ಜ್ಞಾನ ವಾಹಿನಿಗಳು: ಪೂಜ್ಯ ಶ್ರೀ ಶ್ರೀ ರವಿಶಂಕರ ಗುರುಜಿಯವರ ಪ್ರವಚನ ಮಾಲಿಕೆ

ಅಷ್ಟಾವಕ್ರ ಗೀತೆ

1991ರಲ್ಲಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟೀಯ ಕೇಂದ್ರ, ಬೆಂಗಳೂರಿನಲ್ಲಿ ಧ್ವನಿ ಮುದ್ರಿತಗೊಂಡ ಅಷ್ಟಾವಕ್ರ ಗೀತೆಯು ಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಬೋಧಿಸಿರುವ ಅತ್ಯದ್ಭುತವಾದ ಜ್ಞಾನ ಪ್ರವಚನ ಮಾಲಿಕೆ. ಒಬ್ಬ ಸದ್ಗುರುವು ಮಾತ್ರವೇ ಅರ್ಪಿಸಬಹುದಾದಂತಹ ಅದ್ವಿತೀಯ ಅಂತರ್ದೃಷ್ಟಿ ಹಾಗೂ ಗಾಢತೆಯೊಂದಿಗೆ ಈ ಅಷ್ಟಾವಕ್ರ ಗೀತೆಯು ಮನಸ್ಸು, ಅಹಂ, ಸಂಘರ್ಷ ಮತ್ತು ಆತ್ಮವನ್ನು  ಪರಿಶೀಲಿಸುತ್ತದೆ. ಶ್ರೀ ಶ್ರೀಯವರು ಪ್ರಾಚೀನ ಜ್ಞಾನ, ವ್ಯಾವಹಾರಿಕ ವಿವೇಕ ಮತ್ತು ಶಾಸ್ತ್ರೀಯ ಕಥೆಗಳನ್ನು ಕುಶಲತೆಯಿಂದ ಒಂದಕ್ಕೊಂದು ಹೆಣೆದು ತಮ್ಮ ಮನಸೂರೆಗೊಳ್ಳುವ ನುಡಿಗಳಿಂದ ಅಷ್ಟಾವಕ್ರ ಗೀತೆಯನ್ನು ಶ್ರದ್ಧೆಯುಳ್ಳ ಸತ್ಯಾನ್ವೇಷಕರಿಗಾಗಿ ಒಂದು ಅಮೂಲ್ಯವಾದ ಸಾಧನ ಹಾಗೂ ಸಂಗಾತಿಯನ್ನಾಗಿ ನೀಡಿದ್ದಾರೆ.

ಅಷ್ಟಾವಕ್ರ ಗೀತೆಯ ಪ್ರವಚನ ಮಾಲಿಕೆಯನ್ನು ಸಮರ್ಪಿಸುತ್ತಿರುವ ನಿಮ್ಮ ಹತ್ತಿರದ ಕೇಂದ್ರವನ್ನು ಇಲ್ಲಿ ಸಂಪರ್ಕಿಸಿ

ಪತಂಜಲಿ ಯೋಗ ಸೂತ್ರಗಳು

"ಮನುಷ್ಯನನ್ನು ವಿಷಯವಸ್ತುಗಳ ಬಂಧನದಿಂದ ಮುಕ್ತಗೊಳಿಸುವುದೇ ಪತಂಜಲಿ ಯೋಗ ಸೂತ್ರಗಳ ಉದ್ದೇಶ. ಮನಸ್ಸು ವಿಷಯವಸ್ತುವಿನ ಅತ್ಯುನ್ನತವಾದ ರೂಪ ಮತ್ತು ಚಿತ್ತ ಅಥವಾ ಅಹಂಕಾರದ ಸೆಳೆತದಿಂದ ಮುಕ್ತನಾದ ಮನುಷ್ಯನು ಶುದ್ಧಾತ್ಮನಾಗುತ್ತಾನೆ ." - ಶ್ರೀ ಶ್ರೀ ರವಿಶಂಕರ್

ಪತಂಜಲಿ ಯೋಗ ಸೂತ್ರಮಾಲಿಕೆಯು ವಿಜ್ಞಾನ, ಕಲೆ ಮತ್ತು ತತ್ವಜ್ಞಾನವಾದ ಯೋಗದ ಬಗ್ಗೆ  ವಿವರಣೆಯನ್ನು ನೀಡುವ ಸೂತ್ರಗಳ ಸರಮಾಲೆ. ತಮ್ಮ ಸರಳ ಹಾಗೂ ಉಜ್ವಲವಾದ ಪ್ರವಚನಮಾಲೆಯಲ್ಲಿ ಪೂಜ್ಯ ಶ್ರೀ ಶ್ರೀ ರವಿಶಂಕರರು ಈ ಪುರಾತನ ಗ್ರಂಥವನ್ನು ಪರಿಶೀಲಿಸಿ, ಯೋಗದ ತತ್ವ ಸಿದ್ಧಾಂತವನ್ನು ನಮ್ಮ ಇಂದಿನ ಜೀವನದಲ್ಲಿ  ಅಳವಡಿಸಿಕೊಳ್ಳುವ ಬಗೆಯನ್ನು ವಿವರಿಸಿದ್ದಾರೆ. ವ್ಯಾಮೋಹ ಮತ್ತು ಜಿಗುಪ್ಸೆಗಳ ನಿರ್ವಹಣೆ, ನಿರ್ಲಿಪ್ತವಾದರೂ ಕ್ರಿಯಾಶೀಲವಾದ ಜೀವನವನ್ನು ನಡೆಸುವ ಬಗೆ, ಮನಸ್ಸಿನ ಪ್ರವೃತ್ತಿಗಳನ್ನು ಜ್ಞಾನ ಹಾಗೂ ಯೋಗಸಾಧನೆಗಳಿಂದ ಮೀರುವ ರೀತಿ, ಅರಿವನ್ನು ಬೆಳೆಸಿಕೊಳ್ಳಲು ಮಾರ್ಗ ಮತ್ತಿತರ ವಿಷಯಗಳನ್ನು ಈ ಪ್ರವಚನ ಮಾಲಿಕೆಯಲ್ಲಿ ಶ್ರೀ ಶ್ರೀಯವರು ಬೋಧಿಸಿದ್ದಾರೆ. ವಿಶ್ವದಾದ್ಯಂತ ಅಸಂಖ್ಯ ಯೋಗಾಭಿಮಾನಿಗಳು ಪುಸ್ತಕ ಹಾಗೂ ದೃಶ್ಯಮುದ್ರಣಗಳ ರೂಪದಲ್ಲಿ ಈ ಪ್ರವಚನ ಮಾಲಿಕೆಯನ್ನು ಆಸ್ವಾದಿಸಿದ್ದಾರೆ.   

ಪತಂಜಲಿ ಯೋಗ ಸೂತ್ರದ ಪ್ರವಚನ ಮಾಲಿಕೆಯನ್ನು ಸಮರ್ಪಿಸುತ್ತಿರುವ ನಿಮ್ಮ ಹತ್ತಿರದ ಕೇಂದ್ರವನ್ನು ಇಲ್ಲಿ ಸಂಪರ್ಕಿಸಿ.