ಪದ್ಮಾಸನ

 

ಈ ಭಂಗಿಯಲ್ಲಿ ಧ್ಯಾನವು ಆಳವಾಗಿದ್ದು, ಮನಸ್ಸು ಸಮಸ್ಥಿತಿಯಲ್ಲಿರುವುದಲ್ಲದೇ ಶರೀರದ ಕೆಲವು ವ್ಯಾಧಿಗಳನ್ನು  ಉಪಶಮನಗೊಳಿಸುವುದು. ನಿಯಮಿತವಾದ ಅಭ್ಯಾಸದಿಂದ ಕಮಲದ ರೀತಿಯಲ್ಲಿ ನಮ್ಮ ವ್ಯಕ್ತಿತ್ವವೂ ಸಂಪೂರ್ಣ ವಿಕಸನವಾಗುವುದು.

 

ಪದ್ಮಾಸನದಲ್ಲಿ ಕೂರುವುದು ಹೇಗೆ?

  1. ನೆಲದ ಮೇಲೆ ಎರಡೂ ಕಾಲುಗಳನ್ನು ಚಾಚಿ ಬೆನ್ನು ನೇರ ಮಾಡಿ ಕುಳಿತುಕೊಳ್ಳಿ.
  2. ಬಲಮೊಣಕಾಲನ್ನು ಬಗ್ಗಿಸಿ ಎಡ ತೊಡೆಯ ಮೇಲೆ ಇಡಿ. ಕಾಲಿನ ಹಿಮ್ಮಡಿಯು ಕಿಬ್ಬೊಟ್ಟೆಗೆ ಹತ್ತಿರವಾಗಿರುವಂತೆ ಗಮನವಿರಲಿ ಮತ್ತು ಪಾದ ಮೇಲ್ಮುಖವಾಗಿರಬೇಕು.
  3. ಎಡ ಮೊಣಕಾಲಿನ ಜೊತೆ ಮೇಲೆ ಹೇಳಿದಂತೆ ಪುನರಾವರ್ತಿಸಿ.
  4. ಎರಡೂ ಕಾಲುಗಳನ್ನು ಕತ್ತರಿಯಾಕಾರದಲ್ಲಿರಿಸಿ ಪಾದಗಳನ್ನು ಮೇಲ್ಮುಖವಾಗಿ ಎದುರುಬದುರು ತೊಡೆಗಳ ಮೇಲಿಟ್ಟು ಕೈಗಳನ್ನು ಮುದ್ರೆಯೊಂದಿಗೆ ಮೊಣಕಾಲಿನ ಮೇಲಿಡಿ.
  5. ತಲೆ ಹಾಗೂ ಬೆನ್ನೆಲುಬು ನೇರವಾಗಿರಲಿ.
  6. ಧೀರ್ಘವಾದ ಆಳವಾದ ಉಸಿರಾಟವಿರಲಿ.
 

ಪದ್ಮಾಸನದಲ್ಲಿ ಮುದ್ರೆಗಳು

ಮುದ್ರೆಗಳು ದೇಹದಲ್ಲಿನ ಶಕ್ತಿ ಸಂಚಾರವನ್ನು ಚುರುಕುಗೊಳಿಸುತ್ತವೆ. ಮುದ್ರೆಗಳನ್ನು ಪದ್ಮಾಸನದಲ್ಲಿ ಮಾಡುವುದರಿಂದ ಅತ್ಯುತ್ತಮ ಪರಿಣಾಮ ಸಿಗುವುದು. ಒಂದೊಂದು ಮುದ್ರೆಯು ಮತ್ತೊಂದು ಮುದ್ರೆಗಿಂತ ಭಿನ್ನವಾದ ಪ್ರತಿಫಲವನ್ನು ಕೊಡುವುದು. ಪದ್ಮಾಸನದಲ್ಲಿ ಚಿನ್ಮುದ್ರೆ, ಚಿನ್ಮಯ ಮುದ್ರೆ, ಆದಿ ಮುದ್ರೆ ಅಥವಾ ಬ್ರಹ್ಮ ಮುದ್ರೆಗಳೊಂದಿಗೆ ಧ್ಯಾನವನ್ನು ಆಳವಾಗಿಸಬಹುದು. ಈ ಮುದ್ರೆಗಳನ್ನು ದೀರ್ಘ ಉಸಿರಾಟದೊಂದಿಗೆ ಅಭ್ಯಾಸ ಮಾಡುತ್ತಾ  ದೇಹದಲ್ಲಿ ಉಂಟಾಗುವ ಶಕ್ತಿ ಸಂಚಲವನ್ನು ಗಮನಿಸಿ.

 

ಆರಂಭದ ಹಂತದಲ್ಲಿರುವವರಿಗೆ ಪದ್ಮಾಸನ

ಎರಡೂ ಕಾಲುಗಳನ್ನು ಒಂದಕ್ಕೊಂದು ಜೋಡಿಸಿ ಕುಳಿತುಕೊಳ್ಳಲು ತೊಂದರೆ ಇದ್ದಲ್ಲಿ ಅರ್ಧಪದ್ಮಾಸನದಲ್ಲಿಯೂ ಸಹ ಕುಳಿತುಕೊಳ್ಳಬಹುದು. ಯಾವುದಾದರೂ ಒಂದು ಪಾದವನ್ನು ಮೇಲ್ಮುಖವಾಗಿ ಮತ್ತೊಂದು ತೊಡೆಯ ಮೇಲಿಟ್ಟು ಕೂರಬಹುದು. ಇದನ್ನು ಅಭ್ಯಾಸ ಮಾಡುತ್ತಾ ಕ್ರಮೇಣ ಸ್ನಾಯುಗಳು ಸಡಿಲಗೊಂಡು ಹೊಂದಿಕೊಳ್ಳುವುವು

 

ಪದ್ಮಾಸನದಿಂದಾಗುವ ಪ್ರಯೋಜನಗಳು

  • ಜೀರ್ಣಶಕ್ತಿ ಹೆಚ್ಚುತ್ತದೆ
  • ಸ್ನಾಯುಗಳ ಮೇಲಿನ ಒತ್ತಡವು ಕಡಿಮೆಯಾಗಿ ರಕ್ತದೊತ್ತಡವನ್ನು ಸಹಜಸ್ಥಿತಿಯಲ್ಲಿಡುವುದು
  • ಮನಸ್ಸು ಪ್ರಶಾಂತವಾಗುವುದು
  • ಗರ್ಭಿಣಿ ಸ್ತ್ರೀಯರಿಗೆ ಪ್ರಸವದ ಸಮಯದಲ್ಲಿ ಸಹಕಾರಿ
  • ಋತುಸ್ರಾವದ ತೊಂದರೆಗಳಿಂದ ಉಪಶಮನ
  • ಮೊಣಕೈ ಅಥವಾ ಮೊಣಕಾಲುಗಳಲ್ಲಿ ಗಾಯ ಅಥವಾ ತೊಂದರೆ ಇದ್ದಲ್ಲಿ ನುರಿತ ಯೋಗ ಶಿಕ್ಷಕರ ಸಲಹೆಯ ಮೇರೆಗೆ ಮಾಡತಕ್ಕದ್ದು
 

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು   info@artoflivingyoga.in ನಲ್ಲಿ ಸಂಪರ್ಕಿಸಿ.