ಯೋಗದೊಡನೆ ಉತ್ತಮವಾಗಿ ಕ್ರಾಸ್ಫಿಟ್ ಮಾಡಿ

ಜಿಮ್ನಲ್ಲಿ ವರ್ಕೌಟ್ ಮಾಡುವುದು ಈಗ ಹಳೆಯದು. ಈಗ ಕ್ರಾಸ್ಫಿಟ್ ಬಂದಾಗಿದೆ. ಒಂದು ದಶಕದ ಹಿಂದೆಯೇ ಅಮೆರಿಕದಲ್ಲಿ ಪ್ರಾರಂಭವಾದ ಈ ವ್ಯಾಯಾಮದ ಕಾರ್ಯಕ್ರಮವನ್ನು ಈಗ ಜಗದಾದ್ಯಂತದ ಲಕ್ಷಾಂತರ ಜನ ಮಾಡುತ್ತಿದ್ದಾರೆ. ತೀವ್ರಗತಿಯ ವ್ಯಾಯಾಮಗಳಿಂದ ದೇಹದ ದಾಢ್ರ್ಯತೆಯನ್ನು ಹೆಚ್ಚಿಸಿ, ಯಾವುದೇ ದೈಹಿಕ ಸವಾಲಿಗೆ ಸ್ಪಂದಿಸುವಂತೆ ಒಬ್ಬರನ್ನು ಸಿದ್ಧಪಡಿಸುವುದೇ ಕ್ರಾಸ್ಫಿಟ್ನ ಸಿದ್ಧಾಂತ. ಕ್ರಾಸ್ಫಿಟ್ನ ವ್ಯಾಯಾಮದ ಕಾರ್ಯಕ್ರಮದಲ್ಲಿ ತೂಕಗಳನ್ನು ಎತ್ತುವುದು, ಹೆಚ್ಚು ಆಮ್ಲಜನಕವನ್ನು ಬಳಸಿ ಮಾಡುವಂತಹ ವ್ಯಾಯಾಮಗಳು ಮತ್ತು ಜಿಮ್ನಾಸ್ಟಿಕ್ಸ್ ಒಳಗೊಂಡಿದೆ.

ಕ್ರಾಸ್ಫಿಟ್ನ ವಿವಿಧ ವ್ಯಾಯಾಮಗಳ ಮಿಶ್ರಣದಿಂದ ಅನೇಕರಿಗೆ ಲಾಭವಾಗಿ, ಅದು ಬಹಳ ಪರಿಣಾಮಕಾರಿ ಎನ್ನುತ್ತಾರೆ. ಈ ವ್ಯಾಯಾಮದ ಅವಧಿಯು ಒಂದು ಗಂಟೆಗಿಂತಲೂ ಕಡಿಮೆಯಾದರೂ, ದೈಹಿಕವಾಗಿ ಹೆಚ್ಚು ಒತ್ತಡವನ್ನು ಅದು ಹೇರುತ್ತದಲ್ಲದೆ, ಅದನ್ನು ಬಹಳ ವೇಗವಾಗಿ ಮಾಡಬೇಕಾದ್ದರಿಂದ ಕೆಲವೊಮ್ಮೆ ಅದರಿಂದ ದೇಹಕ್ಕೆ ಗಾಯಗಳಾಗುವುದೂ ಉಂಟು. ಇಂತಹ ಗಾಯಗಳನ್ನು ತಡೆಗಟ್ಟಲು ಮತ್ತು ಕ್ರಾಸ್ಫಿಟ್ನ ಹೆಚ್ಚು ಅನುಭವವನ್ನು ಪಡೆಯಲು, ಕ್ರಾಸ್ಫಿಟ್ಟನ್ನು ಮಾಡುವ ಮೊದಲು ಮತ್ತು ಮಾಡಿದ ನಂತರ ಯೋಗವನ್ನೂ ಅಳವಡಿಸಿಕೊಳ್ಳಬೇಕು.

ದೇಹವನ್ನು ಸಡಿಲಗೊಳಿಸಿ, ಮನಸ್ಸನ್ನು ಪ್ರಶಾಂತವಾಗಿಟ್ಟು, ವಿಷಯಗಳನ್ನು ನವೀನವಾದ ರೀತಿಯಲ್ಲಿ ನೋಡುವಂತೆ ಮಾಡುವ ಪ್ರಾಚೀನವಾದ ಕಲೆಯೇ ಯೋಗ. ಕ್ರಾಸ್ಫಿಟ್ನೊಡನೆ ಯೋಗವನ್ನೂ ಬೆರೆಸಿದಾಗ ದೇಹವು ಹೆಚ್ಚು ನಮ್ಯವಾಗುತ್ತದೆ, ದೇಹದ ಬಿಗಿತನ ಹೊರಟುಹೋಗುತ್ತದೆ ಮತ್ತು ಕ್ರಾಸ್ಫಿಟ್ನ ವ್ಯಾಯಾಮಗಳನ್ನು ಪ್ರಾರಂಭಿಸುವ ಮೊದಲು ಮನಸ್ಸು ಪ್ರಶಾಂತವಾಗಿರುತ್ತದೆ. ನಿಮ್ಮ ಸಹನಾಸಾಮಥ್ರ್ಯವನ್ನು ಹೆಚ್ಚಿಸಲು ಮತ್ತು ಕ್ರಾಸ್ಫಿಟ್ನ ವ್ಯಾಯಾಮದ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುವಂತಹ ಯೋಗಾಸನಗಳನ್ನು ನಿಮ್ಮ ಸ್ಥಳೀಯ ಜೀವನ ಕಲಾ ಯೋಗ ಶಿಬಿರದಿಂದ ಕಲಿಯಬಹುದು.

ನಿಮ್ಮ ಕ್ರಾಸ್ಫಿಟ್ನ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ದೇಹವನ್ನು ಸಡಿಲಗೊಳಿಸುವ ಕೆಲವು ಯೋಗಾಸನಗಳ ಬಗ್ಗೆ ತಿಳಿದುಕೊಳ್ಳೋಣ:.

1

ಸೂರ್ಯನಮಸ್ಕಾರ

 

ಸೂರ್ಯನಮಸ್ಕಾರ ವಿವಿಧ ಯೋಗಾಸನಗಳಿಂದ ದೇಹದ ಎಲ್ಲಾ ಭಾಗಗಳೂ ಸಡಿಲವಾಗುತ್ತವೆ. ಬೆನ್ನಿನಿಂದ ಸೊಂಟದವರೆಗೆ, ತೋಳುಗಳಿಂದ ಕಾಲುಗಳವರೆಗೆ ಸೂರ್ಯನಮಸ್ಕಾರದ ಎಲ್ಲಾ ಆಸನಗಳು, ಕ್ರಾಸ್ಫಿಟ್ನ ವ್ಯಾಯಾಮಗಳನ್ನು ಪ್ರಾರಂಭ ಮಾಡುವ ಮೊದಲು ಬಹಳ ಪರಿಣಾಮಕಾರಕವಾಗಿ ಕೆಲಸ ಮಾಡುತ್ತವೆ.

2

ಅರ್ಧಮತ್ಸ್ಯೇಂದ್ರಾಸನ

ಕುಳಿತು ಅರ್ಧ ಬೆನ್ನಿನ ಮೂಳೆಯನ್ನು ತಿರುಚಿ ಬೆನ್ನಿನ ಮೂಳೆಯನ್ನು ನಮ್ಯವಾಗಿಸುತ್ತದೆ ಮತ್ತು ಎದೆಯನ್ನು ತೆರೆಯುತ್ತದೆ. ನಿಮ್ಮ ಕ್ರಾಸ್ಫಿಟ್ನ ವ್ಯಾಯಾಮದ ಕಾರ್ಯಕ್ರಮದಲ್ಲಿ ತೂಕಗಳನ್ನು ಎತ್ತುವಾಗ, ನಮ್ಯವಾದ ಬೆನ್ನಿನ ಮೂಳೆಯಿಂದಾಗಿ ಹೆಚ್ಚು ತೂಕವನ್ನು ಎತ್ತಬಹುದು.

3

ವೀರಭದ್ರಾಸನ

 

ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ಒತ್ತಡವಿದ್ದರೆ ಕ್ರಾಸ್ಫಿಟ್ನ ವ್ಯಾಯಾಮಗಳನ್ನು ಚೆನ್ನಾಗಿ ಮಾಡಲು ಸಾಧ್ಯವಿಲ್ಲ. ವೀರಭದ್ರಾಸನದ ಭಂಗಿಯಿಂದ ಒತ್ತಡದ ಬಿಡುಗಡೆಯಾಗಿ ದೇಹದ ಸಮತೋಲನ ಹೆಚ್ಚುತ್ತದೆ. ತೋಳುಗಳನ್ನು, ಕಾಲುಗಳನ್ನು, ಕೆಳಬೆನ್ನನ್ನು ಬಲಿಷ್ಠವಾಗಿಸಿ ಸುಸ್ಥಿತಿಯಲ್ಲಿಡುತ್ತದೆ.

 
4

ತ್ರಿಕೋಣಾಸನ

ತ್ರಿಕೋಣಾಸನದಿಂದ ನಿಮ್ಮ ಕಾಲುಗಳು, ಮಂಡಿಗಳು, ಎದೆ ಮತ್ತು ತೋಳು ಬಲಿಷ್ಠವಾಗುತ್ತವೆ. ಈ ಯೋಗಾಸನದಿಂದ ದೈಹಿಕ ಹಾಗೂ ಮಾನಸಿಕ ಸಮತೋಲನವು ಹೆಚ್ಚುತ್ತದೆ. ಯಾವುದೇ ಕ್ರಾಸ್ಫಿಟ್ ಅಭ್ಯಾಸಿಗರಿಗೆ ಈ ಆಸನವು ಅತ್ಯಾವಶ್ಯಕ.

5

ಧನುರಾಸನ

ಈ ಆಸನದಿಂದ ಬಲಿಷ್ಠವಾದ ಬೆನ್ನಿನ ಮತ್ತು ಹೊಟ್ಟೆಯ ಸ್ನಾಯುಗಳು ಸಿಗುವುದಲ್ಲದೆ, ತೋಳಿನ ಹಾಗೂ ಕಾಲುಗಳ ಸ್ನಾಯುಗಳು ಸುಸ್ಥಿತಿಯಲ್ಲಿರುತ್ತವೆ, ನಮ್ಯವಾದ ಬೆನ್ನೂ ಸಿಗುತ್ತದೆ. ಕ್ರಾಸ್ಫಿಟ್ನ ವ್ಯಾಯಾಮದಿಂದ ಉಂಟಾಗುವ ದಣಿವನ್ನು ಧನುರಾಸನದಿಂದ ನಿವಾರಿಸಿಕೊಳ್ಳಬಹುದು.

 
6

ಶವಾಸನ

 

ಶವಾಸನದಲ್ಲಿ ವಿಶ್ರಮಿಸುವುದರಿಂದ ಕೋಶಗಳ ದುರಸ್ತಿಯಾಗುತ್ತದೆ, ದೇಹ ಮತ್ತು ಮನಸ್ಸು ಪುನಶ್ಚೇತವಾಗುತ್ತದೆ, ಒತ್ತಡವು ಕಡಿಮೆಯಾಗಿ, ರಕ್ತದೊತ್ತಡವೂ ಸಾಮಾನ್ಯ ಸ್ಥಿತಿಗೆ ಮರಳಿ ಬರುತ್ತದೆ. ಕ್ರಾಸ್ಫಿಟ್ನ ಪ್ರಿಯರು ಖಂಡಿತವಾಗಿಯೂ ತಮ್ಮ ಕ್ರಾಸ್ಫಿಟ್ನ ವ್ಯಾಯಾಮದ ನಂತರ ಮಾಡಬೇಕಾದ ಆಸನವಿದು.

ಕ್ರಾಸ್ಫಿಟ್ನ ಬದಲಿಗೆ ಯೋಗವನ್ನು ಮಾಡಲಾಗದಿದ್ದರೂ ಈ ಎರಡು ಪ್ರಕ್ರಿಯೆಗಳಿಂದ ನಿಮ್ಮ ತರಬೇತಿಯು ವೇಗಗತಿಯಲ್ಲಿ ಸಾಗಿ ನಿಮ್ಮ ದೇಹದಾಢ್ರ್ಯತೆಯೂ ಹೆಚ್ಚುವುದಲ್ಲದೆ, ದೇಹವೂ ಸಡಿಲವಾಗುತ್ತದೆ. ಜಗತ್ತಿನ ಅನೇಕ ಭಾಗಗಳ ಕ್ರಾಸ್ಫಿಟ್ ತರಬೇತಿ ಕೇಂದ್ರಗಳಲ್ಲಿ ಕ್ರಾಸ್ಫಿಟ್ನ ವ್ಯಾಯಾಮಗಳ ಮೊದಲು ಮತ್ತು ನಂತರ ಯೋಗಾಸನಗಳನ್ನು ಅಳವಡಿಸಿ ಜನರಿಗೆ ಉಂಟಾಗುವ ಗಾಯಗಳನ್ನು ಕಡಿಮೆ ಮಾಡುತ್ತಿದ್ದಾರೆ.

 

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಶ್ರೀ Œ ಶ್ರೀ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ. ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ.