ನಮ್ಮ ಸಬಲೀಕರಣದ ಮಾದರಿ

ಜನರ ಪರಿವರ್ತನೆ

ಯುವ ನಾಯಕತ್ವ ತರಬೇತಿ ಕಾರ್ಯಕ್ರಮ ( ವೈ ಎಲ್ ಟಿ ಪಿ)

ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನುಹೊಂದಿರುವ ದೇಶ. ಭಾರತದ ಜನಸಂಖ್ಯೆಯಲ್ಲಿ ಶೇ. ೪೦% ಯುವಕರಿದ್ದಾರೆ (ರಾಷ್ಟೀಯ ಯುವ ನೀತಿಯ ಪ್ರಕಾರ). ನಮ್ಮ ಯುವ ನಾಯಕತ್ವ  ತರಬೇತಿ ಕಾರ್ಯಕ್ರಮವು ಇವರನ್ನು ಮಾದರಿ ನಾಯಕರನ್ನಾಗಿ ಮಾಡುತ್ತದೆ. ನಮ್ಮ ಪ್ರಾಯೋಗಿಕ ತರಬೇತಿಯ ಪ್ರಕ್ರಿಯೆಗಳು ಹಳ್ಳಿಗಳ ಮತ್ತು ಬುಡಕಟ್ಟು ಜನಾಂಗದ ಯುವಕ ಯುವತಿಯರಲ್ಲಿ ಬದಲಾವಣೆಯನ್ನು ತರಲು ಬೇಕಾದ ಆತ್ಮವಿಶ್ವಾಸ, ಚೈತನ್ಯ  ಮತ್ತು ಉತ್ಸಾಹವನ್ನು ತುಂಬಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ  ಪರಿವರ್ತಿಸುತ್ತವೆ.ಮಾನವೀಯ ಮೌಲ್ಯಗಳನ್ನು ಪುನಶ್ಚೇತನಗೊಳಿಸಿ, ಮಾನಸಿಕ ಸಾಮರ್ಥ್ಯವನ್ನು ಉತ್ತೇಜಿಸಿ, ದೈಹಿಕ ಆರೋಗ್ಯವನ್ನು  ಸುಧಾರಿಸಿ, ವೃತ್ತಿಪರ ಕುಶಲತೆಯನ್ನು  ಅಭಿವೃದ್ಧಿಗೊಳಿಸಿ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಈ ಶಿಬಿರವು ಪರಿವರ್ತನೆಯನ್ನು ತರುತ್ತದೆ.

ನಮ್ಮ ಯುವಕರು ನಮ್ಮ ಮುಂದಿನ ಭವಿಷ್ಯ. ಜೀವನ ಕಲಾ (ಆರ್ಟ್ ಆಫ್ ಲಿವಿಂಗ್) ಸಂಸ್ಥೆಯ ಯೋಜನೆಗಳನ್ನು ಬೆಂಬಲಿಸುವುದರಿಂದ ನೀವು ಭಾರತದ ಭವಿಷ್ಯದಲ್ಲಿ ವಿನಿಯೋಗಿಸುವಿರಿ..

ನಮ್ಮ ಸಾಧನೆಗಳು   (ವೈ ಎಲ್ ಟಿ ಪಿ  ಭಾರತ):

    • 1,10,1000ಕ್ಕೂ ಹೆಚ್ಚು  ಗ್ರಾಮೀಣ ಯುವಕರಿಗೆ ತರಬೇತಿಯನ್ನು ನೀಡಲಾಗಿದೆ
    • ಹಳ್ಳಿಗಳಲ್ಲಿ 40000 ಕ್ಕೂ ಹೆಚ್ಚು ಅಭಿವೃದ್ದಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ
    • 2.3 ದಶ ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ
    • 1800ಕ್ಕೂ ಹೆಚ್ಚು  ಮನೆಗಳು, 5400ಕ್ಕೂ ಹೆಚ್ಚು  ಶೌಚಲಯಗಳು, 1100ಕ್ಕೂ ಹೆಚ್ಚು  ಕೊಳವೆ ಬಾವಿಗಳು ಮತ್ತು 900ಕ್ಕೂ ಹೆಚ್ಚು  ಜೈವಿಕ ಅನಿಲ ಕೇಂದ್ರಗಳನ್ನು ನಿರ್ಮಿಸಲಾಗಿದೆ
    • 2.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜಕವಾಗಿರುವ 48000 ಸ್ವಾಸ್ಥ್ಯ  ಶಿಬಿರಗಳು ಹಾಗೂ 23000 ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ
    • 55 ಹಳ್ಳಿಗಳನ್ನು ಮಾದರಿ ಹಳ್ಳಿಗಳನ್ನಾಗಿ  ಪರಿವರ್ತಿಸಲಾಗಿದೆ