ಯುವಜನ ಸಬಲೀಕರಣ ಮತ್ತು ಕೌಶಲ್ಯ ಕಾರ್ಯಾಗಾರ (ವೈ.ಇ.ಎಸ್.! +)

ಯಶಸ್ಸು ಭರಿತ ವ್ಯಕ್ತಿ ಮತ್ತು ಸಾರ್ಥಕ ವೈಯಕ್ತಿಕ ಜೀವನ ಈ ಎರಡೂ ನಮ್ಮದಾಗಬಹುದೇ ? ಇವೆರಡೂ ನನಗೆ ದೊರಕುವುದೆ ?

ವಿಶಿಷ್ಟವಾಗಿ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರ ತರುಣರಿಗೆ, ಒಂದು ಪ್ರಬಲವಾದ ಜೀವನಾಕೌಶಲ್ಯ ಕಾರ್ಯಕ್ರಮವನ್ನು ವೈಯಕ್ತಿಕ ಸರ್ವಾಂಗೀಣ ಶ್ರೇಷ್ಠತೆಗಾಗಿ ನಿಯೋಜಿಸಲಾಗಿದೆ.                   

ಇದೊಂದು ಯೋಗ, ಪ್ರಾಣಾಯಾಮ (ಉಸುರಿನ ನಿಯಂತ್ರಣ) ಧ್ಯಾನ, ಸುದರ್ಶನ ಕ್ರಿಯೆ ಮತ್ತು ಸಮಕಾಲೀನ ಬೌದ್ಧಿಕ ವಿಚಾರ ವಿನಿಮಯಿಸಲು ಚಟುವಟಿಕೆಗಳೊಂದಿಗೆ ಪ್ರಾಚೀನ ಜ್ಞಾನದ ಸಮ್ಮಿಶ್ರಣದ ಮೃದುವಾದ ಬೆಸುಗೆಯಾಗಿದೆ. ಈ ವೈ.ಇ.ಎಸ್.! + ಕಾರ್ಯಾಗಾರವು ಶಕ್ತಿಸಾಮಥ್ರ್ಯವನ್ನು ವೃದ್ಧಿಗೊಳಿಸಿ, ಜೀವನಕ್ಕೆ ಅತಿ ಅಗತ್ಯವಾದ ನವ ಸ್ಪೂರ್ತಿ ಚೈತನ್ಯವನ್ನು ಚಿಮ್ಮಿಸುತ್ತದೆ. ವೈ.ಇ.ಎಸ್.!+ ಕಾರ್ಯಕ್ರಮವು ವಿಶ್ವದಾದ್ಯಂತ ಅನೇಕ ಪ್ರಮುಖ ವಿದ್ಯಾಕೇಂದ್ರಗಳಲ್ಲಿ ಆಯೋಜಿಸಲಾಗುತ್ತದೆ.

 

1. ಏಕಾಗ್ರತೆಯನ್ನು ಹರಿತಗೊಳಿಸುತ್ತದೆ = ದಿನದಲ್ಲಿ ಹೆಚ್ಚು ಸಮಯದ ಲಾಭ

ಯಾವುದಾದರೂ ಯೋಜನೆ ಅಥವಾ ಪರಿಶೋಧನೆಯಲ್ಲಿ ನಿರತರಾಗುವಾಗ, ಹೆಚ್ಚಿನ ಅಂಶ, ಏಕಾಗ್ರತೆಯು ಒತ್ತಡದೊಂದಿಗೆ ಮೂಡಿ ಬರುತ್ತದೆ. (ನಿಯಮಿತ ಕಾಲ ಪರಿಮಿತಿಯನ್ನು ದಿನಾಗಲೂ ತಲುಪಲಿದ್ದಾಗ) ತತ್ಪಲವಾಗಿ, ಕಾರ್ಯದ ಕ್ಷತೆಯು ಸುಮಾರು ಸುಮಾರು 50% ಶತ ಅಂಶ ಇಳುವರಿಯಾಗುತ್ತದೆ. ಸಮಯವು ಐಶ್ವರ್ಯದಂತೆ, ಪ್ರಶಾಂತವಾದ ಮತ್ತು ಏಕಾಗ್ರತೆಯ ಈ ಚಿತ್ರದಿಂದ ಈ ಎರಡೂ ಲಭಿಸುತ್ತದೆ. ಈ ವೈ.ಇ.ಎಸ್.! + ಕಾರ್ಯತಂತ್ರಗಳು ಅದನ್ನು ತಲುಪಲು ಅತಿ ಸುಲಭಮಾರ್ಗವಾಗಿದೆ. ಚಿತ್ರಪಟ ನೋಡವಾಗಲಾಗಲೀ, ಟೆಲಿವಿಷನ್ ಕಾರ್ಯಕ್ರಮವನ್ನು ಆನಂದಿಸುವಾಗಲಾಗಲೀ ಎರಡುವರೆ ಗಂಟೆ ಕಾಲ ನಾವು ಆ ಚಿತ್ರಪಟಕ್ಕೇ ಹೆಣೆದುಕೊಂಡು ಬಿಟ್ಟಿರುತ್ತೇವೆ. ಅಭ್ಯಾಸ ಮಾಡುವಾಗ, ಅಥವಾ ಉದ್ಯೋಗದಲ್ಲಿ ನಿರತರಾದಾಗ, ಈ ಬಗೆಯ ಏಕಾಗ್ರತೆ ಹೇಗೆ ಸಾಧಿಸುವುದು ?

2. ಶಕ್ತಿ ಚೈತನ್ಯದ ವೃದ್ಧಿ = ಧೃಢವಾದ ವಿಶ್ವಾಸ

ನಮ್ಮ ಕ್ಷಮತೆಯ ಬಗ್ಗೆ ನಮಗೇ ಶಂಕೆ ನಿರ್ಮಾಣವಾದಾಗ, ಆತ್ಮವಿಶ್ವಾಸ ನಶಿಸಿ, ವೇದಿಕೆಯ ಭಯವು ಉಂಟಾಗುತ್ತದೆ : ನನ್ನ ಬಗ್ಗೆ ನನಗೆ ವಿಶ್ವಾಸವಿದೆ (ಆತ್ಮವಿಶ್ವಾಸ) ಅಥವಾ ಏನನ್ನಾದರೂ ಮಾಡಲು ಉದ್ಯುಕ್ತಲಾಗಲಾರೆ ಎಂದು ಎಂದು ಎಣಿಸುತ್ತೇನೆ (ಶಂಕೆ) ಶಂಕೆ ಅಥವಾ ಅಪನಂಬಿಕೆಯು ಪ್ರಾಣಶಕ್ತಿಯು ಬಹಳ ಕಡಿಮೆಯಾಗಿದೆ ಎನ್ನುವ ಗುರುತು ಆಗಿದೆ. ಚೈತನ್ಯವನ್ನು ಮೇಲುಮಟ್ಟದಲ್ಲಿಡುವುದೇ ನಮ್ಮ ಕೌಶಲ್ಯ ! (ಉನ್ನತಿಗೇರಿಸುವುದೇ)               

ವೈ.ಇ.ಎಸ್.!+ ಕಾರ್ಯಕ್ರಮದಲ್ಲಿ ಕಲಿಸುವ ಸದೃಢ ಉಸಿರಾಟದ ಪ್ರಕ್ರಿಯೆಯು ಅಧಿಕ ಚೈತನ್ಯವನ್ನು ನಿಮ್ಮಲ್ಲಿ ತುಂಬಿ, ಶಂಕೆಗಳನ್ನೆಲ್ಲಾ ಕರಗಿಸಿ, ಧೃಢವಾದ ಆತ್ಮವಿಶ್ವಾಸವನ್ನು ತುಂಬುತ್ತದೆ.

3. ನಿರ್ಣಯ ಕ್ರಿಯೆಯು ಸರಳವಾಗುವುದು – ಚುರುಕಾದ ಸ್ವಚ್ಛತೆಯೊಂದಿಗೆ

“ ಕೋಪಗೊಳ್ಳಬೇಡ ”, “ ಅಸೂಯೆ ಪಡಬೇಡ ” ಎಂದು ಈ ರೀತಿಯ ಸಲಹೆ ನೀಡುವುದು ಬಹಳ ಸುಲಭ ಆದರೆ ಪಾಲಿಸುವುದು ಹೇಗೆ ? !                        
ಇದಲ್ಲದೆ, ಈ ರೀತಿಯ ಮನಸ್ಥಿತಿಯಲ್ಲಿ ನಿರ್ಣಯ ತೆಗೆದುಕೊಂಡರೆ, ಖಚಿತವಾದ, ಸರಿಯಾದ ನಿರ್ಣಯ ಪಡೆಯಲು ಸಾಧ್ಯವೆ ? ನಮ್ಮ ಮನಸ್ಸಿನಿಂದ ಒತ್ತಡಗಳನ್ನೆಲ್ಲಾ ನಿವಾರಣೆ ಮಾಡಿ, ತಿಳಿಯಾದ ಮನಸ್ಸಿನಿಂದ, ಪ್ರತಿದಿನದ ಪರಿಸ್ಥಿತಿಗಳನ್ನು ಒಂದೊಂದರಂತೆ, ಸುದರ್ಶನ ಕ್ರಿಯೆಯೊಂದಿಗೆ ಎದುರಿಸಬೇಕಾಗಿದೆ. ಈ ರೀತಿಯಲ್ಲಿ ಪರಿಸ್ಥಿತಿಯ ನೈಜರೂಪವನ್ನು ಅದಿರುವಂತೆಯೇ ಪರಿಗ್ರಹಿಸಿ ಅಚಿತಃಸ್ಪೂರ್ತಿಯಿಂದ ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.