ಆರೋಗ್ಯಕರ ಜೀವನ ಶೈಲಿಗಾಗಿ ಧ್ಯಾನ ಅಭ್ಯಾಸ

ನಮ್ಮಲ್ಲಿ ಆರೋಗ್ಯಕರ ಜೀವನಶೈಲಿ ಇದೆಯೋ ಇಲ್ಲವೋ ಕಂಡುಕೊಳ್ಳುವುದು ಹೇಗೆ?  ನನ್ನ ಜೀವನ ಶೈಲಿಯ ಆರೋಗ್ಯದ ಮಾಪನ ಎಷ್ಟು ಉತ್ತಮವಾಗಿದೆ ? ಇದನ್ನು ಹೇಗೆ ಅಭಿವೃದ್ಧಿಗೊಳಿಸಲಿ?  ನಮ್ಮ ಜೀವನ ಯಾವುದೋ ಒಂದು ಘಟ್ಟದಲ್ಲಿ, ಇದರ ಬಗ್ಗೆ ಚಿಂತಿತರಾಗುತ್ತೇವಲ್ಲವೆ?  ನಿಮ್ಮ ಜೀವನ ಹೇಗೆ ನಡೆಸುತ್ತಿದ್ದೀರಿ ಎನ್ನುವುದು ನಿಮ್ಮ ಜೀವನ ಶೈಲಿಯ ಮೇಲೆ  ಪ್ರಭಾವ ಬಿರುತ್ತದೆ..

ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಒಂದು ಉಪಾಯವಿದೆ.  ಅದು ಧ್ಯಾನ, ಬೇಕಾದಷ್ಟು ಜನರು ಇದನ್ನು ಹಂಚಿಕೊಂಡಿದ್ದಾರೆ.  ಆರೋಗ್ಯಕರ ಜೀವನಶೈಲಿಯನ್ನು  ಸಮೀಕ್ಷಿಸಿ, ಇದರಲ್ಲಿ ಧ್ಯಾನವು ಹೇಗೆ ಸಹಾಯ ಮಾಡಬಹುದೆಂದು ಕಂಡುಕೊಳ್ಳೋಣ.

#1 ಆರೋಗ್ಯಕರ ಆಹಾರ

ಇದು ಆಲೋಚಿಸಬೇಕಾದ ವಿಷಯ

ಎಷ್ಟು ಬಾರಿ ನಾನು ಪೌಷ್ಟಿಕ ಅಂಶಗಳಿಂದ ಕೂಡಿದ ಆಹರ ಸೇವನೆ ಮಾದುತ್ತೀನಿ ? ಸಾಮಾನ್ಯವಾಗಿ ನನ್ನ ದೇಹಕ್ಕೆ ಬೇಕಾಗಿರುವುದಕ್ಕಿಂತ ಜಾಸ್ತಿ ಅಥವ ಕಡಿಮೆ ಸೇವನೆ ಮಾಡುತ್ತೀನಾ?

ನೋಡಿ, ನಮಗೆ ಚೇತನ ಕೊಡುವ ಅತ್ಯಗತ್ಯವಿರುವ ಮೂಲ ಆಹಾರ.  ಆದ್ದರಿಂದ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಆಹಾರ, ಸರಿಯಾದ ಸಮಯಕ್ಕೆ ಸ್ವೀಕರಿಸುವು ಅಭ್ಯಾಸ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  ಹಲವಾರು ಬಾರಿ ನಾಲಿಗೆಯ ರುಚಿಗಾಗಿ ಆರೊಗ್ಯಕರವಲ್ಲದ ಆಹಾರವನ್ನು ಸೇವಿಸಿಬಿಡುತ್ತೇವೆ. ಎಷ್ಟೋ ಜನರು ಧ್ಯಾನದ ಅನುಭವ ಹಂಚಿಕೊಂಡಿದಿರುವ ಪ್ರಕಾರ, ನಿಯಮಿತ ಧ್ಯಾನದಿಂದ ಆರೋಗ್ಯಕರ ಆಹಾರ ಪದ್ಧತಿ ರೂಡಿಸಿಕೊಳ್ಳಲು ತುಂಬಾ ಸುಲಭವಾಗಿದೆ.

ಸುಷ್ಮ ಅವರು ಹಂಚಿಕೊಳ್ಳುತ್ತರೆ, "ಧ್ಯಾನದ ರೂಢಿಯಿಂದಾಗಿ, ನನ್ನ ದೇಹ ಸ್ವಾಭಾವಿಕವಾಗಿಯೇ ಆರೋಗ್ಯಕರ ಆಹಾರವನ್ನೇ ಇಷ್ಟ ಪಡುತ್ತದೆ - ಇದರಿಂದ ನಾನು ಮೊದಲಿಗಿಂತಲೂ ಸರ್ವೆ ಸಾಮನ್ಯವಾಗಿ ಆರೋಗ್ಯಕರ ಆಹಾರ ಸೇವನೆ ಮಾಡುತ್ತಿದ್ದೇನೆ."

ಗಿರೀಶ್ ಅವರ ಅನುಭವ ಕೇಳೋಣ "ನಾನು ಮೊದಲು ದುಷ್ಪರಿಣಾಮ ಗೊತ್ತಿದ್ದರೂ, ತುಂಬಾ ಮಾಂಸಹಾರಿ ಆಹಾರ ಸೇವಿಸುತ್ತಿದ್ದೆ.  ಆದರೆ ಒಂದು ವರ್ಷದ ಧ್ಯಾನದ ರೂಢಿಯಿಂದ ಮತ್ತು ಉಸಿರಿನ ತಂತ್ರದಿಂದ, ಹಾಗೆ ನನ್ನ ಮಾಂಸಾಹಾರದ ಕಡುಬಯಕೆ ಅದಾಗದೇ ಸಂಪೂರ್ಣ ಕಳಚಿದೆ”.

 

 

#2 ನಿದ್ರೆ ಮಾಡಬೇಕಾದ ಪ್ರಮಾಣ  ಮತ್ತು ಅದರ ಗುಣಮಟ್ಟ

ಇದರ ಬಗ್ಗೆ ಅಲೋಚಿಸುವ ವಿಷಯಗಳು

ನಿಮಗೆ ಸಾಕಷ್ಟು ಸಮಯ ನಿದ್ರೆ ಮಾಡಿದರೂ ಆಗಾಗ ಸುಸ್ತು ಎನಿಸುತ್ತದೆಯೇ ? ಸಾಮನ್ಯವಾಗಿ ಎಷ್ಟು ಹೊತ್ತು ನಿದ್ದೆ ಮಾಡುತ್ತೀರೀ?

ನಿಮಗೆ ಸುಸ್ತು ಅನಿಸಿದಾಗ ನಿಮ್ಮ ಮನಸ್ಸಿಗೆ ಬರಿವ ಮೊದಲ ಆಲೋಚನೆ ಏನು ?  "ಒಂದು ಸಣ್ಣ ನಿದ್ರೆ ಮಾಡೊ ಹಾಗಿದ್ದರೆ ಎಷ್ಟು ಚೆನ್ನ" - ಅಲ್ಲವೇ ? ಆದರೆ, ಸರಿಯದ ಪ್ರಮಾಣದ ನಿದ್ದೆಯ ಜೊತೆಗೆ (ಪ್ರತಿದಿನ ೭ - ೮ ಗಂಟೆ), ನಿದ್ದೆಯ ಗುಣಮಟ್ಟ (ನಿಮ್ಮ ನಿದ್ದೆ ಎಷ್ಟು ಆಳವಾಗಿದೆ) ನಿಮ್ಮ ಸಮಗ್ರ ಆರೊಗ್ಯದ ಮೇಲೆ ಪ್ರಭವ ಬೀರಲು, ಇದು ಕೂಡ ತುಂಬ ಮುಖ್ಯವಾದ ಅಂಶ..

[ಧ್ಯಾನವು ನಮ್ಮ ನಿದ್ರೆಯ ಗುಣಮಟ್ಟ ಹೆಚ್ಚಿಸುತ್ತದೆ.  ಹೇಗೆ ? ನಿದ್ರಾಹೀನತೆಗೆ ಮುಖ್ಯವಾದ ಕಾರಣಗಳಲ್ಲಿ, ಒತ್ತಡವೂ ಒಂದು.  ಧ್ಯಾನದ ನಿತ್ಯ ಅಭ್ಯಾಸದಿಂದ ಒತ್ತಡದ ಹಾರ್ಮೋನುಗಳು ಕ್ಷೀಣಿಸುತ್ತದೆ.  ಇದರಿಂದ ನಿಮ್ಮ ಮನಸ್ಸು ಶಾಂತಿಯುತವಾಗಿ, ಆಳವಾದ ನಿದ್ರೆ ಮತ್ತು ವಿಶ್ರಾಂತಿ ದೊರೆಯುತ್ತದೆ.

#3 ಸಕ್ರಿಯವಾಗಿರಿಸಿಕೊಳ್ಳಿ

ಇದರ ಬಗ್ಗೆ ಆಲೋಚಿಸಬೇಕಾದ ಕೆಲವು ಸಂಗತಿಗಳು

ಎಷ್ಟು ಬಾರಿ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ತಾಗುತ್ತದೆ ?  ದಿನದಲ್ಲಿ, ಎಷ್ಟು ಬಾರಿ ನಾನು ಸ್ವಾಭಾವಿಕವಾಗಿ ಚುರುಕಾಗಿ, ಸಕ್ರಿಯವಾಗಿ ಮತ್ತು ಸಂತೋಷವಾಗಿರುತ್ತೇನೆ ?

ದಿನದಲ್ಲಿ, ಮಾಡಬೇಕಾದ ಕೆಲಸಗಳು ಎಷ್ಟೊಂದು ಇದೆ ಅಲ್ಲವೆ ?  ನಿಃಸಂಶಯವಾಗಿ, ಇವಲ್ಲವನ್ನೂ ನಮ್ಮ ಸಾಮರ್ಥ್ಯವಿದ್ದಷ್ಟೂ ಅಚ್ಚುಗಟ್ಟಾಗಿ ಮಾಡಬೇಕೆಂಬ ಮನಸ್ಸಿರುತ್ತದೆ.  ಕೆಲವು ದಿನಗಳು ನಾವು ಚುರುಕಾಗಿ ಕ್ರಿಯಾಶೀಲತೆಯಿಂದಿರುತ್ತೇವೆ ಮತ್ತು ಕೆಲವು ದೆನಗಳಲ್ಲಿ ಆಲಸ್ಯವಿರುತ್ತದೆ. ನಿತ್ಯ ಧ್ಯಾನವನ್ನು ಜೀವನದಲ್ಲಿ ಅಳವಡಿಸಿರುವರು ಹೇಳುವುದು , ಧ್ಯಾನದಿಂದ ದಿನವೆಲ್ಲಾ ಸಕ್ರಿಯವಾಗಿ ಮತ್ತು ಉತ್ಸಾಹ ಮತ್ತು ಸಂತೋಷದಿಂದಿರಲು ಸಾಧ್ಯ.    ಏನಾದರೂ ಕೆಲವು ಸಮಯ ಸುಸ್ತು ಅಥವ ನಿರುತ್ಸಾಹ ಮೂಡಿದರೆ, ಕೆಲವೇ ನಿಮಿಷಗಳ ಧ್ಯಾನ ಮತ್ತೆ  ಚೇತನ ತುಂಬುತ್ತದೆ.

ಕಮಲಾ ಅವರು ಹಂಚಿಕೊಳ್ಳುತ್ತಾರೆ "ನಾನು ನಾಲ್ಕು ವರ್ಷದಿಂದ ಧ್ಯಾನ ಮಾಡುತ್ತಿದ್ದೇನೆ ನನಗೇ ಆಶ್ಚರ್ಯವಾಗುವ ವಿಷಯವೆಂದರೆ, ದಿನದಲ್ಲಿ, ಇಷ್ಟೊಂದು ಕೆಲಸ ನನ್ನಿಂದ ಆಗಿತ್ತಿರುವುದು ನೋಡಿ. ಎಷ್ಟೋ ಬಾರಿ ನನ್ನ ಸ್ನೇಹಿತರು ಕೇಳುತ್ತರೆ, ಹೇಗೆ ದಿನವೆಲ್ಲಾ ಸಾಕ್ರಿಯವಾಗಿರುವುದಕ್ಕೆ ಸಾಧ್ಯವೆಂದು -ಆಗ ಧ್ಯಾನದಿಂದ ಸಾಧ್ಯವೆಂಬ ರಹಸ್ಯವನ್ನು ಹಂಚುಕೊಳ್ಳುತ್ತೇನೆ.

#4 ನಿಮ್ಮನ್ನು ಪುನಃಶ್ಚೇತನಗೊಳಿಸುವದಕ್ಕೆ ಸಾಕಷ್ಟು ಸಮಯ ಕೊಡಿ

ಇದರ ಬಗ್ಗೆ ಅಲೋಚಿಸುವ ವಿಷಯಗಳು:ದಿನದಲ್ಲಿ, ನಾನು ಎಷ್ಟು ಸಮಯ ನನಗೆ ಇಷ್ಟವಾಗುವ ಕ್ರಿಯೆಯಲ್ಲಿ 

ಕಳೆಯುತ್ತೇನೆ, ನನಗೆ ಆರಾಮ ಕೊಡುವ ಕಾರ್ಯದಲ್ಲಿ ಎಷ್ಟು ಸಮಯ ತೊಡಗಿಸುತ್ತಿದ್ದೇನೆ ?

ಗಮನಿಸಿದ್ದೀರಾ ನೀವು, ನಿಮ್ಮ ಮನಸ್ಸು ಮತ್ತು ದೇಹಕ್ಕೆ ವಿಶ್ರಮಿಸಲು  ಅವಕಾಶ ಒದಗಿಸಿದಾಗ, ನೀವು ಕೆಲಸಗಳ್ಳನ್ನು ಬೇಗ ಮುಗಿಸುತ್ತೀರ?  ಆದರೆ ಸಾಮನ್ಯವಾಗಿ ನಮ್ಮ ದೂರು, ಮಾಡಲು ತುಂಬಾ ಇದೆ ಆದರೆ ಸಮಯದ ಅಭಾವ ಎಂದು ಅಲ್ಲವೇ ? ಗಮನಿಸಿ, ನಿಮ್ಮನ್ನು ಪುನಃಶ್ಚೇತನಗಳಿಸಲು ಒಂದು ಪ್ರಮುಖ ಮಾರ್ಗ ಅಂದರೆ ಧ್ಯಾನ.  ೨೦ ನಿಮಿಷಗಳ ಕಣ್ಣು ಮುಚ್ಚಿ ಧ್ಯಾನದಲ್ಲಿ ತೊಡಗುವುದರಿಂದ ಮನಸ್ಸಿನಲ್ಲಿ ಪ್ರಸ್ಸನ್ನತೆ ಮತ್ತು ಪ್ರಶಾಂತತೆ ಉಂಟಾಗುತ್ತದೆ.

ಧ್ಯಾನದ ಜೋತೆಗೆ, ಬೇರೆ ಏನಾದರೂ ಕೂಡ ಮಾಡಬಹುದು, ನಿಮ್ಮಲ್ಲಿ ಚೈತನ್ಯ ಉಕ್ಕಿಸಲು, ಹವ್ಯಾಸ  ಅಥವ ಇನ್ನೇನಾದರು ನಿಮ್ಮನ್ನು ವಿರಾಮಗಳಿಸಲು ಮಾಡಿರಿ  - ನಿಮಗಿಷ್ಟವಾದ ಪುಸ್ತಕ ಓದುವುದು ಅಥವ ಸಾಕು ಪ್ರಾಣಿಯ ಜೊತೆ ಆಟವಾಡುವುದು, ಇತ್ಯಾದಿ.  ಇನ್ನೂ ಒಳ್ಳೆಯ ಸುದ್ದಿ  ಅಂದರೆ, ಧ್ಯಾನದಿಂದಾಗಿ  ನಿಮ್ಮ ಸಾಮರ್ಥ್ಯ ಹೆಚ್ಚಾಗಿ, ಪರಿಣಾಮಕಾರಿಯಾಗಿ ಶೀಘ್ರವಾಗಿ ಕೆಲಸ ಮುಗಿಸಿ, ನಿಮಗೆ ಇಷ್ಟವಾದ ಹವ್ಯಾಸದಲ್ಲಿ ಹೆಚ್ಚು ಸಮಯ ವ್ಯಯಿಸಬಹುದು.

ಸಹನಾ ಅವರ ಅನುಭವ ಹಂಚಿಕೊಳ್ಳುತ್ತಾರೆ "ಬರೇ ಕೆಲಸದಲ್ಲಿ ತೊಡಗಿದ್ದರೆ, ನನಗೆ ಸುಸ್ತು ಮತ್ತು ಬೋರ್ ಆಗುವುದನ್ನು ಗಮನಿಸಿದ್ದೇನೆ.  ಆದರೆ ಮಧ್ಯದಲ್ಲಿ ಅಗಾಗ  ಸಮಯ ಮಾಡಿಕೊಂಡು ಧ್ಯನ ಮಾಡಿದಾಗ, ಒಂದೇ ತರದ ಏಕತಾನತೆಯ ಭಾವ ಮುರಿದು, ಕೆಲಸದಲ್ಲಿ ಆಸಕ್ತಿ ಮತ್ತು ಉತ್ಸಾಹ ಹೆಚ್ಚುವಂತೆ ಮಾಡುತ್ತದೆ.".

 

#5 ಕೆಲಸದಲ್ಲಿ ಉತ್ಸಾಹ

ಇದರ ಬಗ್ಗೆ ಅಲೋಚಿಸುವ ವಿಷಯಗಳು:

ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ, ನಾನು ಕೆಲಸದಲ್ಲಿ ತೊಡಗುವುದಕ್ಕೆ ಉತ್ಸಹಾದಿಂದ ಎದುರುನೋಡುತ್ತೇನೆಯೇ ಅಥವ "ಅಯ್ಯೋ ದೇವರೇ, ಇನ್ನೊಂದು ಕೆಲಸದ ದಿನ”ವೆಂಬ ಅನಿಸಿಕೆಯೇ  ?

ಇದರ ಬಗ್ಗೆ ಆಲೋಚಿಸಿ, ನೀವು ಯವಾಗ ಕೆಲಸದಲ್ಲಿ ಆನಂದವಾಗಿದೆ ಯೇಂದು ಹೇಳುತ್ತೀರಾ ?  ನಿಃಸಂಶಯವಾಗಿ, ಒಂದು ದೃಷ್ಟಿಯಲ್ಲಿ, ನಿಮ್ಮ ಕೆಲಸ ನಿಮಗೆ ಅತಿ ಪ್ರಿಯವಾದ ವಿಷಯವಾದಾಗ.  ಇನ್ನೊಂದು ದೃಷ್ಟಿಯಲ್ಲಿ, ನೀವು ನಿಮ್ಮನ್ನು ಪರಿಪೂರ್ಣ ನೂರು ಪ್ರತಿಶತಃ ತೊಡಗಿಸಿಕೊಂಡಾಗ ಮತ್ತು ಹಾಗೆ ಮಾಡಿದಾಗ, ನಿಮಲ್ಲಿ ತೃಪ್ತಿ ಉಂಟಾಗಿ, ಈ ಸಂತೃಪ್ತಿಯಿಂದ ಸಂತೋಷ ಮೂಡುವುದು.

ಈಗ ಪ್ರಶ್ನೆ ಏಳುವುದು, ಹೇಗೆ ಸಂಪೂರ್ಣ ಸಾಮರ್ಥ್ಯದಿಂದ ಕೆಲಸಮಾಡುವುದು !  ಇದಕ್ಕೆ ಒಂದು ಉತ್ತರ ಧ್ಯಾನ.  ಇದರ ಸೂತ್ರ ಸರಳ - ಧ್ಯಾನದಿಂದ ಮನಃ ಕೇಂದ್ರೀಕೃತವಾಗುತ್ತದೆ.  ಕೇಂದ್ರೀಕರಣದಿಂದ ಸಾಮರ್ಥ್ಯ ಹೆಚ್ಚುತ್ತದೆ. ಸಾಮರ್ಥ್ಯ ನಿಮ್ಮ ಉತ್ಪಾದಕತೆ ಹೆಚ್ಚಿಸುತ್ತದೆ. ಹೆಚ್ಚಿನ ಉತ್ಪಾದಕತೆ ನಿಮ್ಮ ಕೆಲಸದಲ್ಲಿ ಸಂತೃಪ್ತಿ ತರುತ್ತದೆ.

#6 ಉತ್ತಮ ಸಾಮಾಜಿಕ ವ್ಯಕ್ತಿತ್ವ

ಇದರ ಬಗ್ಗೆ ಅಲೋಚಿಸುವ ವಿಷಯಗಳು:

ನನಗೆ ಎಷ್ಟು ಸ್ನೇಹಿತರು ಇದ್ದಾರೆ ?  ಯಾವ ತರಹದ ಸಂಬಂಧ ಅವರ ಹತ್ತಿರ ಹಂಚಿಕೊಂಡಿದ್ದೀನಿ ?  ನನ್ನ ಸ್ನೇಹಿತರ
ಸಾಂಖ್ಯೆ ಹೆಚ್ಚುತ್ತಿದೆಯೋ ಅಥವ ಅದರ ವಿರುದ್ಧವೋ ?

ಈ ಮಾತನ್ನು ಕೇಳಿದ್ದೀರಾ "ಮನುಷ್ಯ ಓಂದು ಸಾಮಾಜಿಕ ಪ್ರಾಣಿ" ?  ನೋಡಿ ಸಾಮಾಜಿಕ ಆರೋಗ್ಯ ಕೂಡ ನಮ್ಮ ಸಮಗ್ರ ಆರೋಗ್ಯದಲ್ಲಿ ಒಂದು ಮುಖ್ಯ  ಪಾತ್ರವಿದೆ.  ನಾವು ಜನರ ಜೋತೆ ಹೇಗೆ ಹೊಂದಿಕೊಳ್ಳುತ್ತಿದ್ದೇವೆ ಎಂಬುದನ್ನು ಅವಲಂಬಿಸಿದೆ. ನಮ್ಮ ಸುಖ ದುಃಖ ಹಂಚಿಕೊಳ್ಳುವ ಜನರ ಪರಿವಾರ ನಮ್ಮ ಸುತ್ತ  ಮುತ್ತಲೂ ಇದ್ದರೆ ಎಷ್ಟು ಚೆನ್ನ ಅಲ್ಲವೇ ? ನಮಗೆ ಬೇಕಾದ ಕಷ್ಟ ಸಮಯದಲ್ಲಿ, ನಮ್ಮ ಸಾಮಜಿಕ ಸಂಬಂಧಗಳ ಮೂಲಕ ಪರಿಸ್ಥಿತಿ ಸುಲಭವಾಗಿ ನಿಭಾಯಿಸಬಹುದು.

ಆದರೆ, ಉತ್ತಮ ಸಾಮಜಿಕ ಸಂಬಂಧವನ್ನು ಹೇಗೆ ನಿರ್ಮಿಸುವುದು ?  ಸ್ನೇಹಪರತೆ ಮತ್ತು ಸಾಮಜಿಕ ಆಸಕ್ತಿ ನಮ್ಮ ಪ್ರಕೃತಿ.  ಈ ಸ್ವಭಾವದ ಗುಣಮಟ್ಟ ಶಕ್ತಿಯುತವಾಗಿರಿಸಬಹುದು.  ಧ್ಯಾನವು ಇತರರ ಬಗ್ಗೆ ನಮ್ಮಲ್ಲಿ ಸೂಕ್ಷ್ಮತೆ ತರಿಸುತ್ತದೆ, ಇದು ಜನರನ್ನು ಸ್ವೀಕರಿಸುವ ಗುಣ ವೃದ್ಧಿಸುತ್ತದೆ - ಇದರಿಂದ ನಮ್ಮ ಮಾತಿನಲ್ಲಿ ಹಾಗು ವ್ಯಕ್ತಪಡಿಸುವಿಕೆಯಲ್ಲಿ ಪರಿಣಾಮಕಾರಿಯಾಗುತ್ತದೆ.  ಈ ಎಲ್ಲಾ ಗುಣಗಳಿಂದ ನಾವು ಸುಲಭವಾಗಿ ಸಮಾಜದಲ್ಲಿ ಬಾಂಧವ್ಯ ಬೆಳಸಬಹುದು ಮತ್ತು ಆರೊಗ್ಯಕರ ಸಂಬಂಧ ಹೊಂದಬಹುದು.

 

#7 ಅನಾರೋಗ್ಯಕ್ಕೆ ಗುರಿಯಾಗುವುದಿಲ್ಲ

ಇದರ ಬಗ್ಗೆ ಅಲೋಚಿಸುವ ವಿಷಯಗಳು

ನೀವು ಎಷ್ಟು ಬಾರಿ ಅನಾರೋಗ್ಯದಿಂದ ಗುರಿಯಾಗುತ್ತಿದ್ದಿರ?

ಧ್ಯಾನವು ನಿಮ್ಮ ದೇಹದ ರಕ್ಷಣಾ ಶಕ್ತಿಯನ್ನು ಹೆಚ್ಚಿಸಿ, ಅನಾರೋಗ್ಯವನ್ನು ದೂರವಿಡುತ್ತದೆ. ಧ್ಯಾನವು , ನೀವು ಅನಾರೋಗ್ಯದಿಂದ ಬಳಲುತ್ತಿದ್ದಾಗ ಬೇಗನೆ ಗುಣಮುಖರಾಗಲು ಸಹಾಯ ಮಾಡುತ್ತದೆ.

ಧ್ಯಾನದ ಬಗ್ಗೆ ಕೆಲವು ಸಲಹೆಗಳು

  • ನಾವು ಸ್ವಾಭಾವಿಕವಾಗಿ ಆರೋಗ್ಯವಾಗಿರಬೇಕೆಂದು ಬಯಸುತ್ತೇವೆ, ಅಲ್ಲವೇ ?  ಮೇಲೆ ನಮೂದಿಸಿರುವ ವಿಷಯಗಳ ಬಗ್ಗೆ ಚಿಂತನೆ ಮಾಡಿ.  ಇದರಿಂದ ಧ್ಯಾನದಲ್ಲಿ, ನಿಮಲ್ಲಿ ಸಕಾರತ್ಮಕ ಬದಲಾವಣೆಗಳನ್ನು ಅನುಭವಿಸಲು ಆಗುತ್ತದೆ. 
  • ಕನಿಷ್ಠ  ಒಂದು ಬಾರಿಯಾದರೂ ಧ್ಯಾನ ಮಾಡಲೇಬೇಕು.  ನೀವೇ ಧ್ಯಾನ ಕಲಿತು ಮಾಡಬಹುದು ಅಥವ ಧ್ಯಾನದ  ಪರಿಣತೆಯಿರುವ ಶಿಕ್ಷಕರಿಂದ ಕಲಿಯಬಹುದು.ಧ್ಯಾನದಲ್ಲಿ ಪರಿಣತೆ  ಹೊಂದುರುವವರಿಂದ ಕಲಿತರೆ, ನಿಮ್ಮ ಧ್ಯಾನವು ಆಳವಾಗಿರುತ್ತದೆ ಮಾತು ಧ್ಯಾನದ ಅನುಭವ ಉಲ್ಲಾಸಭರಿತವಾಗಿರುತ್ತದೆ.
  • ನಿಮ್ಮ ಸ್ನೇಹಿತರೆ ಸಹಗೂಡಿ  ಒಟ್ಟಾಗಿ  ಧ್ಯಾನ ಮಾಡಬಹುದು.  ಇದರಿಂದ ನಿತ್ಯ ನಿಯಮಿತವಾಗಿ ಧ್ಯಾನ ಮಾಡುವದಕ್ಕೆ ಅನುಕೂಲವಾಗುತ್ತದೆ.

ಈ ಲೇಖನ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಪ್ರವಚನದಿಂದ ಪ್ರಭಾವಿತಗೊಂಡಿದೆ

ಲೇಖಕರು: ದಿವ್ಯಾ 

ಸಹಾಯ ಮತ್ತು ಸಲಹಗಳು: ರಾಜಲಕ್ಷ್ಮೀ, ಸಹಜ ಸಮಾಧಿ ಧ್ಯಾನ ಪರಿಣತರು ಮತ್ತು ಶಿಕ್ಷಕರು.