ಮಹಿಳೆಯರ ಸಬಲೀಕರಣ

ಇಂದಿನ ಆರ್ಥಿಕ ಬಿಕ್ಕಟ್ಟಿನಲ್ಲಿ, ಮಕ್ಕಳ ಬೆಳವಣಿಗೆಗೆ ಅಗತ್ಶವಾದ ಹಣಕಾಸನ್ನು ಸಾಬೂನು ಅಥವಾ ಲೂದು ಬತ್ತಿಯ ಉತ್ಪಾದನೆಯಿಂದ ಗಳಿಸಲು ಮಹಿಳೆಯು ಅನೇಕ ಸಾಮಾಜಿಕ ಸವಾಲುಗಳನ್ನು ಈ ದಿನ ಎದುರಿಸಬೇಕಾಗಿದೆ. ಹಾಗಾಗಿ ಮಹಿಳೆಯು ತಾನು ವಹಿಸುತ್ತಿರುವ ಅನೇಕ ಪಾತ್ರಗಳಲ್ಲಿ ಬಹಳ ಕ್ರಿಯಾತ್ಮಕವಾಗಿರುವುದು ಕಂಡು ಬಂದಿದೆ. ಮಹಾರಾಷ್ಟ್ರದ  ವಾರ್ವಾರ್ಹೆರೆ ಎಂಬ ಗ್ರಾಮದಲ್ಲಿ ಮಧ್ಯಪಾನ ಮತ್ತು ಮಾದಕ ದ್ರವ್ಶಗಳನ್ನು ಬಹಿಷ್ಕರಿಸಲು 400 (ನಾಲ್ಕು ನೂರು) ಮಹಿಳೆಯರು ತಮ್ಮ ಧ್ವನಿ ಏರಿಸಿ ಪ್ರತಿಭಟನೆ ನಡೆಸಿದರು. ಶೌಚಾಲಯಗಳ ಕೊರತೆಯಿಂದ ಮಹಿಳೆಯರು ವರ್ಷಗಟ್ಟಲೆ (ದೀರ್ಘಕಾಲದವರೆಗೆ) ಅನಾರೋಗ್ಶದಿಂದ ಬಳಲಬೇಕಾಗಿದೆ ಮತ್ತು ಕಡ್ಡಾಯವಾಗಿ ಹೊರಗಿನ ಮೈದಾನವನ್ನು, ಖಾಲೀ ಜಾಗಗಳನ್ನೂ ಬಳಸಬೇಕಾಗಿದೆ.

ಪ್ರಸ್ತುತ ಸಾಮಾಜಿಕ ಸವಾಲುಗಳನ್ನು ಎದುರಿಸಲು ಹಾಗೂ ಮನಸ್ಸಿನ ಒತ್ತಡವನ್ನು ನಿವಾರಿಸಲು ಅಗತ್ಯವಾದ ಸಾಧನಗಳು ಮತ್ತು ತಂತ್ರಗಳನ್ನು ಒದಗಿಸಿ, ಜೀವನಕಲಾಕೇಂದ್ರವು ಮಹಿಳೆಯರನ್ನು ಸಶಕ್ತಗೊಳಿಸುತ್ತಿದೆ. ಮಹಿಳೆಯರು ಎದುರಿಸುವ ಸವಾಲುಗಳಿಗೆ ಪ್ರಾಯೋಗಿಕವಾಗಿ ತಾವೇ ಪರಿಹಾರವನ್ನು ಕಂಡುಹಿಡಿಯಲು ಪ್ರೋತ್ಸಾಹ ಕೊಟ್ಟು ಪ್ರತಿಯೊಬ್ಬರೂ ತಮ್ಮದೇ ವಿವೇಚನಾಶಕ್ತಿಯಿಂದ ಸ್ವಾವಲಂಬಿಯಾಗುವಂತೆ ಮಾಡುತ್ತದೆ

ನಿಮ್ಮ ದೈನಂದಿನ ಜೀವನದ ಸವಾಲುಗಳನ್ನೆದುರಿಸಲು ಆನಂದದಿಂದ ನಿಮ್ಮನ್ನು ಸಶಕ್ತಗೊಳಿಸಿಕೊಳ್ಳಿ. ಪ್ರತಿದಿನವೂ ವಿನೂತನ ಉತ್ಸಾಹದಿಂದ, ಮತ್ತು ಆದರದಿಂದ ಜೀವನವನ್ನು ಹೇಗೆ ಸ್ವೀಕರಿಸುವುದು ಎನ್ನುವುದನ್ನು ಕಲಿಯಲು ಈ ಅರ್ಜಿಯನ್ನು ಭರ್ತಿಮಾಡಿ.