ಸುದರ್ಶನ ಕ್ರಿಯೆ ಎಂದರೇನು?

ಉಸಿರೇ ಜೀವನದ ಮೊದಲ ಕ್ರಿಯೆ. ಉಸಿರಿನಲ್ಲಿ ಎಷ್ಟೋ ಜೀವನದ ರಹಸ್ಯಗಳು ಅಡಗಿದೆ. ಸುದರ್ಶನ ಕ್ರಿಯೆ ಒಂದು ಸರಳ , ಶಕ್ತಿಯುತ, ಲಯಬದ್ಧವಾದ ಉಸಿರಾಟದ ಪ್ರಕ್ರಿಯೆ. ಇದು ನಮ್ಮ ನೈಜ ಉಸಿರಾಟದ ಲಯಕ್ಕೆ ಒಂದು ನವೀನ ತಿರುವನ್ನು ನೀಡಿ, ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನವನ್ನುಂಟು ಮಾಡುತ್ತದೆ.

ಈ ಪ್ರಕ್ರಿಯೆಯು ಒತ್ತಡ, ಆಯಾಸ ಮತ್ತು ನಕಾರತ್ಮಕ ಭಾವನೆಗಳಾದ ಕೋಪ, ಆಶಾಭಂಗತೆ ಮತ್ತು ಖಿನ್ನತೆಯನ್ನು ಹೊರಹಾಕಿ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ದೇಹಕ್ಕೆ ವಿಶ್ರಾಂತಿ ಕೊಡುತ್ತದೆ.

ಜೀವನದ ಆಳವಾದ ರಹಸ್ಯವನ್ನು ಬಯಲು ಮಾಡುವುದರ ಜೊತೆಗೆ ಸುದರ್ಶನ ಕ್ರಿಯೆಯು ಬದುಕಿಗೆ ಒಂದು ಅಂತರಾಳವನ್ನು ನೀಡುತ್ತದೆ. ಇದೊಂದು ಅಧ್ಯಾತ್ಮಿಕ ತಿರುವು ಆಗಿದ್ದು , ವ್ಯಕ್ತಿಗೆ ಜೀವನದ ಅನಂತತೆಯ ಒಂದು ಕ್ಷಣದೃಷ್ಟಿಯನ್ನು ನೀಡುತ್ತದೆ. ಸುದರ್ಶನ ಕ್ರಿಯೆಯು ಆರೋಗ್ಯ, ಶಾಂತಿ, ಆನಂದ ಇವುಗಳನ್ನು ನೀಡುವುದರ ಜೊತೆಗೆ ಜೀವನದಾಚೆಯ, ಬಯಲಾಗದ ರಹಸ್ಯವನ್ನು ತೆರೆದಿಡುತ್ತದೆ.

ದಿನವೂ ಒಳ್ಳೆಯ ಆರೋಗ್ಯವನ್ನು ಉಸಿರಾಡಿ

ಉಸಿರಿನಲ್ಲೇ ಜೀವನದ ಆಧಾರವಾದ ಪ್ರಾಣ, ಮುಖ್ಯವಾದ , ಸೂಕ್ಷ್ಮವಾದ ಜೀವ ಶಕ್ತಿ ಆಡಗಿದೆ. ಪ್ರಾಣವೇ ನಮ್ಮ ದೇಹ-ಮನಸ್ಸಿನ ಆರೋಗ್ಯದ ಆದರವಾಗಿದೆ. ಪ್ರಾಣ ಶಕ್ತಿ ಹೆಚ್ಚಾದಾಗ ವ್ಯಕ್ತಿ , ಆರೋಗ್ಯ , ಎಚ್ಛರ ಮತ್ತು ಉತ್ಸಾಹವನ್ನು ಅನುಭವಿಸುತ್ತಾನೆ. ದಿನನಿತ್ಯದ ಓಡಾಟದಿಂದ ದೇಹದಲ್ಲಿ ಉಂಟಾದ ೯೦%ಕ್ಕಿಂತ ಹೆಚ್ಚು ಕಲ್ಮಷ ಮತ್ತು ಒತ್ತಡವನ್ನು ಹೊರಹಾಕಿ ಪ್ರಾಣಶಕ್ತಿಯನ್ನು ಹೆಚ್ಚಿಸುತ್ತದೆ.

ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುವವರಲ್ಲಿ ಹೆಚ್ಚಿನ ರೋಗ ನಿರೋಧಕರ ಶಕ್ತಿ, ಉತ್ತಮಗೊಂಡ ದೇಹದಾರ್ಢ್ಯ ಮತ್ತು ದೀರ್ಘಕಾಲ ನಿಲ್ಲುವಂತಹ ಚೈತನ್ಯವು ಕಂಡು ಬರುತ್ತದೆ.

ದಿನವೂ ಸುದರ್ಶನಕ್ರಿಯೆ ಅಭ್ಯಾಸ ಮಾಡುವದರಿಂದ , ವೈದ್ಯರೊಂದಿಗೆ ನಿಮ್ಮ ಭೇಟಿ ಕಡೆಮೆಯಾಗುತ್ತದೆ. ಜೀವನ ಪರ್ಯಂತ ನಿಮ್ಮನ್ನು ಆರೋಗ್ಯ ಮತ್ತು ಸಂತೋಷವಂತರಾಗಿಸುತ್ತದೆ.

ಸರಿಯಾಗಿ ಉಸಿರಾಡಿ, ಜೀವನ ಪರ್ಯಂತ ಸಂತೋಷವಾಗಿರಿ!

ನಿಮಗೆ ಗೊತ್ತೆ ಸುದರ್ಶನ ಕ್ರಿಯೆಯು ನಿಮ್ಮ ಮುಗುಳುನಗೆ ಮತ್ತು ಸಂತೋಷವನ್ನು ಅಖಂಡವಗಿಸುತ್ತದೆ? ಹಾಗು ಸುದರ್ಶನ ಕ್ರಿಯೆ ಹೇಗೆ ಸಂತೋಷವನ್ನುಂಟು ಮಾಡುತ್ತದೆ?

ನೀವು ನಕಾರತ್ಮಕ ಭಾವನೆಗಳು - ಕೋಪ, ಇರಿಸು ಮುನಿಸು, ಅಶಾಭಂಗ, ದುಃಖಗಳ ಹಿಡಿತದಿಂದ ಹೊರಬರಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರ ಗಮನಿಸಿದ್ದೀರಾ? ಸುದರ್ಶನ ಕ್ರಿಯೆಯ ಮೂಲಕ ನಿಮ್ಮ ಉಸಿರಿನ ಸಹಾಯದಿಂದ ಇವುಗಳಿಂದ ಪಾರಗಿ ನಿಮ್ಮ ಭಾವನೆಗಳನ್ನು ಬದಲಾಯಿಸಿಕೊಳ್ಳಬಹುದು, ಅವುಗಳ ನಿಮ್ಮ ಮೇಲೆ ಪ್ರಭುತ್ವ ಇಲ್ಲ.

ಕೋಪ, ಇರಿಸು ಮುನಿಸು, ಅಸೂಯೆ, ಭಯ, ಚಿಂತೆ ಇವುಗಳ ಬದಲು ದಿನವೂ ಸಂತೋಷ, ನಗು, ದೀರ್ಘ ಉಸಿರಾಟ ಮತ್ತು ಆನಂದವಿದ್ದಲ್ಲಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ. ಸ್ನೇಹ , ಸಂಬಂಧ ,ಕೆಲಸ , ಸಂಸಾರ, ವ್ಯಾಪಾರ, ಮದುವೆ ಇವುಗಳಲ್ಲಿನ ಸಂತೋಷ, ನೀವು ಯಾರು ಎಂಬುದರ ಚಿಕ್ಕನೋಟ ತೋರುತ್ತದೆ, ಆದರೆ ಅದು ನಿಜವಾದ ನಿವಲ್ಲ.

ಉಸಿರಾಡಿ, ಸುದರ್ಶನ ಕ್ರಿಯೆಯಲ್ಲಿ ಉಸಿರಾಡಿ, ಆಗ ನಿಮ್ಮ ಕನ್ನಡಿಯು ಯಾಮಾಗಲೂ ನಿಮ್ಮ ನಗುಮುಖವನ್ನೇ ಪ್ರತಿಬಿಂಬಿಸುತ್ತದೆ.

ಸುದರ್ಶನ ಕ್ರಿಯೆ ವೈಶಿಷ್ಟತೆ ಏನು?

ದಿನ ರಾತ್ರಿಯನ್ನು ಹಿಂಬಾಲಿಸುತ್ತದೆ. ಋತುಗಳು ಬರುತ್ತದೆ ಹೋಗುತ್ತದೆ, ಮರಗಳು ತಮ್ಮ ಹಣ್ಣೆಲೆಗಳನ್ನು ಉದುರಿಸಿ ಹೊಸ ಚಿಗುರೆಲೆಗಳನ್ನು ಪಡೆಯುತ್ತದೆ - ಇದು ಪ್ರಕೃತಿಯ ಲಯ.

ಪ್ರಕೃತಿಯ ಒಂದು ಅಂಗವಾದ ನಮ್ಮಲ್ಲಿಯೂ ಜೀವಶಾಸ್ತ್ರಕ್ಕೆ ಅನುಗುಣವಾದ ಒಂದು ಲಯವಿದೆ. ನಮ್ಮ ದೇಹ, ಮನಸ್ಸು ಮತ್ತು ಭಾವನೆಗಳು ಸಹ ಲಯಕ್ಕೆ ಒಳಪಟ್ಟಿವೆ.

ಒತ್ತಡ, ಅನಾರೋಗ್ಯ ಇವುಗಳ ಕಾರಣದಿಂದ ಈ ಲಯ ಬದ್ಧತೆಯು ಕ್ರಮತಪ್ಪಿದಾಗ ನಾವು ಅಸುಖ , ಅಸಂತೃಪ್ತಿ, ಮತ್ತು ಖಿನ್ನತೆಗೆ ಒಳಗಾಗುತ್ತೇವೆ. ಸುದರ್ಶನ ಕ್ರಿಯಯಿಂದ ಜೀವನದ ಲಯವು ಕ್ರಮಬದ್ಧವಾದಾಗ ನಾವು ನಮ್ಮಲ್ಲಿಯೇ ಒಳ್ಳೆಯದನ್ನು ಅನುಭವಿಸುತ್ತೇವೆ. ಆಗ ಪ್ರೀತಿಯು ನಮ್ಮ ಎಲ್ಲಾ ಸಂಬಂಧಗಳಲ್ಲಿಯೂ ಸಹಜವಾಗಿ ತುಂಬಿ ಹರಿಯುತ್ತದೆ..

ಸುದರ್ಶನ ಕ್ರಿಯೆ ಶಾರೀರಿಕ, ಬೌಧಿಕ , ಭಾವನಾತ್ಮಕ ಹಾಗು ಸಾಮಾಜಿಕ ಒಳಿತನ್ನು ತರುವ ಒಂದು ಪ್ರಕ್ರಿಯೆಯು. ಇದು ಆರ್ಟ್ ಆಫ್ ಲಿವಿಂಗ್ ನ ಒಂದು ಅವಿಭಾಜ್ಯ ಅಂಗವಾಗಿದ್ದು , ಪ್ರಪಂಚದ ಕೋಟ್ಯಾಂತರ ಜನರು ತಮ್ಮ ಜೀವನವನ್ನು ಸಂಭ್ರಮಿಸುವಂತೆ ಮಾಡಿದೆ.

ಇದು ಏಕೆ ಅಮುಲ್ಯವಾದ್ದುದು?

ನಿಮ್ಮ ಆರೋಗ್ಯ ಮತ್ತು ನಿಜವಾದ ಸಂತೋಷ ನಿಮಗೆ ಅಮುಲ್ಯವಾದ್ದುದ್ದಲ್ಲವೇ?

ಮಾನವನ ತಿಳುವಳಿಕೆಗೆ ಅರ್ಥವಾಗುವದಕಿಂತ ಹೆಚ್ಚು ಅರ್ಥ ಉಸಿರಾಟಕ್ಕಿದೆ. ನಿಮ್ಮ ದೈನಂದಿನ ಜೀವನಕ್ಕೆ ಈ ೨೦ನಿಮಿಷದ ಊಸಿರಾಟವನ್ನು ಸೇರಿಸಿ!

ಊಸಿರಾಟದ ರಹಸ್ಯಗಳನ್ನು ಕಲೆಯಿರಿ.

ನಿಮಗೆ ನೀವು ಒಂದು ಅವಕಾಶ ಕೊಡಿ..