ಕೂದಲುದುರುವಿಕೆಗಾಗಿ ಯೋಗದ ಸೂಚಿಗಳು

ತಲೆ ಬಾಚುವುದೆಂದರೆ ನಿಮ್ಮಲ್ಲಿ ನಡುಕ ಉಂಟಾಗುತ್ತದೆಯೆ? ಯೋಗದ ರೀತಿಯನ್ನು ಅನುಸರಿಸಿ. ಇದರಿಂದ ಕೂದಲುದುರುವಿಕೆ ನಿಲ್ಲುತ್ತದೆ. ಆದರೆ ಮೊದಲನೆಯ ಹಂತದಲ್ಲೇ ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಯೋಗವು ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಬಹಳ ಕೂದಲು ಉದುರಿ ಹೋದ ನಂತರ ಅದರ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಿಗುವುದಕ್ಕಿಂತಲೂ ಹೆಚ್ಚಾಗಿ, ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಈ ಪ್ರಾಚೀನ ಪದ್ಧತಿಯಿಂದ ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟಿದರೆ ಮತ್ತು ಆರೋಗ್ಯವಾದ ಕೂದಲನ್ನು ಹೇಗೆ ಹೊಂದುವುದು ಎಂಬುದರ ಬಗ್ಗೆ ತಿಳಿಯಲು ಈ ಕೆಳಕಂಡ ಸೂಚಿಗಳನ್ನು ಓದಿ.

ಹೊಳೆಯುತ್ತಿರುವ, ಸುಂದರವಾದ, ಬಲಿಷ್ಠವಾದ ಕೂದಲನ್ನು ಬಯಸುವಲ್ಲಿ ಎಲ್ಲಾ ಮಹಿಳೆಯರೂ ಒಂದೇ. ನಮ್ಮ ಜೀವನದ ಮೊದಲನೆಯ ಎರಡು ದಶಕಗಳಲ್ಲಿ ನಮ್ಮ ಕೂದಲಿನ ಬೇರುಗಳು ಬಹಳ ಬಲಿಷ್ಠವಾಗಿರುತ್ತವೆ.

ಖಾಯಿಲೆಗಳೊಡನೆ ಸಂಬಂಧಪಡದಿದ್ದರೆ ಕೂದಲಿನ ನಷ್ಟವು ಬಹಳ ಗಂಭೀರವಾದ ಆರೋಗ್ಯದ ಸಮಸ್ಯೆ ಆಗುವುದಿಲ್ಲ. ಒಂದು ದಿನಕ್ಕೆ 75-100 ಕೂದಲು ನಷ್ಟವಾಗುವುದು ಸಾಮಾನ್ಯ. ಆದ್ದರಿಂದ ವಿಶ್ರಮಿಸಿ. ನಿಮ್ಮ ಬಾಚಣೆಗೆಯಲ್ಲಿ ಸ್ವಲ್ಪ  ಕೂದಲು ಸಿಕ್ಕ ಮಾತ್ರಕ್ಕೆ ಭಯಪಡಬೇಕಿಲ್ಲ! ಕೆಲವೊಮ್ಮೆ ಕೂದಲು ಸಣ್ಣದಾಗುವುದನ್ನು ನೆನೆಸಿಕೊಂಡೇ ಅನೇಕ ಮಹಿಳೆಯರಿಗೆ ನಿದ್ದೆ ಹತ್ತುವುದಿಲ್ಲ. ಏಕೆಂದರೆ ಕೂದಲು ಸೌಂದರ್ಯವನ್ನು ವರ್ಧಿಸುತ್ತದೆ ಮತ್ತು ಕೂದಲು ನಷ್ಟವಾದರೆ ಜನರಲ್ಲಿ, ವಿಶಿಷ್ಟವಾಗಿ ಯುವಕರಲ್ಲಿ ಕೀಳರಿಮೆಗೆ ಕಾರಣವಾಗುತ್ತದೆ. ಶಾಂಪೂ, ಕೂದಲಿನ ಬಣ್ಣ, ಇತ್ಯಾದಿಗಳನ್ನು ಹೆಚ್ಚಾಗಿ ಬಳಸುವುದರಿಂದ, ಅವುಗಳಲ್ಲಿ ರಾಸಾಯನಗಳು ಹೆಚ್ಚಾಗಿದ್ದರೆ ಕೂದಲು ಹೆಚ್ಚಾಗಿ ಉದುರುತ್ತದೆ ಮತ್ತು ಸಣ್ಣಗಾಗುತ್ತದೆ.

ಕೂದಲಿನ ಸ್ಥಿತಿಯು ನೇರವಾಗಿ ನಿಮ್ಮ ಸಾಮಾನ್ಯ ಆರೋಗ್ಯದೊಡನೆ ಸಂಬಂಧಪಟ್ಟಿದೆ. ನಿಮ್ಮ ಕೂದಲಿನ ಸ್ಥಿತಿ ನಿಮ್ಮ ಆರೋಗ್ಯದ ಮಾಪನ ಯಂತ್ರವಿದ್ದಂತೆ. ಸುಂದರವಾದ ಕೇಶವು ಖಂಡಿತವಾಗಿಯೂ ನಿಮಗೊಂದು ಕಿರೀಟವಿದ್ದಂತೆ.

ಕೂದಲುದುರುವಿಕೆಯ ಸಾಮಾನ್ಯ ಕಾರಣಗಳೆಂದರೆ ಒತ್ತಡ, ಹಾರ್ಮೋನುಗಳ ಏರುಪೇರು, ಮುದಿತನ, ಕೆಟ್ಟದಾಗಿ ತಿನ್ನುವ ಅಭ್ಯಾಸಗಳು, ಖಾಯಿಲೆಗಳು, ಔಷಧಿಗಳು, ರಾಸಾಯನಿಕ ಶ್ಯಾಂಪುಗಳನ್ನು ಅಥವಾ ಕೂದಲಿನ ಬಣ್ಣವನ್ನು ಹೆಚ್ಚಾಗಿ ಬಳಸುವುದು, ಅನುವಂಶಿಕ ಖಾಯಿಲೆಗಳು, ಸೇದುವುದು, ಇತ್ಯಾದಿ. 

ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮಗೆ ಆರೋಗ್ಯವಾದ ಕೂದಲು ಸಿಗುವುದು ಮಾತ್ರವಲ್ಲದೆ ಇಡೀ ವ್ಯವಸ್ಥೆಗೂ ಲಾಭವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮಗ್ರ ಬೆಳವಣಿಗೆಯೂ ಆಗುತ್ತದೆ. ಯೋಗದಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗುವುದಲ್ಲದೆ ಜೀರ್ಣ ಶಕ್ತಿ ಸುಧಾರಿಸುತ್ತದೆ ಮತ್ತು ಒತ್ತಡ ಹಾಗೂ ಆತಂಕವೂ ಕಡಿಮೆಯಾಗುತ್ತದೆ.

ಕೂದಲಿನ ಪೋಷಣೆಗಾಗಿ ಸಹಕಾರಿಯಾಗುವಂತಹ ಆಸನಗಳು:

ಬಾಗಿ ಮಾಡುವಂತದ  ಆಸನಗ ಳು ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸುತ್ತವೆ. ಇದರಿಂದ ಕೂದಲಿನ ಬೇರುಗಳು ಬಲಿಷ್ಠವಾಗಿ, ಸ್ವಲ್ಪ ಸಮಯದಲ್ಲಿ ಬದಲಾವಣೆಗಳನ್ನು ಕಾಣಬಹುದು. 

1. ಅಧೋಮುಖ ಶ್ವಾನಾಸನ

  ತಲೆಗೆ ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ ಸೈನಸ್ ಹಾಗೂ ನೆಗಡಿಯ ಸಮಸ್ಯೆಯನ್ನೂ ನಿವಾರಿಸುತ್ತದೆ. ಮಾನಸಿಕ ದಣಿವು, ಖಿನ್ನತೆ ಮತ್ತು ನಿದ್ರಾವಿಹೀನತೆಗೂ ಇದು ಒಳ್ಳೆಯದು.

2.ಉತ್ಥಾನಾಸನ

    ಈ ಭಂಗಿಯಿಂದ ಡಣಿವನ್ನು ನಿವಾರಿಸುತ್ತದೆ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಇದು ಒಳ್ಳೆಯದು.

3. ವಜ್ರಾಸನ

   ಈ ಆಸನವನ್ನು ಆಹಾರ ಸೇವನೆಯ ನಂತರ ಮಾಡಬಹುದು.  ಮೂತ್ರದ ಸಮಸ್ಯೆ, ತೂಕ ಕಡಿಮೆ ಮಾಡಲು, ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೊಟ್ಟೆಯ ವಾಯುವನ್ನು ಕುಗ್ಗಿಸಲು ಇದು ಸಹಾಯ ಮಾಡುತ್ತದೆ.

4. ಅಪಾನಾಸನ

  ಅಪಾನ ಎಂದರೆ ನಿಮ್ಮೊಳಗೆರುವಂತಹ ಜೀರ್ಣಾಂಗದ ಪ್ರಾಣಶಕ್ತಿಯಾಗಿದೆ. ಇದು ನಿಮ್ಮ ಶರೀರದಲ್ಲಿರುವ ಕಲ್ಮಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ಶಮನ ಮಾಡುತ್ತದೆ.

5. ಪವನ ಮುಕ್ತಾಸನ

   ಹೊಟ್ಟೆಯ ವಾಯುವನ್ನು ಕುಗ್ಗಿಸಿ ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಕೆಳ ಬೆನ್ನಿನ ಸ್ನಾಯುಗಳು ಬಲಿಷ್ಠವಾಗುತ್ತದೆ. ಹೊಟ್ಟೆ ಹಾಗೂ ಪುಷ್ಟ ಭಾಗದ ಕೊಬ್ಬನ್ನು ಇದು ಕರಗಿಸುತ್ತದೆ.

6. ಸರ್ವಾಂಗಾಸನ

   ಥೈರಾಯ್ಡ್ ಗ್ರಂಥಿಯನ್ನು ಇದು ಸುಸ್ಥಿತಿಯಲ್ಲಿಡುವುದರಿಂದ ಶ್ವಾಸಕೋಶ, ಅನ್ನನಾಳ ಹಾಗೂ ನರವ್ಯವಸ್ಥೆಯನ್ನು ಇದು ಪೋಷಿಸುತ್ತದೆ

ಕೂದಲುದುರುವಿಕೆಯನ್ನು ತಡೆಗಟ್ಟಲು ಸಹಾಯಕವಾಗುವ ಪ್ರಾಣಾಯಾಮಗಳು:

1. ಕಪಾಲಬಾತಿ

    ಈ ಪ್ರಾಣಾಯಾಮದಿಂದ ಮೆದುಳಿಗೆ ಹೆಚ್ಚು ಆಮ್ಲಜನಕವನ್ನು ಕೊಡುವುದರಿಂದ ನರವ್ಯವಸ್ಥೆಗೆ ಇದು ಬಹಳ ಒಳ್ಳೆಯದು. ದೇಹದ ವಿಷಕಾರಿ ಮಧುಮೇಹವನ್ನು, ಸ್ಥೂಲಕಾಯವನ್ನು ಗುಣಪಡಿಸುತ್ತದೆ.

2. ಭಸ್ತ್ರಿಕ ಪ್ರಾಣಾಯಾಮ

   ದೇಹದಲ್ಲಿರುವ ಹೆಚ್ಚು ವಾಯು, ಕಫ ಮತ್ತು ಪಿತ್ತವನ್ನು ಇದು ಹೊರಹಾಕಿ, ನರವ್ಯವಸ್ಥೆಯನ್ನು ಶುದ್ಧಗೊಳಿಸಿ, ದೇಹದಲ್ಲಿ ಅನೇಕ ರೀತಿಯ ಖಾಯಿಲೆಗಳನ್ನು ಇದು ನಿವಾರಿಸುತ್ತದೆ.

3. ನಾಡಿಶೋಧನ ಪ್ರಾಣಾಯಾಮ

    ಹೃದಯದ ಸಮಸ್ಯೆ, ಉಬ್ಬಸದ ಖಾಯಿಲೆ, ಸಂಧಿವಾತ, ಖಿನ್ನತೆ, ಮೈಗ್ರೇನ್ ತಲೆನೋವು, ಒತ್ತಡ, ಕಣ್ಣು ಮತ್ತು ಕಿವಿಯ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

4. ಶೀತಲಿ ಮತ್ತು ಶಿತ್ಕಾರಿ ಪ್ರಾಣಾಯಾಮ

ತಣ್ಣಗೆ ಮಾಡುವ ಪ್ರಾಣಾಯಾಮಗಳಾದಂತಹ ಶೀತಲಿ ಮತ್ತು ಶಿತ್ಕಾರಿ ಪ್ರಾಣಾಯಾಮಗಳು ಪಿತ್ತದ ಅಸಮತೋಲನದಿಂದುಂಟಾಗುವ ಕೂದಲುದುರುವಿಕೆಯನ್ನು ತಡೆಗಟ್ಟುತ್ತವೆ.

ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಇತರ ವಿಷಯಗಳು:

  • ಯೋಗ ಮಾಡುವುದರ ಜೊತೆಗೆ ನಿಮ್ಮ ಆಹಾರದ ಮೇಲೂ ಗಮನವನ್ನಿಡುವುದು ಮುಖ್ಯ. ತಾಜಾ ಹಣ್ಣುಗಳು, ಸೊಪ್ಪು, ಮೊಳಕೆಯೊಡದ ಕಾಳು, ಹಾಲು, ಮೊಸರು, ತುಪ್ಪ, ಇತ್ಯಾದಿ ಕೂದಲಿನ ಬೆಳವಣೆಗೆಗೆ ಸಹಾಯಕವಾಗುತ್ತವೆ
  • ಕೂದಲನ್ನು ಬೇವಿನ ಸೊಪ್ಪಿನ ನೀರಿನಿಂದ ತೊಳೆಯಿರಿ ಮತ್ತು ವಾರಕ್ಕೆ 2 ರಿಂದ 3 ಸಲ ಕೂದಲನ್ನು ತೊಳೆಯಿರಿ. ತೆಂಗಿನಕಾಯಿ ಎಣ್ಣೆಯಿಂದ ನಿಮ್ಮ ಕೂದಲನ್ನು ಪೋಷಿಸಿ. ಸತತವಾಗಿ ಕೂದಲನ್ನು ಬಾಚುವುದರಿಂದ, ರಕ್ತಸಂಚಾರವು ಹೆಚ್ಚಿ ಕೂದಲಿಗೆ ಪೋಷಣೆಸಿಗುತ್ತದೆ. ಇದರ ಪರಿಣಾಮವಾಗಿ ಸುಕೇಶ ಸುಕೋಮಲ ಕೂದಲನ್ನು ಪಡೆಯುವಿರಿ.
  • ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ನಿಮ್ಮ ಕೂದಲಿನ ಪೋಷಣೆಗಾಗಿ ಬಳಸಬೇಡಿ

ಇವುಗಳಲ್ಲದೆ, ಕೂದಲುದುರುವಿಕೆಯು ಒಂದು ಸಹಜವಾದ ಪ್ರಕ್ರಿಯೆ ಮತ್ತು ಇದನ್ನು ತಡೆಗಟ್ಟಲು ಸಾಧ್ಯವಿಲ್ಲವೆಂದು ನೆನಪಿನಲ್ಲಿಟುಕೊಳ್ಳಬೇಕು. ಆದರೆ ಈ ಪ್ರಕ್ರಿಯೆಯನ್ನು ನಿಗ್ರಹಿಸಬಹುದು. ಮೇಲಿನ ಸೂಚಿಗಳಿಂದ ಇದನ್ನು ಮಾಡವುದೇ ಜಾಣತನ.