ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ ಪ್ರಕ್ರಿಯೆ ( ನಾಡಿ ಶೋಧನ ಪ್ರಾಣಾಯಾಮ)

 

ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ ಪ್ರಕ್ರಿಯೆ ಬಹಳ ಸರಳ ಮತ್ತು ಸುಂದರವಾದ ಉಸಿರಾಟ ಪ್ರಕ್ರಿಯೆಯಾಗಿದೆ. ಇದನ್ನು ಕೆಲವು ನಿಮಿಷಗಳ ಕಾಲ ಅಭ್ಯಾಸ ಮಾಡಿವುದರಿಂದ ನಮ್ಮ ಮನಸ್ಸು ಶಾಂತವಾಗಿ ಉಲ್ಲಾಸಭರಿತವಾಗಿರುತ್ತದೆ. ಈ ಪ್ರಕ್ರಿಯೆ ಒತ್ತಡ ಮತ್ತು ಆಯಾಸವನ್ನು ದೂರ ಮಾಡಲು ಸಹಕರಿಸುತ್ತದೆ. ಈ ಉಸಿರಾಟದ ಪ್ರಕ್ರಿಯೆಯನ್ನು ನಾಡಿಶೋಧನ ಪ್ರಾಣಾಯಾಮ ಎನ್ನುತ್ತೇವೆ. ದೇಹದಲ್ಲಿ ಮುಚ್ಚಿರುವ ನಾಡಿಯನ್ನು ತೆರೆದು ಮನಸ್ಸಿಗೆ ಹೆಚ್ಚಿನ ನೆಮ್ಮದಿ ಸಿಗಲು ಸಹಕರಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಲೋಮ ವಿಲೋಮ ಪ್ರಾಣಾಯಾಮ ಎಂದು ಕೂಡ ಹೇಳುತ್ತೇವೆ.

( ನಾಡಿ = ಸೂಕ್ಷ ಚೈತನ್ಯ ನಾಳ , ಶೋಧನ = ಶುದ್ದೀಕರಣ, ಶುಚಿಮಾಡು, ಪ್ರಾಣಯಾಮ = ಉಸಿರಾಟದ ಪ್ರಕ್ರಿಯೆ)

ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ ಮಾಡುವ ವಿಧಾನ ( ನಾಡಿ ಶೋಧನ ಪ್ರಾಣಾಯಾಮ)

alternate nose breathing

  1. ಬೆನ್ನು ಮತ್ತು ಕತ್ತು ನೇರವಾಗಿಟ್ಟು ಆರಾಮವಾಗಿ ಕುಳಿತುಕೊಳ್ಳಿ. ಭುಜಗಳು ಸಡಿಲವಾಗಿರಲಿ, ಮುಖದಲ್ಲಿ ಮಂದವಾದ ಮುಗುಳ್ನ್ ಗೆ ಇರಲಿ
  2. ಎಡ ಕೈಯನ್ನು ಎಡ ಮೊಣಕಾಲಿನ ಮೇಲಿಡಿ. ಅಂಗೈ ಮೇಲ್ಮುಖವಾಗಿರಲಿ ಅಥವಾ ಚಿನ್ಮುದ್ರೆಯಲ್ಲಿರಲಿ (ಹೆಬ್ಬೆರಳು ಮತ್ತು ತೋರು ಬೆರಳಿನ ತುದಿಗಳು ಮೆತ್ತಗೆ ತಾಗಿಕೊಂಡಿರಲಿ)
  3. ಬಲ ಕೈಯ ತೋರುಬೆರಳು ಮತ್ತು ಮಧ್ಯದ ಬೆರಳಿನ ತುದಿಯನ್ನು ಹುಬ್ಬಿನ ಮಧ್ಯದಲ್ಲಿರುವ ಸ್ಥಳದಲ್ಲಿ ಹಗುರವಾಗಿ ಇರಿಸಿ. ಉಂಗುರ ಬೆರಳು ಮತ್ತು ಕಿರು ಬೆರಳು ಮೂಗಿನ ಎಡಭಾಗದ ಹೊಳ್ಳೆಯ ಮೇಲೆ ಮತ್ತು ಹೆಬ್ಬೆರಳು ಮೂಗಿನ ಬಲ ಹೊಳ್ಳೆಯ ಮೇಲಿರಲಿ. ಉಂಗುರ ಬೆರಳು ಮತ್ತು ಕಿರುಬೆರಳು ಎಡ ಮೂಗಿನ ಹೊಳ್ಳೆ ಮುಚ್ಚಲು ಮತ್ತು ತೆರೆಯಲು ಉಪಯೋಗಿಸುತ್ತೇವೆ.
  4. ನಿಮ್ಮ ಹೆಬ್ಬೆರಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಹಗುರವಾಗಿ ಮುಚ್ಚಿ. ಎಡ ಒಳ್ಳೆಯಿಂದ ದೀರ್ಘವಾದ ಉಸಿರನ್ನು ತೆಗೆದು ಕೊಳ್ಳಿ. ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಯಿಂದ ಎಡಹೊಳ್ಳೆಯನ್ನು ಹಗುರವಾಗಿ ಮುಚ್ಚಿ ಬಲ ಹೊಳ್ಳೆಯ                                         ಮೇಲಿರುವ ಹೆಬ್ಬರಳನ್ನು ಸಡಿಲಿಸಿ ನಿಧಾನವಾಗಿ ಉಸಿರನ್ನು ಹೊರಹಾಕಿ.
  5. ಈಗ ನಿಧಾನವಾಗಿ ಎಡಹೊಳ್ಳೆಯಿಂದ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಯಿಂದ ಎಡಹೊಳ್ಳೆಯನ್ನು ಹಗುರವಾಗಿ ಮುಚ್ಚಿ ಬಲ ಹೊಳ್ಳೆಯ ಮೇಲಿರುವ ಹೆಬ್ಬೆಳನ್ನು ಸಡಿಲಿಸಿ ನಿಧಾನವಾಗಿ ಉಸಿರನ್ನು ಹೊರಹಾಕಿ.
  6. ಈಗ ಬಲಹೊಳ್ಳೆಯ ಮುಲಕ ಉಸಿರನ್ನು ತೆಗೆದು ಎದಹೊಳ್ಳೆಯ ಮೂಲಕ ಹೊರಹಾಕಿ. ಈಗ ನೀವು ಒಂದು ಸುತ್ತು ನಾಡಿಶೋಧನ ಪ್ರಾಣಯಾಮ ಮಾಡಿದಂತಾಯಿತು. ಪರ್ಯಾಯ ಮೂಗಿನ ಹೊಳ್ಳೆಯ ಮೂಲಕ ಉಸಿರಾಟವನ್ನು ಮುಂದಿವರಿಸಿ.
  7. ಇದೇ ರೀತಿ 9 ಸುತ್ತುಗಳನ್ನು ಮಾಡಿ. ಯಾವ ಹೊಳ್ಳೆಯ ಮೂಲಕ ಉಸಿರನ್ನು ಬಿಡುತ್ತೆವೆಯೋ ಅದೇ ಹೊಳ್ಳೆಯ ಮೂಲಕ ಉಸಿರನ್ನು ತೆಗೆಯಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಪ್ರಕ್ರಿಯೆಯು ಮುಗಿಯುವ ತನಕ ಕಣ್ಣುಗಳು ಮುಚ್ಚಿರಲಿ. ನಿಧಾನವಾಗಿ, ದೀರ್ಘವಾಗಿ, ಹೆಚ್ಚಿನ ಒತ್ತಡವಿಲ್ಲದೆ ನಿಮ್ಮ ಉಸಿರಾಟವನ್ನು ಮುಂದುವರೆಸಿ.

ನಾಡಿ ಶೋಧನ ಪ್ರಾಣಾಯಾಮ ಮಾಡಿದಾಗ ನಮ್ಮ ಮನಸ್ಸು ಶಾಂತವಾಗಿ ನಮ್ಮನ್ನು ಧ್ಯಾನದ ಸ್ಥಿತಿಗೆ ಕೊಂಡೊಯ್ಯುತ್ತದೆ.   ಆದುದರಿಂದ ನಾಡಿ ಶೋಧನ ಪ್ರಾಣಾಯಾಮ ಮುಗಿಸಿದ ತಕ್ಷಣ ಧ್ಯಾನ ಮಾಡಿದರೆ ಉತ್ತಮ. ಪದ್ಮ ಸಾಧನದಲ್ಲಿ ನಾವು ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು.

ಪರ್ಯಾಯ ಮೂಗಿನ ಹೊಳ್ಳೆ (ನಾಡಿ ಶೋಧನ ಪ್ರಾಣಾಯಾಮ) ಉಸಿರಾಟದ ಪ್ರಯೋಜನಗಳು( ಲಾಭ)

  • ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಶಾಂತವಾಗಿರಿಸಲು ಇರುವ ಅತ್ಯುತ್ತಮವಾದ ಉಸಿರಾಟದ ಪ್ರಕ್ರಿಯೆ.
  • ನಮ್ಮ ಮನಸ್ಸು ಹೆಚ್ಚಾಗಿ ಭೂತಕಾಲದ ಘಟನೆಗಳ ಬಗ್ಗೆ ಪಶ್ಚಾತ್ತಾಪ ಅಥವಾ ಖುಷಿ, ಭವಿಷ್ಯಕಾಲದ ಬಗ್ಗೆ ಚಿಂತೆಯನ್ನು ಮಾಡುತ್ತಿರುತ್ತದೆ.ನಾಡಿ ಶೋಧನ ಪ್ರಾಣಾಯಾಮವು ಮನಸ್ಸನ್ನು ವರ್ತಮಾನ ಕ್ಷಣದಲ್ಲಿ ಇರಿಸಲು ಸಹಕರಿಸುತ್ತದೆ
  • ಮನಸ್ಸು ಮತ್ತು ದೇಹದಲ್ಲಿ ತುಂಬಿರುವ ಒತ್ತಡವನ್ನು ನಿವಾರಿಸಿ ವಿಶ್ರಮಿಸಲು ಸಹಾಯ ಮಾಡುತ್ತದೆ.
  • ನಾಡಿ ಮತ್ತು ಸೂಕ್ಷ್ಮ ಚೈತನ್ಯ ನಾಳವನ್ನು ಶುದ್ಧೀಕರಿಸಿ ಸಮತೋಲನದಲ್ಲಿ ಇರಿಸಲು ಸಹಾಯ ಮಾಡುತ್ತದೆ.
  • ನಾಡಿ ಮತ್ತು ಸೂಕ್ಷ್ಮ ಚೈತನ್ಯ ನಾಳವನ್ನು ಶುದ್ಧೀಕರಿಸಿ ಸಮತೋಲನದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಶರೀರದಲ್ಲಿ ಪ್ರಾಣ( ಜೀವ ಶಕ್ತಿ) ಸರಾಗವಾಗಿ ಹರಿಯುತ್ತದೆ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ..

ಪರ್ಯಾಯ ಮೂಗಿನ ಹೊಳ್ಳೆ (ನಾಡಿ ಶೋಧನ ಪ್ರಾಣಾಯಾಮ) ಉಸಿರಾಟ ಮಾಡುವಾಗ ಗಮನಿಸಬೇಕಾದ ಅಂಶಗಳು

  • ಉಸಿರಾಟದ ಗತಿಯು ನಿಧಾನವಾಗಿ ಸ್ವಾಭಾವಿಕವಾಗಿರಲಿ. ಉಸಿರಾಟಕ್ಕೆ ಹೆಚ್ಚಿನ ಒತ್ತಡವನ್ನು ಹಾಕಬೇಡಿ ಅಥವಾ ಉಸಿರಾಡುವಾಗ ಯಾವುದೇ ಶಬ್ದವನ್ನು ಮಾಡಬೇಡಿ. ಉಜ್ಜ್ ಯಿ ಉಸಿರಾಟ ಬೇಡ.
  • ಬೆರಳನ್ನು ಹಗುರವಾಗಿ ನಿಮ್ಮ ಹಣೆಯ ಮತ್ತು ಮೂಗಿನ ಮೇಲಿರಿಸಿ. ಹೆಚ್ಚಿನ ಒತ್ತಡವನ್ನು ಹಾಕುವುದು ಬೇಡ.
  • ನಾಡಿ ಶೋಧನ ಪ್ರಾಣಾಯಾಮ ಮಾಡಿದ ನಂತರ ನಿಮಗೆ ಆಲಸ್ಯ ಅಥವಾ ಆಕಳಿಕೆ ಬಂದರೆ, ನೀವು ಉಸಿರು ತೆಗೆಯಲು ಮತ್ತು ಬಿಡಲು ಎಷ್ಟು ಸಮಯ ತೆಗೆದುಕೊಂಡಿರುವಿರಿ ಎಂದು ಗಮನಿಸಿ ನೀವು ಉಸಿರು ಬಿಡಲು ತೆಗೆದು ಕೊಂಡ ಸಮಯವು ಉಸಿರು ತೆಗೆಯಲು ತೆಗೆದು ಕೊಂಡ ಸಮಯಕ್ಕಿಂತ ಹೆಚ್ಚಿರಬೇಕು

ವಿರುದ್ಧ ಚಿಹ್ನೆಗಳು:

ಜೀವನ ಕಲಾ ಯೋಗ ಶಿಕ್ಷಕರ ಸಹಾಯದಿಂದ ಈ ಉಸಿರಾಟ ಪ್ರಕ್ರಿಯೆಯನ್ನು ಕಲಿತ ಮೇಲೆ, ಈ ಪ್ರಾಣಾಯಾಮವನ್ನು ಬರಿ ಹೊಟ್ತೆಯಲ್ಲಿ ದಿನಕ್ಕೆ 2-3 ಬಾರಿ ಅಭ್ಯಾಸ ಮಾಡಬಹುದು.

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು   info@artoflivingyoga.in ನಲ್ಲಿ ಸಂಪರ್ಕಿಸಿ.