ವಿಶ್ವ ದಾಖಲೆಗಳು
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಂಗೀತದ ಮೂಲಕ ವೈವಿಧ್ಯವನ್ನು ಸಂಭ್ರಮಿಸುತ್ತದೆ ಹಾಗೂ ಸಂಸ್ಕೃತಿಗಳನ್ನು ಒಂದುಗೂಡಿಸುತ್ತದೆ.
ಅಂತರ-ಧರ್ಮೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಧ್ಯೇಯವಾಕ್ಯಗಳಲ್ಲಿ ಒಂದು. ವಿವಿಧತೆಯನ್ನು ಸಂಭ್ರಮಿಸಬೇಕು ಎಂದು ಗುರುದೇವ ಶ್ರೀ ಶ್ರೀ ರವಿ ಶಂಕರರು ಹೇಳುತ್ತಾರೆ. ವಿವಿಧತೆಯನ್ನು ಅನುಭವಕ್ಕೆ ತಂದುಕೊಳ್ಳಲು ಸಂಗೀತಕ್ಕಿಂತ ಉತ್ತಮವಾದ ಮಾರ್ಗ ಇನ್ನೊಂದಿಲ್ಲ!
ಸ್ಕಾಟ್ಲೆಂಡ್‌ನ ಮನಮೋಹಕ ಬ್ಯಾಗ್‌ಪೈಪ್‌ಗಳಿಂದ ಸಿತಾರ್‌ನ ಲಯಬದ್ಧ ಸ್ವರಗಳವರೆಗೆ, ಸಂಗೀತವು ಸಮಾಜಗಳ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ತಮ ಸಾಧನವಾಗಿದೆ. ಈ ನಿಟ್ಟಿನಲ್ಲಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಅಭೂತಪೂರ್ವ ಸಂಖ್ಯೆಯ ಕಲಾವಿದರನ್ನು ಮತ್ತು ಕಲಾಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ಪದೇಪದೇ ಸೇರಿಸುತ್ತಿರುವುದು ಒಂದು ಅದ್ಭುತ ಸಾಧನೆಯೇ ಸರಿ.
ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ!
ವಿಶ್ವ ದಾಖಲೆಯ ಕಾರ್ಯಕ್ರಮಗಳು
ಮೋಹಿನಿಯಾಟ್ಟಂ
28 ನವೆಂಬರ್ 2006

ಅನ್ನಮ್ ಬ್ರಹ್ಮ
2 ನವೆಂಬರ್ 2010

ಅಂತರ್ನಾದ
12 ಜನವರಿ 2010

ಮೆಹ್ರಾನ್ ದೇ ರಂಗ್
11 ನವೆಂಬರ್ 2010

ಬ್ರಹ್ಮನಾದd
21 ನವೆಂಬರ್ 2008

ಅಭಂಗ ನಾದ
21 ಫೆಬ್ರವರಿ 2011

World records held By The Art of Living
1. 9 ಜನವರಿ, 2013 – ಶಾಂತಿಯ ಕಹಳೆ
444 ಸಂಗೀತಗಾರರನ್ನು ಒಳಗೊಂಡಿದ್ದ ಅತಿದೊಡ್ಡ ಕಹಳೆ ಮೇಳವನ್ನು ಕೇರಳದ ಕೊಲ್ಲಂನಲ್ಲಿ ಸಂಸ್ಥೆಯು ಏರ್ಪಡಿಸಿತ್ತು. ಎಲ್ಲರೂ ಏಕಕಾಲದಲ್ಲಿ ಭಾರತೀಯ ಕೊಂಬು ಅಥವಾ ಶೃಂಗ ಎಂದು ಕರೆಯಲ್ಪಡುವ ಕಹಳೆಯನ್ನು ನುಡಿಸಿದರು. ಪ್ರದರ್ಶನವು 25 ನಿಮಿಷಗಳ ಕಾಲ ನಡೆಯಿತು.2. 13 ನವೆಂಬರ್, 2012 – ಶಾಂತಿ ಮತ್ತು ಸಾಮರಸ್ಯಕ್ಕಾಗಿ ದೀಪ ಬೆಳಗುವಿಕೆ
ದೀಪಾವಳಿಯ ದಿನದಂದು ಭಾರತದ ಅಹಮದಾಬಾದ್ ನಗರದಲ್ಲಿ 12,135 ಮೋಂಬತ್ತಿಗಳನ್ನು ಬೆಳಗುವ ಮೂಲಕ ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅತಿ ಹೆಚ್ಚು ಮೋಂಬತ್ತಿಗಳನ್ನು ಬೆಳಗಿದ ವಿಶ್ವದಾಖಲೆಯನ್ನು ಆರ್ಟ್ ಆಫ್ ಲಿವಿಂಗ್ ಸ್ಥಾಪಿಸಿತು.3. 16 ಮೇ, 2012 – ಬಲ್ಗೇರಿಯನ್ ಬ್ಯಾಗ್‌ಪೈಪ್ಸ್
ಬಲ್ಗೇರಿಯಾದ ಸೋಫಿಯಾದಲ್ಲಿರುವ ನ್ಯಾಷನಲ್ ಪ್ಯಾಲೇಸ್ ಆಫ್ ಕಲ್ಚರ್‌ನಲ್ಲಿ ಆಯೋಜಿಸಿದ್ದ ಬ್ಯಾಗ್‌ಪೈಪ್ ಸಂಗೀತಮೇಳದಲ್ಲಿ333 ಜನರು ಭಾಗವಹಿಸಿದ್ದರು. ಈ ಸಂಗೀತಮೇಳವು ಜಗತ್ತಿನ ಅತಿದೊಡ್ಡ ಬ್ಯಾಗ್‌ಪೈಪ್ ಮೇಳ ಎಂಬ ಕೀರ್ತಿಗೆ ಪಾತ್ರವಾಗಿದೆ.4. 17 ಜನವರಿ, 2012 – ತಾಲ್ ನಿನಾದ್
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸೋಲಾಪುರದ ಹುಂಬರವಾಡಿ ಎಸ್ಟೇಟ್‌ನಲ್ಲಿ ನಡೆಸಿದ್ದ ತಬಲಾವಾದನ ಮೇಳದಲ್ಲಿ 1230 ಜನರು ಭಾಗವಹಿಸಿ ವಿಶ್ವದಾಖಲೆ ನಿರ್ಮಿಸಿದರು.
5. 21 ಫೆಬ್ರವರಿ, 2011 – ಅಭಂಗ ನಾದ್
ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆಯೋಜಿಸಿದ್ದ ಡೋಲುವಾದನ ಕಾರ್ಯಕ್ರಮದಲ್ಲಿ 1,356 ಜನರು ಭಾಗವಹಿಸಿದ್ದರು. ಇದೊಂದು ವಿಶ್ವದಾಖಲೆ. (ಅವಧಿ: ಸುಮಾರು 23 ನಿಮಿಷಗಳು)
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತಪೂರ್ವ ಚಳುವಳಿಯನ್ನು ಮುನ್ನಡೆಸಿದ್ದಾರೆ.
6. 12 ಫೆಬ್ರವರಿ, 2011 – ನಾಟ್ಯ ವಿಸ್ಮಯಂ
ಕೇರಳದ ತಿರುವನಂತಪುರದ ಪುತ್ತರಿಕ್ಕಂಡಂ ಮೈದಾನದಲ್ಲಿ ಆಯೋಜಿಸಿದ್ದ ಕಥಕ್ಕಳಿ ನೃತ್ಯ ಕಾರ್ಯಕ್ರಮದಲ್ಲಿ 150 ಕಲಾವಿದರು ಭಾಗವಹಿಸಿದ್ದರು. (ಅವಧಿ: ಸುಮಾರು 20 ನಿಮಿಷಗಳ ತಲಾ 2 ಪ್ರದರ್ಶನಗಳು)7. ಜನವರಿ 30, 2011 – ನಾದ ವೈಭವಂ
ಭಾರತದ ಚೆನ್ನೈ ನಗರದ ಪೆರುಂಗಲತ್ತೂರ್ ಪ್ರದೇಶದಲ್ಲಿ ಏರ್ಪಡಿಸಿದ್ದ ವೃಂದಗಾಯನ ಕಾರ್ಯಕ್ರಮದಲ್ಲಿ 121,440 ಗಾಯಕರು ಭಾಗವಹಿಸಿ ಜಗತ್ತಿನ ಅತಿದೊಡ್ಡ ವೃಂದಗಾಯನ ತಂಡ ಎಂಬ ದಾಖಲೆಯನ್ನು ಬರೆದರು.8. 11 ನವೆಂಬರ್ 2010 – ಮೆಹ್ರಾನ್ ದೇ ರಂಗ್
ಪಂಜಾಬಿನ ಲುಧಿಯಾನದಲ್ಲಿರುವ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ಭಾಂಗ್ರಾ ನೃತ್ಯ ಕಾರ್ಯಕ್ರಮದಲ್ಲಿ 2,100 ಜನರು ಭಾಗವಹಿಸಿದ್ದರು. ಇದೊಂದು ದಾಖಲೆ. (ಅವಧಿ: ಸುಮಾರು 15 ನಿಮಿಷಗಳು)
9. 2 ನವೆಂಬರ್ 2010 – ಅನ್ನಮ್ ಬ್ರಹ್ಮ
ಭಾರತದ ಅಹಮದಾಬಾದಿನ ಶ್ರೀ ಶ್ರೀ ಧಾಮದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಏರ್ಪಡಿಸಿದ್ದ ಸಸ್ಯಾಹಾರಿ ಆಹಾರ ಮೇಳದಲ್ಲಿ 5612 ವಿಭಿನ್ನ ಭಕ್ಷ್ಯಗಳನ್ನು ತಯಾರಿಸಿ ಪ್ರದರ್ಶಿಸಲಾಗಿತ್ತು. ಇದನ್ನು ಜಗತ್ತಿನ ಅತಿಹೆಚ್ಚು ಭಕ್ಷ್ಯಗಳ ಆಹಾರ ಮೇಳ ಎಂದು ಗುರುತಿಸಲಾಗಿದೆ.
10. ಜನವರಿ 12, 2010 – ಅಂತರ್ನಾದ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮಹಾರಾಷ್ಟ್ರದ ಪುಣೆ ನಗರದಲ್ಲಿ ಏರ್ಪಡಿಸಿದ ʼಅಂತರ್ನಾದʼ ಕಾರ್ಯಕ್ರಮದಲ್ಲಿ ದಾಖಲೆಯ 1,04,637 ಗಾಯಕರು ಭಾಗವಹಿಸಿ ಏಕಕಾಲದಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡಿದರು. (ಅವಧಿ: 5 ನಿಮಿಷಗಳಿಗಿಂತ ಹೆಚ್ಚು)
11. ನವೆಂಬರ್ 21, 2008 – ಬ್ರಹ್ಮನಾದ
ದೆಹಲಿಯ ನೋಯ್ಡಾದಲ್ಲಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ಸಿತಾರ್ ವಾದನ ಕಾರ್ಯಕ್ರಮದಲ್ಲಿ 1,094 ಕಲಾವಿದರು ಭಾಗವಹಿಸಿದ್ದರು. (ಅವಧಿ: ತಲಾ ಸುಮಾರು 7 ನಿಮಿಷಗಳ 3 ಸಿಂಫನಿಗಳು)12. ನವೆಂಬರ್ 28, 2006 – ಮೋಹಿನಿಯಾಟ್ಟಂ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರಜತ ಮಹೋತ್ಸವ ಆಚರಣೆಯ ಭಾಗವಾಗಿ ಕೇರಳದ ಕೊಚ್ಚಿಯಲ್ಲಿರುವ ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನದಲ್ಲಿ ಅತಿ ಹೆಚ್ಚು ಸಂಖ್ಯೆಯ 1,200 ಜನರು ಭಾಗವಹಿಸಿದ್ದರು. (ಅವಧಿ: ಸುಮಾರು 12 ನಿಮಿಷಗಳು)
ಅತ್ಯಂತ ಜನಪ್ರಿಯ ಕಾರ್ಯಕ್ರಮಗಳು
ವಿಶ್ವ ಸಂಸ್ಕೃತಿ ಉತ್ಸವ 2016
ಮಾರ್ಚ್ 2016 ರಲ್ಲಿ ಆರ್ಟ್ ಆಫ್ ಲಿವಿಂಗ್ ತನ್ನ 35ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಬನ್ನಿ, ಭವ್ಯವಾದ ನೆನಪುಗಳನ್ನು ಮೆಲುಕು ಹಾಕುತ್ತ ಜಾಗತಿಕ ವಿವಿಧತೆಯ ಚೆಲುವಿನಲ್ಲಿ ಮೈಮರೆಯಿರಿ.
ವಿಶ್ವ ಸಂಸ್ಕೃತಿ ಉತ್ಸವ
ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ತನ್ನ ಸ್ಥಾಪನೆಯ 30ನೇ ವಾರ್ಷಿಕೋತ್ಸವವನ್ನು ವಿಶ್ವ ಸಂಸ್ಕೃತಿ ಉತ್ಸವದ ರೂಪದಲ್ಲಿ ಆಚರಿಸಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಪಂಚದಾದ್ಯಂತ 151 ದೇಶಗಳ 5.50 ಕೋಟಿಗಿಂತಲೂ ಹೆಚ್ಚು ಜನರು ಪ್ರಯೋಜನವನ್ನು ಪಡೆದಿದ್ದಾರೆ.
ರಜತಮಹೋತ್ಸವದ ಆಚರಣೆ
ಗುರುದೇವ ಶ್ರೀ ಶ್ರೀ ರವಿ ಶಂಕರರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಿದ ಐತಿಹಾಸಿಕ ಧ್ಯಾನ ಕಾರ್ಯಕ್ರಮದಲ್ಲಿ ನೂರೈವತ್ತಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿದ ಮೂವತ್ತು ಲಕ್ಷ ಜನರು ಭಾಗವಹಿಸಿ ಜಾಗತಿಕ ಶಾಂತಿ, ಅಹಿಂಸೆ ಮತ್ತು ಗಡಿಗಳನ್ನು ಮೀರಿದ ಏಕತೆಗಾಗಿ ಒಮ್ಮನಸ್ಸಿನಿಂದ ಪ್ರಾರ್ಥಿಸಿದರು.
ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ
ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವು ಜಾಗತಿಕ ಮಟ್ಟದ ಮಹಿಳಾ ನಾಯಕಿಯರನ್ನು ಒಂದೇ ವೇದಿಕೆಯಲ್ಲಿ ತಂದು ಸಂವಾದ ಮತ್ತು ಕಾರ್ಯಾಗಾರಗಳ ಮೂಲಕ ಮಹಿಳಾ ಸಬಲೀಕರಣ, ನಾಯಕತ್ವ ಮತ್ತು ಶಾಂತಿಗಾಗಿ ಕಾರ್ಯರತವಾಗಿದೆ.
ವ್ಯವಹಾರದಲ್ಲಿ ನೈತಿಕತೆಗಾಗಿ ವಿಶ್ವ ವೇದಿಕೆ
ʼವ್ಯವಹಾರದಲ್ಲಿ ನೈತಿಕತೆಗಾಗಿ ವಿಶ್ವ ವೇದಿಕೆʼಯು ನೈತಿಕ ನಾಯಕತ್ವ ಮತ್ತು ಆಡಳಿತವನ್ನು ಪ್ರೋತ್ಸಾಹಿಸುತ್ತದೆ. ಇದು ಮೌಲ್ಯಾಧಾರಿತ ವ್ಯವಹಾರ ಅಭ್ಯಾಸಗಳನ್ನು ಉತ್ತೇಜಿಸಲು ಸಂವಾದ, ವಿಚಾರ ಸಂಕಿರಣ ಮತ್ತು ಸಹಭಾಗಿತ್ವಗಳಿಗಾಗಿ ಜಾಗತಿಕ ಮಟ್ಟದಲ್ಲಿ ವೇದಿಕೆಗಳನ್ನು ಕಲ್ಪಿಸುತ್ತದೆ.
ಜಾಗತಿಕ ನಾಯಕತ್ವ ವೇದಿಕೆ 2023
ಜಾಗತಿಕ ನಾಯಕತ್ವ ವೇದಿಕೆ (GLF)ಯು ಉದ್ಯಮ, ಸರಕಾರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸುಮಾರು ಸಾವಿರಕ್ಕೂ ಹೆಚ್ಚು ನಾಯಕರನ್ನು ಒಂದೆಡೆ ಸೇರಿಸಿ ವಿಚಾರ ಮತ್ತು ಪರಿಹಾರಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ತನ್ಮೂಲಕ ಸಮಕಾಲೀನ ಔದ್ಯಮಿಕ ಮತ್ತು ಸಾಮಾಜಿಕ ಸವಾಲುಗಳನ್ನು ಸಹಭಾಗಿತ್ವದ ನೆಲೆಯಲ್ಲಿ ಎದುರಿಸಲು ಸಹಾಯ ಮಾಡುತ್ತದೆ.
ಧ್ಯಾನ: ಸಾಮಾಜಿಕ ಕ್ರಾಂತಿ
2024ರಲ್ಲಿ ಡಿಸೆಂಬರ್ ತಿಂಗಳ 21ನೇ ದಿನಾಂಕವನ್ನು ʼವಿಶ್ವ ಧ್ಯಾನ ದಿನʼವನ್ನಾಗಿ ವಿಶ್ವಸಂಸ್ಥೆಯು ಘೋಷಿಸಿತು. ಆ ಚರಿತ್ರಾರ್ಹ ದಿನದಂದು ಗುರುದೇವರು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಧ್ಯಾನದ ಮಾರ್ಗದರ್ಶನವನ್ನು ನೀಡಿದರು.
