icon-love

44 ವರ್ಷಗಳು ಜೀವನ ಪರಿವರ್ತನೆಯ

icon-earth-globe

10,000+ ವಿಶ್ವಾದ್ಯಂತ ಧ್ಯಾನ ಕೇಂದ್ರಗಳು

icon-location

182 ದೇಶಗಳು

icon-group

80 ಕೋಟಿಗೂ ಅಧಿಕ ಜನರನ್ನು ತಲುಪಿದೆ

ವಿಶ್ವ ಧ್ಯಾನ ದಿನ: ಒಂದು ಜಾಗತಿಕ ಕ್ರಾಂತಿ

ಕಳೆದ ನಾಲ್ಕು ದಶಕಗಳಿಂದ ಗುರುದೇವರು ಲಕ್ಷಾಂತರ ಜನರಿಗೆ ತಮ್ಮ ಅಂತರಂಗದ ಶಕ್ತಿಯನ್ನು ಕಂಡುಕೊಳ್ಳಲು ನೆರವು ನೀಡಿದ್ದಾರೆ. ತನ್ಮೂಲಕ ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ಪರಿವರ್ತನೆಗೆ ಕಾರಣರಾಗಿದ್ದಾರೆ. ಯುದ್ಧಗಳನ್ನು ಕೊನೆಗೊಳಿಸುವುದು ಮತ್ತು ಭಯೋತ್ಪಾದಕರನ್ನು ಶರಣಾಗತರಾಗುವಂತೆ ಮನವೊಲಿಸುವುದರಿಂದ ಹಿಡಿದು ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಮತ್ತು ರೈತರ ಸಬಲೀಕರಣದ ವರೆಗೆ ಗುರುದೇವರು ಧ್ಯಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಗಮನಾರ್ಹ ಪರಿವರ್ತನೆಯನ್ನು ತರಲು ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಅವರ ಕಾರ್ಯಕ್ರಮಗಳ ಮೂಲಕ ಅಸಂಖ್ಯಾತ ಜೈಲು ಕೈದಿಗಳ ಹಾಗೂ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಪರಿವರ್ತನೆ ಉಂಟಾಗಿದೆ. ಯುವಕರಿಗಾಗಿ ಮಾದಕದ್ರವ್ಯ ವರ್ಜನ ಶಿಬಿರಗಳನ್ನು, ಕಾರ್ಪೊರೇಟ್ ಜಗತ್ತಿನ ಸ್ವಾಸ್ಥ್ಯಕ್ಕಾಗಿ ಹಾಗೂ ದೇಶ ದೇಶಗಳ ನಡುವೆ ಸಾಮರಸ್ಯವನ್ನು ಉಂಟು ಮಾಡುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ 180ಕ್ಕೂ ಹೆಚ್ಚು ದೇಶಗಳ ಕೋಟ್ಯಂತರ ಜನರ ಮೇಲೆ ಪ್ರಭಾವ ಬೀರಿದ್ದಾರೆ.

2024ರಲ್ಲಿ, ವಿಶ್ವಸಂಸ್ಥೆಯು ಡಿಸೆಂಬರ್ 21ನೇ ದಿನಾಂಕವನ್ನು ವಿಶ್ವ ಧ್ಯಾನ ದಿನವೆಂದು ಘೋಷಣೆ ಮಾಡಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಗುರುದೇವರು ಡಿಸೆಂಬರ್ 21, 2024 ರಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಧ್ಯಾನದಲ್ಲಿ ಮಾರ್ಗದರ್ಶನ ನೀಡಿದ್ದು ಈ ವರ್ಷವೂ ದಿನಾಂಕ ಡಿಸೆಂಬರ್‌ 21ರಂದು ಮಾರ್ಗದರ್ಶನ ನೀಡಲಿದ್ದಾರೆ.

ಗುರುದೇವರ ಧ್ಯಾನ ಕಾರ್ಯಕ್ರಮಗಳ ಹೆಜ್ಜೆಗಳು

ನಾನು ವಿಶ್ವ ಧ್ಯಾನ ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಬೇಕು 2025?

icon

ಇದೊಂದು ಐತಿಹಾಸಿಕ ಕಾರ್ಯಕ್ರಮ

ಕಾರ್ಯಕ್ರಮದ ಬಗ್ಗೆ ಕೇವಲ ಓದುವುದಕ್ಕಿಂತ ಅದರ ಭಾಗವಾಗುವುದು ಒಳ್ಳೆಯದು. “ವಿಶ್ವಸಂಸ್ಥೆಯ ಮೊದಲ ಜಾಗತಿಕ ಧ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ” ಎಂಬ ಹೆಮ್ಮೆ ಯಾರಿಗೆ ಬೇಡ?

icon

ಜಾಗತಿಕ ಮಟ್ಟದ ಧ್ಯಾನ ಕಾರ್ಯಕ್ರಮ

ಜಗತ್ತಿನಾದ್ಯಂತ ಲಕ್ಷಾಂತರ ಜನರು ಸಾಮೂಹಿಕವಾಗಿ ಧ್ಯಾನ ಮಾಡಲಿದ್ದಾರೆ. ಇದರಿಂದ ಒಬ್ಬೊಬ್ಬರೇ ಧ್ಯಾನ ಮಾಡುವುದಕ್ಕಿಂತ ಅನೇಕ ಪಟ್ಟು ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ.

icon

ಧ್ಯಾನದ ಪರಮಗುರುವಿನ ಮಾರ್ಗದರ್ಶನ

ಗುರುದೇವರ ಮಾರ್ಗದರ್ಶನದಲ್ಲಿ ಮಾಡುವ ಧ್ಯಾನವು ವಿಶಿಷ್ಟ ಅನುಭವವನ್ನು ನೀಡುತ್ತದೆ.

ನೀವು ಉಸಿರಾಡಬಲ್ಲಿರಾದರೆ ನೀವು ಧ್ಯಾನವನ್ನೂ ಮಾಡಬಹುದು!

ಇನ್ನೂ ಕೆಲವು ಪ್ರಶ್ನೆಗಳು…

ನನಗೆ ವಿಶೇಷ ಅರ್ಹತೆಗಳೇನಾದರೂ ಇರಬೇಕೆ?

ನೀವು ಉಸಿರಾಡಬಲ್ಲಿರಾದರೆ ಧ್ಯಾನವನ್ನೂ ಮಾಡಬಹುದು!

ಮಕ್ಕಳೂ ಇದರಲ್ಲಿ ಭಾಗವಹಿಸಬಹುದೆ?

ಹೌದು, ಐದು ವರ್ಷಕ್ಕಿಂತ ದೊಡ್ಡ ಎಲ್ಲ ಮಕ್ಕಳೂ ಭಾಗವಹಿಸಬಹುದು.

ಈ ಮೊದಲು ಧ್ಯಾನ ಮಾಡಿದ ಅನುಭವವಿರಬೇಕೆ?

ಇಲ್ಲ, ಧ್ಯಾನದಲ್ಲಿ ಪರಿಣತಿ ಇರಬೇಕೆಂಬ ನಿಯಮವಿಲ್ಲ – ನೀವು ಬನ್ನಿ, ನಿಮ್ಮ ಉಸಿರಿನೊಂದಿಗೆ ಬನ್ನಿ.

ಈ ಕಾರ್ಯಕ್ರಮಕ್ಕಿಂತ ಮೊದಲು ಧ್ಯಾನದ ಪರಿಚಯವನ್ನು ಮಾಡಿಕೊಳ್ಳಬಹುದೆ?

ಖಂಡಿತವಾಗಿ, ನೀವು ಯೂಟ್ಯೂಬಿನಲ್ಲಿರುವ “ಗುರುದೇವರೊಂದಿಗೆ ಧ್ಯಾನ (Meditations from Gurudev)” ಎಂಬ ಹೆಸರಿನ ಗುರುದೇವರ ಚಾನಲ್‌ನಲ್ಲಿ ಇರುವ ನೂರಾರು ನಿರ್ದೇಶಿತ ಧ್ಯಾನಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬಹುದು.

ಡಿಸೆಂಬರ್ 2024ರಲ್ಲಿ ನ್ಯೂಯಾರ್ಕ್ ದೇಶದ ,ಒನ್ ವರ್ಲ್ಡ್ ಟ್ರೇಡ್ ಸೆಂಟರ್ ನಿಂದ ಪೂಜ್ಯ ಗುರು ದೇವರು ನಡೆಸಿಕೊಟ್ಟ ಆನ್ಲೈನ್ ಧ್ಯಾನ ಶಿಬಿರದಲ್ಲಿ ಸುಮಾರು ಎಂಟುವರೆ ಮಿಲಿಯ ಜನರು ಭಾಗವಹಿಸಿ ಧ್ಯಾನದಿಂದ ದೊರೆಯುವ ಆನಂದವನ್ನು ಕಂಡುಕೊಂಡರು.

2025 ಕ್ಕೆ ನಿಮ್ಮ ಉಚಿತ ಜಾಗವನ್ನು ಉಳಿಸಿ

    *
    *
    *