ಇಂದಿನ ವೇಗಗತಿಯ ಮತ್ತು ಗೊಂದಲಮಯ ಜಗತ್ತಿನಲ್ಲಿ ಆಂತರಿಕ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕಂಡುಕೊಳ್ಳುವುದು ಅನೇಕ ವ್ಯಕ್ತಿಗಳಿಗೆ ಅಗತ್ಯವಾಗಿದೆ. ಚಲನೆಯಿಂದ ನಿಶ್ಚಲತೆಗೆ, ಶಬ್ದದಿಂದ ಮೌನದ ಕಡೆಗೆ ಮಾಡುವ ಪ್ರಯಾಣವೇ ಧ್ಯಾನ. ಎಂದಿಗೂ ಕುಂದದ ಸಂತೋಷ ಮತ್ತು ವಿಕೃತಗೊಳ್ಳದ ಅಥವಾ ವಿಪರೀತವಾಗದ ಪ್ರೇಮವು ತಮ್ಮ ಜೀವನದಲ್ಲಿರಲಿ ಎಂದು ಜನರು ಸಹಜವಾಗಿಯೇ ಬಯಸುತ್ತಾರೆ. ಈ ಧ್ಯಾನವು ನಿಮಗೆ ಅಪರಿಚಿತವಾದುದೇ? ಅಲ್ಲವೇ ಅಲ್ಲ. ನೀವು ಹುಟ್ಟುವ ಮೊದಲು ಕೆಲವು ತಿಂಗಳು ಧ್ಯಾನ ಮಾಡಿದ್ದೀರಿ. ತಾಯಿಯ ಗರ್ಭದಲ್ಲಿದ್ದಾಗ ನೀವು ಏನನ್ನೂ ಮಾಡುತ್ತಿರಲಿಲ್ಲ. ನಿಮಗೆ ಊಟ ಮಾಡುವ ಅಗತ್ಯವೂ ಇರಲಿಲ್ಲ. ಊಟವು ನಿಮ್ಮ ಹೊಟ್ಟೆಗೆ ನೇರವಾಗಿ ಸರಬರಾಜಾಗುತ್ತಿತ್ತು. ನೀವು ತಾಯಿಯ ಹೊಟ್ಟೆಯಲ್ಲಿ ತೇಲಾಡುತ್ತಾ, ಮಗ್ಗುಲು ಮಗುಚುತ್ತಾ,  ಕೆಲವೊಮ್ಮೆ ಅಲ್ಲಿಲ್ಲಿ ಒದೆಯುತ್ತಾ ಸಂತೋಷದಿಂದ ಹಾಯಾಗಿದ್ದಿರಿ.  ಇದೇ ಧ್ಯಾನ ಅಥವಾ ಸಂಪೂರ್ಣ ಆರಾಮದ ಸ್ಥಿತಿ.

ಧ್ಯಾನವು ಶಬ್ದದಿಂದ ಮೌನದೆಡೆಗಿನ ಪ್ರಯಾಣವಾಗಿದೆ.

~ ಗುರುದೇವ ಶ್ರೀ ಶ್ರೀ ರವಿಶಂಕರ್
sattva app logo

#1 ಜಾಗತಿಕ ಧ್ಯಾನದ ಆಪ್

ಬೇಕಾದಾಗ, ಬೇಕಾದಲ್ಲಿ ಗುರುದೇವರಿಂದ ನಿರ್ದೇಶಿತ ಧ್ಯಾನಗಳನ್ನು ಮಾಡಿರಿ!

ಧ್ಯಾನವು ಆತ್ಮಕ್ಕೆ ಆಹಾರ

ನಮ್ಮ ಜೀವನದಲ್ಲಿ ಧ್ಯಾನದಿಂದ ಉಂಟಾಗುವ ಪ್ರಯೋಜನಗಳನ್ನು ಗಮನಿಸಿದಾಗ ಅದು ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ ಹಾಗೂ ಅಗತ್ಯವಾಗಿದೆ ಎಂದು ನಾವು ಭಾವಿಸುತ್ತೇವೆ. ಹಿಂದಿನ ಕಾಲದಲ್ಲಿ ಆತ್ಮಚಿಂತನೆಗಾಗಿ ಮತ್ತು ಜ್ಞಾನಸಾಧನೆಗಾಗಿ ಧ್ಯಾನ ಮಾಡುತ್ತಿದ್ದರು. ಅಂದು ಧ್ಯಾನವು ದುಃಖವನ್ನು ನಿವಾರಿಸುವ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಒಂದು ಮಾರ್ಗವಾಗಿತ್ತು. ಇದು ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವೂ ಆಗಿತ್ತು.  ಆದರೆ ಇಂದಿನ ಕಾಲದಲ್ಲಿ ಜ್ಞಾನಸಾಧನೆಯ ಜೊತೆಜೊತೆಗೆ ಸಾಮಾಜಿಕ ಕೆಡುಕುಗಳು, ಒತ್ತಡ ಮತ್ತು ಆತಂಕಗಳನ್ನು ನಿವಾರಿಸಲೂ ಧ್ಯಾನದ ಅವಶ್ಯಕತೆ ಹೆಚ್ಚಾಗಿದೆ ಎನ್ನಿಸುತ್ತದೆ. ಬದುಕಿನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚುತ್ತಿರುವ ಹಾಗೆಯೇ ನಿಮಗೆ ಧ್ಯಾನದ ಅಗತ್ಯವೂ ಹೆಚ್ಚಾಗುತ್ತದೆ. ಮಾಡಲು ಏನೂ ಕೆಲಸವಿಲ್ಲದಿದ್ದರೆ ನಿಮಗೆ ಧ್ಯಾನದ ಅಗತ್ಯ ಅಷ್ಟಾಗಿ ಇಲ್ಲದಿರಬಹುದು. ಆದರೆ ನಿಮಗೆ ಹೆಚ್ಚು ಕೆಲಸವಿದ್ದಾಗ, ಜೊತೆಗೆ ಆಸೆ ಆಕಾಂಕ್ಷೆಗಳೂ ಇದ್ದಾಗ ಧ್ಯಾನವು ಅತ್ಯಂತ ಅಗತ್ಯವಾಗಿರುತ್ತದೆ.

ಧ್ಯಾನವು ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ  ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸವಾಲುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಧ್ಯಾನದಿಂದ ಆರೋಗ್ಯ ಉತ್ತಮವಾಗುತ್ತದೆ.  ಭಾವನೆಗಳಿಗೆ ಸಂಗೀತವು ಆಹಾರವಾದರೆ, ಜ್ಞಾನವು ಬುದ್ಧಿಯ ಆಹಾರವಾಗಿದೆ. ಮನರಂಜನೆಯು ಮನಸ್ಸಿಗೆ ಆಹಾರವಾಗಿದೆ, ಧ್ಯಾನವು ನಮ್ಮ ಆತ್ಮ ಅಥವಾ ಚೈತನ್ಯಕ್ಕೆ ಆಹಾರವಾಗಿದೆ. ಇದು ಮನಸ್ಸಿಗೆ ಚೈತನ್ಯದಾಯಕವಾಗಿದೆ.

ಸಹಜ ಸಕಾರಾತ್ಮಕತೆ

ಕೆಲವೊಮ್ಮೆ ಯಾರನ್ನಾದರೂ ಭೇಟಿಯಾದಾಗ ನಿಮಗೆ ಅವರೊಡನೆ ಮಾತನಾಡಬೇಕೆನಿಸುವುದಿಲ್ಲ. ಹಾಗೆ ಅನ್ನಿಸಲು ಕಾರಣಗಳೇ ಇರುವುದಿಲ್ಲ. ಅದೇ ಇನ್ನು ಕೆಲವರೊಡನೆ ಅಪರೂಪಕ್ಕೊಮ್ಮೆ ಭೇಟಿಯಾದರೂ ಅವರೊಂದಿಗೆ ಆತ್ಮೀಯತೆಯನ್ನು ಅನುಭವಿಸುತ್ತೀರಿ. ಅವರೊಂದಿಗೆ ನೀವು ಆರಾಮವಾಗಿರುತ್ತೀರಿ. ಇದಕ್ಕೆ ಸಕಾರಾತ್ಮಕ ಶಕ್ತಿಯೇ ಕಾರಣ. ಧ್ಯಾನವು ನಮ್ಮ ಸುತ್ತ ಸಕಾರಾತ್ಮಕ ಮತ್ತು ಸಮರಸತೆಯ ಶಕ್ತಿಯನ್ನು ಸೃಷ್ಟಿಸುತ್ತದೆ.

ಅತ್ಯಂತ ಕಡಿಮೆ ಸಮಯದಲ್ಲಿ ಗಾಢವಿಶ್ರಾಂತಿ

ರಕ್ತದ ಏರೊತ್ತಡ, ಮಧುಮೇಹ, ಹೃದಯದ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, ನರಮಂಡಲದ ಸಮಸ್ಯೆಗಳು ಮತ್ತು ಇತರ ಹಲವಾರು ಸಮಸ್ಯೆಗಳಿಗೆ ಧ್ಯಾನವು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಅನೇಕ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ತಡೆಗಟ್ಟಲು ಧ್ಯಾನವು ತುಂಬಾ ಪ್ರಯೋಜನಕಾರಿಯಾಗಿದೆ.  ಬೌದ್ಧಿಕವಾಗಿ, ಇದು ಚುರುಕುತನ,  ಏಕಾಗ್ರತೆ, ಅರಿವು ಮತ್ತು ಅವಲೋಕನ ಸಾಮರ್ಥ್ಯವನ್ನು ಉಂಟುಮಾಡುತ್ತದೆ.  ಭಾವನಾತ್ಮಕವಾಗಿ, ನಿಮಗೆ ಹಗುರವಾಗಿರುವ, ಮೃದು ಮತ್ತು ಪರಿಶುದ್ಧವಾಗಿರುವ ಅನುಭವ ಉಂಟಾಗುತ್ತದೆ. ಧ್ಯಾನದಿಂದ ನಿಮ್ಮ ಮನಸ್ಸಿನಲ್ಲಿ ಸಂಗ್ರಹಗೊಂಡಿರುವ ಕೊಳೆಯನ್ನು ತೊಡೆದುಕೊಳ್ಳಬಹುದು.  ಧ್ಯಾನದ ಮೂಲಕ ನಿಮ್ಮ ಸುತ್ತ ಸೃಷ್ಟಿಯಾಗುವ ಸಕಾರಾತ್ಮಕ ತರಂಗಗಳು ಇತರರೊಂದಿಗೆ ನಿಮ್ಮ ವರ್ತನೆ ಮತ್ತು ನಿಮ್ಮೊಂದಿಗೆ ಇತರರ ವರ್ತನೆಗಳ ಮೇಲೆ ಪ್ರಭಾವ ಬೀರುತ್ತವೆ. ಧ್ಯಾನವು ಅತ್ಯಂತ ಕಡಿಮೆ ಸಮಯದಲ್ಲಿ ಗಾಢವಾದ ವಿಶ್ರಾಂತಿಯನ್ನು ನೀಡುತ್ತದೆ.

ಏಕಾಗ್ರತೆ ಮತ್ತು ಸ್ಪಷ್ಟತೆ

ಇದು ವರ್ತಮಾನದ ಕ್ಷಣದಲ್ಲಿ ಇರಲು ಸಹಾಯ ಮಾಡುತ್ತದೆ. ಮನಸ್ಸು ಭೂತ ಮತ್ತು ಭವಿಷ್ಯತ್ತುಗಳ ನಡುವೆ ತೂಗಾಡುತ್ತಿರುತ್ತದೆ. ಭೂತಕಾಲದ ವಿಚಾರಗಳ ಬಗ್ಗೆ ನಮಗೆ ಅಸಮಾಧಾನವಿದೆ ಅಥವಾ ಭವಿಷ್ಯದ ಬಗ್ಗೆ ಆತಂಕವಿದೆ. ಮನಸ್ಸು ಭೂತಕಾಲ ಮತ್ತು ಭವಿಷ್ಯತ್ಕಾಲಗಳ ಕಡೆಗೆ ಹೊರಳದಂತೆ ತಡೆದು ಅದನ್ನು ವರ್ತಮಾನದ ಕಡೆ ತಿರುಗಿಸಲು  ಧ್ಯಾನವು ಸಹಾಯ ಮಾಡುತ್ತದೆ. ಆರೋಗ್ಯಸಂಬಂಧಿ ಪ್ರಯೋಜನಗಳ ಜೊತೆಗೆ ಧ್ಯಾನವು ಏಕಾಗ್ರತೆಯನ್ನು ಹೊಂದಲು ಸಹಾಯ ಮಾಡುತ್ತದೆ. ಇದು ನೀವು ವಿಷಯಗಳನ್ನು ಗ್ರಹಿಸುವ ವಿಧಾನವನ್ನು ಸುಧಾರಿಸುತ್ತದೆ. ಇದು ಮನಸ್ಸಿನಲ್ಲಿ ಸ್ಪಷ್ಟತೆಯನ್ನು ತರುತ್ತದೆ.

ವ್ಯಕ್ತಿಗತ ಶಾಂತಿ, ಜಗತ್ತಿನಲ್ಲಿ ಶಾಂತಿ

ಧ್ಯಾನವು ನೆರೆಹೊರೆಯ ಜನರೊಂದಿಗೆ ನಿಮ್ಮ ಸಂವಹನವನ್ನು ಉತ್ತಮಪಡಿಸುತ್ತದೆ. ನೀವು ನಿಮ್ಮ ಮಾತುಗಳು ಹಾಗೂ ಮತ್ತು ವಿವಿಧ ಸಂದರ್ಭಗಳಲ್ಲಿ ನಿಮ್ಮ ಕ್ರಿಯೆ-ಪ್ರತಿಕ್ರಿಯೆಗಳ ಬಗ್ಗೆ ಅರಿವನ್ನು ಹೊಂದುತ್ತೀರಿ. ಒಟ್ಟಾರೆ ಹೇಳುವುದಾದರೆ,  ಒತ್ತಡ ಮುಕ್ತ ಸಮಾಜದಿಂದ ಹಿಡಿದು ವ್ಯಕ್ತಿಗಳಲ್ಲಿ ಶಾಂತಿ ಮತ್ತು ಆರೋಗ್ಯದವರೆಗೆ ಮತ್ತು ಹಿಂಸಾಮುಕ್ತ ಸಮಾಜದಿಂದ ದುಃಖಮುಕ್ತ ಆತ್ಮದವರೆಗೆ, ಎಲ್ಲವೂ ಧ್ಯಾನದ ಉಪೋತ್ಪನ್ನಗಳಾಗಿವೆ.

ಧ್ಯಾನದಿಂದ ಶಮನ ಉಂಟಾಗಬಹುದು. ಮನಸ್ಸು ಶಾಂತಿ, ಎಚ್ಚರ ಮತ್ತು ಸಂತೃಪ್ತಿಯಿಂದ ಇದ್ದಾಗ ಅದು ಲೇಸರ್ ಕಿರಣಪುಂಜದಂತೆ ತುಂಬಾ ಪ್ರಭಾವಶಾಲಿಯಾಗಿರುತ್ತದೆ. ಅದರಿಂದ ಶಮನಕ್ರಿಯೆ ಸಂಭವಿಸಬಹುದು.

~ ಗುರುದೇವ್ ಶ್ರೀ ಶ್ರೀ ರವಿಶಂಕರ್

ಇಂದು, ವಿಶ್ವದ ಜ್ಞಾನದ ಮಟ್ಟ ಹೆಚ್ಚುತ್ತಿದೆ. ಆದರೆ ಇನ್ನೊಂದು ಕಡೆ ನಕಾರಾತ್ಮಕತೆ ಮತ್ತು ಅಶಾಂತಿ ಹೆಚ್ಚುತ್ತಿರುವುದನ್ನೂ ನೀವು ನೋಡುತ್ತಿದ್ದೀರಿ. ಅದೇ ಸಮಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರು ಜಗತ್ತಿನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಜಗತ್ತಿಗಾಗಿ ಏನಾದರೂ ಮಾಡಲು ಬಯಸುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಭೂಮಿಯ ಒಂದು ಭಾಗದಲ್ಲಿ ದೀರ್ಘ ಬೇಸಿಗೆಯಿದ್ದರೆ ಇನ್ನೊಂದು ಭಾಗದಲ್ಲಿ ದೀರ್ಘ ಚಳಿಗಾಲವೂ ಇದೆ. ಜಗತ್ತಿನಲ್ಲಿ ಹಗಲು ಮತ್ತು ರಾತ್ರಿಗಳ ಪ್ರಮಾಣವು ಬಹುತೇಕ ಸಮತೋಲಿತವಾಗಿದೆ. ಹೀಗೆ ನಾವು ಸಮಗ್ರವಾಗಿ ಗಮನಿಸುವಾಗ  ಯಾವುದೋ ಒಂದು ದೊಡ್ಡ ಶಕ್ತಿಯು ಕೋಟ್ಯಂತರ ವರ್ಷಗಳಿಂದ ಈ ಜಗತ್ತಿನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದೆ ಎಂಬ ವಿಶ್ವಾಸವನ್ನು ನಾವು ತಳೆಯಬೇಕು. ಆದರೆ ಅದು ನಾವು ಏನನ್ನೂ ಮಾಡದೆ ಸುಮ್ಮನೆ ಕುಳಿತುಕೊಳ್ಳಲು ಒಂದು ನೆಪವಾಗಬಾರದು.

ಕ್ರಿಯೆ ಮತ್ತು ಧ್ಯಾನ ಸಮತೋಲನಗೊಂಡಾಗ ಬದುಕು ಸಹಜವಾಗಿ ಅರಳುತ್ತದೆ.

~ ಗುರುದೇವ್ ಶ್ರೀ ಶ್ರೀ ರವಿಶಂಕರ್

ಅಂತರಂಗದಲ್ಲಿ ಶಾಂತಿ ಇಲ್ಲದಿದ್ದರೆ ಬಹಿರಂಗದಲ್ಲೂ ಶಾಂತಿ ಇರುವುದಿಲ್ಲ. ಧ್ಯಾನದಿಂದ ಅಂತರಂಗದ ಶಾಂತಿ ಖಚಿತವಾಗಿ ದೊರೆಯುತ್ತದೆ. ಆಗ ನೀವು ಹೊರಗೂ ಶಾಂತಿಯನ್ನು ಸಾಧಿಸಬಹುದು. ಉದ್ವಿಗ್ನರಾಗಿದ್ದರೆ, ಹತಾಶರಾಗಿದ್ದರೆ ನೀವು ನಿಮ್ಮ ಪರಿಸರದಲ್ಲಿ ಶಾಂತಿಯನ್ನು ಉಂಟುಮಾಡಲು ಶಕ್ತರಾಗುವುದಿಲ್ಲ. ಆಂಗ್ಲಭಾಷೆಯಲ್ಲಿ “Charity begins at Home” ಎಂಬ ಮಾತಿದೆ. ನಿಮ್ಮ ಪಾತ್ರೆ ಖಾಲಿಯಾಗಿದ್ದರೆ ದಾನಧರ್ಮ ಮಾಡುವುದು ಸಾಧ್ಯವಿಲ್ಲ. ಅದರಲ್ಲಿ ಈಗಾಗಲೇ ಏನಾದರೂ ಇದ್ದಿರಬೇಕು. ಅದೇರೀತಿ, ಶಾಂತಿಯನ್ನು ಪಸರಿಸಬೇಕಾದರೆ ನಿಮ್ಮ ಅಂತರಂಗದಲ್ಲಿ ಶಾಂತಿಯಿರಬೇಕು. ಕೇವಲ ಶಬ್ದಗಳಿಂದ ಶಾಂತಿ ಹುಟ್ಟುವುದಿಲ್ಲ.  ಶಾಂತಿಯು ಒಂದು ತರಂಗ. ನೀವು ಶಾಂತವಾಗಿದ್ದಾಗ, ನಿಮ್ಮ ಅಂತರಂಗದಲ್ಲಿ ಪ್ರಶಾಂತತೆಯಿದ್ದರೆ, ನಿಮ್ಮ ಶಕ್ತಿ ಅನೇಕ ಪಟ್ಟು ಹೆಚ್ಚಾಗುತ್ತದೆ. ನಿಮ್ಮಲ್ಲಿ ಅಂತರಂಗದ ಬಲವಿರುವಾಗ ನೀವು ಯಾವುದೇ ಸ್ಥಳಕ್ಕೆ ಹೋಗಿ ಶಾಂತಿಯ ಬಗ್ಗೆ ಮಾತನಾಡಬಹುದು. ಧ್ಯಾನವು ನಿಮಗೆ ಅಂತಹ ಅಂತರಂಗದ ಶಕ್ತಿಯನ್ನು ನೀಡುತ್ತದೆ. ಧ್ಯಾನವು ನಿಮ್ಮ ಸುತ್ತಲೂ ಶಾಂತಿಯ ತರಂಗಗಳನ್ನು ಹರಡುತ್ತದೆ. ಈ ಕಾರಣದಿಂದಲೇ ಶಾಂತಿಯನ್ನುಂಟುಮಾಡಲು ಧ್ಯಾನವು ಅತ್ಯಗತ್ಯ.

ಧ್ಯಾನವನ್ನು ಕಲಿಯಲು ಮತ್ತು ವ್ಯಕ್ತಿಗತ ಶಾಂತಿ ಮತ್ತು ತನ್ಮೂಲಕ ಶಾಂತಿಯುತ ಸಮಾಜಕ್ಕಾಗಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಹ್ಯಾಪಿನೆಸ್‌ ಕಾರ್ಯಕ್ರಮಕ್ಕೆ ಇಂದೇ ನೊಂದಾಯಿಸಿಕೊಳ್ಳಿ.  

    Wait!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity


    *
    *
    *
    *
    *