ಧ್ಯಾನವನ್ನು ಆರಂಭಮಾಡುವವರಿಗೆ ಪೂರ್ಣ ಮಾರ್ಗದರ್ಶನ

ಬಹಳ ಕಾಲದಿಂದಲೂ, “ಧ್ಯಾನ” ಎಂದರೆ, ಪರ್ವತದ ಮೇಲೆ, ನೀಲಿ ಮೋಡಗಳನ್ನು ತಲೆಯ ಮೇಲೆ ಹೊತ್ತು ಕುಳಿತು ಧ್ಯಾನ ಮಾಡುವ ಯೋಗಿಯೆಂದೇ ನಮ್ಮೆಲ್ಲರ ಮನದಲ್ಲಿರುವ ಭಾವನೆಯಾಗಿದೆ. ಈ ಪ್ರಾಚೀನ ಅಭ್ಯಾಸದ ಲಾಭಗಳನ್ನು ಇತ್ತೀಚೆಗμÉ್ಟ ಕಂಡು ಹಿಡಿಯಲಾಗಿದೆ ಮತ್ತು ಧ್ಯಾನದ ಲಾಭಗಳು ಎಷ್ಟಿವೆಯೆಂದರೆ, ಅದನ್ನು ಕೇವಲ ಯೋಗಿಗಳಿಗೆ ಮಾತ್ರ ಬಿಟ್ಟು ಬಿಡಲು ಸಾಧ್ಯವಿಲ್ಲ!

ಲಾಭಗಳೆಂದರೆ ಹೆಚ್ಚಿನ ಏಕಾಗ್ರತೆ, ಹೆಚ್ಚಿನ ರೋಗನಿರೋಧಕ ಶಕ್ತಿ, ಸುಧಾರಿತ ಹೃದಯದ ಚಟುವಟಿಕೆ ಮತ್ತು ಚಯಾಪಚಯ, ಕುಗ್ಗಿದ ಒತ್ತಡ ಮತ್ತು ಮುಪ್ಪಿನ ಪ್ರಕ್ರಿಯೆ, ಮೆದುಳಿನಲ್ಲಿ ಹೆಚ್ಚಿದ ಗ್ರೇ ಮ್ಯಾಟರ್. ಒಬ್ಬರು ಮಾಡಬಹುದಾದ ಯಾವುದೇ ಚಟುವಟಿಕೆಗಳಲ್ಲಿ ಧ್ಯಾನವು ಅತೀ ಕಡಿಮೆ ವೆಚ್ಚದ, ಅತೀ ಲಾಭದಾಯಕವಾದ ಚಟುವಟಿಕೆಯಾಗಿದೆ. ಆದ್ದರಿಂದಲೇ ನಮ್ಮ ಕಾಲದಲ್ಲಿ ಈ ಪ್ರಾಚೀನ ಅಭ್ಯಾಸವು ಪ್ರಸಿದ್ಧತೆಯ ಪರಾಕಾಷ್ಠತೆಯನ್ನು ಪಡೆದಿದೆ.

ಆದರೆ ಧ್ಯಾನವನ್ನು ಆರಂಭಿಸುವವರು ಈ ಅಭ್ಯಾಸವನ್ನು ಹೇಗೆ ಆರಂಭಿಸುವುದು? ಈ ಪಯಣವನ್ನು ಆರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳೇನಾದರೂ ಇವೆಯೆ? ಧ್ಯಾನವನ್ನು ಆರಂಭ ಮಾಡುವವರಿಗೆ ಈ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ :-

ಧ್ಯಾನ ಎಂದರೇನು?

ಧ್ಯಾನವೆಂದರೆ ಸುಮ್ಮನೆ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳುವುದೆ? ಅಥವಾ ಯಾವುದೆ ಒಂದರ ಮೇಲೆ ಏಕಾಗ್ರತೆಯನ್ನಿಡುವುದೆ?

ಗುರುದೇವ್ ಶ್ರೀ ಶ್ರೀ ರವಿಶಂಕರರು, “ಧ್ಯಾನವು ಆಳವಾದ ಮಾನಸಿಕ ವಿಶ್ರಾಂತಿಯನ್ನು ಪಡೆಯುವ ಒಂದು ರೀತಿ, ಅದೇ ಸಮಯದಲ್ಲಿ ಜಾಗರೂಕವಾಗಿಯೂ ಇರುವುದು, ಪ್ರಜ್ಞೆಯನ್ನೂ ಹೊಂದಿರುವುದು” ಎನ್ನುತ್ತಾರೆ. ಧ್ಯಾನವೆಂದರೆ ಏಕಾಗ್ರತೆ ಎಂಬ ತಪ್ಪಾದ ಅಭಿಪ್ರಾಯವನ್ನು ತಳ್ಳಿ ಹಾಕುವ ಅವರು, “ಧ್ಯಾನವೆಂದರೆ ಏಕಾಗ್ರತೆಯ ಪ್ರಕ್ರಿಯೆಯಲ್ಲ” ಎನ್ನುತ್ತಾರೆ. ಧ್ಯಾನದಿಂದ ನಿಮಗೆ ಈ ಲಾಭಗಳುಂಟಾಗುತ್ತವೆ.

ಆರಂಭ ಮಾಡುವವರಿಗೆ ಪುಸ್ತಕಗಳು ಧ್ಯಾನವನ್ನು ಕಲಿಸಿಕೊಡಬಲ್ಲದೆ?

ಇಲ್ಲ! ಪ್ರಾಜಕ್ತಿ ದೇಶ್‍ಮುಖ್‍ರವರು, “ಪುಸ್ತಕಗಳು ಧ್ಯಾನದ ಬಗೆಗಿನ ಸಿದ್ಧಾಂತಗಳನ್ನು ನೀಡುತ್ತವೆಯೆ ಹೊರತು, ಅವುಗಳಿಂದ ನಿಮಗೆ ಅನುಭವ ದೊರಕುವುದು. ಪುಸ್ತಕದ ಜ್ಞಾನದಿಂದ ನಿಮಗೆ ಅಭ್ಯಾಸದ ವಿರುದ್ಧವಾಗಿ ಅನೇಕ ಪೂರ್ವಾಗ್ರಹಗಳು ಸೃಷ್ಟಿಯಾಗುತ್ತವೆ” ಎನ್ನುತ್ತಾರೆ.

ಈಗ ತಾನೆ ಆರಂಭ ಮಾಡುವವರು ಮಾಡಬೇಕಾದ ಧ್ಯಾನದ ಆರಂಭದ ಪ್ರಕ್ರಿಯೆ ಏನಾದರೂ ಇದೆಯೆ?

ಹೌದು! ನಿಮ್ಮ ಕಣ್ಣುಗಳನ್ನು ಮುಚ್ಚಿ ಹತ್ತು ನಿಮಿಷಗಳ ಕಾಲ ನಿಮ್ಮ ಉಸಿರಿನ ಮೇಲೆ ಗಮನವನ್ನಿಡಿ. ಈ ಸರಳವಾದ ಧ್ಯಾನದ ಪ್ರಕ್ರಿಯೆಯು ನಿಮ್ಮ ಧ್ಯಾನದ ಪಯಣವನ್ನು ಆರಂಭ ಮಾಡಲು ಸಹಾಯಕವಾಗುತ್ತದೆ. ನಿರ್ದೇಶಿತ ಧ್ಯಾನಗಳಿಂದಲೂ ಅಪಾರವಾದ ಸಹಾಯ ದೊರಕುತ್ತದೆ.

ಧ್ಯಾನ ಮಾಡುವ ಮೊದಲು ಅಥವಾ ಧ್ಯಾನದ ಸಮಯದಲ್ಲಿ ಅನುಸರಿಸಬೇಕಾದ ಹೆಜ್ಜೆಗಳೇನು?

ಈ ಹೆಜ್ಜೆಗಳನ್ನು ಅನುಸರಿಸಿದರೆ ನಿಮ್ಮ ಧ್ಯಾನವು ಸುಗಮವಾಗುತ್ತದೆ:-

ನೀವು ಧ್ಯಾನ ಮಾಡುವ ಕೋಣೆಯಲ್ಲಿ ಗಾಳಿಯು ಚೆನ್ನಾಗಿರಲಿ.

ಒಂದು ಕುರ್ಚಿಯ ಮೇಲೆ ಅಥವಾ ಚಾಪೆಯ ಮೇಲೆ ಸುಖವಾಗಿ ಕುಳಿತುಕೊಳ್ಳಿ. ನಿಮ್ಮ ಬೆನ್ನೆಲುವನ್ನು ನೇರವಾಗಿ ಇಟ್ಟುಕೊಳ್ಳಿ, ಭುಜಗಳು ವಿಶ್ರಮಿಸಲಿ, ಕಣ್ಣುಗಳು ಮುಚ್ಚಿರಲಿ.

ನಿರ್ದೇಶಿತ ಧ್ಯಾನದ ಸೂಚಿಗಳನ್ನು ಪಾಲಿಸಿ ಅಥವಾ ನಿಮ್ಮ ಉಸಿರಿನ ಮೇಲೆ ಗಮನವನ್ನಿಡಿ.

ಧ್ಯಾನದ ಅವಧಿಯು ಮುಗಿದ ನಂತರ ನಿಮ್ಮ ದೇಹದ ಮೇಲೆ ಅರಿವನ್ನು ತಂದುಕೊಂಡು ನಿಧಾನವಾಗಿ ನಿಮ್ಮ ಕಣ್ಣುಗಳನ್ನು ತೆರೆಯಿರಿ.

ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳೇನು?

ಹೊಟ್ಟೆ ತುಂಬಿದ್ದಾಗ ಅಥವಾ ನಿದ್ದೆ ಮಾಡುವ ಮೊದಲು ಧ್ಯಾನ ಮಾಡಬೇಡಿ.

ಹಿತವಾದ, ಸಡಿಲವಾದ ಉಡುಪುಗಳನ್ನೇ ಧರಿಸಿ.

ನಿಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿ.

ಸುತ್ತಮತ್ತಲೂ ಯಾರೂ ನಿಮ್ಮನ್ನು ಬಂದು ಕದಡುವುದಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳಿ.

ಧ್ಯಾನ ಮಾಡುವಾಗ ವಿಪರೀತ ಆಲೋಚನೆಗಳು ಬಂದರೆ ಏನು ಮಾಡುವುದು?

ಆರಂಭ ಮಾಡುವಾಗ ಆಲೋಚನೆಗಳು ಹೆಚ್ಚುವುದು ಸಹಜವೆ. ಅವುಗಳನ್ನು ಅದುಮಿಡಬೇಡಿ ಅಥವಾ ಅವುಗಳಲ್ಲೇ ಕಳೆದು ಹೋಗದಿರಿ. ಅದರ ಬದಲಿಗೆ ಅವುಗಳನ್ನು ಗಮನಿಸುವುದನ್ನು ಕಲಿಯಿರಿ. ಆಗ ಅವು ತಾನಾಗಿಯೇ ಹೊರಟು ಹೋಗುತ್ತವೆ.

ಧ್ಯಾನವೆಂದರೆ ಒಂದು ಕಷ್ಟಕರವಾದ ವಿಷಯವೆಂದು ನಿಮಗನಿಸುತ್ತದೆಯೆ? ಅಥವಾ ನಿಮ್ಮ ಧ್ಯಾನದ ಅನುಭವದ ಆಳವನ್ನು ಮತ್ತಷ್ಟು ಆಳವಾಗಿಸಿಕೊಳ್ಳಲು ಬಯಸುತ್ತಿರುವಿರೆ? ಹಾಗಿದ್ದಲ್ಲಿ ಸಹಜ ಸಮಾಧಿ ಕಾರ್ಯಕ್ರಮವನ್ನು ವೃತ್ತಿಪರರ ಮಾರ್ಗದರ್ಶನದಲ್ಲಿ ಮಾಡಿ!

(ಆರ್ಟ್ ಆಫ್ ಲಿವಿಂಗ್‍ನ ಧ್ಯಾನದ ಶಿಕ್ಷಕಿಯಾದ ಪ್ರಾಜಕ್ತಿ ದೇಶ್‍ಮುಖ್‍ರವರ ಸಹಯೋಗದಿಂದ ಬರೆದದ್ದು)