು ಸುಸ್ಥಿತಿಯಲ್ಲಿಟ್ಟು ಬೆನ್ನನ್ನು ಬಲಿಷ್ಠವಾಗಿಸುತ್ತದೆ. ನಿಮ್ಮ ಮೇಲು ಹಾಗೂ ಕೆಳ ಬೆನ್ನಿನ ನಮ್ಯತೆಯನ್ನು ಇದು ಹೆಚ್ಚಿಸುವುದರಿಂದ ನೀವು ತೂಕವನ್ನು ಎತ್ತುವಾಗ ಪಡುವ ಕಷ್ಟವನ್ನು ಇದು ಹಗುರವಾಗಿಸುತ್ತದೆ

ಮಾರ್ಜರಿಆಸನ

ಮಾರ್ಜರಿ ಆಸನದಿಂದ ಕಣಕೈ ಹಾಗೂ ಭುಜಗಳು ಬಲಿಷ್ಠವಾಗುತ್ತವೆ ಮತ್ತು ಪುಲ್-ಅಪ್ಗಳನ್ನು ಮಾಡುಲು ಸಹಾಯಕವಾಗಿರುತ್ತದೆ. ಹೊಟ್ಟೆಯ ಭಾಗವನ್ನು ಸುಸ್ಥಿತಿಯಲ್ಲಿಟ್ಟು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.

 

ಪ್ರಾರಂಭ ಮಾಡುವವರಿಗೆ ಪುಲ್-ಅಪ್ಗಳು

ಪ್ರಾರಂಭದಲ್ಲಿ ಪುಲ್-ಅಪ್ಗಳನ್ನು ಮಾಡುವುದು ಕಷ್ಟದ ಕೆಲಸದಂತೆ ಕಂಡರೂ ಅದರಿಂದ ಉಂಟಾಗುವ ಲಾಭಗಳು, ಅನುಭವಿಸುವ ಕಷ್ಟಗಳಿಗಿಂತಲೂ ಬಲು ಹೆಚ್ಚು. ಬಾರಿನ ಕೆಳಗೆ ಒಂದು ಕುರ್ಚಿಯನ್ನು ಅಥವಾ ಒಂದು ಸ್ಟೂಲನ್ನು ಇಟ್ಟು ನಿಲ್ಲಬಹುದು. ಬಾರಿನಿಂದ ತೂಗುತ್ತಾ ನಿಮ್ಮನ್ನು ಮೇಲಕ್ಕೆತ್ತಲು ಪ್ರಯತ್ನಿಸಿ. ನೀವು ಮೇಲಕ್ಕೆ ಹೋಗಲು ನಿಮ್ಮ ಸ್ನೇಹಿತರ ಸಹಾಯವನ್ನೂ ತೆಗೆದುಕೊಳ್ಳುಬಹುದು.

ಮೊದಲನೆಯ ವಾರದಂದು 5-10 ಪುಲ್-ಆಪ್ಗಳನ್ನು ಮಾಡಿ. ನಂತರ 5-10 ಪುಲ್-ಅಪ್ಗಳನ್ನು ಎರಡು ಸುತ್ತಿನಲ್ಲಿ ಮಾಡಿ. ನಂತರ ನಿಮ್ಮ ಪುಲ್-ಅಪ್ಗಳನ್ನು ಮುಂದುವರಿಸುತ್ತಾ ಒಂದು ಸುತ್ತಿನಲ್ಲಿ 20ಸಲ ಮಾಡುವಷ್ಟು ಅಭ್ಯಾಸ ಮಾಡಿಕೊಳ್ಳಿ. ನಿರಂತರ ಅಭ್ಯಾಸದಿಂದ ಬಹಳ ಸುಲಭವಾಗಿ ಪುಲ್-ಅಪ್ಗಳನ್ನು ಮಾಡಬಹುದು.

ನಿರಂತರವಾಗಿ ಸಹನೆಯಿಂದ ಮಾಡುವುದರ ಫಲ ಸಿಗುತ್ತದೆ!

ರೋಮನ್ನು ಒಂದೇ ದಿನದಲ್ಲಿ ನಿರ್ಮಿಸಲಿಲ್ಲ. ಅದೇ ರೀತಿಯಾಗಿ ನಿಮ್ಮ ದೇಹದಾಢ್ರ್ಯತೆಯು ಒಂದೇ ದಿನದಲ್ಲಿ ಹೆಚ್ಚುವುದಿಲ್ಲ. ಸರಿಯಾಗಿ ಪುಲ್-ಅಪ್ಗಳನ್ನು ಮಾಡಲು ಸ್ವಲ್ಪ ಸಮಯ ಹಿಡಿಯುತ್ತದೆ. ಈಗಿರುವ ನಿಮ್ಮ ದೇಹದ ದಾಢ್ರ್ಯತೆಯ  ಮೇಲೆಯೂ ಎಲ್ಲವೂ ಅವಲಂಬಿಸಿದೆ. ನಿಮ್ಮ ವ್ಯಾಯಾಮದ ಸಮಯದಲ್ಲಿ ಒಂದಿಷ್ಟು ನಿರ್ದಿಷ್ಟವಾದ ಸಮಯವನ್ನು ಪುಲ್-ಅಪ್ಗೆಂದು ಮೀಸಲಾಗಿಟ್ಟು, ನಿರಂತರ ಅಭ್ಯಾಸ ಮಾಡುತಲಿದ್ದರೆ ಇತರರಿಗಿಂತಲೂ ನೀವು ಸುಲಭವಾಗಿ ಪುಲ್-ಅಪ್ಗಳನ್ನು ಮಾಡಬಲ್ಲಿರಿ.

ಮೇಲುಗೈ

ಮಹಿಳೆಯರು ಮಾನಸಿಕವಾಗಿ ಹೆಚ್ಚು ಬಲಿಷ್ಠರು ಮತ್ತು ಪುರುಷರಿಗಿಂತಲೂ ಹೆಚ್ಚು ದೃಢತೆಯನ್ನು ಹೊಂದಿರುತ್ತಾರೆ. ಅದಲ್ಲದೆ ತಮ್ಮ ಗುರಿಗಳನ್ನು ಸಾಧಿಸುವುದರಲ್ಲಿ ಮಹಿಳೆಯರು ಹೆಚ್ಚು ಏಕಾಗ್ರತೆಯನ್ನು ಹೊಂದಿರುತ್ತಾರೆ. ಸಾಧಿಸಲು ಸಾಧ್ಯವಾಗುವಂತಹ ಗುರಿಯನ್ನು ಹೊಂದಿ ಮತ್ತು ಅದಕ್ಕಾಗಿ ಶ್ರಮಿಸಿ. ನಿಮ್ಮ ಅಭ್ಯಾಸದಲ್ಲಿ ಸ್ಥಿರವಾಗಿರಿ. ಆಗ ಬಾರನ್ನು ನೀವೂ ಮೇಲಕ್ಕೆತ್ತಿ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಮಹಿಳೆಯರು ಪುರುಷರಿಗೆ ಹೇಗೆ ಸಮಾನರು ಎಂದು ತೋರಿಸಿ!

 

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು  iಟಿಜಿo@sಡಿisಡಿiಥಿogಚಿ.iಟಿ ನಲ್ಲಿ ಸಂಪರ್ಕಿಸಿ.