ದುರ್ವಾಸನೆಯನ್ನು ಯೋಗದಿಂದ ನಿರ್ಮೂಲನೆ ಮಾಡಬಹುದು

ನಿಮ್ಮ ಸಂಸ್ಥೆಯಲ್ಲಿ ವಿಜಯೋತ್ಸವದ ಸಮಾರಂಭಕ್ಕೆ ನಿಮ್ಮ ಸಂಸ್ಥೆಯ ಸದಸ್ಯರು ಮತ್ತು ನೌಕರರು ಹಾಜರಾಗುತ್ತಾರೆ. ನೀವು ಸಮಾರಂಭಕ್ಕೆ ಒಳ್ಳೆಯ ವೇಷ ಭೂಷಣ ಧರಿಸಿಕೊಂಡಿದ್ದು ಅಲ್ಲಿ ಸೇರಿದ ಸದಸ್ಯರು ನಿಮ್ಮನ್ನು ಹೊಗಳುತ್ತಿದ್ದರು. ನಿಮ್ಮ ದುರ್ವಾಸನೆ ಗಮನ ಬರುವ ತನಕ ಎಲ್ಲವೂ ಚೆನ್ನಾಗಿತ್ತು ಏಕೆಂದರೆ ಜನರು ನಿಮ್ಮನ್ನು ನೋಡಿ ಸಂಕ್ಷಿಪ್ತವಾಗಿ ಮಾತಾಡಿ ದೂರ ಹೋಗುತ್ತಿದ್ದರು.
ನಿಮ್ಮ  ಅಧಿಕಾರಿಗಳಿಗೆ ಮೆಚ್ಚಿಸಲು ಒಂದು ಸುಮಧುರ ಸಂಜೆಯ ಅಪಕಾರಿಯಾಯಿತು ಕಾರಣ ನಿಮ್ಮ ದುರ್ಗಂಧ  ಉಸಿರು ವಿನಾಶಕಾರಿಯಾಯಿತು
ಸಂಜೆಯ ಸಮಾರಂಭಕ್ಕೆ ವೇಷಭೂಷಣ ಚೆನ್ನಾಗಿದ್ದರೂ ನಿಮ್ಮ ದುರ್ವಾಸನೆಯೇ ಪ್ರಮುಖವಾಯಿತು.

ಹಲ್ಲಿನ ಸ್ವಚ್ಛತೆಗೆ ಸೂಚನೆಗಳು:

  1. ನೈಸರ್ಗಿಕ ಹಲ್ಲಿನ ಪುಡಿಗಳಿಂದ ದಿನಕ್ಕೆ ಎರಡು ಬಾರಿ ಉಜ್ಜಬೇಕು
  2. ನಾಲಿಗೆ ಸ್ವಚ್ಛತೆಯನ್ನು ಮಾಡಲು ಕಡ್ಡಿಯನ್ನು ಉಪಯೋಗಿಸಬೇಕು
  3. ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಕೆಲವು ಸಲ ಬಾಯಿಯನ್ನು ಮುಕ್ಕಳಿಸಬೇಕು
  4. ಹೆಚ್ಚು ನೀರನ್ನು ಕುಡಿಯಬೇಕು
  5. ತಂಬಾಕು ಮತ್ತು ಮಧ್ಯಪಾನದಿಂದ ದೂರವಿರಬೇಕು
  6. ಆಹಾರ ಪ್ರಮಾಣವನ್ನು ಕಡಿಮೆ ಮಾಡಿ, ಚೆನ್ನಾಗಿ ಅಗಿಯಬೇಕು
  7. ಈರುಳ್ಳಿ ಬೆಳ್ಳುಳ್ಳಿಯನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಬೇಕು
  8. ಮಸಾಲ ಆಹಾರವನ್ನು ಆದಷ್ಟು ಕಡಿಮೆ ತೆಗೆದುಕೊಳ್ಳಬೇಕು
  9. ನಿತ್ಯವು ಯೋಗ ಮಾಡಬೇಕು

ಎಲ್ಲಾರ ಜೀವನದಲ್ಲೂ ಈ ತರಹದ ದುರ್ವಾಸನೆಯನ್ನು ಅನುಭವಿಸಿದ್ದೇವೆ. ಈ ದುರ್ವಾಸನೆ, ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಈ ದುರ್ವಾಸನೆಗೆ ದಿನಾ ಉಜ್ಜುವುದು ಒಂದೇ ಕಾರಣ ಅಲ್ಲ ಈ ದುರ್ವಾಸನೆಗೆ ಅನಿಯಮಿತ ಆಹಾರದ ಅಭ್ಯಾಸಗಳು, ಅಜೀರ್ಣ, ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದು, ಯಾವುದ್ಯಾವುದೋ ಆಹಾರವನ್ನು ಸೇವಿಸುವುದು, ಅಧ್ಯಯನ ಮಾಡಿದವರ ಪ್ರಕಾರ ತೇವಾಂಶ ಬಾಯಿ ಇರುವವರಿಗಿಂತ ಒಣಗಿದ ಬಾಯಿಯವರಿಗೆ ಹೆಚ್ಚು ದುರ್ವಾಸನೆ ಇರುತ್ತದೆ.

ಧೂಮಪಾನ, ಮಧ್ಯಪಾನದಿಂದ ವಾಸನೆ ಹೆಚ್ಚಾಗುತ್ತದೆ. ನಾಲಿಗೆಯ ಮೇಲಿನ ಬಿಳಿಯ ಕಲ್ಮಷದಿಂದ ಸೂಕ್ಷ್ಮಕ್ರಿಮಿಗಳು ಶೇಖರಣೆ ಆಗುತ್ತದೆ.

ಧೂಮಪಾನ, ಮಧ್ಯಪಾನದಿಂದ ವಾಸನೆ ಹೆಚ್ಚಾಗುತ್ತದೆ. ನಾಲಿಗೆಯ ಮೇಲಿನ ಬಿಳಿಯ ಕಲ್ಮಷದಿಂದ ಸೂಕ್ಷ್ಮಕ್ರಿಮಿಗಳು ಶೇಖರಣೆ ಆಗುತ್ತದೆ.

ಬಾಯಿಯ ಸ್ವಚ್ಛತೆಗೆ ಪ್ರಾಧಾನ್ಯತೆ ಕೊಡಬೇಕು. ಮತ್ತೆ ಮತ್ತೆ ದುರ್ವಾಸನೆ ಬಂದರು ಸ್ವಚ್ಛತೆಯನ್ನು ಮಾಡಲು ಬಿಡಬಾರದು. ಯೋಗದ ಅಭ್ಯಾಸದಿಂದ ಶಾರೀರಕವಾಗಿ ಸಮಸ್ಯೆಗಳನ್ನು ನಿವಾರಿಸಬಹುದು. ಯೋಗದಿಂದ ಭೌತಿಕ ಶರೀರವನ್ನು ಮತ್ತು ಅಂತರಂಗದ ಭಾಗಗಳನ್ನು ಸ್ವಚ್ಛ ಮಾಡಬಹುದು. ಯೋಗದಿಂದ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಬಹುದು. 10 ಗಂಟೆಯ ಹಿತಕರ ಶ್ರೀ ಶ್ರೀ ಯೋಗ ಸ್ವಾಸ್ತಹಿತ ಎರಡೇ ದಿವಸದಲ್ಲಿ ಶಾರೀರಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಯೋಗದಲ್ಲಿ ಹೆಚ್ಚು ಅಧ್ಯಾಯನ ಮಾಡಿದ ಶಿಕ್ಷಕರು ನಿಮ್ಮ ಜೀವನದ ಶೈಲಿಗೆ ಅನುಗುಣವಾಗಿ ಯೋಗಾಭ್ಯಾಸವನ್ನು ವ್ಯವಸ್ಥೆ ಮಾಡಿಕೊಡುತ್ತಾರೆ. ನಂತರ ಈ ಶಿಬಿರದಿಂದ ನಿಮ್ಮ ಮನೆಯಲ್ಲೇ ಅತೀ ಸುಲಭವಾಗಿ ಯೋಗವನ್ನು ಮಾಡಬಹುದು.

ದುರ್ವಾಸನೆಯನ್ನು ನಿರ್ಮೂಲ ಮಾಡಲು ಕೆಲವು ಯೋಗ ಭಂಗಿಗಳು :

ಕಪಾಲ ಭಾತಿ ಪ್ರಾಣಾಯಾಮ

 ಬೆನ್ನು ನೇರಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳುವುದು. ನಿಮ್ಮ ಅಂಗೈಯನ್ನು ತೊಡೆಯ ಮೇಲೆ ಆಕಾಶ ಮುಖವಾಗಿ ಇಟ್ಟುಕೊಳ್ಳುವುದು ದೀರ್ಘದ ಉಸಿರಾಟ ತೆಗೆದುಕೊಳ್ಳುವಾಗ ಮತ್ತು ಬಿಡುವಾಗ ನಾಭಿಯ ಭಾಗದಲ್ಲಿ ಆಗುವ ಸ್ಪಂದನಗಳು ಆಟೋಮ್ಯಾಟಿಕಾಗಿ ಬರುತ್ತದೆ (ನಂತರ ದೇಹಕ್ಕೆ ಆರಾಮ ನೀಡುತ್ತದೆ). ದಿನಕ್ಕೆ 30 ಸಲ ಅಭ್ಯಾಸ ಮಾಡಬೇಕು

ಯೋಗಮುದ್ರ

 

ಪದ್ಮಾಸನದಲ್ಲಿ ಕುಳಿತುಕೊಳ್ಳವುದು ಕಣ್ಣು ಮುಚ್ಚಿಕೊಂಡು ಹಣೆಯು ನೆಲವನ್ನು ತಾಕುವವರೆಗೂ ಮುಂದೆ ಬಾಗಿಸಬೇಕು ಈ ಭಂಗಿಯನ್ನು ಸ್ವಲ್ಪ ಆರಾಮ ಮಾಡಿ ಮತ್ತೆ ಮೊದಲಿನ ಸುಖಾಸನಕ್ಕೆ ತೆರಳಬೇಕು ಇದನ್ನು 5 ರಿಂದ 10 ಸಲ ಪುನರಾವರ್ತನೆ ಮಾಡಬೇಕು ನಿಧಾನವಾಗಿ ಸುಖಾಸನಕ್ಕೆ ಮತ್ತೆ ಬರುವುದು ಇದನ್ನು 5 ರಿಂದ 10 ಸಲ ಮಾಡಬೇಕು

 

ಶೀತಕಾರಿ ಪ್ರಾಣಾಯಾಮ

ನಾಲಿಗೆಗಳನ್ನು ಹಲ್ಲುಗಳಿಗೆ ಒತ್ತರಿಸಿ ಉಸಿರನ್ನು ತೆಗೆದುಕೊಂಡು ನಂತರ ಬಾಯಿ ಮುಚ್ಚಿ ಮೂಗಿನ ಹೊಳ್ಳೆಯಿಂದ ಉಸಿರನ್ನು ಬಿಡುವುದು. ಈ ಅಭ್ಯಾಸವನ್ನು 5 ರಿಂದ 10 ಸಲ ಮಾಡಬೇಕು.

ಶೀತಲೀ ಪ್ರಾಣಾಯಾಮ

ನಾಲಿಗೆಯನ್ನು ಮುಂದಕ್ಕೆ ಚಾಚಿ ಬಾಯಿಯಿಂದ ಉಸಿರನ್ನು ತೆಗೆದುಕೊಂಡು ಮೂಗಿನಿಂದ ಉಸಿರನ್ನು ಬಿಡಬೇಕು. ಅಭ್ಯಾಸವನ್ನು 5 ರಿಂದ 10 ಸಲ ಮಾಡಬೇಕು.

 

ಶಂಖ ಪ್ರಕ್ಷಾಲನ

 ಇದನ್ನು ಶ್ರೀ ಶ್ರೀ ಯೋಗ ಶಿಬಿರ 2 ರಲ್ಲಿ ಕಲಿಯುವುದು.                                       

ಪದ್ಮ ಸಾಧನ

ಇದನ್ನು ಡಿ.ಎಸ್.ಎನ್. ಕಾರ್ಯಗಾರದಲ್ಲಿ ಕಲಿಸಲಾಗುವುದು

 

ಸಿಂಹಾಸನ

ಚಾಪೆಮೇಲೆ ಮೊಣಕಾಲಿನ ಮೇಲೆ ಕುಳಿತುಕೊಂಡು ಎರಡು ಕೈಯನ್ನು ಮೊಣಕಾಲಿನ ಮೇಲೆ, ಮುಂದೆ ಬಾಗಿಸಿ ದೇಹದ ಕೈಗಳ ಮೇಲೆ ಭಾರ ಹಾಕಿರಲಿ ಇಟ್ಟುಕೊಂಡು ಬಾಯಿಯನ್ನು ತೆಗೆದು ನಾಲಿಗೆಯನ್ನು ಹೊರಗೆ ಮಾಡಿಕೊಂಡು ಕಣ್ಣುಗಳನ್ನು ಅಗಲವಾಗಿ ತೆಗೆದುಕೊಂಡು, ನಿಮ್ಮ ದೃಷ್ಟಿಯನ್ನು ಹುಬ್ಬಿನ ಮಧ್ಯದಲ್ಲಿ ಕೇಂದ್ರೀಕರಿಸಿ ಘರ್ಜಿಸುವುದು

 

ಈ ದುರ್ವಾಸನೆಯನ್ನು ಸಾಮಾನ್ಯವಾಗಿ ಹೆಚ್ಚು ಜನರಲ್ಲಿ ಇರುತ್ತದೆ.ಇದೇನೂ ಅಪಮಾನಕಾರಿಯಲ್ಲ ಏಕೆಂದರೆ ಒತ್ತಡ, ಮತ್ತು ವಿಪರೀತ ಕೆಲಸದಿಂದ ಶರೀರದ ಸಮತೋಲನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯಿಂದ ನಿದ್ರಾಹಿತತೆ ಹೆಚ್ಚು ಬಾಯಿ ದುರ್ವಾಸನೆ ತಲೆನೋವು ಉಂಟಾಗುತ್ತದೆÉ. ಈ ಸಮಸ್ಯೆಯಿಂದ ಮುಕ್ತ ಆಗುವುದಕ್ಕೆ ಶ್ರೀ ಶ್ರೀ ಯೋಗ ಸಹಾಯಕಾರಿ ಆಗುತ್ತದೆ. ಈ ಯೋಗದಿಂದ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ನಿಮ್ಮ ಕಾರ್ಯ ಕೌಶಲ್ಯವು ಹೆಚ್ಚುತ್ತದೆ ನಮ್ಮ ಜೀವನ ಶೈಲಿ ಮನಃಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಯೋಗಾಸನದಿಂದ ಕ್ರಮವಾದ ಜೀವನ ಶೈಲಿಯು ಯೋಗ್ಯ ಮಾರ್ಗದಲ್ಲಿ ನಡೆದು ಮುಜುಗರ ಮತ್ತು ಹಿಂಜರಿಕೆಗಳನ್ನು ನಶಿಸಿ ನೆಮ್ಮದಿಯಿಂದ ಉಸಿರಾಟ ಸಾಗುವಂತೆ ಮಾಡುತ್ತದೆ. ದೈಹಿಕ ಹಾಗೂ ಭಾವನಾತ್ಮಕ ಕಾರಣಗಳಿಂದ ಕಳವಳ ಪಡುತ್ತಿದ್ದೀರಾ ?    ಈ ಕೆಳಗಡೆ ಅರ್ಜಿಯನ್ನು ತುಂಬಿಸಿ, ಯೋಗಾಭ್ಯಾಸ ಕಲಿತು ಜೀವನದ ಸವಾಲುಗಳನ್ನು ಕೆಲವು ಜೀವನ ಶೈಲಿಯ ಪರಿವರ್ತನೆಯಿಂದ ಜಯಿಸಿರಿ.