ಉಚಿತ ಪರಿಚಯ ಭಾಷಣ

ಜೀವನದ ಕಲಾ ಸಂಸ್ಥೆಯ  ಆನಂದದ ಅನುಭೂತಿ ಶಿಬಿರ

ನಿಮ್ಮೊಳಗೆ ಬೆಳಕಿಗೆ ಬಾರದ, ವಿಶಾಲವಾದ ಸಾಮರ್ಥ್ಯವು ಅಡಗಿದೆ.  ಜೀವನ ಕಲಾ ಶಿಬಿರದ ಮೂಲಕ ಈ ಗುಪ್ತ ಸಾಮರ್ಥ್ಯವನ್ನು ಹೊರತರಲಾಗುತ್ತದೆ. ಇದರಿಂದ ನೀವು ಯಾರು ಎಂಬುದರ ಬಗ್ಗೆ ಒಂದು ಮಹತ್ತರವಾದ ದೃಷ್ಟಿಕೋನವನ್ನು ಹೊಂದುವಿರಿ. ಇದರಲ್ಲಿ ನೀವು ಸುದರ್ಶನ ಕ್ರಿಯೆಯ ಅನುಭವವನ್ನು ಪಡೆಯುತ್ತೀರಿ. ಇದು ಒಂದು ಪ್ರಭಾವಶಾಲಿಯಾದ ಪ್ರಕ್ರಿಯೆ.  ಇದು ಸಹಜವಾದ, ನಿರ್ದಿಷ್ಟವಾದ ಮತ್ತು ಲಯಬದ್ಧವಾದ ಉಸಿರಾಟದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈ ಶಿಬಿರದ ಅಭ್ಯರ್ಥಿಯಾಗಿ ನೀವು, ನಿಮ್ಮ ಇಡೀ ಜೀವಿತಾವಧಿಗೆ ಲಾಭದಾಯಕವಾಗುವಂತಹ ಕೆಲವು ಪ್ರಾಯೋಗಿಕ  ಹಾಗೂ ಬಲಿಷ್ಠವಾದ ಪ್ರಕ್ರಿಯೆಗಳನ್ನು ಕಲಿಯುವಿರಿ.

ಸಹಜ ಸಮಾಧಿ ಧ್ಯಾನ

ಸಹಜ ಸಮಾಧಿ ಧ್ಯಾನವು ಒಂದು ಪ್ರಭಾವಯುತ ಹಾಗೂ ನಿರಾಯಾಸವಾದ ಧ್ಯಾನದ ಪ್ರಕ್ರಿಯೆ. ಇದು ಜಾಗೃತ ಮನಸ್ಸಿಗೆ ಅಂತರಂಗದಲ್ಲಿ ಅಡಗಿರುವ ಆಳವಾದ ಮೌನವನ್ನು ಅನುಭವಿಸಲು ಅನುವು ಮಾಡಿಕೊಟ್ಟು ವಿಶ್ರಾಂತಿಯನ್ನು ನೀಡುತ್ತದೆ. 'ಸಹಜ' ಎಂದರೆ ಸಂಸ್ಕೃತದಲ್ಲಿ 'ನಿರಾಯಾಸ' ಎಂದರ್ಥ. 'ಸಮಾಧಿ' ಎಂದರೆ ಆಳವಾದ ಧ್ಯಾನದ ಪರಮಾನಂದದ ಸ್ಥಿತಿ. 'ಸಹಜ ಸಮಾಧಿ ಧ್ಯಾನ'ವು ಒಂದು ಸಹಜ ಮತ್ತು ನಿರಾಯಾಸವಾದ ಧ್ಯಾನದ ಪ್ರಕ್ರಿಯೆ. ಇದು ಜಾಗೃತಾವಸ್ಥೆ, ನಿದ್ರಾವಸ್ಥೆ ಹಾಗೂ ಸ್ವಪ್ನಾಸ್ಥೆಯ ಮೂರು ಸ್ಥಿತಿಗಳನ್ನೂ ಮೀರಿದ ಮನಸ್ಥಿತಿಯಾಗಿರುತ್ತದೆ. ಇದು ಅಪರಿಮಿತವಾದ ಚೈತನ್ಯ, ಬುದ್ಧಿ ಹಾಗೂ ರಚನಾತ್ಮಕ ಶಕ್ತಿಯ ಕಣಜ, ಅಲ್ಲದೇ, ಅದ್ಭುತವಾದ ಪ್ರಶಾಂತತೆ ಹಾಗೂ ನೆಮ್ಮದಿಯ ತಾಣ. ಈ ಧ್ಯಾನದ ಅಭ್ಯಾಸದಲ್ಲಿ ನಿಮ್ಮ ಮನಸ್ಸು ನಿರಾಯಾಸವಾಗಿ ಈ ಸಮಾಧಿಯ ಸ್ಥಿತಿಯನ್ನು ತಲುಪುತ್ತದೆ. ಈ ಧ್ಯಾನವನ್ನು ಮುಗಿಸಿದ ನಂತರ ನಿಮಗೆ ಪ್ರಾಣಶಕ್ತಿ, ಸ್ಪಷ್ಟವಾದ ಯೋಚನಾಲಹರಿ ಹಾಗೂ ಸೃಜನಶೀಲತೆಯ ಗುಣಗಳ ಅನುಭವವಾಗುವುದು. ಎಲ್ಲದಕ್ಕೂ ಮಿಗಿಲಾಗಿ ಅಂತರಂಗದಲ್ಲಿ ಆಳವಾದ ನೆಮ್ಮದಿಯನ್ನು ಅನುಭವಿಸುವಿರಿ.

ಯುವ ಸಬಲೀಕರಣ ಮತ್ತು ಕೌಶಲ್ಯ ಕಾರ್ಯಾಗಾರ( ವೈ.ಯಿ.ಎಸ್. ಪ್ಲಸ್ ಶಿಬಿರ)

ನಿರ್ದಿಷ್ಟವಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿಯೇ ರಚಿಸಿರುವ ಈ ಯೆಸ್ ಪ್ಲಸ್ ! ಒಂದು ಅದ್ಭುತವಾದ ಕಾರ್ಯಾಗಾರ. ಇದರಲ್ಲಿ ವಿದ್ಯಾರ್ಥಿಗಳಿಗೆ ತಮ್ಮೊಳಗೆ ಹುದುಗಿರುವ  ಬೆಳಕಿಗೆ ಬಾರದಿರುವ ಅಪರಿಮಿತವಾದ ಸಾಮರ್ಥ್ಯದ ಅನುಭವವಾಗುತ್ತದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗೆ 'ನಾನು ಯಾರು ? ನನಗೆ ಈ ಜೀವನದಿಂದ ಏನು ಬೇಕು ?' ಎಂಬುದರ ಬಗ್ಗೆ ವಿಶಾಲವಾದ ತಿಳುವಳಿಕೆಯುಂಟಾಗುತ್ತದೆ. ಈ ಶಿಬಿರದ ಹೃದಯವಾದ “ ಸುದರ್ಶನ ಕ್ರಿಯೆ ( ಒಂದು ನಿರ್ದಿಷ್ಟವಾದ, ಸಹಜವಾದ ಮತ್ತು ಲಯಬದ್ಧವಾದ ಉಸಿರಾಟದ ಪ್ರಕ್ರಿಯೆ) ಯ ಅನುಭವವವನ್ನು ಪಡೆದುಕೊಳ್ಳಿ. ಒಂದು ಸಂಕಲ್ಪಿತ  ಆನಂದಮಯವಾದ ಜೀವನವನ್ನು ಹಾಗೂ ಸೀಮಿತವಾದ ನಂಬಿಕೆಗಳನ್ನು ಮೀರಿ ವಿಸ್ತಾರವಾಗಿ  ಬೆಳೆಯುವ  ಆತ್ಮವಿಶ್ವಾಸವನ್ನು ನೀವು ಇಲ್ಲಿ ಕಂಡುಕೊಳ್ಳುವಿರಿ

ನಿಮ್ಮ ಬಳಿ ಇರುವ ಕೇಂದ್ರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ