ಮೊಟ್ಟಮೊದಲನೆಯದಾಗಿ ಒತ್ತಡವೆಂದರೆ ಏನೆಂದು ನಿಮಗೆ ಗೊತ್ತೆ? ಒತ್ತಡವೆಂದರೆ ಮಾಡಲು ಬಹಳ ಇರುವುದು ಮತ್ತು ಅದನ್ನು ಮಾಡಲು ಬಹಳ ಕಡಿಮೆ ಶಕ್ತಿ ಅಥವಾ ಸಮಯವನ್ನು ಹೊಂದಿರುವುದು. ಮಾಡಲು ಬಹಳ ಇದ್ದಾಗ ಮತ್ತು ಅದನ್ನು ಮಾಡಿ ಮುಗಿಸಲು ಸಾಕಷ್ಟು ಸಮಯ ಮತ್ತು ಶಕ್ತಿ ಇಲ್ಲದೆ ಹೋದಾಗ ಒತ್ತಡಕ್ಕೆ ಒಳಗಾಗುತ್ತೇವೆ.

ಹಾಗಿದ್ದರೆ ನಮ್ಮ ಶಕ್ತಿಯ ಮಟ್ಟಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

  1. ಸರಿಯಾದ ಪ್ರಮಾಣದ ಆಹಾರ – ಬಹಳ ಹೆಚ್ಚೂ ಅಲ್ಲ, ಬಹಳ ಕಡಿಮೆಯೂ ಅಲ್ಲ.
  2. ಸರಿಯಾದ ನಿದ್ದೆಯ ಪ್ರಮಾಣ 6-8 ಗಂಟೆಗಳವರೆಗೆ, ಅದಕ್ಕಿಂತಲೂ ಹೆಚ್ಚಲ್ಲ ಅಥವಾ ಕಡಿಮೆಯಲ್ಲ.
  3. ಕೆಲವು ಉಸಿರಾಟದ ವ್ಯಾಯಾಮವನ್ನು ಕಲಿಯಿರಿ – ಇದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚುತ್ತದೆ.
  4. ಕೆಲವು ನಿಮಿಷಗಳ ಧ್ಯಾನದಿಂದ ಎಲ್ಲಾ ರೀತಿಯ ಒತ್ತಡಗಳೂ ನಿವಾರಣೆಯಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ 15-20 ನಿಮಿಷಗಳವರೆಗೆ ಧ್ಯಾನ ಮಾಡಿದರೆ ಸಾಕು. ಇದರಿಂದ ನೀವು ಮುಂದಕ್ಕೆ ಸಾಗುತ್ತಿರುತ್ತೀರಿ.

ಎಲ್ಲದ್ದಕ್ಕೂ ಮೊದಲನೆಯ ಸಲ ಎಂಬುದೊಂದಿದೆ. ಆದರೆ ನೀವು ಒತ್ತಡಕ್ಕೆ ಒಳಗಾಗಿರುವುದು ಇದೇನೂ ಮೊದಲನೆಯ ಸಲ ಅಲ್ಲ!

ನಿಮಗೆ ಆ ರೀತಿಯಾಗಿ ಅನಿಸಿದಂತಹ ಕ್ಷಣಗಳತ್ತ ಸ್ವಲ್ಪ ಹಿಂದಿರುಗಿ ನೋಡಿ! “ಇಷ್ಟೇ, ಇದೇ ಜಗತ್ತಿನ ಕೊನೆ!” ಎಂದುಕೊಂಡಿರಿ. ಆದರೆ ಆ ಕ್ಷಣಗಳನ್ನೂ ದಾಟಿ ಬಂದಿರಿ ಮತ್ತು ಈಗ ಜೀವಂತರಾಗಿ ಮುಂದುವರಿಯುತ್ತಿರುವಿರಿ. ಗತದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೀರಿ ಮತ್ತು ಅವುಗಳನ್ನೆಲ್ಲಾ ದಾಟಿ ಬಂದಿರುವಿರಿ. ಆದ್ದರಿಂದ, ಈ ಸವಾಲನ್ನೂ ನಿಭಾಯಿಸಬಲ್ಲಿರಿ ಎಂಬ ವಿಶ್ವಾಸವನ್ನು ಹೊಂದಿ.

ನಿಮ್ಮ ದೃಷ್ಟಿಯನ್ನು ವಿಶಾಲವಾಗಿ ಮಾಡಿಕೊಳ್ಳಿ! ವಿಶ್ವದಲ್ಲಿ ವಿಷಯಗಳು ಬೇರೊಂದು ನಿಯಮಕ್ಕೆ ಅನುಗುಣವಾಗಿ ನಡೆಯುತ್ತವೆ.

ನೀವು ಜನರನ್ನು ಬಹಳ ಚೆನ್ನಾಗಿ ನಡೆಸಿಕೊಳ್ಳುತ್ತೀರಿ ಆದರೂ ಕೆಲವರು ದಿಢೀರೆಂದು ನಿಮ್ಮ ಶತೃಗಳಾಗಿಬಿಡುತ್ತಾರೆ. ನಿಮ್ಮ ಸ್ನೇಹಿತರು ನಿಮ್ಮ ಶತೃಗಳಾಗುತ್ತಾರೆ ಮತ್ತು ಇದಕ್ಕೆ ವಿರುದ್ಧವಾದದ್ದೂ ನಡೆಯುತ್ತದೆ. ಯಾರಿಗೋ ನೀವು ದೊಡ್ಡ ಸಹಾಯವನ್ನೇನೂ ಮಾಡಿರುವುದಿಲ್ಲ, ಆದರೆ ನಿಮಗೆ ಅವಶ್ಯಕವಾದಾಗ, ನಿಮ್ಮ ಸಹಾಯಕ್ಕೆ ನಿಜವಾಗಿಯೂ ಬಂದು ನಿಲ್ಲುತ್ತಾರೆ. ಆದ್ದರಿಂದ, ಸ್ನೇಹ ಅಥವಾ ವೈರತ್ವವೂ ವಿಶ್ವದ ಯಾವುದೋ ಒಂದು ವಿಶೇಷ ನಿಯಮದಂತೆ ನಡೆಯುತ್ತದೆ ಮತ್ತು ಅದನ್ನು ಕರ್ಮ ಎಂದು ಕರೆಯುತ್ತಾರೆ. ನಿಮ್ಮ ಸಮಯ ಒಳ್ಳೆಯದಾಗಿದ್ದಾಗ, ನಿಮ್ಮ ಅತೀ ನಿಕೃಷ್ಟ ಶತೃವೂ ಸಹ ಸ್ನೇಹಿತರಂತೆ ವರ್ತಿಸುತ್ತಾರೆ. ನಿಮ್ಮ ಸಮಯ ಕೆಟ್ಟದಾಗಿದ್ದಾಗ, ನಿಮ್ಮ ಆಪ್ತಮಿತ್ರರೂ ಸಹ ಒಂದು ಶತೃವಿನಂತೆ ವರ್ತಿಸುತ್ತಾರೆ. ಆದ್ದರಿಂದ ವಿಷಯಗಳನ್ನು ವಿಶಾಲವಾದ ಆಯಾಮದಿಂದ ಕಾಣಿ. ಸಹನೆಯನ್ನು ಹೊಂದಿ. ಈ ಸಮಯವೂ ಹೊರಟು ಹೋಗುತ್ತದೆ.

ತಾಳ್ಮೆಯಿಂದಿರಿ. ಇದುವೂ ಸಹ ಹೊರಟು ಹೋಗುತ್ತದೆ.

ಕೆಲವೊಮ್ಮೆ ಬಿಟ್ಟು ಬಿಡಬೇಕೆಂದು ಅನಿಸುತ್ತದೆ. ನಮಗೆ ಆಶಾಭಂಗ ಉಂಟಾಗುತ್ತದೆ. ಇದರ ಕಾರಣ ಒತ್ತಡ. ಆ ಸಮಯಗಳಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ಅದರ ಬಗ್ಗ್ಗೆ ನೀವು ಪ್ರಶ್ಚಾತ್ತಾಪ ಪಡಬಹುದು. ಮೊದಲು ನಿಮ್ಮೆಡೆಗೆ ಮರಳಿ ಬನ್ನಿ. ನಿಮ್ಮೆಡೆಗೆ ಮರಳಿ ಬರಲು ನಿಮಗೆ ನೀವು ಸಮಯವನ್ನು ಕೊಟ್ಟಾಗ, ಇದರಿಂದ ಒತ್ತಡದ ನಿವಾರಣೆಯೂ ಆಗುತ್ತದೆ.

ನಡೆಯಿರಿ, ಕುಳಿತುಕೊಳ್ಳಿ, ಸೂರ್ಯಾಸ್ತಮವನ್ನು ನೋಡಿ.

ಬಹುಶಃ ಕೆಲವು ನಗರಗಳ ಪ್ರದೇಶಗಳಲ್ಲಿ, ಎಲ್ಲೆಡೆಯೂ ಬೃಹತ್ ಕಟ್ಟಡಗಳಿರುವುದರಿಂದ ಸೂರ್ಯಸ್ತವನ್ನು ಕಾಣಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ ಸಾಧ್ಯವಾದಷ್ಟೂ ಪ್ರಕೃತಿಯೊಡನಿರಿ. ಮಕ್ಕಳೊಡನೆ ಆಟವಾಡುವುದು, ಇತ್ಯಾದಿಯೂ ಸಹಾಯ ಮಾಡುತ್ತದೆ. ಆದರೆ ದುರದೃಷ್ಟಕರವಾಗಿ ಸುಮ್ಮನೆ ಸೋಫಾದ ಮೇಲೆ ಕುಳಿತು ದೂರದರ್ಶನವನ್ನು ನೋಡುತ್ತಾ, ಕುರುಕಲು ತಿಂಡಿಯನ್ನು ತಿನ್ನುತ್ತಿರುತ್ತೀರಿ. ಇದರಿಂದಾಗಿ ಸಮಾಜದ ಆರೋಗ್ಯವು ಬಹಳ ಬಾಧಿಸಲ್ಪಟ್ಟಿದೆ. ಆರೋಗ್ಯಕರವಾದ ಸಮಾಜಕ್ಕಾಗಿ ನಮ್ಮ ರೀತಿಗಳನ್ನು ಬದಲಿಸಕೊಳ್ಳಬೇಕಾಗಿದೆ.

ಕೊನೆಯದಾಗಿ, ಒತ್ತಡವು ಆರಂಭವಾಗುವ ಮೊದಲೇ ಅದನ್ನು ನಿಲ್ಲಿಸಿ!

“ಯುದ್ಧಭೂಮಿಯಲ್ಲಿ ಶಸ್ತ್ರಾಭ್ಯಾಸವನ್ನು ಕಲಿಯಲು ಸಾಧ್ಯವಿಲ್ಲ” ಎಂಬ ಹೇಳಿಕೆಯಿದೆ. ಆ ಸ್ಥಿತಿಗೆ ತಲುಪುವ ಮೊದಲೇ ಶಸ್ತ್ರಾಭ್ಯಾಸವನ್ನು ಮಾಡಿರಬೇಕು. ನೀವು ಒತ್ತಡಕ್ಕೆ ಒಳಗಾದ ನಂತರ, ಪರಿಹಾರವನ್ನು ಪಡೆದುಕೊಳ್ಳುವುದು ಹೆಚ್ಚು ಕಷ್ಟ. ಆದರೆ ಆ ಹಂತದವರೆಗೆ ಹೋಗದ ಹಾಗೆ ನೀವು ಏನನ್ನಾದರೂ ಮಾಡಬೇಕು, ಒತ್ತಡಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳಬೇಕು.

ಒತ್ತಡವನ್ನು ಹೋಗಲಾಡಿಸುವ ದಾರಿಯೆಂದರೆ, ನೀವು ವರ್ತಿಸುವ ರೀತಿಯನ್ನು ಬದಲಿಸಿ, ನಿಮ್ಮ ಆಹಾರದ ಅಭ್ಯಾಸಗಳನ್ನು ಬದಲಿಸಿ. ನಿಮ್ಮ ಜೀವನದಲ್ಲಿ ನೀವು ಗ್ರಹಿಸಬಹುದಾದ ರೀತಿಯಲ್ಲಿ ನಿಮ್ಮ ಸಂಪರ್ಕದ ಸಾಮಾರ್ಥ್ಯ, ನಿಂದೆಯನ್ನು ತಡೆದುಕೊಳ್ಳುವ ನಿಮ್ಮ ಸಾಮರ್ಥ್ಯ, ಹೀಗೆ ಇವುಗಳೆಲ್ಲದ್ದರಲ್ಲಿ ಸ್ಪಷ್ಟವಾಗಿರುವಂತೆ ಬದಲಿಸಿ. ಹೀಗಾದಾಗ ಜೀವನದ ಬಗ್ಗೆ ನೀವು ಹೊಂದುವ ಒಳನೋಟವೇ ಬದಲಿಸುತ್ತದೆ.

ಆರ್ಟ್ ಆಫ್ ಲಿವಿಂಗ್ ನ ಆಧಾರಸ್ತಂಭವಾದ ಹ್ಯಾಪಿನೆಸ್ ಕಾರ್ಯಕ್ರಮದ ಸುದರ್ಶನಕ್ರಿಯೆಯು ಅನೇಕ ಮಿಲಿಯನ್ ಜನರ ಒತ್ತಡವನ್ನು ನಿವಾರಿಸಲು ಸಹಾಯ  ಮಾಡಿದೆ. ಎಲ್ಲರೂ ಉತ್ತಮವಾದ ವಿಶ್ರಾಂತಿಯನ್ನು ಪಡೆದು, ಅವರ ಜೀವನದ ಗುಣಮಟ್ಟ ಸುಧಾರಿಸುವಂತೆ ಆಗಿದೆ. ನಾಲ್ಕು ಖಂಡಗಳಲ್ಲಿ  ನಡೆಸಲಾದ ಸಂಶೋಧನೆಗಳ ಪತ್ರಿಕೆಗಳನ್ನು ಪ್ರಸಿದ್ಧ ಜರ್ನಲ್ ಗಳಲ್ಲಿ ಪ್ರಕಟಿಸಲಾಗಿದೆ, ಯಾಲೆ ಮತ್ತು ಹಾರ್ವಾರ್ಡ್ ನ ಪ್ರಕಟಣೆಗಳಲ್ಲೂ ಪ್ರಕಟವಾಗಿವೆ. ಕಾರ್ಟಿಸಾಲ್ ಮಟ್ಟದಲ್ಲಿ, ಒತ್ತಡದ ಹಾರ್ಮೋನ್ ಗಳ ಮಟ್ಟದಲ್ಲಿ ಕುಸಿತ, ಒಟ್ಟಾರೆ ಜೀವನದ ಬಗೆಗಿನ ತೃಪ್ತಿ, ಇತ್ಯಾದಿಯಾದ ಅನೇಕ ಲಾಭಗಳನ್ನು ಈ ಸಂಶೋಧನೆಗಳು ತೋರಿಸಿವೆ.

    Hold On! You’re about to miss…

    The Grand Celebration: ANAND UTSAV 2025 

    Pan-India Happiness Program

    Learn Sudarshan Kriya™| Meet Gurudev Sri Sri Ravi Shankar Live

    Beat Stress | Experience Unlimited Joy

    Fill out the form below to know more:

    *
    *
    *
    *