ದುರಂತ ಪರಿಹಾರ

ವಿಶ್ವದಾದ್ಶಂತ ಇರುವ ಆರ್ಟ್ ಆಫ್ ಲಿವೀಂಗ್ ಸ್ವಯಂಸೇವಕ  ಶಾಖೋಪಶಾಖೆಗಳು  ಪ್ರಪಂಚದ ಯಾವ ಜಾಗದಲ್ಲೇ  ದುರಂತ  ಸಂಭವಿಸಿದರೂ, ಮರುಕ್ಷಣವೇ ನೆರವಿನ ಕಾರ್ಯದಲ್ಲಿ ತೊಡಗಿಸಿಕೊಲ್ಲುತ್ತದೆ.  ದುರಂತ ಪೀಡಿತ ಜನರ ಮನೋಬಲ ಹೆಚ್ಚಿಸಿ, ಅವರು ಸಾಮಾನ್ಯ ಜೀವನ ನಡೆಸಲು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಒದಗಿಸುತ್ತದೆ. ಈ ರೀತಿಯ ಕಾರ್ಯಶೈಲಿಯಿಂದ, ವಿಶ್ವದಾದ್ಯಂತ ವಿಪತ್ತಿನ ಪರಿಹಾರ ಹಾಗೂ ಪುನರ್ವಸತಿ ಒದಗಿಸಿ ಕೊಡುವುದರಲ್ಲಿ ಅತ್ಯುತ್ತಮ ನೆರವು ಕೊಡುವ ಪುಮುಖ ಸಂಸ್ಥೆಗಳಲ್ಲೊಂದು ಎಂದು ಒಂದು ವಿಶಿಷ್ಟ ಸ್ಥಾನಗಳಿಸಿಕೊಂಡಿದೆ.

ಜೀವನ ಕಲಾ ಕೇಂದ್ರದ ಸೋದರೀ  ಸಂಸ್ಥೆಗಳಾದ ಮಾನವೀಯ ಮೌಲ್ಯಗಳ ಅಂತರ್ರಾಷ್ಟ್ರೀಯ ಸಂಸ್ಥೆ  ಹಾಗೂ ವ್ಯಕ್ತಿವಿಕಾಸ ಕೇಂದ್ರ (ಭಾರತ) , ಭಾರತ ಇವುಗಳೊಡನೆ ಸೇರಿಕೊಂಡು, ಹಿಂಸಾಚಾರ ಮತ್ತು ಇತರ ನೈಸರ್ಗಿಕ ದುರ್ಘಟನೆ ಪೀಡಿತರಿಗೆ  ಪುನರ್ವಸತಿ ದೊರಕಿಸುವ ಜವಾಬ್ದಾರಿಯನ್ನು ಸ್ವತಃ ತೆಗೆದುಕೊಂಡಿದೆ.

ಸುನಾಮಿ ಹಾಗು ಗುಜರಾತಿನ ಭೂಕಂಪ  ದುರಂತ ಪೀಡಿತರಿಗೆ ಜೀವನ ಕಲಾ ಕೇಂದ್ರದ ಸ್ವಯಂ ಸೇವಕರು,  ತಮ್ಮ ಸುರಕ್ಷತೆಯ ಗಡಿಯನ್ನೂ ಮೀರಿ, ಮಾನಸಿಕ, ಭಾವನಾತ್ಮಕ ಹಾಗೂ ಭೌತಿಕ ಅಗತ್ಯಗಳನ್ನು ಒದಗಿಸಿದ್ದಾರೆ

ತುರ್ತು ಪರಿಹಾರ ಹಾಗೂ ತತ್ಕಾಲದ ವಸ್ತುಗಳ ನೆರವು

ಆರ್ಟ್ ಆಫ್ ಲಿವಿಂಗ್   ದುರಂತ  ಪರಿಸ್ಥಿತಿಗೆ ಅಗತ್ಯವಿರುವ ತುರ್ತುಸೇವೆಗಳ ಮತ್ತು ವಸ್ತುಗಳ ನೆರವು ನೀಡುತ್ತದೆ. ಸಂತ್ರಸ್ತರಿಗೆ ಆಹಾರ, ಬಟ್ಟೆ, ಔಷಧಿ ಹಾಗೂ ಆಶ್ರಯವನ್ನು ನೀಡಿ ರಕ್ಷಿಸಿತ್ತಾರೆ.   ವೈದ್ಯರು, ತಜ್ಞ ಸಲಹಕಾರರು ಮತ್ತು ದೈಹಿಕ/ ಮಾನಸಿಕ ತಜ್ಞರು ತತ್ಕಾಲ ಸೇವಾ ಪರಿಶ್ರಮದ ಅಂಗವಾಗಿದ್ದಾರೆ

ಅಲ್ಪಾವಧಿಯ ಆಫಾತ ಪರಿಹಾರ

ತೀವ್ರ ದೈಹಿಕ ಮತ್ತ ಮಾನಸಿಕ ಆಫಾತದಿಂದ ಬದುಕಿ, ಬಳಲುತ್ತಿರುವ ಸಂತ್ರಸ್ತರಿಗೆ, ಕೇವಲ  ವಸ್ತುಗಳ ನೆರವು ಫಲಪ್ರದವಾಗುವುದಿಲ್ಲ. ಆಫಾತದಿಂದ ತಲ್ಲಣಗೊಂಡಿರುವ ಮನಸ್ಥಿತಿಯನ್ನು ಹೋಗಲಾಡಿಸಿ ಅವರಲ್ಲಿ ಜೀವನ ಚೈತನ್ಯವನ್ನು ಪುನಃಶ್ಚೇತನಗೊಳಿಸುವುದು ಅತ್ಯವಶ್ಯಕವಾಗಿದೆ. ದಕ್ಷಿಣ-ಪೂರ್ವ ಏಷಿಯಾದ ಸುನಾಮಿಯಿಂದ ಬಳಲಿ, ಉಳಿದ ಒಂದು ದೊಡ್ಡ ತಂಡಕ್ಕೆ,  ಆಜೀವನ ಕಲಾ ಕೇಂದ್ರ ನೀಡಿದ ಆಫಾತ ಪರಿಹಾರದ ಬಗ್ಗೆ ನಡೆದ ಅಧ್ಯಯನವು, ಕೇವಲ ನಾಲ್ಕೇ ದಿನಗಳಲ್ಲಿ ಆಫಾತದ ಒತ್ತಡದ ವಿಕೃತಿಗಳಿಂದ ಅವರಿಗೆ ಪರಿಹಾರ ದೊರಕಿರುವುದನ್ನು ಕಂಡು ಹಿಡಿದಿದೆ.

ದೀರ್ಫಾವಧಿಯ ಪುನರ್ವಸತಿ

ನಿಜವಾದ ಪರಿಹಾರವೆಂದರೆ ದುರ್ಫಟನೆಗಳಲ್ಲಿ ಬದುಕುಳಿದವರಿಗೆ ಎಲ್ಲ ಸ್ತರಗಳಲ್ಲಿ ಸಂಪೂರ್ಣ ಪುನರ್ವಸತಿ ದೊರಕಿಸಿಕೊಡುವುದು. ಅಂದರೆ, ವೈಯಕ್ತಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಪುನಃಶ್ಚೇತನಗೊಳಿಸುವುದು. ಇದಲ್ಲದೆ ಸ್ಥಿರವಾದ, ಬದುಕನ್ನು ಸಂರಕ್ಷಿಸಿಕೊಳ್ಳಲು ಬೆಂಬಲವಾಗುವಂಥ ಜೀವನೋಪಾಯವು ಸಹ ಈ ಜನರಿಗೆ ಅತ್ಯಾಗತ್ಯವಾಗಿದೆ. ಇದನ್ನು ಸಾಧಿಸಲು, ನಮ್ಮ ಸ್ವಯಂಸೇವಕರು ಹಳ್ಳಿಗಳಲ್ಲಿ,  ಸ್ಥಳೀಯ ಜನಸಮುದಾಯಗಳೊಡನೆ ಗೃಹ ನಿರ್ಮಾಣ ಕಾರ್ಯದಲ್ಲಿ, ಶುಚಿತ್ವದ ಕಾರ್ಯನಿರ್ವಹಣೆಯಲ್ಲಿ, ರಸ್ತೆ ನಿರ್ಮಾಣದಲ್ಲಿ, ಶಾಲಾಕಟ್ಟಡಗಳ ನಿರ್ಮಾಣದಲ್ಲಿ, ಜೀವನೋಪಾಯಕ್ಕಾಗಿ ವೃತ್ತಿ ತರಬೇತಿ ಕೇಂದ್ರಗಳನ್ನು ನಿಯೋಜಿಸುವುದರಲ್ಲಿ ಹಾಗೂ ಇತರ ಮೂಲಭೂತ ನಿರ್ಮಾಣಕಾರ್ಯಗಳಲ್ಲಿ ಕಾರ್ಯನಿರತರಾಗಿದ್ದಾರೆ.

ಪಾಕಿಸ್ತಾನದಲ್ಲಿ ಪ್ರವಾಹ ಪರಿಹಾರ ಪ್ರಕ್ರಿಯೆಗಳು

2010, ಜುಲೈ ತಿಂಗಳ ಶೇಷಭಾಗದಲ್ಲಿ, ದೇಶದಾದ್ಯಂತ ಮುಂಗಾರು ಮಳೆಯು ಧಾರಾಕಾರವಾಗಿ ಸುರಿಯಿತು. ಅಂಥಹ ಕಠಿಣಸಮಯದಲ್ಲಿ ಪಾಕೀಸ್ತಾನದಲ್ಲಿರುವ ಆರ್ಟ್ಜೀವನ ಕಲಾ ಕೇಂದ್ರ, ಜನರ ನೆರವಿಗಾಗಿ ಕಟಿಬದ್ಧವಾಗಿ ನಿಂತಿತು.