ಕಛೇರಿಗಳಲ್ಲಿ ಯೋಗ

ನಾವು ಕೆಲಸ ಮಾಡುವಂತಹ ಕಛೀರಿಗಳಲ್ಲಿ ಕುಳಿತಿರುವ ಸ್ಥಳದಲ್ಲಿ ಸರಳವಾದ ಯೋಗವನ್ನು ಮಾಡುವುದು ಸಂತೋಷಕರವಾದ ವಿಷಯ ಮತ್ತು ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ.ಯೋಗ ಮಾಡುವುದರಿಂದ ವೃಕ್ತಿಗಳಲ್ಲಿ ಸೃಜನಶೀಲತೆ, ಸಹನೆ, ಉತ್ಸಾಹ ತುಂಬುವುದಲ್ಲದೆ ಸದಾ ಆಹ್ಲಾದಕರವಾಗಿ ತಾಜಾತನದಿಂದ ಕೆಲಸವನ್ನು ಮಾಡುವಂತಹ ಸ್ಪೂರ್ತಿಯನ್ನು ತಂಬಿ ಇದರಿಂದ ಜೀವನದಲ್ಲಿ ವಿಶ್ರಾಮವನ್ನು ಪಡೆದು ಧೀಘ೯ಕಾಲದ ಲಾಭಗಳನ್ನು ಪಡೆಯಬಹುದು.

ಕಚೇರಿಗಳಲ್ಲಿ ಸದಾ ಕಂಪ್ಯುಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕುತ್ತಿಗೆ, ಭುಜಗಳು, ಮಂಸಖಂಡಳಲ್ಲಿ, ನೋವುಂಟಾಗಿ ಜಡತ್ವವನ್ನು ತುಂಬುತ್ತದೆ. ಇದರಿಂದ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾದ್ಯವಿಲ್ಲ. ಅದ್ದರಿಂದ ಯೋಗವು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ದೇಹದಲ್ಲಿ ಸಮತೋಲನವನ್ನುಕಾಪಾಡುವುದಲ್ಲದೆ ಕಣ್ಣಿನ ಸಮಸ್ಯೆ ಕೂಡ ಬಗೆಹರಿಯುತ್ತದೆ. ಇದರಿಂದ ನಮ್ಮಲ್ಲಿ ಉತ್ಸಾಹ ಹೆಚ್ಚಾಗಿ ಉತ್ತಮವಾದ……..

ಸಲಹೆ: ನೀವು ಬಿಗಿಯಾದ ಚಪ್ಪಲಿಗಳನ್ನು ಧರಿಸಿದ್ದರೆ, ಚಪ್ಪಲಿಗಳನ್ನು ತೆಗೆದುಹಾಕಿ. ಟೈ ಹಾಗೂ ಬೆಲ್ಟ್ ಸಡಿಲಗೊಳಿಸಿ.

ಈ ಕೆಳಕಂಡ ಯೋಗಗಳನ್ನು ಕಛೇರಿಯಲ್ಲಿನೀವು ಕುಳಿತಿರುವ ಸ್ಥಳದಲ್ಲೇ ಹೇಗೆ ಮಾಡುವುದು.

ಕತ್ತಿನ ಸುರುಳಿ

  1. ಮೊದಲು ನಿಮ್ಮ ಕಣ್ಣುಗಳನ್ನು ಮುಚ್ಚಿ.

  2. ಅದೇ ಸ್ಥಿತಿಯಲ್ಲೇ ನಿಮ್ಮ ಗಡ್ಡವನ್ನು ಎದೆಗೆ ತಾಗಿಸಿ ಇಡಿ.

  3. ನಂತರ ನಿಮ್ಮ ಕತ್ತನ್ನು ನಿಧಾನವಾಗಿ ಗೋಲಾಕಾರದಲ್ಲಿ ಬಲಭುಜ ಮತ್ತು ಬಲಕಿವಿಯ ಕಡೆಗೆ ತಿರುಗಿಸುವಾಗ ಉಸಿರನ್ನು ಒಳಗೆ ತೆಗೆದುಕೊಂಡು ಬನ್ನಿ. ನಂತರ ನಿಮ್ಮ ತಲೆಯನ್ನು ಸ್ವಲ್ಪ ಹಿಂದಕ್ಕೆ ಬಗ್ಗಿಸಿ ಎಡಭುಜ ಮತ್ತು ಎಡಕಿವಿ ಕಡೆಗೆ ತರುವಾಗ ನಿಮ್ಮ ಉಸಿರನ್ನು ಹೊರಗೆ ಬಿಟ್ಟು ಮೊದಲ ಸ್ಥಾನಕ್ಕೆ ಬನ್ನಿ.

  4. ನಿಮ್ಮ ಭುಜಗಳು ಮತ್ತು ಕತ್ತನ್ನು ವಿಶ್ರಾಮಗೊಳಿಸಿ.

  5. ಇದೇರೀತಿ ನಿಮ್ಮ ಕತ್ತನ್ನು 3-5 ಬಾರಿ ತಿರುಗಿಸಿ, ಮತ್ತೆ ವಿರುದ್ಧ ದಿಕ್ಕಿನಲ್ಲಿ ಪ್ರಾರಂಭಿಸಿ.

 

ಗೋಮುಖ ಆಸನ

  1. ಮೊದಲು ನೀವು ನಿಮ್ಮ ಕುಚಿ೯ಯ ಮೇಲೆ ನೇರವಾಗಿ ಕುಳಿತು, ಕಾಲುಗಳನ್ನು ನೆಲದ ಮೇಲೆ ಇರಿಸಿ.

  2. ನಿಮ್ಮ ಎರಡು ಕೈಗಳನ್ನು ಮೊಣಕಾಲುಗಳ ಮೇಲೆ ಇಡಿ.

  3. ನೀವು ಉಸಿರನ್ನು ತೆಗೆದುಕೊಂಡು ನಿಮ್ಮ ಬೆನ್ನನ್ನು ಹಿಂದಕ್ಕೆ ಬಾಗಿಸಿ ಮೇಲೆ ನೋಡಿ.

  4. ನೀವು ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಬೆನ್ನು ಮತ್ತು ತಲೆಯನ್ನು ಮುಂದಕ್ಕೆ ಬಾಗಿಸಿ..

  5. ನಂತರ ಮೊದಲ ಸ್ಥಿತಿಗೆ ಬಂದು ಸ್ವಲ್ಪ ವಿಶ್ರಾಮ ಮಾಡಿ ಮತ್ತೆ ಮುಂದುವರಿಸಿ.

  6. ಇದನ್ನು 3-5 ಬಾರಿ ಉಸಿರಾಟದೊಂದಿಗೆ ಮುಂದುವರಿಸಿ.
    ಸುಪ್ತವಜ್ರಾಸನ

 

ಕುಳಿತ ಜಾಗದಲ್ಲೇ ಬಾಗುವುದು

  1. ಆರಾಮವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ

  2. ನಿಮ್ಮ ಪಾದವನ್ನು ನೆಲಕ್ಕೆ ಊರಿ ಕುಳಿತುಹಿಕೊಳ್ಳಿ.

  3. ನಿಮ್ಮ ಎರಡು ಕೈಗಳನ್ನು ಬೆನ್ನಿನ ಕೆಳ ಭಾಗಕ್ಕೆ ತೆಗೆದುಕೊಂಡು ಹೋಗಿ, ಬೆರಳುಗಳನ್ನು ಬಂಧಿಸಿ.

  4. ಈಗ ನಿಧಾನವಾಗಿ ಕೆಳಕ್ಕೆ ಬಾಗುತ್ತಾ, ಬಂಧಿಸಿದ ಕೈಗಳನ್ನು ಮೇಲಕ್ಕೆ ಎತ್ತಿರಿ

  5. ಎದೆಯನ್ನು ತೊಡೆಯ ಮೇಲೆ ತಾಗಿಸುತ್ತಾ, ನಿಮ್ಮ ಕತ್ತನ್ನು ವಿಶ್ರಮಿಸಿ.

 

ಗರುಡಾಸನ

  1. ಮೊದಲು ನಿಮ್ಮ ಕೈಗಳನ್ನು ನಿಮ್ಮ ದೇಹದ ಮುಂಭಾಗಕ್ಕೆ ಅಂಗಾತ ಚಾಚಿ.(ನಿಮ್ಮ ಅಂಗೈಗಳು ಮೇಲ್ಮುಖವಾಗಿರಲಿ).

  2. ನಂತರ ನಿಮ್ಮ ಬಲಗೈಯನ್ನು ಎಡಗೈಯಿಂದ ಬಳಸಿದಾಗ ನಿಮ್ಮ ಎರಡು ಹಸ್ತಗಳನ್ನು ಒಟ್ಟು ಸೇರಿಸಿ.

  3. ಮತ್ತೆ ಅದೇ ಸ್ಥಿತಿಯಲ್ಲೇ ನಿಮ್ಮ ಮೊಣಕೈಗಳನ್ನು ಮೆಲಕ್ಕೆ ಎತ್ತಿ ನಿಮ್ಮ ಭುಜಗಳನ್ನು ಸಮಾನಾಂತರವಾಗಿರಿಸಿ ಬೆನ್ನುನ್ನು ವಿಶ್ರಾಮಗೊಳಿಸಿ.

  4. ಇದೆ ರೀತಿ ವಿರುದ್ಧವಾಗಿ ನಿಮ್ಮ ಎಡಗೈಯನ್ನು ಬಲಗೈಗೆ  ಬಳಿಸಿ ಮುಂದುವರಿಸಿ.

 

ಕುಳಿತು ಬೆನ್ನನ್ನು ಪಕ್ಕಕ್ಕೆ ತಿರುಗಿಸುವುದು

  1. ನಿಮ್ಮ ಕುರ್ಚಿಯಲ್ಲಿ ಬೆನ್ನನ್ನು ನೇರವಾಗಿರಿಸಿ ಕುಳಿತುಕೊಳ್ಳಿ.

  2. ನಿಮ್ಮ ಕಾಲುಗಳನ್ನು ನೇರವಾಗಿ ನೆಲದ ಮೇಲೆ ಇಡಿ.

  3. ನಿಮ್ಮ ಕೈಗಳಿಂದ ಹಿಂದಕ್ಕೆ ಕುಚಿ೯ಯನ್ನು ಹಿಡಿದು ಹಾಗೆ ನಿಮ್ಮ ಸೊಂಟವನ್ನು ಬಲಕ್ಕೆ ತಿರುಗಿಸಿ ಹಿಂದಕ್ಕೆ ನೋಡಿ.

  4. ಹಾಗೆ ಎಡಭಾಗಕ್ಕೂ ತಿರುಗಿಸುತ್ತ ಇದನ್ನು ಕೆಲವು ಬಾರಿ ಮುಂದುವರಿಸಿ.

 

ಹಣೆಯ ಎಡ ಮತ್ತು ಬಲ ಭಾಗದ ಯೋಗ

  1. ನಿಮ್ಮ ಮೊಣಕೈಗಳಿಂದ ನಿಮ್ಮ ಮುಂದಿರುವ ಮೇಜಿನ ಮೇಲೆ ನೇರವಾಗಿ ಇಡಿ.

  2. ನಿಮ್ಮ ಎರಡು ಕೈಗಳಿಂದ ಹಣೆಯ ಎಡ ಮತ್ತು ಬಲಭಾಗವನ್ನು ನಿಧಾನವಾಗಿ ಪ್ರದಕ್ಷಿಣಾಕಾರವಾಗಿ ತಿಕ್ಕಿರಿ ಮತ್ತು ಅದನ್ನು ಅಪ್ರದಕ್ಷಿಣಾಕಾರವಾಗಿ ಹಾಗೆ ಮುಂದುವರಿಸಿ

  3. ಇದನ್ನು 10-15 ಧೀರ್ಘ ಉಸಿರಾಟದೊಂದಿಗೆ ಮುಂದುವರಿಸಿ.

 

 

 

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು   info@artoflivingyoga.in ನಲ್ಲಿ ಸಂಪರ್ಕಿಸಿ.

 

 

 

 

Interested in yoga classes?