ಲಿವಿಂಗ್ ವೆಲ್ (ಸ್ವಸ್ಥ ಜೀವನ) ಕಾರ್ಯಕ್ರಮ

ಸ್ವಸ್ಥ ಜೀವನದ ತತ್ತ್ವ - ಬೇರುಗಳ ಪೋಷಣೆ  !

ಆರೋಗ್ಯವೆಂದರೆ ಕೇವಲ ರೋಗರಹಿತವಾದ ದೇಹವಲ್ಲ. ಅದು  ಜೀವನದ ಕ್ರಿಯಾತ್ಮಕ ಅಭಿವ್ಯಕ್ತಿ – ನೀವು ಎಷ್ಟು ಆನಂದ, ಪ್ರೇಮ ಹಾಗೂ ಉತ್ಸಾಹದಿಂದ ಕೂಡಿದ್ದೀರಿ ಎಂಬುದರ ಸಂಕೇತ. - ಶ್ರೀ ಶ್ರೀ ರವಿಶಂಕರ್r

ನಮ್ಮ ಆಧುನಿಕ ಜೀವನದ ವೇಗ ಹಾಗೂ ವೈಪರೀತ್ಯಗಳು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿವೆ. ಒತ್ತಡ ಹಾಗೂ ಆತಂಕ ನಮ್ಮಲ್ಲಿ ಹಲವಾರು ಬಗೆಯ ಕಾಯಿಲೆಗಳ ಸರಣಿಗೆ ದಾರಿ ಮಾಡುತ್ತಿವೆ.  ಆರೋಗ್ಯಕರ ಮತ್ತು ಆನಂದಮಯವಾದ ಜೀವನಕ್ಕೆ ಸಹಜವಾದ ಮಾರ್ಗವನ್ನು ತೋರುವುದೇ  "ಸ್ವಸ್ಥ ಜೀವನ” (ಲಿವಿಂಗ್ ವೆಲ್) ಕಾರ್ಯಕ್ರಮಗಳ ಗುರಿ.  ಈ ಕಾರ್ಯಕ್ರಮದ ವಿನ್ಯಾಸವು ವ್ಯಕ್ತಿಯ ದೈಹಿಕ, ಮಾನಸಿಕ, ಮನೋವೈಜ್ಞಾನಿಕ, ಪೌಷ್ಠಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಅವಶ್ಯಕತೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.

ರೋಗ ನಿವಾರಣೆ, ಒತ್ತಡ ನಿರ್ವಹಣೆ, ಆರೋಗ್ಯ ಮತ್ತು ಸ್ವಾಸ್ಥ್ಯ ಸುಧಾರಣೆಗಾಗಿ ಈ ಕಾರ್ಯಕ್ರಮವು ವಿನ್ಯಾಸಗೊಂಡಿದೆ  

ಈ ಶಿಬಿರವು

  • ಜನರು ತಮ್ಮ ವ್ಯಾಧಿಗಳ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಅನುವಂಶಿಕ ರೋಗಗಳ ಸಾಧ್ಯತೆಯಿದ್ದಲ್ಲಿ ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹವನ್ನು ನೀಡುತ್ತದೆ.
  • ರೋಗದ ಲಕ್ಷಣಗಳು ಮತ್ತು ಅದರ ಮನೋವೈಜ್ಞಾನಿಕ ಕಾರಣಗಳ ಬಗ್ಗೆ ಅರಿವು ಮತ್ತು ಶಿಕ್ಷಣವನ್ನು ನೀಡಿ ರೋಗವನ್ನು ನಿವಾರಿಸಲು ಅಥವಾ ಸಮರ್ಪಕವಾಗಿ ನಿರ್ವಹಿಸಲು ಪರಿಣಾಮಕಾರಿಯಾದ ಮಾರ್ಗಗಳನ್ನು ತಿಳಿಸುತ್ತದೆ
  • ಯೋಗ, ಧ್ಯಾನ, ಪ್ರಾಣಾಯಾಮ, ಆಯುರ್ವೇದ ಮತ್ತು ಆಹಾರ ಪದ್ಧತಿಗಳ ಮೂಲಕ ರೋಗದ ನಿವಾರಣೆ ಅಥವಾ   ನಿಯಂತ್ರಣವನ್ನು ತಾವೇ ನಿಭಾಯಿಸುವಂತೆ  ಶಿಬಿರಾರ್ಥಿಗಳನ್ನು ಸಶಕ್ತಗೊಳಿಸುತ್ತದೆ.
  • ಜೀವನಶೈಲಿಯ ಬದಲಾವಣೆ ಹಾಗೂ ಸೂಕ್ತವಾದ ದಿನಚರಿಯ ಅಭ್ಯಾಸದ ಮೂಲಕ ಸಮಗ್ರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ವರ್ಧಿಸುತ್ತದೆ.

ಈ ಶಿಬಿರವು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಆರೋಗ್ಯದ ಸಮಗ್ರ ದೃಷ್ಟಿಕೋನವನ್ನು ಪರಿಚಯಿಸುತ್ತದೆ. ದೇಹಾರೋಗ್ಯವನ್ನು ಸುಧಾರಿಸಿ ಮನಸ್ಸನ್ನು ಪ್ರಶಾಂತಗೊಳಿಸಲು ಈ ಶಿಬಿರವು ಹಂತ ಹಂತವಾದ ಮಾರ್ಗದರ್ಶನವನ್ನು ನೀಡುತ್ತದೆ.

ಈ ಕಾರ್ಯಕ್ರಮವು ನಿಮ್ಮ ಈಗಿನ ಆರೋಗ್ಯದ ಪರಿಸ್ಥಿತಿ, ಜೀವನಶೈಲಿ ಮತ್ತು ದಿನಚರಿಯ ಸಮಗ್ರ ತಿಳುವಳಿಕೆಯನ್ನು ನೀಡಿ ರೋಗನಿರೋಧತೆಯನ್ನು ಹೆಚ್ಚಿಸಿ ವ್ಯಾಧಿಗಳ ಸಂಭವನೀಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಈ ಶಿಬಿರವು ವಿಶೇಷವಾಗಿ ರೋಗಿಗಳ ಆಂತರಿಕ ಸ್ವಾಸ್ಥ್ಯದ ಸುತ್ತ ಕೇಂದ್ರೀಕೃತವಾಗಿದೆ ಏಕೆಂದರೆ ಸಾಮಾನ್ಯವಾಗಿ ಎಲ್ಲ ರೋಗಗಳ ಮೂಲವು ಅಲ್ಲಿಯೇ ಅಡಗಿರುತ್ತದೆ. ಎಷ್ಟೋ ಬಾರಿ  ಕೇವಲ ವೈದ್ಯಕೀಯ ಚಿಕಿತ್ಸೆಯಿಂದ ಮಾತ್ರ ದೇಹವನ್ನು  ಗುಣಪಡಿಸಲಾಗದು ಎಂದು ಸಾಬೀತಾಗಿದೆ. ವ್ಯಾಧಿಗಳ ಮೂಲ ಕಾರಣವಾದ ಮನಸ್ಸು ಮತ್ತು ಅದರ ಪ್ರವೃತ್ತಿಗಳ ಚಿಕಿತ್ಸೆ, ಅರೋಗ್ಯಕರವಲ್ಲದ ಅಭ್ಯಾಸಗಳ ಬದಲಾವಣೆ, ರೋಗದ ಪ್ರಭಾವವನ್ನು ಕ್ಷೀಣಿಸಲು ಪ್ರಾಯೋಗಿಕ ಮತ್ತು ಪ್ರಭಾವಶಾಲಿಯಾದ ಉಸಿರಾಟದ ಪ್ರಕ್ರಿಯೆಗಳ ಮತ್ತು ಯೋಗದ ಅಳವಡಿಕೆ ಈ ಕಾರ್ಯಕ್ರಮದ ಮುಖ್ಯ ಅಂಗವಾಗಿವೆ

ಈ ದೇಹವು ಒಂದು ಯಂತ್ರ.  ಈ ದೇಹವು  ಬೆಳೆಯಲು ಹಾಗೂ ಕೆಲಸ ಮಾಡಲು ಮೂಲ ಕಾರಣವಾಗಿರುವ ಅಗೋಚರ ಚೈತನ್ಯವನ್ನು ನಾವು ಕಡೆಗಣಿಸಿದ್ದೇವೆ. ಇದಕ್ಕೂ ಸಮಾನವಾದ ಗಮನವನ್ನು  ನೀಡುವುದು ಅತ್ಯಗತ್ಯ.  ಪ್ರಪಂಚದಲ್ಲಿನ ಎಲ್ಲ ರೀತಿಯ ಸೃಜನಾತ್ಮಕತೆ, ವೈಜ್ಞಾನಿಕ ಸಂಶೋಧನೆ, ಸಂಗೀತ, ಕಲೆ, ಚಲನಚಿತ್ರದ  ಪ್ರಕಾರಗಳು, ಇನ್ನೆಲ್ಲದಕ್ಕೂ  ಕಾರಣೀಭೂತವಾಗಿರುವ ಈ ಚೈತನ್ಯದೆಡೆಗೆ ನಿಮ್ಮ ಗಮನ ಅಗತ್ಯ.  ಇದೇ ಪ್ರಜ್ಞೆಯೇ ಆರೋಗ್ಯ ಹಾಗೂ ಆನಂದವನ್ನು ಆವಿರ್ಭಾವಗೊಳಿಸುತ್ತದೆ . - ಶ್ರೀ ಶೀ ರವಿಶಂಕರ್

''ಸ್ವಸ್ಥ ಜೀವನ"  ಕಾರ್ಯಕ್ರಮದ ವಿಭಾಗಗಳು

  • ವಸತಿಸಹಿತ ಸಮಗ್ರ ಚಿಕಿತ್ಸಕ  ಕಾರ್ಯಕ್ರಮ
  • ವಸತಿರಹಿತ/ಅರೆಕಾಲಿಕ ಸಮಗ್ರ ಚಿಕಿತ್ಸಕ ಕಾರ್ಯಕ್ರಮ
  • ಸಮಗ್ರ ವ್ಯಸನಮುಕ್ತಿ ಚಿಕಿತ್ಸಕ ಕಾರ್ಯಕ್ರಮ

ಶಿಬಿರದ ರೂಪರೇಖೆ

  • ಮಧುಮೇಹ ನಿರ್ವಹಣೆ ಮತ್ತು ನಿಯಂತ್ರಣ
  • ಅಧಿಕ ರಕ್ತದೊತ್ತಡದ (ಹೈಪರ್ ಟೆನ್ಶನ್) ನಿರ್ವಹಣೆ
  • ಖಿನ್ನತೆಯ ನಿರ್ವಹಣೆ
  • ಆತಂಕ ನಿರ್ವಹಣೆ
  • ಅಸ್ತಮಾ ನಿರ್ವಹಣೆ
  • ಧೂಮಪಾನದಿಂದ ಮುಕ್ತಿ
  • ಮದ್ಯಪಾನ/ದುರ್ವ್ಯಸನಗಳಿಂದ ಮುಕ್ತಿ

Modules for other diseases will be launched in a progressive manner.

1

ಡಾ.ಕಾರ್ತಿಕ್ , ಬೆಂಗಳೂರು

ಲಿವಿಂಗ್ ವೆಲ್ (ಸ್ವಸ್ಥ ಜೀವನ) ಶಿಬಿರವು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಆರೋಗ್ಯದ ಸಮಗ್ರ ದೃಷ್ಟಿಕೋನವನ್ನು ಪರಿಚಯಿಸುತ್ತದೆ. ದೇಹಾರೋಗ್ಯವನ್ನು ಸುಧಾರಿಸಿ ಮನಸ್ಸನ್ನು ಪ್ರಶಾಂತಗೊಳಿಸಲು ಈ ಶಿಬಿರವು ಹಂತ ಹಂತವಾದ ಮಾರ್ಗದರ್ಶನವನ್ನು ನೀಡುತ್ತದೆ. ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರಿಗೆ ಮತ್ತು ಈ ರೀತಿಯ ರೋಗಗಳ ಸಂಭವವಿರುವವರಿಗೆ ಸಮತೋಲಿತ ಜೀವನಶೈಲಿಯನ್ನು ಸಾಧಿಸಲು ನಾನು ಈ ಶಿಬಿರವನ್ನು ಶಿಫಾರಸು ಮಾಡುತ್ತೇನೆ.

2

ಅಂಶು ಕಾಲ್ರ, ೩೭ ವರ್ಷ, ಬರೋಡ

ನಾನು ಮೂತ್ರಪಿಂಡದ ವಿಫಲತೆಯ ಕೊನೆಯ ಹಂತದಲ್ಲಿದ್ದೆ. ಮೂತ್ರಪಿಂಡದ ಕಸಿಯ ಕಾರಣದಿಂದ ನನ್ನ ದೈಹಿಕ ಚಟುವಟಿಕೆಗಳಿಗೆ ನಿರ್ಬಂಧನೆಯಿತ್ತು . ಲಿವಿಂಗ್ ವೆಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ನಾನು ಸಕ್ರಿಯವಾಗಿ ನನ್ನ ದಿನನಿತ್ಯದ ಕೆಲಸಗಳನ್ನು ಮಾಡಬಲ್ಲೆ.  ಜೀವನ ಶೈಲಿಯ ನಿರ್ವಹಣೆ ಮತ್ತು  ಸಮತೋಲಿತ  ಆಹಾರಪದ್ಧತಿಯ  ಬಗ್ಗೆ ನನಗೆ ಅರಿವು ಮೂಡಿದೆ. ದೀರ್ಘಕಾಲದ ರೋಗಗಳಿಂದ  ಬಳಲುತ್ತಿರುವವರಿಗೆ ಈ ಶಿಬಿರವು ಒಂದು ಅದ್ಭುತವಾದ ಪರಿಕರ.