ವಿದ್ಯಾಭ್ಯಾಸ

ವಿದ್ಯಾಭ್ಯಾಸದಲ್ಲಿ ಒಂದು ಕ್ರಾಂತಿ

ಉಚಿತ ಶಾಲಾ ವಿದ್ಯಾಭಾಸದ ಕಾರ್ಯಕ್ರಮ

ವೇದವಿಜ್ಞಾನ ಮಹಾವಿದ್ಯಾ ಪೀಠವುಶ್ರೀ ಶ್ರೀ ರವಿಶಂಕರ್ ರವರಿಂದ ಸ್ಥಾಪಿತವಾದ ಮೊದಲನೆಯ ಗ್ರಾಮೀಣ ಪಾಠಶಾಲೆ. ಜೀವನ ಕಲಾಕೇಂದ್ರದ ಬಳಿಯಲ್ಲಿ, ಮಣ್ಣು ಧೂಳಿನಲ್ಲಿ  ಆಡುತ್ತಿದ್ದ ಸ್ಥಳೀಯ ಚಿಕ್ಕ ಮಕ್ಕಳನ್ನು ಗಮನಿಸಿದ ಶ್ರೀ ಶ್ರೀ ಅವರು ಈ ಶಾಲೆಯನ್ನು ಆರಂಭಿಸಿದರು. ಈ ಮಕ್ಕಳಿಗೆ ವಿದ್ಯಾಭ್ಯಾಸವು ಎಟುಕಲಾರದ ವಸ್ತುವಾಗಿದೆ ಎಂಬ ಅರಿವಾದ ನಂತರ, ಅವರು ಈ ಬಗ್ಗೆ ಯಾವುದಾದರೂ ಒಂದು ಬಗೆಯ ನೆರವು ನೀಡಲು ನಿರ್ಧರಿಸಿದರು

ಈ ಮಕ್ಕಳಿಗೆ ಆರೋಗ್ಯ ನೈರ್ಮಲ್ಯದ ಬಗ್ಗೆ ಮೂಲಭೂತವಾದ ಪಾಠಗಳನ್ನು ಕಲಿಸಿ, ವಿದ್ಯಾಪ್ರಧಾನವಾದ ಕ್ರೀಡೆಗಳನ್ನು ತಿಳಿಸಿ, ಸತ್ವಪೂರ್ಣ ಮತ್ತು ಆರೋಗ್ಯಕರವಾದ ಭೋಜನವನ್ನು ಹಂಚಲು, ಒಬ್ಬ ಸ್ಥಳೀಯ  ಸ್ವಯಂ ಸೇವಕರೊಬ್ಬರನ್ನು ನೇಮಕ ಮಾಡಲಾಯಿತು. ಮಕ್ಕಳಿಗೆ ಹಾಗೂ ಪೋಷಕರಿಗೆ ಇದೊಂದು ದೊಡ್ಡ ಆಕರ್ಷಣೆಯ ಕೇಂದ್ರವಾಗಿ ಈಗಲೂ ಇದು ಮುನ್ನಡೆಯುತ್ತಿದೆ. ಈ ಪಾಠಶಾಲೆಯು ಅಭಿವೃದ್ಧಿಗೊಂಡಂತೆ, ಒಂದು ಅಧಿಕೃತವಾದ ವಿದ್ಯಾ ಸಂಸ್ಥೆಯ ರಚನೆಯು ಸ್ಥಾಪಿತವಾಗಿ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಂಖ್ಯೆಯು ಹೆಚ್ಚಾಯಿತು.

ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ, ವಿದ್ಯಾಭ್ಯಾಸದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿರುವ 404 ಉಚಿತ ಶಾಲೆಗಳಿಗೆ, ಈ ವಿದ್ಯಾ ಸಂಸ್ಥೆಯು ಒಂದು ಮಾದರಿಯಾಯಿತು ಉಚಿತ ಶಾಲೆಗಳಲ್ಲಿ ಹೆಚ್ಚು ಮಾಹಿತಿ ಪಡೆಯಿರಿ.

ಮೊದಲ ಪೀಳಿಗೆಯ ವಿದ್ಯಾರ್ಥಿಗಳು

95%  ಅಂಶ ವಿದ್ಯಾರ್ಥಿಗಳು ಮೊದಲ ಪೀಳಿಗೆಯ ವಿದ್ಯಾರ್ಥಿಗಳು.  100%  ಅಂಶದಷ್ಟು ಜಯಭೇರಿ ಪಡೆದರೆಂಬುವುದು ಶಾಲೆಗೆ  ಹೆಮ್ಮೆಯ  ವಿಷಯವಾಗಿದೆ.

“ ಈ ಸಣ್ಣ ಪ್ರಾಯದಲ್ಲಿ ನನ್ನ ಮಗಳು ಹೊಲಗದ್ದೆಯಲ್ಲಿ ದುಡಿಯಬೇಕಾಗುತ್ತಿತ್ತು. ಇಷ್ಟು ವಿದ್ಯೆಯನ್ನು ಕಲಿಯುವಳೆಂದು ನಾವು ಸ್ವಪ್ನವನ್ನೂ ಕೂಡ ಕಂಡಿರಲಿಲ್ಲ . ಅವಳು ಶಾಲೆಗೆ ಹೋಗುತ್ತಿರುವುದು ನನಗೊಂದು ಆನಂದ ಸಂಗತಿ !” ಎಂದು ಶ್ರೀಮತಿ ಸಾವಿತ್ರಿ, ಒಬ್ಬ ತಾಯಿಯ ಉದ್ದರಿಸುತ್ತಾರೆ.

ಒತ್ತಡ ರಹಿತ ಶಾಲೆಗಳು

ಶಾಲೆಗೆ ಹಾಜರಾಗಲು ತಡೆಗಟ್ಟುವ ಅಂಶಗಳನ್ನು ಗಮನಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಾದರಕ್ಷೆಗಳು, ಪುಸ್ತಕಗಳು, ಬರೆಯಲು ಸಾಮಗ್ರಿಗಳು, ವಾಹನ ಸೌಕರ್ಯ ಮತ್ತು ಮಧ್ಯಾಹ್ನದ ಭೋಜನವನ್ನು ಆಯೋಜಿಸಿ, ಅಂಥಹ ಅಡೆತಡೆಗಳ ನಕಾರಾತ್ಮಕ ಪ್ರಭಾವವನ್ನು ಹಾಕಲಾಗಿದೆ.ಆರೋಗ್ಯಕರ ಶರೀರ ಮತ್ತು ಮನಸ್ಸಿನ ಬೆಳವಣಿಗೆಗಾಗಿ, ಶಾಲೆಯ ಪಠ್ಯಕ್ರಮದಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಾದ ನೃತ್ಯ, ಸಂಗೀತ, ರೇಖಾ ಚಿತ್ರ ಮತ್ತು ಚಿತ್ರಕಲೆಯನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ

ಜೀವನ ಕಲಾ ಕೇಂದ್ರದ, ಆರ್ಟ್ ಎಕ್ಸೆಲ್ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಕ್ರಮಬದ್ಧವಾಗಿ ಆಯೋಜಿಸಿ, ಮನೆಯಲ್ಲಿನ  ನಕಾರಾತ್ಮಕತೆಯನ್ನು ನಿಭಾಯಿಸಲು ನೆರವು ನೀಡುತ್ತದೆ. ಸಮುದಾಯ ವೈದ್ಯಕೀಯ ಸೌಕರ್ಯಗಳು ಮತ್ತು ಸಂಚಾರಿ ವೈದ್ಯ ಸೌಕರ್ಯವನ್ನೂ ತೆರವು ಮಾಡಿಕೊಡಲಾಗಿದೆ.

ಶಾಲೆಯಲ್ಲಿ ಒಂದು ಸಂಸದ ರಚನೆಯನ್ನು ಮಾಡಿ, ವಿದ್ಯಾರ್ಥಿಗಳಿಗೆ ರಾಜಕೀಯ ರಚನಾಕ್ರಮವನ್ನು ಹೆಚ್ಚು ತಿಳಿಯುವಂತೆ ಮಾಡಿ, ನಾಯಕತ್ವದ ಕ್ಷಮತೆಯನ್ನು ಅಭಿವೃದ್ಧಿಗೊಳಿಸಲು ಪೂರಕವಾಗುತ್ತದೆ.  ಶಾಲೆಯ ವಿದ್ಯಾರ್ಥಿಗಳು ನಮ್ಮ ಭಾರತೀಯ ಪ್ರಜಾರಾಜ್ಯದ ಆಡಳಿತ ಕ್ರಮವನ್ನು ಪ್ರಾಯೋಗಿಕವಾಗಿ ಕಲಿಯ ಬಹುದಾಗಿದೆ. ಶಾಲೆ ಮಂತ್ರಿಮಂಡಳವು ಕಿರಿಯದರ್ಜೆಯ ತರಗತಿಗಳ ಜವಾಬ್ದಾರಿಯನ್ನು ತೆಗೆದುಕೊಂಡು, ಶಾಲೆಯನ್ನು ನಡೆಸಲು(ನಿರ್ವಹಣೆಗೆ) ಸಹಾಯ ನೀಡುತ್ತದೆ.

ಸಮುದಾಯಗಳ ಬೆಳವಣಿಗೆ

ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಮಹತ್ವ ಕೊಟ್ಟು, ಹಿರಿಯ ವಿದ್ಯಾರ್ಥಿಗಳಿಗೆ ದರ್ಜೆಯ ಕೌಶಲ್ಯ, ಕಂಪ್ಯೂಟರ್  ಶಿಕ್ಷಣ ಮತ್ತು ಮರಗೆಲಸದ ಕಲೆಯಂಥಹ ಔದ್ಯೋಗಿಕ ಕುಶಲತೆಯನ್ನು ಕಲಿಸಿ, ಅವರನ್ನು ಮುಂದಿನ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹ ನೀಡುತ್ತಾರೆ

ಪೂರ್ವ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಈಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು, ಅವರು ಮುಂದಿನ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಮತ್ತು ಅದರ ಧ್ಯೇಯಗಳನ್ನು ತಲುಪಲು ಪ್ರೋತ್ಸಾಹ ನೀಡುತ್ತಾರೆ.

ವಿದ್ಯಾಭ್ಯಾಸದ ಮಹತ್ವದ ಅರಿವು ಹೆಚ್ಚಿಸಲು, ಈ ಪೂರ್ವ ವಿದ್ಯಾರ್ಥಿಗಳು, ಪೋಷಕರು ಮತ್ತು ಅವರ ಮಕ್ಕಳೊಂದಿಗೆ ಔಪಚಾರಿಕವಾಗಿ  ಸಂಧಿಸುತ್ತಿರುತ್ತಾರೆ.