ಬಹಳ ಕಾಲದ ಹಿಂದೆ ನಾಲ್ವರು ಹಿರಿಯರು ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು.  ಅವರಲ್ಲಿ ದುಃಖಿಯಾಗಿದ್ದ ಮೊದಲನೆಯವರು ತನ್ನ ದುಃಖಗಳಿಂದ  ಪಾರಾಗುವುದು ಹೇಗೆ ಎಂದು ತಿಳಿಯಲು ಬಯಸಿದ್ದರು. ಎರಡನೆಯವರಿಗೆ ಹೆಚ್ಚಿನ ಪ್ರಗತಿ ಮತ್ತು ಯಶಸ್ಸು ಗಳಿಸುವುದರ ಬಗ್ಗೆ ತಿಳಿಯಬೇಕಿತ್ತು. ಮೂರನೆಯವರು ಜೀವನದ ಅರ್ಥವನ್ನು ತಿಳಿದುಕೊಳ್ಳಲು ಬಯಸಿದ್ದರು. ನಾಲ್ಕನೆಯವರಿಗೆ ಎಲ್ಲಾ ತಿಳುವಳಿಕೆಯಿದ್ದರೂ ತಮ್ಮನ್ನು ಯಾವಾಗಲೂ ಬಾಧಿಸುತ್ತಿದ್ದ ಕೊರತೆ ಯಾವುದೆಂದು ತಿಳಿಯಲು ಸಾಧ್ಯವಾಗಿರಲಿಲ್ಲ. 

ಆ ನಾಲ್ವರು ಹಿರಿಯರೂ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಅಲೆದಾಡುತ್ತಿರುವಾಗ ಕೊನೆಗೊಮ್ಮೆ ಒಂದು ಆಲದ ಮರದ ಬಳಿ ಬಂದರು. ಆ ಆಲದ ಮರದ ಕೆಳಗೆ ಒಬ್ಬ ಯುವಕ ಕುಳಿತಿದ್ದ. ಅವನ ಮುಖದ ಮೇಲೆ ಮಂದಹಾಸ ಮಿನುಗುತ್ತಿತ್ತು. ಈ ವ್ಯಕ್ತಿ ತಮಗೆ ಉತ್ತರ ಕೊಡಬಹುದು; ಇವನಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು ಎಂದು  ಭಾವಿಸಿದ ನಾಲ್ವರೂ ಅವನ ಬಳಿ ಕುಳಿತುಕೊಂಡರು. ಆಲದ ಮರದ ಕೆಳಗೆ ನಸುನಗುತ್ತಾ ಕುಳಿತಿದ್ದ ಯುವಕ ಒಂದು ಮಾತನ್ನೂ ಹೇಳಲಿಲ್ಲ, ಆದರೂ ಆ ನಾಲ್ವರು ತಾವು ಬಯಸಿದ್ದ ಉತ್ತರವನ್ನು ಕಂಡುಕೊಂಡರು.

ಇದು ಗುರು ಪೂರ್ಣಿಮೆಯ ಮೊದಲ ಕಥೆ. ಆ ಹುಣ್ಣಿಮೆಯ ದಿನ ಗುರು ಪರಂಪರೆಯು  ಪ್ರಾರಂಭವಾಯಿತು. ಮುಂದೆ ಈ ನಾಲ್ವರು ಹಿರಿಯರೂ ಗುರುಗಳಾದರು.

  1. ಅವರ ದುಃಖ ದೂರವಾಯಿತು
  2. ಎಲ್ಲರಿಗೂ ಸಮೃದ್ಧಿ ಮತ್ತು ಸಂತೋಷ ದೊರೆಯಿತು.
  3. ಅವರೆಲ್ಲರ ಹುಡುಕಾಟ ನಿಂತಿತು
  4. ಅವರಲ್ಲಿ ಜ್ಞಾನಿಯಾದವನಿಗೆ ತನ್ನನ್ನು ಅಭಿವ್ಯಕ್ತಿಸಲು ಒಬ್ಬ ಗುರು ಲಭಿಸಿದನು.

ಹೀಗೆ ಅವರೆಲ್ಲರೂ ತಮಗೆ ಬೇಕಾದುದನ್ನು ಪಡೆದರು

ಅವರಲ್ಲಿ ನಾಲ್ಕನೆಯವರ ಹತ್ತಿರ ಎಲ್ಲವೂ ಇತ್ತು. ಅವರಲ್ಲಿ ಸಕಲ ಜ್ಞಾನವೂ ಇತ್ತು ಆದರೆ ಸೂಕ್ತ ಗುರುವಿರಲಿಲ್ಲ. ಅವರಿಗೆ ಗುರುವಿನ ಮಾನಸಿಕ ಸಂಪರ್ಕ ದೊರೆಯಿತು.

ಈ ಕಾರಣದಿಂದಲೇ “ಮೌನವ್ಯಾಖ್ಯಾ ಪ್ರಕಟಿತ ಪರಬ್ರಹ್ಮತತ್ತ್ವಂ ಯುವಾನಂ”, ಅಂದರೆ ಪರಬ್ರಹ್ಮತತ್ತ್ವವನ್ನು ತನ್ನ ಮೌನದ ಮೂಲಕವೇ ವಿವರಿಸಿದ ಮೊದಲ ಗುರು ದಕ್ಷಿಣಾಮೂರ್ತಿಗೆ ನಾನು ನಮಸ್ಕರಿಸುತ್ತೇನೆ ಎಂದು ಆದಿ ಶಂಕರಾಚಾರ್ಯರು ಹೇಳಿದರು.

ಕಥೆಯ ಸಂಕೇತ

ಕಥೆಯಲ್ಲಿ ಶಿಷ್ಯರು ಹಿರಿಯರಾಗಿದ್ದರೆ ಗುರು ಎಳೆಯನಾಗಿ ಕಂಡುಬರುತ್ತಾನೆ; ಏಕೆಂದರೆ, ಆತ್ಮವು ಯಾವಾಗಲೂ ಎಳೆಯದಾಗಿಯೇ ಇರುತ್ತದೆ. ಇಲ್ಲಿ ಇನ್ನೂ ಅನೇಕ ಸಂಕೇತಗಳಿವೆ. ಹುಡುಕುವುದರಲ್ಲಿಯೇ ಸಮಯ ಕಳೆದು ವಯಸ್ಸು ಹೆಚ್ಚುತ್ತದೆ. ಜಗತ್ತನ್ನು, ಮೋಕ್ಷವನ್ನು ಅಥವಾ ಇನ್ನಾವುದನ್ನೋ ಹುಡುಕುತ್ತಲೇ ಇರುವುದರಿಂದ ನಿಮ್ಮ ವಯಸ್ಸು ಹೆಚ್ಚುತ್ತದೆ. ಆದುದರಿಂದ ಶಿಷ್ಯರನ್ನು ಹಿರಿಯರನ್ನಾಗಿ, ಗುರುವನ್ನು ಎಳೆಯನನ್ನಾಗಿ ಬಿಂಬಿಸಲಾಗಿದೆ.

ಆಲದ ಮರದ ಸಾಂಕೇತಿಕತೆ ಏನು? ಆಲದ ಮರವು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಇದಕ್ಕೆ ಯಾರ ಕಾಳಜಿ ಅಥವಾ ರಕ್ಷಣೆ ಅಗತ್ಯವಿಲ್ಲ. ಆಲದ ಮರದ ಬೀಜವು ಶುಷ್ಕವಾದ ಕಲ್ಲಿನ ಬಿರುಕುಗಳ ನಡುವೆ ಬಿದ್ದರೆ ಅಲ್ಲಿಯೂ ಬೆಳೆಯುತ್ತದೆ. ಅದಕ್ಕೆ ಬೇಕಾಗಿರುವುದು ಸ್ವಲ್ಪ ಮಣ್ಣು ಮತ್ತು ಸ್ವಲ್ಪ ನೀರಿನ ಪಸೆ. ಕೆಲವೊಮ್ಮೆ ಅದರ ಅಗತ್ಯವೂ ಇರುವುದಿಲ್ಲ. ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಆಮ್ಲಜನಕವನ್ನು ನೀಡುವ ಮರ ಇದೊಂದೇ. ಎಲ್ಲವನ್ನೂ ಕರುಣಿಸುವ ಇದರ ಲಕ್ಷಣವು ಗುರುತತ್ತ್ವವನ್ನು ಸಂಕೇತಿಸುತ್ತದೆ.

ಗುರು ಎಂದರೆ ಕತ್ತಲೆ, ದುಃಖ, ಒಂಟಿತನ ಮತ್ತು ಕೊರತೆಯನ್ನು ಹೋಗಲಾಡಿಸಿ ಸಮೃದ್ಧಿಯನ್ನು ತರುವವನು. ಏಕೆಂದರೆ ಕೊರತೆಯಿರುವುದು ಮನಸ್ಸಿನಲ್ಲಿ. ಗುರುವು ಈ ಕೊರತೆಯನ್ನು ನಿವಾರಿಸಿ ಮನಸ್ಸಿಗೆ ಬಿಡುಗಡೆ ಉಂಟುಮಾಡುತ್ತಾನೆ.

    Wait!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity


    *
    *
    *
    *
    *