ಆಲೋಚನೆಗಳು ಮತ್ತು ಮಾತುಗಳ ಮೂಲಕ ತಲೆಯಿಂದ ತಲೆಗೆ ಸಂವಹನ ನಡೆಯುತ್ತದೆ. ಹೃದಯದಿಂದ ಹೃದಯಕ್ಕೆ ನಡೆಯುವ ಸಂವಹನವು ಭಾವನೆಗಳನ್ನು ಒಳಗೊಂಡಿರುತ್ತದೆ. ಮೌನವೇ  ಆತ್ಮ ಆತ್ಮಗಳ ನಡುವಣ ಸಂವಹನ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ನಮ್ಮ ಮೊದಲ ಉಸಿರನ್ನು ತೆಗೆದುಕೊಂಡ ಕ್ಷಣದಿಂದಲೇ ನಾವು ಸಂವಹನ ಮಾಡಲು ಪ್ರಾರಂಭಿಸುತ್ತೇವೆ. ನಮ್ಮ ಮೊದಲ ಅಳುವಿನ ಮೂಲಕ ನಾವು ಬಂದಿದ್ದೇವೆ ಎಂಬುದನ್ನು ತಾಯಿಗೆ ಮತ್ತು ಜಗತ್ತಿಗೆ ತಿಳಿಸುತ್ತೇವೆ.  ನಮ್ಮ ಕೊನೆಯ ಉಸಿರಿನವರೆಗೂ ನಾವು ನಿರಂತರವಾಗಿ ಸಂವಹನ ನಡೆಸುತ್ತೇವೆ. ಆದರೂ ಉತ್ತಮ ಸಂವಹನವು ಕೇವಲ ಶಬ್ದಗಳಿಗೆ ಸೀಮಿತವಲ್ಲ. ಇದು ಒಂದು ಕಲೆ. ಪರಿಣಾಮಕಾರಿ ಸಂವಹನವು  ಮಾತುಗಳ ಶಾಬ್ದಿಕ ಅರ್ಥಕ್ಕಿಂತ ವಿಶಾಲವಾದ ಆಯಾಮವನ್ನು ಹೊಂದಿರುತ್ತದೆ. ಪರಸ್ಪರ ಕಕ್ಕುಲತೆಯಿಂದ ಸಂವಹನ ನಡೆಸುವ ಕೌಶಲ್ಯವನ್ನು ಎಲ್ಲರೂ  ಅಗತ್ಯವಾಗಿ ಹೊಂದಬೇಕು. ಮಾತುಗಳು ಅರ್ಥಪೂರ್ಣವಾಗಿರಬೇಕು, ಹಾಗೂ ಸಂವೇದನಾಶೀಲವಾಗಿರಬೇಕು.

ಸಂವಹನ ಎಂದರೆ ಪರಸ್ಪರ ಮಾತುಕತೆ; ಸ್ವಗತವಲ್ಲ.

ನಾವು ಸಂವಹನ ನಡೆಸುತ್ತಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ಅಭಿಪ್ರಾಯಗಳನ್ನು ಗೌರವಿಸಬೇಕು. ಸಂವಹನವು ಸಂವೇದನಾಶೀಲರಾಗಿರುತ್ತಲೇ ಅರ್ಥಪೂರ್ಣವಾಗಿ ಮಾತನಾಡುವ ಕಲೆಯಾಗಿದೆ. ಅತಿಯಾಗಿ ಸಂವೇದನಾಶೀಲರಾಗಿರುವ ಕೆಲವರು ತಮ್ಮ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಾರೆ. ಅಂಥವರ ಮಾತುಗಳಲ್ಲಿ ಸ್ಪಷ್ಟತೆಯಿರುವುದಿಲ್ಲ; ಅವರ  ಅಭಿಪ್ರಾಯ ಅಸ್ಪಷ್ಟವಾಗಿರುತ್ತದೆ. 

ಇಲ್ಲಿ ನಿಮ್ಮ ಮನಸ್ಥಿತಿ ಮುಖ್ಯವಾಗುತ್ತದೆ.  ಕೋಪದಿಂದ ನೀವು ಯಾರನ್ನೂ  ಸುಧಾರಿಸಲು ಸಾಧ್ಯವಿಲ್ಲ. ಕೋಪಿಸಿಕೊಳ್ಳುವುದರಿಂದ ನಿಮ್ಮ ಮನಸ್ಸಿನ ಶಾಂತಿಯನ್ನು ನೀವೇ ಹಾಳುಮಾಡಿಕೊಳ್ಳುತ್ತೀರಿ.

ನೀವು ಕೋಪಿಸಿಕೊಂಡು ಮಾತನಾಡುವಾಗ ಸರಿಯಾದ ವಿಷಯವನ್ನು ಹೇಳುತ್ತಿದ್ದರೂ ಅದನ್ನು ಕೇಳಲು ಯಾರೂ ಬಯಸುವುದಿಲ್ಲ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ನೀವು ಜನರನ್ನು ಭೇಟಿಯಾಗುವಾಗ ನಮ್ಮ ಸಂವಹನ ಸಾಮಾನ್ಯವಾಗಿ  ತಲೆಯ ಮಟ್ಟದಲ್ಲಿಯೇ ಇರುತ್ತದೆ.  ನೀವು ಪ್ರಕೃತಿಯ ಜೊತೆಯಿರುವಾಗ ಹಾಡಲು ತೊಡಗುತ್ತೀರಿ; ಆಗ ನಿಮ್ಮ ಹೃದಯದಿಂದ ಪ್ರಕೃತಿಯೊಂದಿಗೆ ಸಂವಹನ ನಡೆಸುತ್ತೀರಿ. ನೀವು ಜನರೊಂದಿಗೆ ಕೆಲವೊಮ್ಮೆ ಅರ್ಥವಿಲ್ಲದಂತೆ  ಮಾತನಾಡುತ್ತಲೇ ಇರುತ್ತೀರಿ.  ಆಗ ನಿಮ್ಮ ಸಂವಹನ ತಲೆಯ ಮಟ್ಟದಲ್ಲಿ ಮಾತ್ರ ಇರುತ್ತದೆ. ಅದೇ ನೀವು ಪ್ರಕೃತಿಯೊಂದಿಗೆ ಇರುವಾಗ ಮೆಲುದನಿಯಲ್ಲಿ ಹಾಡಲು ಪ್ರಾರಂಭಿಸುತ್ತೀರಿ, ಅದು ಹೃದಯದ ಮೂಲಕ ಸಂವಹನ. ನೀವು ಗುರುಗಳೊಂದಿಗೆ ಇರುವಾಗ, ನಿಮ್ಮ ಮನಸ್ಸು ಖಾಲಿಯಾಗಿರುತ್ತದೆ. ನೀವು ಕೇಳಬೇಕೆಂದುಕೊಂಡಿದ್ದ ಪ್ರಶ್ನೆಗಳನ್ನು ಮರೆತುಬಿಡುತ್ತೀರಿ. ಅಂತಹ ಸಂದರ್ಭಗಳಲ್ಲಿ ಸಂವಹನವು ಮೌನವಾಗಿ ಆತ್ಮದ ಮೂಲಕ ನಡೆಯುತ್ತದೆ.

ಸಂವಹನದಲ್ಲಿ ಅರಿವಿನ ಪಾತ್ರ

ಸಾಮಾನ್ಯವಾಗಿ ನೀವು ತಲೆಯ ಮಟ್ಟದಲ್ಲಿಯೇ ಜನರೊಂದಿಗೆ ಸಂವಹನ ಮಾಡಲು ಇಷ್ಟಪಡುತ್ತೀರಿ;  ಅವರೊಂದಿಗೆ ಹಾಡುವುದಂತೂ ತುಂಬ ಅಪರೂಪ. ಹಾಡುವುದಕ್ಕೆ ನಿಮ್ಮ ಪ್ರತಿಷ್ಠೆ ಅಡ್ಡ ಬರುತ್ತದೆ.   ಜನರೊಂದಿಗೆ ಹಾಡುವುದನ್ನು ಅನೇಕರು ಇಷ್ಟಪಡುವುದಿಲ್ಲ. ಆದರೆ, ನೀವು ಜನರೊಂದಿಗೆ ಹಾಡುವಾಗ ಅವರ ಹೃದಯದ ಅಥವಾ ಭಾವನೆಗಳ ಮಟ್ಟಕ್ಕೆ ಇಳಿಯುತ್ತೀರಿ. ಕೆಲವರು ಹಾಡುವ ಬದಲು ಹಾಡುಗಳನ್ನು ಕೇಳುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಇನ್ನು ಕೆಲವರು ಒಬ್ಬರೇ ಇದ್ದಾಗ ಮಾತ್ರ ನಿರ್ಭಿಡೆಯಿಂದ ಹಾಡುತ್ತಾರೆ. ಕೆಲವರು ಇತರರ ಗಮನ ಸೆಳೆಯಲು ಅಥವಾ ಅವರ ಒಲವು ಗಳಿಸಲು ಹಾಡುತ್ತಾರೆ. ಕೆಲವರು ಎಲ್ಲರೂ ಹಾಡುತ್ತಿರುವಾಗ ಅವರೊಂದಿಗೆ ಸೇರಿಕೊಂಡು ಹಾಡುತ್ತಾರೆ. ಈ ರೀತಿಯಾಗಿ ಹಾಡುವುದರ ಹಿಂದೆ  ಅವರವರ ಪ್ರತಿಷ್ಠೆ ಕೆಲಸಮಾಡುತ್ತದೆ.  

ತಲೆಯಿಂದ ತಲೆಗೆ ಸಂವಹನದಲ್ಲಿ, ನೀವು ಮಾತನಾಡುತ್ತೀರಿ.
ಹೃದಯದಿಂದ ಹೃದಯಕ್ಕೆ ಸಂವಹನದಲ್ಲಿ, ನೀವು ಹಾಡುತ್ತೀರಿ.
ಮತ್ತು ಆತ್ಮದಿಂದ ಆತ್ಮಕ್ಕೆ ಸಂವಹನವು ಮೌನದಲ್ಲಿ ನಡೆಯುತ್ತದೆ.

– ಗುರುದೇವ ಶ್ರೀ ಶ್ರೀ ರವಿ ಶಂಕರ್

ಪ್ರತಿಷ್ಠೆಯ ಬೇಲಿಯನ್ನು ಮುರಿಯುವುದರಿಂದ ಸಂವಹನದ ಅಂತರ ಕಡಿಮೆಯಾಗುತ್ತದೆ.

ಭಜನೆ ಎಂದರೆ ಹಂಚಿಕೊಳ್ಳುವುದು; ನಮ್ಮ ಅಸ್ತಿತ್ವದ ಅಂತರಾಳದಿಂದ ಹಂಚಿಕೊಳ್ಳುವುದು. ಪ್ರಾಮಾಣಿಕವಾಗಿ  ಹಂಚಿಕೊಳ್ಳುವುದೇ ಭಜನೆ. ನೀವು ಜನರೊಂದಿಗೆ ಹಾಡುವಾಗ ನಿಮ್ಮ ಪ್ರತಿಷ್ಠೆ ದೂರವಾಗುತ್ತದೆ. ಮಕ್ಕಳಲ್ಲಿ ಪ್ರತಿಷ್ಠೆ ಇಲ್ಲದಿರುವುದರಿಂದ ಅವರು ಸಹಜವಾಗಿಯೇ ಜನರೊಂದಿಗೆ ಹಾಡಲು ತೊಡಗುತ್ತಾರೆ. ಸಾಮಾನ್ಯವಾಗಿ ಅಪರಿಚಿತರೊಂದಿಗೆ ಹಾಡಲು ಪ್ರತಿಷ್ಠೆ ಅಡ್ಡ ಬರುತ್ತದೆ. ಪ್ರತಿಷ್ಠೆಯಿಂದ ಮುಕ್ತರಾದಾಗ ನೀವೂ ಅಪರಿಚಿತರೊಂದಿಗೆ ಹಾಡಬಹುದು.  ಪ್ರತಿಷ್ಠೆ ಇರುವ ವ್ಯಕ್ತಿಗಳು ತಲೆಯ ಮಟ್ಟದ ಸಂವಹನವನ್ನು ಸುರಕ್ಷಿತ ಎಂದು ಭಾವಿಸುತ್ತಾರೆ.  ಹೃದಯದ ಮಟ್ಟದ ಸಂವಹನವು ಪ್ರತಿಷ್ಠೆಯನ್ನು  ಮುರಿಯುತ್ತದೆ; ಮತ್ತು ಆತ್ಮದ ಮಟ್ಟವು ಪ್ರತಿಷ್ಠೆಯನ್ನು ಕರಗಿಸುತ್ತದೆ. ಸಂವಹನದ ಎಲ್ಲಾ ಅಂತರಗಳು ಪ್ರತಿಷ್ಠೆಯ ಕಾರಣದಿಂದ ಉಂಟಾಗುತ್ತವೆ.

ಪರಿಣಾಮಕಾರಿ ಸಂವಹನವು ನಮ್ಮ ಸಂಬಂಧಗಳು, ವೈಯಕ್ತಿಕ ಬೆಳವಣಿಗೆ ಮತ್ತು ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸುವ, ಪರಿವರ್ತನಶೀಲ ಕೌಶಲ್ಯ. ಗುರುದೇವ ಶ್ರೀ ಶ್ರೀ ರವಿ ಶಂಕರರು ಸ್ಥಾಪಿಸಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಂವಹನ ಕಲೆಯ ಬಗ್ಗೆ ಅಧ್ಯಯನ ಮಾಡುವ ಮತ್ತು ಈ ಅಗತ್ಯ ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು ಬೇಕಾದ ಪ್ರಾಯೋಗಿಕ ಸಾಧನಗಳನ್ನು ಒದಗಿಸುವ ಹಲವಾರು ಕಾರ್ಯಕ್ರಮಗಳ ಖಜಾನೆಯನ್ನೇ ತೆರೆದಿರಿಸಿದೆ.  

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ‘ಸುದರ್ಶನ ಕ್ರಿಯಾ’ ಎಂಬ ವಿಶಿಷ್ಟ ಉಸಿರಾಟದ ತಂತ್ರವನ್ನು ಕಲಿಸುವ ಹ್ಯಾಪಿನೆಸ್ ಕಾರ್ಯಕ್ರಮ ಮತ್ತು ‘ಸಹಜ ಸಮಾಧಿ ಧ್ಯಾನ ಯೋಗ’ದಂತಹ ಕಾರ್ಯಕ್ರಮಗಳ ಮೂಲಕ ನೀವು ಮನಃಪೂರ್ವಕವಾಗಿ ತೊಡಗಿಕೊಳ್ಳುವುದನ್ನು, ಭಾವನಾತ್ಮಕ ಬುದ್ಧಿಯನ್ನು ಬೆಳೆಸಿಕೊಳ್ಳುವುದನ್ನು ಹಾಗೂ ನಿಮ್ಮೊಂದಿಗಿನ ನಿಮ್ಮ ಮತ್ತು ಇತರರೊಂದಿಗಿನ ನಿಮ್ಮ ಸಂಬಂಧಗಳನ್ನು ಘನವಾಗಿಸುವ ತಂತ್ರಗಳನ್ನು ಕಲಿಯಬಹುದು. ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳಂತಹ ಅಭ್ಯಾಸಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮಗಳು ನಿಮಗೆ ಮಾನಸಿಕ ಶಾಂತಿಯನ್ನು ನೀಡುವುದರ ಜೊತೆಗೆ ಕೇಳಿಸಿಕೊಳ್ಳುವ ಕೌಶಲ್ಯವನ್ನೂ ಹೃದಯಪೂರ್ವಕ ಸಂವಹನ ಕಲೆಯನ್ನೂ ಕಲಿಸುತ್ತವೆ.

    Hold On! You’re about to miss…

    The Grand Celebration: ANAND UTSAV 2025 

    Pan-India Happiness Program

    Learn Sudarshan Kriya™| Meet Gurudev Sri Sri Ravi Shankar Live

    Beat Stress | Experience Unlimited Joy

    Fill out the form below to know more:

    *
    *
    *
    *