ಬುದ್ಧನು ಒಬ್ಬ ನಾಸ್ತಿಕನಾಗಿದ್ದನೆ?

ಒಬ್ಬ ಶುದ್ಧ ನಾಸ್ತಿಕನು ದೊರಕುವುದು ದುರ್ಲಭ. ನಾಸ್ತಿಕನೆಂದರೆ ಯಾವುದು ತನ್ನ ತಿಳುವಳಿಕೆಯ ಹಿಡಿತಕ್ಕೆ ಸಿಗುವುದಿಲ್ಲವೋ, ತನಗೆ ಗೋಚರವಾಗುವುದಿಲ್ಲವೋ ಅವುಗಳನ್ನು ನಂಬುವುದಿಲ್ಲ. ಜೀವನ ಪೂರ್ತಿಯಾಗಿ ಎಲ್ಲವೂ ಅರ್ಥ್ವಾಗುವಂತಹುದಲ್ಲ, ಕೈಗೆ ಸಿಗುವಂತಹುದಲ್ಲ, ಈ ವಿಶ್ವವೂ ಕೂಡ ಅಷ್ಟೆ. ಒಂದು ವ್ಯಾಪಾರವಾಗಿರಲಿ, ವಿಜ್ಞಾನ ಅಥವಾ ಕಲೆಯಾಗಲಿ ಎಲ್ಲದರಲ್ಲಿ ಸ್ವಲ್ಪ ಮಟ್ಟದ ಊಹೆ, ಒಂದು ಸಾಧ್ಯತೆ, ಒಂದು ಕಲ್ಪನೆ, ಆಂತರಿಕ ಧ್ವನಿ (intution) ಇವುಗಳನ್ನು ಒಳಗೊಂಡಿರುತ್ತದೆ. ಅವೆಲ್ಲವೂ ಆಧ್ಯಾತ್ಮಿಕವಾದವುಗಳಾಗಿ ಸ್ವಾಭಾವಿಕವಾಗಿ ಸೂಕ್ಷ್ಮವಾಗಿವೆ. ಒಬ್ಬ ನಾಸ್ತಿಕನು ಯವಾಗ ಒಪ್ಪಿಕೊಳ್ಳುತ್ತಾನೆಯೋ, ಎಲ್ಲೋ ಒಂದು ಮೂಲೆಯಲ್ಲಿ ವಿವರಿಸಲು ಸಾಧ್ಯವಾಗದಿರುವುದು ಇದೆಯೆಂದು ಒಪ್ಪಿಕೊಳ್ಳುತ್ತಾನೆಯೋ ಆಗ ಅವನು ನಾಸ್ತಿಕತೆಯಿಂದ ವಿಮುಖನಾಗುತ್ತಾನೆ. ಒಬ್ಬ ಬುದ್ಧಿವಂತನು ಜೀವನದ ಮತ್ತು ವಿಶ್ವದ ನಿಗೂಢತೆಯನ್ನು ನಿರಾಕರಿಸಲಾರ, ಆದ್ದರಿಂದ ಪ್ರಾಮಣಿಕವಾಗಿ ಅವನು ನಾಸ್ತಿಕನಾಗಲಾರ! ನಾಸ್ತಿಕರೆಂದು ಕರೆಯಲ್ಪಡುವ ಇವರು ದೇವರ ಬಗ್ಗೆ ಇರುವ ಕೆಲವು ಅನಿಸಿಕೆ(concepts)ಗಳನ್ನು ಮಾತ್ರ ನಿರಾಕರಿಸುತ್ತಾರೆ.

ಪ್ರಶ್ನೆ : ಬುದ್ಧ ಒಬ್ಬ ನಾಸ್ತಿಕನಾಗಿದ್ದನೆ ?

ಶ್ರೀ ಶ್ರೀ : ಒಂದು ರೀತಿಯಲ್ಲಿ 'ಇಲ್ಲ', ಏಕೆಂದರೆ ಅವರು ಶೂನ್ಯವನ್ನು (ಖಾಲಿತನವನ್ನು) ಪ್ರತಿಪಾದಿಸಿದರು, ಅದು ಒಬ್ಬ ನಾಸ್ತಿಕನಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ 'ಹೌದು', ಏಕೆಂದರೆ ಅವರು ದೇವರ ಬಗ್ಗೆ ಯಾವ ವಿಚಾರವನ್ನೂ ಹೇಳಲಿಲ್ಲ.

ಪ್ರಶ್ನೆ: ಒಬ್ಬ ನಾಸ್ತಿಕನು ತಾನು ಏನನ್ನು ನೋಡುತ್ತಾನೆಯೋ ಅವನ್ನು ಮಾತ್ರ ನಂಬುತ್ತಾನೆ. ಆದರೆ ಬುದ್ಧ ಹೇಳಿದರು - ನೀನು ನೋಡುವುದೆಲ್ಲ ನಿಜವಲ್ಲ.

ಶ್ರೀ ಶ್ರೀ : ಅದು ಹಾಗಿರುತ್ತಿದ್ದರೆ ಇಂದಿನ ನಾಸ್ತಿಕರೆಲ್ಲ ಬುದ್ಧರಾಗಬಹುದಿತ್ತು.