ನಿಮ್ಮ ಮಗುವನ್ನು ಅರ್ಥ ಮಾಡಿಕೊಳ್ಳಿ (ನೋ ಯುವರ್ ಚೈಲ್ಡ್ )

ಚಿಕ್ಕ ಮಕ್ಕಳು ಮತ್ತು ಹದಿಹರೆಯದವರೊಂದಿಗೆ ಪೋಷಕರು ಹೇಗೆ ಉತ್ತಮವಾದ ಬಾಂಧವ್ಯವನ್ನು ಹೊಂದಬಹುದು ? ಸಣ್ಣ ಮಕ್ಕಳು ಮತ್ತು ಯುವಕರು, ಅವರ ವರ್ತನೆ ಮತ್ತು ಅವರ ಮೇಲೆ ಪ್ರಭಾವ ಬೀರುವ ಸಮಸ್ಯೆಗಳ ಬಗ್ಗೆ ಜೀವನ ಕಲಾ ಸಂಸ್ಥೆಯು ಒಂದು ಲಘು ಶಿಬಿರವನ್ನು ಅರ್ಪಿಸುತ್ತದೆ. ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರಿಗೆ ಸ್ಪಂದಿಸುವ ಸರಳ ಮಾರ್ಗಗಳನ್ನು ಅರಿತುಕೊಂಡು ಮಕ್ಕಳ ಪೋಷಣೆಯನ್ನು ದೃಢ, ಹಿತಕರ ಹಾಗೂ ಮಜವಾಗಿ ನಿಭಾಯಿಸಲು ಕಲಿಯಿರಿ.
ಈ ಶಿಬಿರವು 8 ರಿಂದ 13 ವರ್ಷದ ಮಕ್ಕಳ ಪೋಷಕರಿಗೆ ನಡೆಸಲಾಗುತ್ತದೆ. 

ಮಕ್ಕಳ ದೃಷ್ಟಿಕೋನವು ಹಿರಿಯರಿಗಿಂತ ಭಿನ್ನವಾಗಿರುತ್ತದೆ. ಮಕ್ಕಳ ನೋಟವು ಅಚ್ಚರಿ,ವಿಸ್ಮಯ, ಸಡಗರ, ಮುಗ್ಧತೆ, ತುಂಟತನ ಮತ್ತು ಸರಳತೆಗಳಿಂದ ಕೂಡಿರುತ್ತದೆ. ಮೊದಲಿನ ಕೆಲವು ವರ್ಷಗಳಲ್ಲಿ ಮುಖ್ಯವಾಗಿ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಪರಿಸರವನ್ನು ರಚಿಸುತ್ತಾರೆ. ಆದರೂ ಮಕ್ಕಳ ಮತ್ತು ಹಿರಿಯರ ದೃಷ್ಟಿಕೋನದಲ್ಲಿ ವ್ಯತ್ಯಾಸವಿರುತ್ತದೆ.  ಸಮಯ ಸರಿದಂತೆ, ಮಗುವು ನಿಧಾನವಾಗಿ ಪರಿಸರದಿಂದ ಹೆಚ್ಚು ಗ್ರಹಿಸತೊಡಗುತ್ತದೆ ಹಾಗೂ ತನ್ನ ಕಲ್ಪನೆಗಳನ್ನು ವ್ಯಕ್ತಪಡಿಸುತ್ತದೆ. 

ತಪ್ಪು ಕಲ್ಪನೆಗಳ ಕಾರಣದಿಂದ ಹಲವು ಬಾರಿ ಮಕ್ಕಳು ತಮನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಭಾವಿಸುತ್ತಾರೆ ಮತ್ತು ಪೋಷಕರಲ್ಲಿ ಮಗುವಿನ ವರ್ತನೆಯ ಬಗ್ಗೆ ಗೊಂದಲವುಂಟಾಗಿ ಅವರು ಹತಾಶರಾಗುತ್ತಾರೆ. ಈ ವ್ಯತ್ಯಾಸವು ಆಳವಾದಲ್ಲಿ, ಪೋಷಕರ ಮತ್ತು ಮಕ್ಕಳ ನಡುವಿನ ಸಂಬಂಧದ ಗುಣಮಟ್ಟವು ಕ್ಷೀಣಿಸಿ, ಕುಟುಂಬದ ಸದಸ್ಯರಲ್ಲಿ ಆತ್ಮೀಯತೆಯ ಅಭಾವವುಂಟಾಗಬಹುದು. 

ಈ ಶಿಬಿರವು ಪೋಷಕರಿಗೆ ಅವರ ಮಕ್ಕಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ತಮ್ಮ ಕೌಟುಂಬಿಕ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಈ ಶಿಬಿರವು  ಮಕ್ಕಳ ವರ್ತನೆಯ ವಿನ್ಯಾಸಗಳ  ಮೂಲ ಕಾರಣವನ್ನು ಕಂಡುಹಿಡಿದು, ಪೋಷಕರಿಗೆ ಅವರ ಮಕ್ಕಳ ಬಗ್ಗೆ ತಿಳುವಳಿಕೆಯನ್ನು ನೀಡಿ ಅವರ ಮಕ್ಕಳು ಪೂರ್ಣವಾಗಿ ಅರಳುವಂತೆ ಸಹಾಯ ಮಾಡುತ್ತದೆ.