ನಮ್ಮ ಬಗ್ಗೆ

ಪರಮ ಪೂಜ್ಶ ಶ್ರೀ ಶ್ರೀ ರವಿಶಂಕರ್ ಅವರಿಂದ 1981ರಲ್ಲಿ ಸ್ಥಾಪನೆಗೊಂಡ ಜೀವನ ಕಲಾಸಂಸ್ಥೆಯು ಶೈಕ್ಷಣಿಕ ಮತ್ತು ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಶತೆ ಕೊಟ್ಟು, ಮನಸ್ಸಿನ ಒತ್ತಡ ನಿರ್ವಹಣಿ ಮತ್ತು ವಿವಿಧ ಸೇವಾಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಸಂಸ್ಢೆಯು ವಿಶ್ವದಾದ್ಶಂತ 152 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 370 ಮಿಲಿಯನ್ ಜನರ ಜೀವನವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿದೆ.

ಇದರ ಕಾರ್ಯಕ್ರಮಗಳು ಪೂಜ್ಶ ಶ್ರೀ ಶ್ರೀ ಅವರ ಶಾಂತಿಯನ್ನು ಕುರಿತಾದ ಆಧ್ಶಾತ್ಮ ನೀತಿಯನ್ನು ಆಧರಿಸಿವೆ. “ವಿಶ್ವಶಾಂತಿಯನ್ನು ಸಾಧಿಸಲು ನಾವು ಮೊದಲು ಒತ್ತಡರಹಿತ ಮನಸ್ಸು ಮತ್ತು ಹಿಂಸಾಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು ಅತ್ಶಗತ್ಶವಾಗಿದೆ”. ಪ್ರತಿಯೊಬ್ಬ ವ್ಶಕ್ರಿಯೂ ಒತ್ತಡವನ್ನು ತೊಡೆದು ಹಾಕಿ ಆಂತರಿಕ ಶಾಂತಿಯನ್ನು ಅನುಭವಿಸಲು, ಜೀವನ ಕಲಾಕೇಂದ್ರವು ಒತ್ತಡ ನಿರ್ಮೂಲನಗೊಳಿಸುವ ಉಸಿರಾಟದ ವಿಧಾನಗಳು, ಧ್ಯಾನ ಮತ್ತು ಯೋಗಾಭ್ಶಾಸಗಳ ನೆರವು ನೀಡುತ್ತದೆ. ಈ ಕಾರ್ಯಕ್ರಮಗಳು ವಿಶ್ವದಾದ್ಶಂತ ಲಕ್ಷಾಂತರ ಜನರು ಒತ್ತಡ, ಖಿನ್ನತೆ ಮತ್ತು ಹಿಂಸಾತ್ಮಕ ಪ್ರವೃತ್ರಿಗಳನ್ನು ಜಯಿಸಲು ಸಹಾಯಕವಾಗಿವೆ.

ಈ ಸಂಸ್ಥೆಯು ವಿವಿಧ ಮಾನವ ಹಿತ ಯೋಜನೆಗಳಾದ ಸಂಘರ್ಷನಿವಾರಣೆ, ವಿಪತ್ತು ಪರಿಹಾರ, ಸುಸ್ಥಿರ ಗ್ರಾಮೀಣ ಅಭಿವೃದ್ಧಿ, ಮಹಿಳೆಯರ ಸಬಲೀಕರಣ, ಖೈದಿಗಳ ಪುನರ್ವಸತಿ, ಸಮಾಜದಲ್ಲಿ ಸರ್ವರಿಗೂ ಶಿಕ್ಷಣ ಮತ್ತು ಪರಿಸರ ಸಂರಕ್ಷಣೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗಗಳಲ್ಲಿ ಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿದೆ.

ಸೋದರ ಸಂಸ್ಥೆಗಳು:

ಜೀವನ ಕಲಾ ಸಂಸ್ಥೆಯು, ಒತ್ತಡರಹಿತ ಮತ್ತು ಹಿಂಸಾಮುಕ್ತ ವಿಶ್ವಕ್ಕಾಗಿ ಮೀಸಲಾದ ತನ್ನದೇ ಕೆಲವು ಸೋದರ ಸಂಸ್ಥಗಳೊಂದಿಗೆ ಸೇರಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಮಾನವೀಯ ಮೌಲ್ಶಗಳ ಅಂತರಾಷ್ಟ್ರೀಯ ಸಂಸ್ಥೆ (IAHV), ವೇದ ವಿಜ್ಞಾನ ಮಹಾವಿದ್ಯಾಪೀಠ (VVMVP), ಶ್ರೀ ಶ್ರೀ ರವಿಶಂಕರ್ ವಿದ್ಶಾಮಂದಿರ (SSRVM), ವ್ಯಕ್ತಿ ವಿಕಾಸ ಕೇಂದ್ರ ಇಂಡಿಯ (VVKI) ಶ್ರೀ ಶ್ರೀ ಗ್ರಾಮೀಣ ಅಭವೃದ್ಧಿ ಕಾರ್ಯಕ್ರಮ (SSRDP) ಮತ್ತು ಶ್ರೀ ಶ್ರೀ ಕೃಷಿವಿಜ್ಞಾನ ಸಂಸ್ಥೆ ಮತ್ತು ತಾಂತ್ರಿಕ ಕೃಷಿ ವಿದ್ಶಾಲಯ ಟ್ರಸ್ಟ್ (SSIAST) ಇವುಗಳೆಲ್ಲ ಜೀವನ ಕಲಾ ಸಂಸ್ಥೆಯ ಮಾನವ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಅವುಗಳೆಲ್ಲವನ್ನೂ ವಿಶ್ವದಾದ್ಯಂತ ಜಾರಿಗೆ ತಂದಿವೆ.

ಸಾಂಸ್ಥಿಕ ಸಂರಚನೆ:

ಜೀವನ ಕಲಾಕೇಂದ್ರವು ಒಂದು ಬಹು ಆಯಾಮೀ ಸಂಘಟನೆಯಾಗಿದ್ದು, ವಿಶ್ವದಲ್ಲೇ ಅತಿಹಿಚ್ಚು ಸ್ವಯಂ ಸೇವಕರನ್ನು ಹೊಂದಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ಇದರ ಅಂತರಾಷ್ಟೀಯ ಪ್ರಧಾನ ಕಛೇರಿಯು ಬೆಂಗಳೂರಿನಲ್ಲಿದೆ. ಸಂಸ್ಥೆಯು 1989 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಜರ್ಮನಿಯಲ್ಲಿ ಸ್ಥಾಪಿಸಿಲ್ಪಟ್ಟ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿಂದೀಚೆಗೆ ವಿಶ್ವದಾದ್ಯಂತ ಸ್ಥಳೀಯ ಕೇಂದ್ರಗಳು ಸ್ಥಾಪನೆಯಾಗಿವೆ. ಜೀವನ ಕಲಾ ಕೇಂದ್ರದ ಆಡಳಿತ ರಚನೆಯಲ್ಲಿ, ಎರಡುವರ್ಷಗಳ ಅವಧಿಯ ಒಂದು ಧರ್ಮದರ್ಶಿ ಮಂಡಳಿಯಿದೆ (ಟ್ರಸ್ಟ್). ಪ್ರತಿ ಎರಡು ವರ್ಷಗಳಿಗೆ ಮಂಡಳಿಯ ಮೂರನೇ ಎರಡರಷ್ಟು ಸದಸ್ಶರು ಬದಲಾಗುತ್ತಾರೆ. ಜೀವನ ಕಲಾ ಕೇಂದ್ರದ ಎಲ್ಲ್ಲಾ ಶಿಕ್ಷಕರು ಮತ್ತು ಹಿಂದಿನ ಧರ್ಮದರ್ಶಿಗಳು ಹೊಸಮಂಡಳಿಗೆ ಸದಸ್ಶರನ್ನು ನೇಮಕ ಮಾಡುವ ಅವಕಾಶವಿರುತ್ತದೆ. ಸಂಸ್ಥೆಯ ಆಡಳಿತದ ಮೇಲ್ವಿಚಾರಣೆ ನೋಡಲು ಹಾಗೂ ಮಾರ್ಗದರ್ಶನ ಮಾಡಲು ಒಂದು ಸಲಹಾ ಸಮಿತಿಯಿದೆ. ಸಂಸ್ಥೆಯ ಎಲ್ಲ ಹಣಕಾಸು ವ್ಯವಹಾರಗಳನ್ನು ಹೊರಗಿನ ಲೆಕ್ಕ ಪರಿಶೋಧಕರಿಂದ ನಿಯಮಿತವಾಗಿ ಪರಿಶೋಧನೆ ಮಾಡಿಸಲಾಗುತ್ತದೆ. ಟ್ರಸ್ಟಿಗಳು ಖರ್ಚಿನ ಬಾಬತ್ತು ಅಲ್ಲದೆ, ಬೇರೆ ಯಾವುದೇ ಸಂಬಳ ಅಥವಾ ಇತರ ಹಣಕಾಸಿನ ವರಮಾನಕ್ಕೆ ಅರ್ಹರಿಲ್ಲ. ಜೇವನ ಕಲಾಕೇಂದ್ರದ ಕಾರ್ಯಕ್ರಮಗಳು ತಮ್ಮ ಮಾನವಹಿತ ಯೋಜನೆಗಳಿಗೆ ನೇರವಾಗಿ ಹಣಕಾಸಿನ ಬೆಂಬಲ ನೀಡುತ್ತವೆ. ಜೀವನ ಕಲಾಕೇಂದ್ರದ ಪ್ರಕಾಶನ ಶಾಖೆ ಮತ್ತು ಆಯುರ್ವೇದ ಉತ್ಪನ್ನಗಳ ಮಾರಾಟದ ಆದಾಯವನ್ನೂ ಕೂಡ ಅದರ ಸಮಾಜ ಸೇವಾ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ.

ಸದಸ್ಯತ್ವಗಳು:

  • ಕಾಂಗೊ (ವಿಶ್ವಸಂಸ್ಥೆಯ ECOSOC ದೊಂದಿಗೆ ಸಲಹಾಕಾರ ಸ್ಥಾನದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಮ್ಮೇಳನ) ಜಿನೀವಾ, ನ್ಶೂಯಾರ್ಕ್.
  • ಹಸಿವಿನ ವಿರುದ್ಧ ಅಂತರ್‍ರಾಷ್ಟ್ರೀಯ ಮೈತ್ರಿಕೂಟ.
  • ವಿಶ್ವಸಂಸ್ಥೆಯ ಮಾನಸಿಕ ಆರೋಗ್ಯ ಅಭಿವೃದ್ಧಿ ಸಮಿತಿ ಮತ್ತು ವಿಶ್ವಸಂಸ್ಥೆಯ ವಯೋವೃದ್ಧಿ ಕುರಿತ ಸಮಿತಿ, ನ್ಯೂಯಾರ್ಕ್.
  • ಆರೋಗ್ಯ ಮತ್ತು ಶ್ಷಿಕಣ ಅಭಿವೃದ್ಧಿಯ ಅಂತರ್‍ರಾಷ್ಟ್ರೀಯ ಒಕ್ಕೂಟ, ಪ್ಯಾರಿಸ್.
  • ಆರೋಗ್ಯ ಸುಧಾರಣೆಯ ಸ್ವಯಂಸೇವಾ ಸಂಸ್ಥೆಗಳ ವೇದಿಕೆ, ಜಿನೀವಾ.

ಜೀವನ ಕಲಾಸಂಸ್ಥೆಯ ದಿನಾಚರಣೆ:

  • ಮಾನವೀಯ ಮೌಲ್ಯಗಳ ಸಪ್ತಾಹ - ಲೂಯಿಸಾನಾ. ಫೆಬ್ರವರಿ, 23, 2007.
  • ಮಾನವೀಯ ಮೌಲ್ಯಗಳ ಸಪ್ತಾಹ - ಬಾಲ್ಟಿಮೋರ್‍, ಮಾರ್ಚ್ 25, 31, 2007.
  • ಮಾನವೀಯ ಮೌಲ್ಯಗಳ ಸಪ್ತಾಹ – ಕೊಲಂಬಿಯ – ಮಾರ್ಚ್ 2007.
  • ಜೀವನ ಕಲಾಸಂಸ್ಥೆಯ ಸ್ಥಾಪನಾದಿನದ ಆಚರಣೆ - ಸೆೃರಾಕ್ಯೂಸ್ ಮೇ 7, 2004.