ದಿನ ನಿತ್ಯದ ಧ್ಯಾನದಿಂದ ನಿಮ್ಮ ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ಅಂತಃಸ್ಫುರಣೆಯೂ ಸ್ಫುಟಿಸುತ್ತದೆ

ನಿಮ್ಮ ಜೀವನದತ್ತ ಹಿಂದಿರುಗಿ ನೋಡಿದರೆ, ಇತರರು, “ನೀನು ಬಹಳ ಬುದ್ಧಿವಂತಿಕೆಯನ್ನು ತೋರಿಸಿ”, “ಅದು ಬುದ್ಧಿಯಿಂದ ಕೂಡಿದ ಆಲೋಚನೆ”, “ನೀನು ಬಹಳ ಬುದ್ಧಿವಂತ ವ್ಯಕ್ತಿ”ಯೆಂದು ಹೇಳಿರುವುದನ್ನು ನೆನಪಿಸಿಕೊಳ್ಳಬಹುದು. ಈ ಕ್ಷಣಗಳು ನಮ್ಮಲ್ಲಿ ಹೆಮ್ಮೆ, ಆತ್ಮಗೌರವ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತವೆ. ಇದು ಪದೇ ಪದೇ ಆಗಬೇಕೆಂದು ಬಯಸುವುದಿಲ್ಲವೆ ನೀವು? ನಿಮ್ಮ ದಿನನಿತ್ಯದ ಚಟುವಟಿಕೆಗಳು ಹೆಚ್ಚು ಸುಗಮವಾಗಿ ನಡೆಯಬೇಕು, ನೀವು ಸಮರ್ಥ ವ್ಯಕ್ತಿಗಳಾಗಬೇಕು ಮತ್ತು ನಕ್ಷತ್ರಗಳ ನಡುವಿನ ತಾರೆಯಾಗಿರಬೇಕು ಎಂದು ನಿಮಗೆ ಅನಿಸುವುದಿಲ್ಲವೆ?

ನಮಗೆಲ್ಲರಿಗೂ ಹೀಗೆ ಆಗಲಿ ಎಂದು ಎಲ್ಲರೂ ಬಯಸುವುದು ಸಹಜ. ಈ ರೀತಿಯಾಗಿ ಉತ್ಥಾಪಿತವಾಗುವ ದಾರಿ ಅತೀ ಶೀಘ್ರವಾದದ್ದು, ಸುಲಭವಾದದ್ದು ಮತ್ತು ಅದರ ಕ್ಷಿಪ್ರವಾದ ದಾರಿ ಎಂದರೆ, ಪ್ರತಿನಿತ್ಯ ಧ್ಯಾನ ಮಾಡುವುದು. ನಿತ್ಯ ಧ್ಯಾನದಿಂದ ನಿಮ್ಮ ಮನಸ್ಸು ಹೆಚ್ಚು ಸಮರ್ಥವಾಗುತ್ತದೆ ಮತ್ತು ಅದರ ಚಿಂತನಾ ಸಾಮಥ್ರ್ಯ ಹೆಚ್ಚುತ್ತದೆ.

1) ಸುಸ್ಪಷ್ಟವಾದ ಮನಸ್ಸು

ನಮ್ಮ ಮನಸ್ಸು ನಮ್ಮ ಗತದ ಆಲೋಚನೆಗಳ, ಅನುಭವಗಳ, ಭವಿಷ್ಯದ ಎದುರು ನೋಡುವಿಕೆಗಳ ಮತ್ತು ವರ್ತಮಾನದ ಪರಸ್ಪರ ಸಂಪರ್ಕಗಳ ಕನ್ನಡಿ. ಸದಾಕಾಲ ಅದನ್ನು ಪರಿಣಾಮಕಾರಕವಾಗಿ ಕೆಲಸ ಮಾಡುವಂತೆ ಮಾಡುವುದು ಒಂದು ಪ್ರಾಯಾಸಕರವಾದ ಕಾರ್ಯ. ಧ್ಯಾನದಿಂದ ಟೈಪ್ ಎ ಎಂದು ಕರೆಯಲ್ಪಡುವ, ಪರಿಪೂರ್ಣಾತ್ಮಕ ಪ್ರವೃತ್ತಿಗಳನ್ನು ಸಡಲಿಸಬಲ್ಲಿರಿ. ಸಹಜವಾಗಿಯೇ ನಿಮ್ಮ ಮೂಲದೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತೀರಿ. ನಿತ್ಯ ಧ್ಯಾನದಿಂದಾಗಿ ನಿಮ್ಮ ಮೇಲಿರುವ ಹೊರೆ ಕಡಿಮೆಯಾದಂತೆ ಅನಿಸುತ್ತದೆ ಮತ್ತು ವಿಶಾಲವಾದ ದೃಷ್ಟಿಕೋನದಿಂದ ವಿಷಯಗಳನ್ನು ಕಾಣುತ್ತೀರಿ. ಧ್ಯಾನವೆಂದರೆ ಸರಳವಾದ ಮಾನಸಿಕ ಸ್ವಚ್ಛತೆ :- ಕಸವನ್ನೆಲ್ಲಾ ಶುದ್ಧೀಕರಿಸುವುದು, ನಿಮ್ಮ ಪ್ರತಿಭೆಗಳನ್ನು ಮತ್ತಷ್ಟು ಸುಧಾರಿಸಿಕೊಳ್ಳುವುದು ಮತ್ತು ಆತ್ಮದ ಸಂಪರ್ಕದಲ್ಲಿರುವುದು. ಮನಸ್ಸಿನ ಸ್ಪಷ್ಟತೆ ದೊರೆತಾಗ ನಿಮ್ಮ ಪ್ರವೃತ್ತಿಗಳು ನಿಮ್ಮನ್ನು ಹೆಚ್ಚಾಗಿ ಬಾಧಿಸುವುದಿಲ್ಲ ಮತ್ತು ಪರಿಸ್ಥಿತಿಗಳಿಗೆ ಸುಲಭವಾಗಿ ಒಗ್ಗಿಕೊಳ್ಳುತ್ತೀರಿ. ಅದಕ್ಕೆ ತಕ್ಕಂತೆ ಮಾಡಬೇಕಾದ, ಅವಶ್ಯಕವಾದ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚು ಅರಿವನ್ನು ಹೊಂದುತ್ತೀರಿ. ಧ್ಯಾನದಿಂದ ನಿಮ್ಮ ಆಲೋಚನೆಯ ಗುಣಮಟ್ಟ ಹೆಚ್ಚುತ್ತದೆ.

2) ಗಮನ ಮತ್ತು ಏಕಾಗ್ರತೆ

ಒಂದಾನೊಂದು ಸಮಯದಲ್ಲಿ ನಮ್ಮೊಳಗೆ ಸರಿಸಾಟಿಯಿಲ್ಲದ, ಪ್ರಶಾಂತವಾದ, ನಿಸ್ಸೀಮಿತವಾದ ಶಕ್ತಿಯ ಮೂಲವಿದೆ ಎಂಬ ಅನುಭವವನ್ನು ಪಡೆದಿರಬಹುದು. ಈ ಆಂತರಿಕ ಅಚಲತೆಯನ್ನು ನಾವು ಹೆಚ್ಚಾಗಿ ಅನುಭವಿಸಿದಷ್ಟೂ ನಾವು ಹೆಚ್ಚು ಬಲಿಷ್ಠರಾಗುತ್ತೇವೆ. ಧ್ಯಾನವೆಂದರೆ ನಿಮ್ಮ ಈ ಅಚಲವಾದ ಮೂಲದೊಡನೆ ಸಂಪರ್ಕವನ್ನು ಸ್ಥಾಪಿಸುವುದು. ಇದರಿಂದ ನಿಮ್ಮ ಆಂತರಿಕ ಶಾಂತಿ, ಪ್ರಶಾಂತತೆ ಹೆಚ್ಚುತ್ತದೆ. ಇದರಿಂದಾಗಿ ನಿಮ್ಮ ಮನಸ್ಸು ಒಂದು ಶಕ್ತಿಶಾಲಿಯಾದ ಸಂಪತ್ತಾಗುತ್ತದೆ.

ನಿತ್ಯ ಧ್ಯಾನಾಭ್ಯಾಸದಿಂದ ನಿಮ್ಮ ಮನಸ್ಸು ತೀಕ್ಷ್ಣವಾಗುತ್ತದೆ. ಅದರಿಂದ ನಿಮ್ಮ ಏಕಾಗ್ರತೆಯ ಸಾಮಥ್ರ್ಯ ಹೆಚ್ಚುತ್ತದೆ, ಮನಸ್ಸು ವಿಶ್ರಾಮಿತವಾಗುತ್ತದೆ ಮತ್ತು ಕೆಲಸಗಳನ್ನು ಉತ್ತಮವಾಗಿ ಮಾಡಿ ಮುಗಿಸಬಲ್ಲಿರಿ. ಗುರುದೇವ್ ಶ್ರೀ ಶ್ರೀ ರವಿಶಂಕರರು, “ನಮ್ಮ ಜೀವನದ ಗುಣಮಟ್ಟ ನಮ್ಮ ಮನಸ್ಸಿನ ಗುಣಮಟ್ಟಕ್ಕೆ ಅನುಗುಣವಾಗಿರುತ್ತದೆ” ಎನ್ನುತ್ತಾರೆ. ಈ ಜಗತ್ತಿನಲ್ಲಿ ನಡೆಯುವುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಧ್ಯಾನದಿಂದ ನಮ್ಮ ಆಲೋಚನೆಯ ಗುಣಮಟ್ಟವನ್ನು ನಿಯಂತ್ರಿಸಬಹುದು.

ಯುಎಸ್‍ಎಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್‍ನ ಸಾರಾ ಡಬ್ಲ್ಯೂ ಲಾಜರ್ ಮತ್ತು ತಂಡದವರು ನಡೆಸಿದ ಸ್ವತಂತ್ರವಾದ ಸಂಶೋಧನೆಯಿಂದ, ಧ್ಯಾನವು ಕಾರ್ಟೆಕ್ಸ್ ದಪ್ಪವಾಗಲು ಸಹಾಯ ಮಾಡುತ್ತದೆಂದು ಮತ್ತು ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ತಿಳಿದು ಬಂದಿದೆ.

ಐಲೀನ್ ಲ್ಯೂಡರ್ಸ್‍ನವರು ನಡೆಸಿದ ಮತ್ತೊಂದು ಸಂಶೋಧನೆಯಿಂದ ಧ್ಯಾನವು ಒಂದು ಇಂಧನದ ಮಾದರಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಇದರಿಂದ ಆಲೋಚಿಸುವ ಸಾಮಥ್ರ್ಯವನ್ನು ನೀಡುವ ಮೆದುಳಿನ ಗ್ರೇ ಮ್ಯಾಟರ್ ಬೆಳೆಯುತ್ತದೆ ಎಂದು ತಿಳಿದು ಬಂದಿದೆ.

ಕೆಲವೊಮ್ಮೆ ನಮ್ಮಲ್ಲಿ ಪರಿಪೂರ್ಣವಾದ ಸಾಮರಸ್ಯವಿದ್ದಾಗ ನಮ್ಮೊಳಗಿರುವ ಒಂದು ಧ್ವನಿಯು ಅನುಪಮವಾದ ಆಲೋಚನೆಗಳನ್ನು, ಯೋಜನೆಗಳನ್ನು, ಅಭಿಪ್ರಾಯಗಳನ್ನು ಹೊರತರುತ್ತದೆ. ಇದರಿಂದ ನಮ್ಮಗ್ರಹಿಸುವ ಸಾಮಥ್ರ್ಯ ಹೆಚ್ಚುತ್ತದೆ ಮತ್ತು ನಮ್ಮ ತಿಳಿವಳಿಕೆ ಹೆಚ್ಚುತ್ತದೆ. ಇದು ಏಕ ಕಾಲದಲ್ಲಿ ಸವಿಸ್ತಾರವಾಗಿರುತ್ತದೆ ಮತ್ತು ಸಹಜವಾಗಿಯೂ ಆಗಿರುತ್ತದೆ.

ಖemಚಿiಟಿiಟಿg ಠಿಚಿges ತಿiಟಟ be ಛಿomiಟಿg ಣhಡಿough mobiಟe.