ಧ್ಯಾನದ ಗುಣಪಡಿಸುವ ಶಕ್ತಿ

Benefits of meditation

"ಧ್ಯಾನದಿಂದ ಗುಣಮುಖವಾಗಲು ಸಾಧ್ಯ.  ಮನಸ್ಸು, ಪ್ರಗ್ನಾಪೂರ್ವಕ ಪ್ರಶಾಂತತೆಯಿಂದ ಮತ್ತು ಸಂಪೂರ್ಣ ತೃಪ್ತಿಯಿಂದ ಇದ್ದಾಗ ಲೇಸರ್ ಕಿರಣದ ರೀತಿ ತೀಕ್ಷ್ಣತೆ ಇರುತ್ತದೆ.  ಇದು  ತುಂಬಾ ಶಕ್ತಿಶಾಲಿ ಮತ್ತು ಗುಣಮುಖವಾಗಿಸುತ್ತದೆ". - ಶ್ರೀ ಶ್ರೀ

ಒಂದು ಆರೋಗ್ಯವಾದ ಮೊಗ್ಗು ಅರಳಲು ಸಾಧ್ಯ.  ಹಾಗೇ ಆರೋಗ್ಯದಿಂದಿರುವರು ಮಾತ್ರ ಸಫಲತೆ ಪಡೆಯಲು ಸಾಧ್ಯ

ಸರಿ !  ಆದರೆ ಆರೋಗ್ಯವಾಗಿರುವುದು ಎಂದರೇನು ?

ಪರಿಪೂರ್ಣ ಸ್ವಾಸ್ಥ್ಯದಿಂದಿರಲು, ಒಬ್ಬ ವ್ಯಕ್ತಿ ಮಾನಸಿಕವಾಗಿ ಪ್ರಶಾಂತಿ, ಸ್ಥಿರತೆ ಹಾಗು ಭಾವನತ್ಮಕ  ಸ್ಥಿರತೆಯಿರಬೇಕು.  ಸ್ವಸ್ಥತೆ ಅಂದರೆ ಆರೋಗ್ಯ.  ಇನ್ನೊಂದು ಅರ್ಥ ನಮಲ್ಲಿ ನಾವಿರುವುದು.   ಸ್ವಸ್ಥತೆ ಅಥವ ಆರೋಗ್ಯ ದೇಹಕ್ಕೆ ಮತ್ತು ಮನಸಿಗೆ ಮಾತ್ರ ಸೀಮಿತವಲ್ಲ - ಇದು ನಮ್ಮ ಚೈತನ್ಯಕ್ಕೆ ಸಂಬಂಧ ಇದೆ. ನಮ್ಮ  ಚೈತನ್ಯ ಎಷ್ಟು ನಿರ್ಮಲ ಹಾಗು ತಿಳಿಯಾಗಿ ಇರುತ್ತದೆಯೋ, ಅಷ್ಟು ಸ್ವಾಸ್ಥ್ಯತೆ ಇರುತ್ತದೆ.

ಧ್ಯಾನವು ನಮ್ಮ ಪ್ರಾಣ ಶಕ್ತಿ ಹೆಚ್ಚಿಸುತ್ತದೆ

ಪ್ರಾಣ ಶಕ್ತಿ  ನಮ್ಮ ದೇಹ ಮತ್ತು ಮನಸಿನ ಆರೊಗ್ಯಕ್ಕೆ ಮೂಲ. ಧ್ಯಾನದಿಂದ ಪ್ರಾಣ ಶಕ್ತಿ ಪಡಯಬಹುದು.  ನಿಮ್ಮ ದೇಹದಲ್ಲಿ, ಉಕ್ಕಿ ಹರಿಯುವ ಪ್ರಾಣ ಶಕ್ತಿ ಇದ್ದಾಗ ನೀವು ಜಾಗೃತ , ಉತ್ಸಾಹ ಮತ್ತು ಸುಮರಸದಿಂದ ಇರುತ್ತೀರಿ.  ಪ್ರಾಣ ಶಕ್ತಿಯ ಅಭಾವದಿಂದ ಆಲಸ್ಯ, ತಮಸ್ಸು ಮತ್ತು ನಿರುತ್ಸಾಹ ಬರುತ್ತದೆ.

ಅಸ್ವಸ್ಥತೆಯ ನಿವಾರಣೆ - ಧ್ಯಾನದಿಂದ

ಅಸ್ವಸ್ಥತೆಯ ಮೂಲ ಮನಸ್ಸು/ಚೈತನ್ಯದಲ್ಲಿ ಅಡಗಿದೆ  ಎಂದು ನಮಗೆ ತಿಳಿದಿರುವ ವಿಚಾರ. ಆದರಿಂದ  ನಮ್ಮ ಗಮನ ಮನಸ್ಸಿನ ಕಡೆ ಕೊಟ್ಟಾಗ ಹಾಗುಅದರಲ್ಲಿರುವ  ಅಡಚಣೆಗಳ್ಳನ್ನು  ನಿವಾರಿಸಿದಾಗ, ಶೀಘ್ರ ಗುಣಮುಖರಾಗುತ್ತೇವೆ. ಈ ಕೆಳಗಿನ ಅಂಶಗಳು ಅಸ್ವಸ್ಥತೆಗೆ ಕಾರಣ:

  • ನಮ್ಮ ಪ್ರಕೃತಿಯಿಂದ ವಿಪರೀತದ ಅಭ್ಯಾಸ (ಉ.ದಾ ಅತಿಯಾದ ಆಹಾರ ಸೇವನೆ
  • ಪರಿಸರದಿಂದ/ಜೀವನಶೈಲಿಯಿಂದ ಬಂದ ಕಾಯಿಲೆ ಅಸಂಕ್ರಾಮಿಕ ಪರಿಸ್ಥಿತಿ ಅಥವ ಸಾಮನ್ಯ ನೆಗಡಿ/ಚಳಿ
  • ಕರ್ಮ ಬಂಧನದ ಪ್ರೇರೇಪಿತ ಪರಿಸ್ಥಿತಿಯಿಂದ

ಅಸ್ವಸ್ಥತೆಗೆ ಪ್ರಕೃತಿಯಲ್ಲಿಯೇ ಪರಿಹಾರ ಇರುತ್ತದೆ.  ಭೌತಿಕ ಪ್ರಕೃತಿಯಲ್ಲಿ, ಆರೋಗ್ಯ, ಅನಾರೋಗ್ಯ ಪರಿಸ್ಥಿತಿ ಸಹಜ.ಧ್ಯಾನದ ಅಭ್ಯಾಸದಿಂದ ಒತ್ತಡ, ಚಿಂತೆ, ಆತಂಕ ನಿವಾರಣೆಯಾಗಿ, ಮನಸ್ಸು ಸಕಾರಾತ್ಮಕವಾಗಿ, ನಮ್ಮ ದೇಹ, ಮೆದಳು ಹಾಗು ನರ ವ್ಯವಸ್ಥೆಯಲ್ಲಿ ಭಾರಿ ಅನುಕೂಲ ಪರಿಣಾಮ ಬೀರಿ, ಅಸ್ವಸ್ಥತೆ ನಿವಾರಣೆ ಪರಿಣಾಮಕಾರಿಯಾಗುತ್ತದೆ.

ಭೌತಿಕ ಪ್ರಕೃತಿಯಲ್ಲಿ, ಆರೋಗ್ಯ, ಅನಾರೋಗ್ಯ ಪರಿಸ್ಥಿತಿ ಸಹಜ.  ಅದರ ಬಗ್ಗೆ ಅತಿಯಾದ ಅತಂಕ/ಚಿಂತೆ ಬೇಡ.  ಅದರ ಬಗ್ಗೆ ಚಿಂತಿತರಾದಾಗ ಅಸ್ವಸ್ಥತೆಗೆ ಇನ್ನೂ ಬಲ ಬರುತ್ತದೆ. ನೀವು ಆರೋಗ್ಯ ಹಾಗು ಅನಾರೋಗ್ಯದ ಮಿಶ್ರಣ. ಇದರ ಬಗ್ಗೆ ಅರಿವಾದಾಗ ಮತ್ತು ಮನಸ್ಸನ್ನು ಸಕಾರಾತ್ಮಕವಾಗಿ ನಿರ್ವಹಿಸಿದಾಗ ಅಸ್ವಸ್ಥತೆ ಬದಲಾಗುತ್ತದೆ.

  • ಮನಸ್ಸನು ಗುಣಮುಖವಾಗಿಸಿ - ಧ್ಯಾನದಿಂದ
  • ಧ್ಯಾನ ಒತ್ತಡ ಒಳ ಹೋಗದಂತೆ ತಡೆದು, ಒಳಗಿರುವ ಒತ್ತಡವನ್ನು  ಬಿಡುಗಡೆ ಮಾಡುತ್ತದೆ - ಪರಿಣಾಮವಾಗಿ ಆರೊಗ್ಯ, ಸಂತೋಷ ಮತ್ತು ಸಕಾರತ್ಮಕ ಸ್ಥಿತಿ ಚಿಮ್ಮುತ್ತದೆ.
  • ಧ್ಯಾನದ  ಅಭ್ಯಾಸದಿಂದ ಮೆದುಳು ತಂಪಾಗುತ್ತದೆ - ಇಡೀ ದೇಹ-ಮನಸ್ಸು ಪುನಃಚೇತನವಾಗುತ್ತದೆ.

ಧ್ಯಾನದಿಂದ ಭಾವನತ್ಮಕ ಮಾಲಿನ್ಯ ನಿವಾರಿಸಿ  

ಖಿನ್ನತೆಯಿಂದ ಭಾವನಾತ್ಮಕ ಮಾಲಿನ್ಯ ಮಾಡಿದರೆ, ಜನರು ದಂಡ ತೆರಬೇಕಾದಂತಹ ಕಾಲ ಮುಂದೆ ಬರಬಹುದು.  ನಿಮ್ಮ ಪರಿಸರದಲ್ಲಿ ಜನರು ಮಾತಡುವುದನ್ನು ಕೇಳಿಯೂ ಕೂಡ ನಿಮ್ಮ ಮನಸ್ಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.  ಆದರಿಂದ ನಿಮಗೆ ಶಾಂತಿ-ಸಂತೋಷ ಅಥವ ಕ್ಷೋಭೆ (ಅಸೂಯೆ, ಕೋಪ, ಹತಾಶೆ, ದುಃಖ) ಆಗಬಹುದು. ನಿಮ್ಮ ಮನಸ್ಸು ಆತ್ಮದಲ್ಲಿ ಸ್ಥಿರವಿಲ್ಲದ ಕಾರಣ ಅದು ಕೇಂದ್ರೀಕೃತವಾಗಿರುವುದಿಲ್ಲ.  ಈ ಮನಸ್ಸಿನ/ಭಾವನತ್ಮಕ ಮಾಲಿನ್ಯ ತಡೆಯಲು ಅತ್ಯಂತ ಪರಿಣಾಮ ದಾರಿ ಧ್ಯಾನ.

ಧ್ಯಾನದಿಂದ ವಿಕಸನ

ಧ್ಯಾನವು ಆಧ್ಯಾತ್ಮಿಕ ಸ್ಥರದಲ್ಲೂ ಬೆಳವಣಿಗೆ ತರಬಲ್ಲದು.  ಜೀವನದ ಬಗ್ಗೆ ತಿಳಿದುಕೊಳ್ಳುತ್ತಿದ್ದಂತೆ, ಈ ಸೃಷ್ಟಿಯ ರಹಸ್ಯದ ಅನುಭವ ಆಗುತ್ತಾ ಬರುತ್ತದೆ.  ನಮ್ಮಲ್ಲಿ ಈ ಕೆಲವು ಪ್ರಶ್ನೆಗಳು ಏಳಬಹುದು - ಈ ಜೀವನದ ಅರ್ಥ/ಗುರಿ ಏನು ? ಜೀವನದ ಉದ್ದೇಶ ಏನು?  ಪ್ರಪಂಚ ಏನು ? ಪ್ರೇಮ ಎಂದರೇನು ? ಜ್ಞಾನ ಎಂದರೇನು .... ?

ನಿಮ್ಮಲ್ಲಿ ಈ ಪ್ರಶ್ನೆಗಳು ಎದ್ದರೆ, ನೀವು ಅತ್ಯಂತ ಅದೃಷ್ಟಶಾಲಿಗಳು ಎಂದು ತಿಳಿಯಿರಿ.  ಈ ಪ್ರಶ್ನೆಗಳ ಬಗ್ಗೆ ನೀವೇ ಆಲೊಚಿಸಬೇಕು/ತಿಳಿದುಕೊಳ್ಳಬೇಕು; ಪುಸ್ತಕಗಳಲ್ಲಿ, ಇದಕ್ಕೆ ಉತ್ತರ ದೊರೆಯದು.  ಈ ಪ್ರಶ್ನೆಗಳಲ್ಲಿ ಜೀವನ ಕೇಂದ್ರೀಕರಿಸಿ ಜೀವನದ ವಿಕಸತೆಯ ಮಾರ್ಪಾಡು ಗಮನಿಸಬೇಕು. ಅದು ಪರಿಪೂರ್ಣ ಆರೋಗ್ಯ. ನಿಮ್ಮ ಅಂತರಂಗದಲ್ಲಿ ಬದಲಾವಣೆ - ಮೊಗ್ಗು ಸುಂದರ ಹೂವಾಗಿ ಪರಿಪೂರ್ಣ ವಿಕಾಸವಾಗುತ್ತಾ ಬರುತ್ತದೆ.

ಧ್ಯಾನದಿಂದ ಪ್ರಪಂಚದ ಹಿತ

ಧ್ಯಾನವು ಪರಿಸರವನ್ನು ನಿರ್ಮಲವಾಗಿಸುತ್ತದೆ.  ಧ್ಯಾನ ಹಾಗು ಸುದರ್ಶನ ಕ್ರಿಯೆ ಹಿಂಸೆ, ಆಕ್ರಮಣ ಸ್ವಭಾವದಿಂದ ಕರುಣೆ, ಪ್ರೇಮ ಮತ್ತು ಸ್ಪಂದನಗಳಿಗೆ  ಮಾರ್ಪಡುತ್ತದೆ.  ಉದಾಹರಣೆಗೆ ಒಬ್ಬ ಕ್ರೋಧಿತ ವ್ಯಕ್ತಿ ಕೊಣೆಯೊಳಗೆ ಹೊಕ್ಕಾಗ ನಿಮಗೆ ಹೇಗೆನಿಸುತ್ತದೆ ?  ನಿಮಗೂ ಅದೇ ಭಾವನೆಯ ಸೋಂಕು ತಗಲುತ್ತದೆ.

ಹಾಗೆಯೇ ಒಂದು ಸಂತೃಪ್ತ, ಸಾಮರಸ್ಯ ಹಾಗು ಸಂತೋಷದ ಕೆಲಸದಿಂದ  ನಿಮಗೂ ಒಳ್ಳಯ ಭವನೆ ಬರುತ್ತದೆ.  ನಿಮಗೆ ಇದು ಆಶ್ಚರ್ಯವೆನಿಸಬಹುದು.  ಭಾವನೆಯು ಒಬ್ಬ ವ್ಯಕ್ತಿಯ ದೇಹಕ್ಕೆ ಸೀಮಿತವಲ್ಲ - ಅದು ಸುತ್ತಲೂ ಆವರಿಸುತ್ತದೆ - ಇಡೀ ಪರಿಸರದಲ್ಲಿದೆ, ಏಕೆಂದರೆ ನಮ್ಮ ಮನಸ್ಸು  ಪಂಚ ಭೂತಗಳಿಗಿಂತಲೂ (ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ) ಸೂಕ್ಷ್ಮವಾಗಿದೆ. ಒಂದು ಕಡೆ ಬೆಂಕಿಯಿದ್ದರೆ, ಅದರ ಕಾವು ಬೆಂಕಿಯಲ್ಲಷ್ಟೇ ಅಲ್ಲಾ ಸುತ್ತ ಮುತ್ತ ಪ್ರಸರಿಸುತ್ತದೆ.

ಗಮನಿಸಿ: ನೀವು ದುಃಖ ಅಥವ ಖಿನ್ನತೆಗೊಳಗಾಗಿದ್ದರೆ, ಆ ಭಾವನೆ ನಿಮಬ್ಬರಿಗೇ ಅಲ್ಲಾ, ನೀಮ್ಮ ಪರಿಸರದಲ್ಲೂ ಹರಡುತಿದ್ದೀರಿ.

ಈ ಆಧುನಿಕ ಜಾಗತಿಕ  ಬೆಳವಣಿಗೆ ಘರ್ಷಣೆ ಅಥವ ಅನಾರೋಗ್ಯದ ಪರಿಸ್ಥಿತಿಯಲ್ಲಿ, ದಿನದಲ್ಲಿ ಸ್ವಲ್ಪ ಸಮಯವಾದರೂ ಧ್ಯಾನಸ್ಥರಾಗುವುದು ಅತ್ಯವಶ್ಯ.  ಧ್ಯಾನದ ಮೂಲಕ ಪರಿಸರದಲ್ಲಿ ನಕಾರತ್ಮಕ ತರಂಗಗಳನ್ನು ನಿವಾರಿಸಿ, ಸಾಮರಸ್ಯದ ಪರಿಸರದ ನಿರ್ಮಾಣ ಮಾಡಿ.

ಉಸಿರಾಟ ಹಾಗೂ ಧ್ಯಾನ

ಜೀವನ ಕಲಾ  ಸಂಸ್ಥೆಯ ಒಂದು ಅಮೂಲ್ಯ ಆಭರಣ ಸಂಪೂರ್ಣ  ಆರೋಗ್ಯಕ್ಕೊಯ್ಯುವ ಉಸಿರಿನ ತಂತ್ರ "ಸುದರ್ಶನ ಕ್ರಿಯೆ"

ಈ ವಿಶಿಷ್ಟವಾದ ಉಸಿರಿನ ಅಭ್ಯಾಸ ಪ್ರಭಲವಾದ ಸಚೇತನವಾಗಿಸುವ ಅನನ್ಯ ತಂತ್ರ

  • ಕಣ ಕಣವೂ ಆಮ್ಲಜನಕದಿಂದ ಕೂಡಿ ನವಚೇತನದಿಂದ ಪ್ರಾಣ ಉಕ್ಕಿ ಹರಿಯುತ್ತದೆ
  • ನಮ್ಮ ದೇಹದಿಂದ ನಕಾರತ್ಮಕ ಭಾವನೆ ಹೊರದೂಡುತ್ತದೆ
  • ನಮ್ಮನ್ನು ಕೋಪ, ದುಗುಡ, ಒತ್ತಡ ಹಾಗು ಹಾತಾಶೆ ಯಿಂದ ಮುಕ್ತಗೊಳಿಸುತ್ತದೆ
  • ಇದು ನಮ್ಮಲ್ಲಿರುವ ಆತಂಕ, ಖಿನ್ನತೆ ಮತ್ತು ನಿರುತ್ಸಾಹವನ್ನು ದೂರಮಾಡುತ್ತದೆ.
  • ಇಡೀ ದೇಹ ಹಾಗು ಮನಸ್ಸಿಗೆ ನೆಮ್ಮದಿ, ನಿರ್ಮಲತೆ ತರುತ್ತದೆ

ಇದರ ಅಭ್ಯಾಸದ ಬಳಿಕ ಕೇಂದ್ರಿಕೃತ ಹಾಗು ತಿಳಿಯಾದ ಭಾವ ಉಂಟಾಗುತ್ತದೆ.  ಸಂತಸದ ಅಲೆಗಳ ಭಾವ ಮೂಡಿ, ನಿಮ್ಮ ಹೃದಯಂತರಾಳದಿಂದ ನಗು ಮೂಡುತ್ತದೆ.

"ಈ ಶಕ್ತಿಶಾಲಿಯಾದ ಸುದರ್ಶನ ಕ್ರಿಯೆ ಹಾಗು ಧ್ಯಾನ ಮಾಡಿರಿ.   ಇದರ ಅಭ್ಯಾಸ ನಿಮ್ಮನ್ನು ಸಂಪೂರ್ಣ ಮಾರ್ಪಾಡಿಸಿ, ಅಂತರಾಳದಲ್ಲಿರುವ ನಿಮ್ಮ ಪ್ರೇಮ ಚೈತನ್ಯವನ್ನು ಬೆಳಗಿಸುವುದು".