ಒತ್ತಡ ಮುಕ್ತ ಬೋಧನೆ - ವಿಚಾರಗೋಷ್ಠಿ

"ಒತ್ತಡಮುಕ್ತ ಬೋಧನೆಯ ವಿಚಾರಗೋಷ್ಠಿ"ಯು ಸಂಕ್ಷಿಪ್ತ ಆದರೆ ಪ್ರಭಾವಶಾಲಿಯಾದ ಒಂದು ಘಂಟೆಯ ಕಾಲದ ಶಿಬಿರ. ಈ ಶಿಬಿರವು ಶಿಕ್ಷಣ ವೃತ್ತಿಯಲ್ಲಿ ಕಂಡುಬರುವ ಒತ್ತಡ ಹಾಗೂ ಅದರಿಂದ ಹೊರಬರುವ ಬಗೆಯನ್ನು ಅನ್ವೇಷಿಸುತ್ತದೆ. ಒತ್ತಡವು ಶಿಕ್ಷಕರ ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಒತ್ತಡದ ಕಾರಣಗಳು ಹಲವಾರು, ಮುಖ್ಯವಾಗಿ:

  • ವಿದ್ಯಾರ್ಥಿಗಳಲ್ಲಿ ಕುಗ್ಗುತ್ತಿರುವ ಗಮನಶಕ್ತಿ/ಏಕಾಗ್ರತೆ
  • ದೊಡ್ಡ ವರ್ಗಗಳ ನಿರ್ವಹಣೆ
  • ಫಲಿತಾಂಶವನ್ನು ಆಧರಿಸಿ ಕಾರ್ಯವೈಖರಿಯನ್ನು ಮಾಪನ ಮಾಡುವ ವ್ಯವಸ್ಥೆ
  • ಪಠ್ಯಕ್ರಮವನ್ನು ಮುಗಿಸುವ ಆತಂಕ 
  •  ಕ್ಲಿಷ್ಟ ಭಾವನೆ ಹಾಗೂ ವರ್ತನೆಗಳನ್ನು ಹೊಂದಿರುವ ವಿದ್ಯಾರ್ಥಿಗಳು

ಒತ್ತಡದ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಂಡಾಗ, ಶಿಕ್ಷಕರಿಗೆ ತಮ್ಮ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಲು ಸುಲಭವಾಗುತ್ತದೆ. ಇದರಿಂದ ಒತ್ತಡವು ಕಡಿಮೆಯಾಗಿ ಜೀವನದ ಗುಣಮಟ್ಟವು ಉತ್ತಮವಾಗಿ, ಶಿಕ್ಷಕರು ಹೆಚ್ಚು ಆರೋಗ್ಯಕರವಾಗಿ ಮತ್ತು ಸಂತೋಷವಾಗಿ ತಮ್ಮ ಶಿಕ್ಷಣದ ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆಯಬಹುದು.

ಪ್ರಯೋಜನಗಳು

  • ಒತ್ತಡದ ಕಾರಣಗಳ ಬಗ್ಗೆ ಅರಿವು
  • ಒತ್ತಡದಿಂದ ಬಿಡುಗಡೆ
  • ಭಿನ್ನವಾದ ರೀತಿಯ ಮಕ್ಕಳ್ಳನ್ನು ನಿಭಾಯಿಸಲು ಸಲಹೆಗಳು

ಮೇಲ್ನೋಟ

ಶಿಕ್ಷಕರಿಗೆ ಒಂದು ಘಂಟೆಯ ವಿಚಾರಗೋಷ್ಠಿ

ಕಾರ್ಯಕ್ರಮದ ರೂಪರೇಖೆ

  • ಶಿಕ್ಷಕರಲ್ಲಿ ಒತ್ತಡದ ಮೂಲಕಾರಣವನ್ನು ಗುರುತಿಸುವುದು
  • ಶಾರೀರಿಕ ಒತ್ತಡವನ್ನು ನಿವಾರಿಸಲು ಸರಳವಾದ ವ್ಯಾಯಾಮಗಳು
  • ಮಾನಸಿಕ ಒತ್ತಡವನ್ನು ನಿವಾರಿಸಲು ಕೆಲವು ಉಸಿರಾಟದ ಪ್ರಕ್ರಿಯೆಗಳು 
  • ಭಿನ್ನವಾದ ರೀತಿಯ ಮಕ್ಕಳನ್ನು ನಿಭಾಯಿಸಿ, ಅವರಲ್ಲಿನ ಉತ್ತಮ ಗುಣಗಳನ್ನು ಹೊರತರಲು ಸಲಹೆಗಳು
  • ಬೋಧನೆಯನ್ನು ಒತ್ತಡ ಮುಕ್ತವನ್ನಾಗಿಸುವುದು