ಭಯದಿಂದ ಹೊರಬರಲು 3 ರಹಸ್ಯಗಳು

ಒಮ್ಮೆ ನಾನು ಎಲ್ಲರೆದುರು ಮಾತನಾಡಬೇಕಿತ್ತು. ನಾನು ಅದಕ್ಕೆ ತಯಾರಾಗಿರಲಿಲ್ಲ. ನನ್ನೊಳಗೇನೋ ಒಂದು ಭೀತಿಯಿತ್ತು. ನನ್ನ ಹಸ್ತಗಳು ಬೆವರುತ್ತಿದ್ದವು , ಹೃದಯವು ಜೋರಾಗಿ ಬಡಿದುಕೊಳ್ಳುತ್ತಿತ್ತು.  ನಾನು ಓದುತ್ತಿದ್ದ ವಿಷಯದ ಬಗ್ಗೆ ಗಮನವಿಡಲಾಗಲಿಲ್ಲ. ನಾನು ಭಯದಿಂದ ತುಂಬಿದ್ದೇನೆ ಎಂದು ತಿಳಿಯಿತು- ಅಷ್ಟೊಂದು ಜನರ ಎದುರು ಮಾತನಾಡುವ ಭಯ ನನ್ನಲ್ಲಿ ತುಂಬಿತ್ತು. 

ತಕ್ಷಣವೇ ನಾನು ಅವಿತುಕೊಂಡು ಕೆಲ ನಿಮಿಷಗಳು ಧ್ಯಾನ ದೊಳಗೆ ಹೊಕ್ಕೆ. ಕೆಲವು ನಿಮಿಷಗಳ ಆಳವಾದ ಮೌನದಿಂದ ಅದ್ಭುತವಾದ ಬದಲಾವಣೆ ಆಗಿತ್ತು. ನನ್ನ ಆಂತರ್ಯದಲ್ಲಿ ನಾನು ಪ್ರಶಾಂತವಾಗಿ, ವಿಶ್ವಾಸದಿಂದ  ತುಂಬಿ ಹೊರಬಂದೆ. 

ನಾನು ಅಳಿಸಿ ಹೋಗುತ್ತೇನೆಂಬ ಭಯ ನನ್ನಲ್ಲಿತ್ತು ಮತ್ತು ಪ್ರಕೃತಿ ಮಾತೆಯೇ ಎಲ್ಲರೊಳಗೂ ಇರಿಸಿರುವ ಭಯವಿದು ಎಂಬುದೇ ನನ್ನ ಅಭಿಮತ. ನಾನು ಹೆಚ್ಚಾಗಿ ಧ್ಯಾನ ಮಾಡಿದಷ್ಟೂ, ಈ ಭಯವನ್ನು ಹೋಗಲಾಡಿಸುವ ಒಂದೇ ದಾರಿಯೆಂದರೆ, ನನ್ನ ಬಗೆಗಿನ ದೃಷ್ಟಿಕೋನವನ್ನು ವಿಶಾಲವಾಗಿಸಿಕೊಳ್ಳುವುದು ಎಂದು ಅರ್ಥ ಮಾಡಿಕೊಂಡಿದ್ದೇನೆ. ನನ್ನ ನಿಜವಾದ ಗುರುತು ನನ್ನ ದೇಹದ ಮೂಲಕವಾಗಿರದೆ, ನನ್ನೊಳಗಿರುವ ಚೈತನ್ಯ ಎಂದು ಕಂಡುಕೊಂಡಿದ್ದೇನೆ.

ಈ ಭಯವನ್ನು ನಿಭಾಯಿಸುವ ಮತ್ತೊಂದು ರೀತಿಯೆಂದರೆ ವಿಶ್ವಾಸದ ಮೂಲಕ. ಕೇವಲ ಉತ್ತಮವಾದದ್ದೇ ನನಗೆ ಆಗುತ್ತದೆ ಎಂಬ ವಿಶ್ವಾಸ. ಭಯದೊಡನೆ ಸೆಣಸಾಡಲು ಈ ಎರಡು ಆಲೋಚನೆಗಳು ನನ್ನ ಬಲದ ಆಧಾರವಾದವು.

ವಿಶ್ವಾಸದ ಅಭಾವದಿಂದಲೂ ಭಯವುಂಟಾಗುತ್ತದೆ. ಅಂತರದಿಂದಲೂ

 ಅನಿಶ್ಚಿತತೆ ಮತ್ತು ಭಯವುಂಟಾಗುತ್ತದೆ. ಈ ರೀತಿಯ ಭಯವು ಯಾವುದೇ ಕುಟುಂಬದ ಅಥವಾ ಸಮಾಜದ ಅಭಿವೃದ್ಧಿಗೆ ಹಾನಿಕಾರಕ. ಒಂದು ದೇಶದ ಜನರು ಒಬ್ಬರನ್ನೊಬ್ಬರು ನಂಬದಿದ್ದಾಗ ಭಯವಿರುತ್ತದೆ. ಕಾನೂನಿನ ಭಯವಿರಬಹುದು, ಆದರೆ ಸದಾ ಭಯವನ್ನಿಟ್ಟುಕೊಂಡು ಸಮಾಜದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳ ಭಯ, ನಿಮಗಿಂತಲೂ ಹಿರಿಯರಾದವರ ಭಯ, ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯ, ಶಿಕ್ಷೆಯಾಗುತ್ತದೆಂಬ ಭಯ. ಆದರೆ ವಾಸ್ತವವಾದ ಸತ್ಯವೆಂದರೆ, ಈ ಭಯವನ್ನಿಟ್ಟುಕೊಂಡು ಏನನ್ನೂ ನಿಭಾಯಿಸಲು ಸಾಧ್ಯವಿಲ್ಲ. ಭಯವು ಅವಶ್ಯಕ, ಆದರೆ ಅದು ಊಟದಲ್ಲಿರುವ  ಚಿಟಿಕೆ ಉಪ್ಪಿನಷ್ಟು ಮಾತ್ರವಿರಬೇಕು. ನಿಮಗೆ ನಾನು ಹಿಂದೆ ಹೇಳದ, ಭಯವನ್ನು ಮೀರಿ ನಿಲ್ಲುವ ಮೂರು ರಹಸ್ಯಗಳ ಬಗ್ಗೆ ತಿಳಿಸುತ್ತೇನೆ. ಭಯಮುಕ್ತವಾದ ಜೀವನವನ್ನು ನಡೆಸಿ.

ವಿವಿಧ ರೀತಿಯ ಭಯ :-

  • ಸೋಲಿನ ಭಯ
  • ಮರಣದ ಭಯ
  • ಸಭೆಯಲ್ಲಿ ಮಾತನಾಡುವ ಭಯ
  • ಆತಂಕದಿಂದ ಭಯ
  • ಪರೀಕ್ಷೆಗಳ ಭಯ
  • ಗಾಡಿ ಓಡಿಸುವ ಭಯ
  • ಹಾರುವ ಭಯ
  • ಎತ್ತರದ ಭಯ
  • ಮುಳುಗುವ ಭಯ
  • ತಿರಸ್ಕಾರದ ಭಯ

ಭಯವನ್ನು ಮೀರಿ ನಿಲ್ಲಲು ಹಿಂದೆಂದೂ ಹೇಳದ ಮೂರು ರಹಸ್ಯಗಳು

#೧. ಭಯವನ್ನು ಹೋಗಲಾಡಿಸಲು ಗತದ ಹೊರೆಯನ್ನು ಹೋಗಲಾಡಿಸಿ

ಗತವು ಗತದಲ್ಲೇ ಉಳಿಯಲಿಬಿಡಿ. ಅನೇಕ ಸಲ ಗತದ ಘಟನೆಗಳು ವರ್ತಮಾನದಲ್ಲೂ ಒಂದು ದೊಡ್ಡ ಹೊರೆಯಾಗುತ್ತವೆ. ನಿಮಗೆ ನಾಯಿಗಳನ್ನು ಕಂಡಾಗ ಭಯವಾದರೆ, ಗತದಲ್ಲಿ ಬಹುಶಃ ನಿಮಗೆ ಒಂದು ಅಹಿತಕರವಾದ ಅನುಭವವಾಗಿರಬಹುದು. ಅದೇ ಅನುಭವ ಮತ್ತೆ ಆಗದಿರಲೆಂದು ನಾಯಿಯ ಬಳಿಗೆ ಹೋಗಲು ಹೆದರುತ್ತೀರಿ. 

ಮಕ್ಕಳಿಗೆ ಸಾಮಾನ್ಯವಾಗಿ ಯಾವುದರ ಭಯವೂ ಇರುವುದಿಲ್ಲ, ಏಕೆಂದರೆ ಅವರಲ್ಲಿ ಯಾವ ಸಂಸ್ಕಾರಗಳೂ ಇರುವುದಿಲ್ಲ.  ಆದರೆ ನಾವು ಬೆಳೆದಂತೆ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ಪಡೆಯುತ್ತೇವೆ ಮತ್ತು ಅವು ನಮ್ಮ ಸಂಸ್ಕಾರಗಳಾಗುತ್ತವೆ. ಅವುಗಳಲ್ಲಿ ಕೆಲವು ಸಂಸ್ಕಾರಗಳು ಭಯವಾಗಿ ಮಾರ್ಪಾಟಾಗುತ್ತವೆ. ಧ್ಯಾನವು ಈ ಸಂಸ್ಕಾರಗಳನ್ನು ತೆಗೆದು ಹಾಕಿ, ನಿಮ್ಮ ಆಂತರ್ಯದಿಂದ ನಿಮ್ಮನ್ನು ಮುಕ್ತವಾಗಿಸುತ್ತದೆ. 

" ಕತ್ತಲಲ್ಲಿ ನಡೆಯುವ ಭಯ ನನ್ನಲ್ಲಿತ್ತು. ಹಿಂದಿನಿಂದ ಯಾರೋ ಬಂದು ನನ್ನ ಮೇಲೆ ದಾಳಿ ಮಾಡುತ್ತಾರೆಂಬ ಭೀತಿಯಿತ್ತು ನನ್ನಲ್ಲಿತ್ತು. ನನ್ನ ಸ್ನೇಹಿತೆಯ ಸಲಹೆಯಂತೆ ನಾನು ನಿತ್ಯ ಧ್ಯಾನ ಮಾಡಲಾರಂಭಿಸಿದೆ. ಈಗಾಗಲೇ ಎರಡು ವರ್ಷಗಳು ಕಳೆದಿವೆ ಮತ್ತು ನನ್ನ ಅಭ್ಯಾಸವನ್ನು ನಾನು ಮುಂದುವರೆಸಿದ್ದೇನೆ ಮತ್ತು ಕತ್ತಲಿನಿಂದ ಈಗ ನೀನೆ ಭಯವಾಗುವುದಿಲ್ಲ" ಎಂದರು ರೂಪಲ್ ರಾಣ.

#೨:  ಆತಂಕವನ್ನು ಎದುರಿಸಿ

ಆತಂಕವು ನಿತ್ಯವೂ ಆಗುತ್ತಲಿರುತ್ತದೆ. ನಿಮಗೆ ಆತಂಕವಾದಾಗ ಅನಿಯಂತ್ರಿತವಾದ ಆಲೋಚನೆಗಳ ಸುಳಿಯಲ್ಲಿ ನಿಮ್ಮ ಮನಸ್ಸು ಸಿಲುಕಿಕೊಳ್ಳುತ್ತದೆ. "ಏನಾಗುತ್ತದೆ?" ಎಂಬ ಆಲೋಚನೆ ಪದೇ ಪದೇ ಕಾಡುತ್ತಿರುತ್ತದೆ. ಆಲೋಚನೆಗಳು ಹೀಗೆ ದಾಳಿ ಮಾಡುತ್ತಿದ್ದಾಗ  ನೀವು ಭಯಭೀತರಾಗುತ್ತೀರಿ. 

ಧ್ಯಾನದಿಂದ ನೀವು ಪ್ರಶಾಂತರಾಗುತ್ತೀರಿ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಆಂತರಿಕ ಬಲ ನಿಮ್ಮಲ್ಲಿ ಬರುತ್ತದೆ. ಏನೇ ಆದರೂ ಅದೆಲ್ಲವೂ ನಿಮ್ಮ ಒಳಿತಿಗಾಗಿಯೇ ಎಂಬ ವಿಶ್ವಾಸ ನಿಮ್ಮಲ್ಲಿ ತುಂಬುತ್ತದೆ, ಆ ಏನೇ ಆದರೂ ಎಂದರೇನೆಂದು ನಿಮಗೆ ತಿಳಿಯದಿದ್ದರೂ ಸಹ.

ಧ್ಯಾನದಿಂದ ಅಜ್ಞಾತವಾದ ಭವಿಷ್ಯದ ಬಗೆಗಿನ ಭಯವು ಹೊರಟು ಹೋಗುತ್ತದೆ ಮತ್ತು ನಿಮ್ಮ ಮನಸ್ಸನ್ನು ವರ್ತಮಾನದ ಕ್ಷಣಕ್ಕೆ ತರುತ್ತದೆ. ವರ್ತಮಾನದ ಕ್ಷಣದ ಬಗ್ಗೆ ಒಂದು ರಹಸ್ಯವಿದೆ.  ಎಲ್ಲಾ ಕಾರ್ಯಗಳೂ ಕೇವಲ ವರ್ತಮಾನದ ಕ್ಷಣದಲ್ಲಿ ಮಾತ್ರ ಆಗುತ್ತವೆ. ಕೇವಲ ವರ್ತಮಾನದಲ್ಲಿ ಮಾತ್ರ ಕಾರ್ಯಪ್ರವೃತ್ತರಾಗಲು ಸಾಧ್ಯ, ಏಕೆಂದರೆ ಭವಿಷ್ಯದಲ್ಲಿ ಕಾರ್ಯ ಮಾಡಲು ಸಾಧ್ಯವಿಲ್ಲ. ಕೇವಲ ವಿಶ್ರಾಮಿತವಾದ ಮನಸ್ಸಿನ ಸ್ಥಿತಿಯಲ್ಲಿ ಮಾತ್ರ ಭಯವನ್ನು ಗೆದ್ದು ಅವಶ್ಯಕವಾದ  ಕಾರ್ಯವನ್ನು ಮಾಡಲು ಸಾಧ್ಯ. 

" ನನ್ನ ಎಂಬಿಎ ಪರೀಕ್ಷೆಗಳಲ್ಲಿ ಧ್ಯಾನವು ನನ್ನ ರಕ್ಷಕವಾಯಿತು. ಅದಕ್ಕೂ ಮೊದಲು, ನಾನು ಓದಿರುವುದನ್ನು  ಮರೆತುಬಿಡುತ್ತೇನೆಂಬ ಭಯವಿತ್ತು. ಆದರೆ ನಾನು ಧ್ಯಾನ ಮಾಡುವುದನ್ನು ಕಲಿತು ನಂತರ ನನ್ನ ಎಂಬಿಎ ಪರೀಕ್ಷೆಗಳು ಸುಗಮವಾಗಿ ಸಾಗಿದೆವು ಮತ್ತು ನಾಪಾಸಾಗುವ ಭಯ ನನ್ನಿಂದ ಹಾಗೇ ಮಾಯವಾಗಿ ಬಿಟ್ಟಿತು." ಎನ್ನುತ್ತಾರೆ ಸಾಹೀಬ್ ಸಿಂಗ್.

ಆತಂಕದ ಮತ್ತೊಂದು ಕಾರಣವೆಂದರೆ ಪ್ರಾಣಶಕ್ತಿಯ ಅಭಾವ. ಧ್ಯಾನವು ದೇಹದ ಪ್ರಾಣಶಕ್ತಿಯನ್ನು ಹೆಚ್ಚಿಸುವುದರಿಂದ ಆತಂಕರಹಿತ ಮನಸ್ಸು ಉಂಟಾಗುತ್ತದೆ.

#೩.  'ನಾನು' ಎನ್ನುವುದನ್ನು ಬಿಡಿ

ಜನರೊಡನೆ ಹಗಲೂ ಇರುಳೂ ವ್ಯವಹರಿಸುತ್ತೇವೆ. ಓಟದಲ್ಲಿ ನಿರತರಾಗಿರುತ್ತೇವೆ ಮತ್ತು ನಾವು ಭೇಟಿ ಮಾಡುವ ಎಲ್ಲರನ್ನೂ ಮೆಚ್ಚಿಸಬಲ್ಲೆವೆ ಎಂಬ ಭಯವಿರುತ್ತದೆ. ಇತರರು ನಮ್ಮನ್ನು ಯಾವ ರೀತಿಯಾಗಿ ಕಾಣುತ್ತಾರೆ ಎಂಬುದರ ಬಗ್ಗೆ ಭಯ ಪಡದಿರುವುದು ದೊಡ್ಡ ಯತ್ನವೇ ಸರಿ.  ಏಕೆಂದರೆ ನಮ್ಮ ಅಹಂಕಾರ ಇಲ್ಲಿ ಮಧ್ಯೆ ಬರಲಾರಂಭಿಸುತ್ತದೆ. 

ಇದಕ್ಕೆ ವಿರುದ್ಧವಾಗಿ, ನಮ್ಮ ಸ್ನೇಹಿತರೊಡನೆ ಇದ್ದಾಗ, ಹಿತವನ್ನು ಅನುಭವಿಸುತ್ತೇವೆ ಮತ್ತು ಸಹಜವಾಗಿರುತ್ತೇವೆ. ಸಹಜವಾಗಿರುವುದೇ ಅಹಂಕಾರಕ್ಕೆ ಪ್ರತ್ಯೌಷಧ. ಧ್ಯಾನದ ನಿತ್ಯಾಭ್ಯಾಸದಿಂದ ಮತ್ತೆ ಮರಳಿ ನಿಮ್ಮ ಸಹಜ ಸ್ವಭಾವ ದೆಡೆಗೆ ಮರಳಿ ಬರುತ್ತೀರಿ. ಅದರಿಂದ ಸಹಜವಾಗುತ್ತೀರಿ. ಭಯವೆಂದರೆ ಕೇವಲ ಮೇಲೆಕೆಳಗಾದ ಪ್ರೇಮ. ಸಾಮಾನ್ಯವಾಗಿ ನಮಗೆ ಇಷ್ಟವಾಗದಿರುವುದರ ಬಗ್ಗೆ ಭಯ ಪಡುತ್ತೇವೆ ಅಥವಾ  ನಮಗೆ ತಿಳಿಯದಿರುವ ಬಗ್ಗೆ ಭಯ ಪಡುತ್ತೇವೆ. ಈ ಭಯವನ್ನು ಮತ್ತೆ ಪ್ರೇಮವಾಗಿ ತಿರುಗಿಸಬಲ್ಲಂತದ್ದು ಏನೋ ಒಂದಿದೆ. ಅದುವೇ ಧ್ಯಾನ. ಸರಳವಾದ ಇಪ್ಪತ್ತು ನಿಮಿಷಗಳ ಧ್ಯಾನದ ಪ್ರಕ್ರಿಯೆಯಿಂದ ಭಯದ ಬೀಜಗಳು ಸುಟ್ಟು ಹೋಗುತ್ತವೆ. 

" ನನ್ನ ಸಾಮಾಜಿಕ ಗುಂಪಿನಲ್ಲಿ ಕೇವಲ ನಾನು ಮಾತ್ರ ಸಸ್ಯಾಹಾರಿಯಾಗಿದ್ದೆ. ಎಲ್ಲರೂ ನನ್ನನ್ನು ಸ್ವೀಕರಿಸುವರೋ ಇಲ್ಲವೋ ಎಂಬ ಭಯ ನನ್ನನ್ನು ಕಾಡುತ್ತಿತ್ತು. ನನ್ನ ಸ್ನೇಹಿತರನ್ನು ಮೆಚ್ಚಿಸಲು ನಾನು ಮಾಂಸಾಹಾರಿಯೆಂದು ನನ್ನ ಸ್ನೇಹಿತರಿಗೆ ಸುಳ್ಳು ಹೇಳಲಾರಂಭಿಸಿದೆ. ಧ್ಯಾನದ ನಿತ್ಯಾಭ್ಯಾಸದಿಂದ ಅವರಿಗೆಲ್ಲಾ ಸತ್ಯವನ್ನು ನುಡಿಯುವ ಧೈರ್ಯ ನನ್ನಲ್ಲಿ ಬಂದಿತು. ಇಂದು ನಾನು ಸಸ್ಯಾಹಾರಿಯೆಂದು ಹೆಮ್ಮೆಯಿಂದ ಹೇಳಬಲ್ಲೆ" ಎನ್ನುತ್ತಾರೆ ಕಾಮ್ನಾ ಅರೋರಾ.

ನಿರ್ಭೀತಿಯಿಂದ ಜೀವಿಸಲು ೬ ಧ್ಯಾನದ ಸೂಚಿಗಳು

೧. ನೀವು ಭಯಭೀತರಾದಾಗ ಅಥವಾ ಆತಂಕಗೊಂಡಾಗ ಕೆಲ ನಿಮಿಷಗಳ ಧ್ಯಾನದಿಂದ ಬಹಳ ಸಹಾಯವಾಗುತ್ತದೆ.

೨.  ಹಮ್ ಮ್     ಪ್ರಕ್ರಿಯೆ- ಭಯಕ್ಕೆ ತಕ್ಷಣದ ಪ್ರತ್ಯೌಷಧ.

೩. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತದೆ ಎಂದು ನಿಮಗೆ ನೀವೇ ನೆನಪಿಸಿಕೊಳ್ಳುತ್ತಿರಿ.

೪.  ನಿಮ್ಮ ಅಭ್ಯಾಸವನ್ನು ಮಾಡುತ್ತಲಿರಿ. ಪ್ರತಿನಿತ್ಯ ೨೦ ನಿಮಿಷಗಳು ಧ್ಯಾನ ಮಾಡಿ. ಇದರಿಂದ ಕ್ರಮೇಣವಾಗಿ ನಿಮ್ಮ ಭಯಗಳಿಂದ ಹೊರಬರುತ್ತೀರಿ.

೫.  ಧ್ಯಾನ ಮಾಡುವ ಉತ್ತಮವಾದ ಸಮಯವೆಂದರೆ ಬೆಳಗ್ಗಿನ ಜಾವವಾದರೂ, ದಿನದ ಯಾವುದೇ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಧ್ಯಾನ ಮಾಡಬಹುದು. 

೬.  ಆಳವಾದ ಧ್ಯಾನದ ಅನುಭವವನ್ನು ಪಡೆಯಲು ಮೌನವಾದ ಮೂಲೆಯನ್ನು ಆಯ್ದುಕೊಳ್ಳಿ.

ಭಯದ ಮತ್ತೊಂದು ಮುಖ

ನಿಮ್ಮಲ್ಲಿ ಸ್ವಲ್ಪ ಭಯವಿದ್ದರೆ  ಪರವಾಗಿಲ್ಲ, ವಿಶ್ರಮಿಸಿ! ಊಟದಲ್ಲಿರುವ ಉಪ್ಪಿನಂತೆಯೇ, ನೀವು ಧಾರ್ಮಿಕ ರಾಗಿರಲು ಸ್ವಲ್ಪ ಭಯ ಅವಶ್ಯಕ. ಜನರಲ್ಲಿ ಭಯವೇ ಇಲ್ಲದಿದ್ದಿದ್ದರೆ ಏನಾಗುತ್ತಿತ್ತೆಂದು ಸ್ವಲ್ಪ ಊಹಿಸಿಕೊಳ್ಳಿ!  ನಾಪಾಸಾಗುವ ಭಯವಿಲ್ಲದಿದ್ದಿದ್ದರೆ,

ವಿದ್ಯಾರ್ಥಿಗಳು ಓದುತ್ತಲೇ ಇರಲಿಲ್ಲ. ಖಾಯಿಲೆ ಬರುವ ಭಯವಿಲ್ಲದಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ನೀಡುವುದೇ ಇಲ್ಲ. ಆದ್ದರಿಂದ, ಪ್ರಜ್ಞಾವಂತರಾಗಿ ಮತ್ತು ನಿಮ್ಮಲ್ಲಿ ಸ್ವಲ್ಪ ಭಯವಿದ್ದರೆ ಒಳ್ಳೆಯದೆಂದು ಒಪ್ಪಿಕೊಳ್ಳಿ.

ಗುರುದೇವರ ಜ್ಞಾನದ ಪ್ರವಚನಗಳಿಂದ ಪ್ರೇರಿತವಾದ ಲೇಖನ.

ಚಿಕ್ಕಿ ಸೇನ್ ರವರ ಸಹಯೋಗದೊಂದಿಗೆ ಲೇಖನವನ್ನು ಬರೆದವರು ದಿವ್ಯ ಸಚ್ ದೇವ್.

ಧ್ಯಾನದ ನಿತ್ಯಾಭ್ಯಾಸದಿಂದ  ಒತ್ತಡದಿಂದ ಉಂಟಾಗುವ ಸಮ‌ಸ್ಯೆಗಳ ನಿವಾರಣೆಯಾಗುತ್ತದೆ, ಮನಸ್ಸಿಗೆ ಆಳವಾದ ವಿಶ್ರಾಂತಿ ಸಿಗುತ್ತದೆ, ವ್ಯವಸ್ಥೆಯ ಪುನರುಜ್ಜೀವವಾಗುತ್ತದೆ. ಆರ್ಟ್ ಆಫ್ ಲಿವಿಂಗ್ ನ ಸಹಜ ಸಮಾಧಿ ಧ್ಯಾನವು ನಿಮ್ಮನ್ನು ಅಂತರಾಳದೊಳಗೆ ಹೊಕ್ಕುವಂತೆ ಮಾಡಿ ನಿಮ್ಮ ನಿಸ್ಸೀಮಿತವಾದ ಸಾಮರ್ಥ್ಯವನ್ನು ಹೊರತರುತ್ತದೆ. 

ನಿಮ್ಮ ಬಳಿಯಿರುವ ಆರ್ಟ್ ಆಫ್ ಲಿವಿಂಗ್ ನ ಕೇಂದ್ರದಲ್ಲಿ ಸಹಜ ಸಮಾಧಿ ಧ್ಯಾನವನ್ನು ಕಲಿಯಿರಿ.