ನಿಮ್ಮ ಧ್ಯಾನ ಸಫಲವಾಗದಿರುವುದಕ್ಕೆ ಆರು ಕಾರಣಗಳು

ದೀಪಾ ಮತ್ತು ಭಾವನಾ ಉತ್ತಮ ಗೆಳತಿಯರು. ಎಷ್ಟು ಮೈತ್ರಿ ಎಂದರೆ ಅವರು ಒಬ್ಬರನೊಬ್ಬರು ಕಣ್ಣು ಮುಚ್ಚಿ ಆನುಸರಿಸುವವರು ಒಮ್ಮೆ ಭಾವನಾ ಧ್ಯಾನದ ಕಾರ್ಯ ಕ್ರಮವನ್ನು ಸೇರಿದರು, ಸಹಜವಾಗಿ ದೀಪಾ ಅದರೂ ಭಾಗವಹಿಸಲು ಇಚ್ಛಿಸಿದರು. ಆದರೆ ದೀಪಾಳಿಗೆ ಕೆಲಸದ ವೇಳೆಯು, ಧ್ಯಾನದ ಕಾರ್ಯಕ್ರಮದ ವೇಳೆಯೊಂದಿಗೆ ಘರ್ಷಣೆಯಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಮರ್ಥರಾದರು. ಆದರೆ ದೀಪಾ, ಭಾವನಾಳ ಧ್ಯಾನ ಕ್ರಮವನ್ನು ಗಮನಿಸಲು ಆರಂಭಿಸಿದರು – 20 ನಿಮಿಷಗಳ ಕಾಲ ಕಣ್ಣುಗಳನ್ನು ಮುಚ್ಚಿ ನಿಶ್ಶಬ್ದವಾಗಿ ಕುಳಿತಿರುವುದು. ಇದನ್ನು ನೋಡಿದಾಗ ದೀಪಾಳಿಗೆ ಇದು ಬಹಳ ಸರಳ ನೆಂದು ಎಣಿಸಿದರು ತಾನೂ ಇದನ್ನು ಪ್ರಯತ್ನಿಸಲು ನಿರ್ಧರಿಸಿದರು.

ಮೊದಲನೇ ದಿನ : ದೀಪಾ ಕಣ್ಣುಗಳನ್ನು ಮುಚ್ಚಿದ ತಕ್ಷಣವೇ, ಆ ದಿನ ಮುಗಿಸ ಬೇಕಾದ ಹಾಗೂ ಮುಂದಿನ ದಿನಗಳಲ್ಲಿ ಮುಗಿಸ ಬೇಕಾದ ಕಾರ್ಯಗಳ ಯೋಜನೆಯಲ್ಲಿ ತೊಡಗಿದಳು. ಇದರ ಪರಿಣಾಮವಾಗಿ ಅವರು ಕಣ್ಣುಗಳನ್ನು ತೆರೆದ ಕೊಡಲೆ ನಿರಾಶೆಯಲ್ಲಿ ಉಂಟಾಯಿತು. ಧ್ಯಾನದ ನಂತರ ಒಂದು ಅದ್ಭುತ ಸುಂದರ ಅನುಭವವಾಗುವುದೆಂದು ಭಾವನಾಳ ಅಭಿಪ್ರಾಯ  ನೆನಪಾಯಿತು ಆದರೆ ದೀಪಾಳಿಗೆ ಮಾತ್ರ ಮುಂಚೆಗಿಂತ ಹೆಚ್ಚಿನ ಆಲೋಚನೆಗಳ ಸುರಿಮಳೆ ಮನಸ್ಸನ್ನು ಜರ್ಝರ ಗೊಳಿಸಿತು.

ನಾಲ್ಕನೇ ದಿನ: ಆ ಅದ್ಭುತ ಸುಂದರ ಆನುಭವವನ್ನು ಪಡೆಯುವ ನಿರೀಕ್ಷೆಯಲ್ಲಿ, ಅವಳು ಎರಡು ದಿನಗಳ ನಂತರ ಮತ್ತೆ ಧ್ಯಾನಕ್ಕೆ ಕುಳಿ ತಾಗ ಆದರ ರುಚಿಯನ್ನು ಸವಿಯಲು ಕಠಿಣ ಪ್ರಯತ್ನವೇನೊ ಮಾಡಿದರು, ಆದರೆ ಮತ್ತೆ ಆಲೋಚನೆಗಳ ಸರಳಿನಲ್ಲಿ ಸಿಲುಕಿ ನಿರಾಶೆಯಾದಳು.

ಆರನೇ ದಿನ: ಈ ಸಲದ ಪ್ರಯತ್ನದಲ್ಲಿ ಒಂದು ದಿನ ರಾತ್ರಿ ಭೋಜನದ ನಂತರ ಸುಮಾರು ಹನ್ನೊಂದು ಮೂವತ್ತಕ್ಕೆ ಧ್ಯಾನ ಮಾಡಲು ಅವಕಾಶ ಸಿಕ್ಕಿತ್ತು. ಹೊಟ್ಟೆಯು ತುಂಬಿದ್ದು, ಮನಸ್ಸು ದಣಿದಿದ್ದು ಅವಳು ಧ್ಯಾನಕ್ಕಾಗಿ ಕಣ್ಣುಗಳನ್ನು ಮುಚ್ಚಿದ ನಂತರ ನಿದ್ದೆ ಹತ್ತಿ ಬಿಟ್ಟೆತು. ಇಪ್ಪತ್ತು ನಿಮಿಷಗಳ ನಂತರ ಗಡಿಯಾರದ ಗಂಟೆಯ ಶಬ್ದದೊಂದಿಗೆ ಅವರಿಗೆ ಎಚ್ಚರವಾಯಿತು. ಇದರ    ಪರಿಣಾಮವೇನು ? ತಮಗೆ ಏಕೆ ಧ್ಯಾನ ಮಾಡಲು ಅಸಮರ್ಥರಾಗುತ್ತಿದ್ದೇನೆ ಎಂಬ ವಿಶಾದದೊಂದಿಗೆ ಅತೃಪ್ತಿಗೊಂಡು ಹತಾಷರಾಗುತ್ತಾ ಧ್ಯಾನ ಮಾಡವುದನ್ನು ಕೈ ಬಿಡುತ್ತಾಳೆ

ನಿಮಗೂ ದೀಪಾಗೆ ಆದ ಅನುಭವದ ಆಗಿದೆಯೆ ? “ಧ್ಯಾನ ಮಾಡುತ್ತೇನೆ. ಆದರೆ ಇನ್ನು ಯಾವ ಮಧುರ ಬದಲಾವಣೆಗಳನ್ನು ಕಾಣತಿಲ್ಲವಲ್ಲಾ” ಎಂದು ಕಳವಲಿಸುತ್ತಿದ್ದೀರಾ ?

ದೀಪಾ ಭಾವಿಸುವಂತೆ, ಧ್ಯಾನ ಸಫಲವಾಗದಿರುವ ಕಾರಣವನ್ನು ವಿಶ್ಲೇಷಿಸುತ್ತಾ ಮತ್ತೆ ದೀಪಾಳನ್ನು ಧ್ಯಾನದ ಅಭ್ಯಾಸವನ್ನು ಮುಂದುವರಿಸಲು ಪ್ರೇರೇಪಿಸೋಣ.

#1: ದೀಪಾ ಅನುಸರಿಸುತ್ತಿದ್ದ ಕ್ರಮವು ಸರಿಯದಾಗಿತ್ತಾ?

ಧ್ಯಾನವನ್ನು ಅನುಭವಿ ಶಿಕ್ಷಕರಿಂದ ಔಪಚಾರಿಕವಾಗಿ ಧ್ಯಾನದ ಶಿಬಿರದಲ್ಲಿ ಕ್ರಮದಿಂದ ಕಲಿಯುವ ಅಗತ್ಯವಿದೆ. ಶಿಕ್ಷಕರು ಧ್ಯಾನದ ಸರಿಯಾದ ಪ್ರಕ್ರಿಯೆಗಳನ್ನು ಕಲಿಸಿ, ಜೊತೆಗೆ ಮಾರ್ಗದರ್ಶನ ನೀಡುತ್ತಾರೆ. ಧ್ಯಾನವು ಸಫಲವಾಗಲು ಕೆಲವು ಅಗತ್ಯವಾದ ಅಂಶಗಳನ್ನು ತಿಳಿಸುತ್ತಾರೆ(ಇದರ ಪರಿಣಾಮವಾಗಿ ನಿಮ್ಮ ಧ್ಯಾನಕ್ಕೆ ಯಾವ ಅಡಚಣೆಗಳು ಬರುತ್ತಿವೆ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ).

#2: ಭಾವನಾಳಲ್ಲಿ ಶ್ರದ್ಧೆ ಇಡುವಂತೆ ಧ್ಯಾನದ ತಂತ್ರದಲ್ಲೂ ವಿಶ್ವಾಸವಿಡಿ

ಒಮ್ಮೆ ಧ್ಯಾನದ ನಿಖಿರ ಪದ್ದತಿಯ ಜ್ಞಾನ ಬಂದಮೇಲೆ, ಅದರಲ್ಲಿ ಭಕ್ತಿಶ್ರದ್ಧೆ ಇಡುವುದೂ ಬಹಳ ಮುಖ್ಯ ಅಂಶವಾಗಿದೆ. ನಾನು ಮಾಡುವ ಧ್ಯಾನದ ಕ್ರಮವು ಸರಿಯಾಗಿದೆ ಎನ್ನುವ ವಿಶ್ವಾಸ, ಅದನ್ನು ಅನುಗುಣವಾಗಿ ಮಾಡುತ್ತಿದ್ದೇನೆ ಎನ್ನುವ ವಿಶ್ವಾಸ ಮತ್ತು ಎಂದಾದರೂ ಇದು ಸಫಲಗೊಳ್ಳಲಿದೆ ಎನ್ನುವ ವಿಶ್ವಾವು ಬಹಳ ಅತ್ಯಗತ್ಯವಾಗಿದೆ.

#3:  ದೀಪಾ ಧ್ಯಾನದ ಅಭ್ಯಾಸ ಮಾಡುವಾಗ ಇನ್ನು ಕ್ರಮಬದ್ಧವಾಗಿರಬೇಕಿತ್ತು

ದೀಪಾಳ ಅಭ್ಯಾಸದ ಕ್ರಮವು ಸಕ್ರಮಗಿರಲಿಲ್ಲ ಮೊದಲದಿನದ ಅಭ್ಯಾಸದ ನಂತರ, ಎರಡುದಿನಗಳು ಬಿಟ್ಟು ನಾಲ್ಕನೆಯ ದಿನ ಅಭ್ಯಾಸ ಮಾಡಿದಳು, ಮತ್ತೆ ಒಂದು ದಿನ ಅಭ್ಯಾಸವನ್ನು ನಿಲ್ಲಿಸಿದ್ದರು. ಯಾವುದೇ ಅಭ್ಯಾಸ ಕ್ರಮದ ಉತ್ತಮ ಫಲಿತಾಂಶಕ್ಕಾಗಿ ವೇಳೆ, ತಾಳ್ಮೆ ಮತ್ತು ಬದ್ಧತೆಯು ಅತ್ಯಗತ್ಯವಾಗಿದೆ. ಕೆಲವು ದಿನಗಳ, ಕೆಲವುವಾರಗಳ ಧ್ಯಾನದ ನಂತರ, ಇನ್ನೂ ಸಕಾರಾತ್ಮಕ ಬದಲಾವಣೆಗಳು ಆಗಿಲ್ಲ ಎಂದು ಎಣಿಸಬಹುದು. 

ನಮ್ಮ ಅರಿವೇ ಇಲ್ಲದೆ, ನಮ್ಮ ಮನಸ್ಸಿನ ಆಳವಾದ ಸೂಕ್ಷ್ಮ ಮಟ್ಟದಲ್ಲಿ ಧ್ಯಾನವು ಫಲದಾಯಿ ಆಗುತ್ತಿರುತ್ತದೆ. ಮೊದಲನೆಯ ದಿನ ದೀಪಾ ತನ್ನ ಇಪ್ಪತ್ತು ನಿಮಿಷಗಳ ಧ್ಯಾನದ ಅಭ್ಯಾಸದಲ್ಲಿ, ಮನಸ್ಸು ಆಲೋಚನೆಗಳ ಧಾವಳಿಯಿಂದ ಭಾಸವಾ ಗಿದ್ದಳು. ಆದರೆ ಆ ಅವಧಿಯಲ್ಲಿ ಒಂದು ಹಂತದಲ್ಲಿ ಆಲೋಚನೆಗಳನ್ನು ಮೀರಿ ಅಕೀಂದ್ರಿಯ ಅನುಭೂತಿ ಪಡೆದಿದ್ದಳು.ಅಭ್ಯಾಸಕ್ರಮವು ನಿಯಮಿತವಾಗಿ ಸಾಗಿದಂತೆ, ಆ ಕ್ಷಣದ ಜ್ಞಾತವಾಗುತ್ತದೆ

#4: ಬಹುಶಃ: ದೀಪಾ ಧ್ಯಾನವನ್ನು ಮಾಡಲು ಹೆಚ್ಚಿನ ಪ್ರಯತ್ನ ಪಟ್ಟಿರಬಹುದು

ತ್ವರಿತ ಧ್ಯಾನದ ಸಲಹೆಗಳು

1. ಧ್ಯಾನವು ಸರಾಗವಾಗಿ ಆಳವಾಗಿ ಆಗಲು ಪ್ರಶಾಂತವಾದ ಸ್ಥಳವನ್ನು ಆಯ್ಕೆ ಮಾಡಿರಿ

2. ಪ್ರತಿ ದಿನ 20 ನಿಮಿಷಗಳ ಕಾಲ  ಪ್ರತ್ಯೇಕವಾಗಿ ಧ್ಯಾನಕ್ಕಾಗಿ ಮೀಸಲಿಡಿ

3. ಎಲ್ಲರೂ ಸೇರಿ ಅಥವಾ ಗುಂಪಿನಲ್ಲಿ ಧ್ಯಾನ ಮಾಡಿ ಹೆಚ್ಚು ವ್ಯತ್ಯಾಸ ಕಾಣುವಿರಿ

4. ನೀವು ಆನಂದವಾಗಿರುವಾಗ ಧ್ಯಾನಮಾಡಿರಿ. ಚೈತನ್ಯಹೀನ ಸ್ಧಿತಿಯಲ್ಲಿದ್ದರೆ, ತಪ್ಪದೆ ಖಂಡಿತವಾಗಿಯೂ ಮಾಡಿ. ನಿಮ್ಮ ಚಿತ್ತಲಹರಿಯು ಉತ್ತಮಗೊಳ್ಳುತ್ತದೆ.

ಧ್ಯಾನವು ಸಂಭವಿಸುತ್ತಿರುತ್ತದೆ. ಅದಕ್ಕಾಗಿ ನೀವು ಯಾವ ವಿಶೇಷ ಪ್ರಯತ್ನಗಳನ್ನು ಮಾಡ ಬೇಕಿಲ್ಲ. ಧ್ಯಾನವು ಸಂಭವಿಸಲಿ ಎಂಬ ಆತಂಕವು ಕಠಿಣ ಪ್ರಯತ್ನ ಹಾಗು ಒತ್ತಡವನ್ನು ತಂದು,ಪರಿಣಾಮವಾಗಿ ಸಫಲ ಧ್ಯಾನವು ಸಾಧ್ಯವಾಗುವುದಿಲ್ಲ. ಓಮ್ಮೊಮ್ಮೆ ದಿವ್ಯ ಧ್ಯಾನದ ಅನುಭವದ ಪ್ರರೇಕ್ಷೆಯೆ ಅಡಚಣೆಯಾಗಿ, ಧ್ಯಾನದ ಪ್ರಕ್ರಿಯನ್ನು ವಿಚಲಿತಗೊಳಿಸುತ್ತದೆ..

ಧ್ಯಾನಕ್ಕೆ ಕುಳಿತು ಕೊಳ್ಳುದಾಗಿ ಎಲ್ಲಿ ನಿರೀಕ್ಷೆಗಳನ್ನು ತೊರೆದು ಬಿಡಿ. ಪ್ರತಿದಿನದ ಅನುಭವದ ಸ್ಪರೂಪ ಬ್ಭೆರೆಯಾಗಿರುತ್ತದೆ ಎಂಬ ಸತ್ಯವನ್ನು ಸ್ವೀಕರಿಸಿ ಒಮ್ಮೆ ನಿರಾತಂಕವಾದ ಆರಾಮದಾಯಕ ಅನುಭವವು ಲಭಿಸಬಹುದು. ಮತ್ತೊಮ್ಮೆ ಅತೃಪ್ತಿ ಕರವಾದ ಅನುಭವವು ಸಿಗಬಹುದು. ಆರಾಮವಾಗಿ ಧ್ಯಾನಮಾಡಿರಿ

#5: ರಾತ್ರಿ ಹನ್ನೊಂದು ಮೂವತ್ತರ ಮೇಲೆ ಸಂಭವಿಸುವುದು ನಿದ್ರೆ, ಧ್ಯಾನವಲ್ಲ

ಧ್ಯಾನದ ಸಮಯವನ್ನು ಸೂಕ್ತವಾಗಿ ಆಯ್ಕೆಮಾಡಿರಿ. ಸಮಯವು ಕೇವಲ ಇಪ್ಪತ್ತೇ ನಿಮಿಷಗಳು ಬೇಕಾಗಿದೆ. ಇಂದಿನ ಉದ್ವಿಗ್ನ, ಬಿಡುವಿಲ್ಲದ ಜೀವನದಲ್ಲಿ ಪರಿಪಕ್ವವಾದ ಧ್ಯಾನದ ಸಮಯವು, ಬೆಳಿಗ್ಗೆ  ಅಥವಾ ಸಂಜೆಯಲ್ಲಿ  ದೊರಕುವುದು ಕಷ್ಟವೇ ಆಗಿದೆ. ನಡುರಾತ್ರಿಯಂತೂ ಆಯ್ಕೆ ಮಾಡಲೇ ಬೇಡಿ ಭೋಜನದ ಮೊದಲೇ, ದಿನದ ವೇಳೆಯಲ್ಲಿ ನೆಮ್ಮದಿಯಾದ ವೇಳೆಯನ್ನು ಆಯ್ಕೆ ಮಾಡಿಕೊಳ್ಳಿ. ಹೊಟ್ಟೆ ತುಂಬಿರುವಾಗ ಧ್ಯಾನವು ಅಷ್ಟು ಹಿತಕಾರಿಯಲ್ಲ. ಏಕೆಂದರೆ ಮಂಪರು ಬರುವ ಸಧ್ಯತೆಗಳಿವೆ. ವಸ್ತವವಾಗಿ, ಹೊಟ್ಟೆ ಖಾಲಿ ಇರುವಾಗ ಅಥವಾ ಹಗುರವಾಗಿ ತುಂಬಿದ ಹೊಟ್ಟೆಯಲ್ಲಿ ಧ್ಯಾನ ಅಪೇಕ್ಷಶೀಯವಾಗಿದೆ.

#6: ಉಪಯುಕ್ತವಾದ ಆಹಾರದ ಸೇವನೆ

ಧ್ಯಾನದ ಅನುಭವದ ಗುಣಮಟ್ಟವನ್ನು ನಮ್ಮ ಆಹಾರ ಪದ್ದತಿಯು ಬಹಳ ದೊಡ್ಡ ಪ್ರಮಾಣದಲ್ಲಿ ನಿರ್ಧರಿಸುತ್ತದೆ. ಅತಿ ಹೇರಳ ಸಿಹಿ ಪದಾರ್ಥಗಳು ಮಸಾಲೆಯ ತಿನಿಸುಗಳು, ಹೆಚ್ಚು ಕಾಫಿ ಮತ್ತು ಚಹ ಪಾನೀಯಗಳು, ಅನಾರೋಗ್ಯಕರ ಮಾರುಕಟ್ಟೆಯ ತಿಂಡಿ ಪದಾರ್ಥಗಳು ಹಾಗೂ ಮಾಂಸಾಹಾರಿ ಆಹಾರವು ಧ್ಯಾನದÀ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ.  ಧ್ಯಾನದ ದಿವ್ಯ ಅನುಭವಕ್ಕಾಗಿ, ಹಿತಮಿತವಾದ ಶುಚಿಯಾದ, ಆರೋಗ್ಯಕರ ಆಹಾರವನ್ನು ಸೇವಿಸಿರಿ.

ಧ್ಯಾನವು ಸಫಲವಾಗುತ್ತಿಲ್ಲ ಎಂದು ಮರಳಿ ನಿಮಗೆ ಅನಿಸಿದರೆ, ದೀಪಾ ಅವರ ಅತ್ಯುಕ್ಮೃಷ್ಟವಾದ ಆರು ಅಂಶಗಳನ್ನು ಅನುಸರಿಸಿರಿ. ಇಲ್ಲಿ ಕೊಟ್ಟಿರುವ ಅಂಶಗಳು ನಿಮಗೆ ಅನ್ವಯಿಸುತ್ತದೆಯೇ ಎನ್ನುವುದನ್ನು ಓಮ್ಮೆ ತಪಾಸಣೆ ಮಾಡಿ ನೋಡಿ. ನೀವು ಜೀವನ ಕಲೆಯ ಕಾರ್ಯಕ್ರಮವನ್ನು ಮಾಡಿರಬಹುದು ಅಥವಾ ಧ್ಯಾನದ ತಂತ್ರಗಳನ್ನು ಬಹಳ ಹಿಂದೆ ಅಭ್ಯಯಿಸಿರಬಹುದು; ನಿಮ್ಮ ಶಿಕ್ಷಕರೊಡೆನೆ ಅಗತ್ಯ ಬಿದ್ದಾಗ ಸಂಪರ್ಕಿಸಿ, ಈ ಗಲೇ ನಿಮಗೆ ಕಾಲಾವಕಾಶ ಲಭಿಸಿದೆ ಧ್ಯಾನ ಮಾಡಲು ಸಂಕಲ್ಪ ಮಾಡಿದರೆ, ಆರಾಮ ಮಾಡಿರಿ. ಧ್ಯಾನದ ಅನುಭೂತಿ ಸಹಜವಾಗಿಯೇ ಆಗುವುದು.

ಶ್ರೀ ಶ್ರೀ ರವಿ ಶಂಕರ್ ಅವರ ಪ್ರವಚನಗಳಿಂದ ಪ್ರೇರೇಪಿತಗೊಂಡು ಬರೆದ ಬರಹ