ಏಕಾಗ್ರತೆಯನ್ನು ಹೆಚ್ಚಿಸಲು ಧ್ಯಾನವೇಕೆ ಅಷ್ಟು ಮುಖ್ಯ?

ನೀವೊಂದು ಕಲಾವಿದರಾಗಿರಲಿ, ವೃತ್ತಿಪರರಾಗಿರಲಿ, ವಿದ್ಯಾರ್ಥಿಯಾಗಿರಲಿ, ಕ್ರೀಡಾಪಟು ಆಗಿರಲಿ, ನಿಮ್ಮ ಕ್ಷೇತ್ರ ಯಾವುದೇ ಆಗಿರಲಿ, ಹೊಸ ವಿಷಯಗಳನ್ನು ಕಲಿಯುವ ಮತ್ತು ನೀವು ಮಾಡುವ ಕೆಲಸದ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿಮಗೆ ಏಕಾಗ್ರತೆಯು ಬೇಕೇ ಬೇಕು. ನಿಮ್ಮ ಪ್ರತಿಭೆ ಮತ್ತು ನೈಪುಣ್ಯತೆ ಎμÉ್ಟೀ ಇರಲಿ, ಜೀವನವು ನಮ್ಮತ್ತ ಆಶ್ಚರ್ಯಗಳನ್ನು ಎಸೆಯುತ್ತಲೇ ಇರುತ್ತವೆ ಮತ್ತು ಈ ವರ್ಗದ ಜನರಿಗೆ ಏಕಾಗ್ರತೆಯನ್ನು ಕಳೆದುಕೊಳ್ಳುವುದೇ ದೊಡ್ಡ ಸವಾಲು. ಅನೇಕ ಸಲ ಏಕಾಗ್ರತೆಯ ಸಾಮಥ್ರ್ಯ ಕುಂದುತ್ತದೆ ಮತ್ತು ಈ ಸ್ಥಿತಿ ಕೆಲ ದಿನಗಳವರೆಗೆ, ಕೆಲ ವಾರಗಳವರೆಗೆ ಅಥವಾ ಕೆಲವು ತಿಂಗಳವರೆಗೆ ಮುಂದುವರಿಯುತ್ತದೆ. ನಮ್ಮ ಸಮಯದ ಮೇಲೆ ಬರುವ ಅಪಾರ ಒತ್ತಡ ಮತ್ತು ಅದರಿಂದುಂಟಾಗುವ ಒತ್ತಡ ನಮ್ಮ ಏಕಾಗ್ರತೆಯ ಸಾಮಥ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಒಳಿತಿನ ಭಾವ ಕುಂದುತ್ತಾ ಹೋಗುತ್ತದೆ.

ಅನೇಕ ಜನರಿಗೆ ಏಕಾಗ್ರತೆಯನ್ನು ಹೊಂದುವ ಸಮಸ್ಯೆಯಿದೆ ಮತ್ತು ಅದಕ್ಕೆ ಅನೇಕ ಕಾರಣಗಳಿರುತ್ತವೆ. ಅದು ದಣಿವಿರಬಹುದು, ಅಸಡ್ಡೆಯಿರಬಹುದು, ನಿರಾಸಕ್ತಿ, ಆತಂಕ ಅಥವಾ ಒತ್ತಡವಿರಬಹುದು. ಏಕಾಗ್ರತೆಯ ಅಭಾವದ ಪ್ರಮುಖ ಕಾರಣವೆಂದರೆ ಚಡಪಡಿಸುತ್ತಿರುವ, ಛಿದ್ರಗೊಂಡಿರುವ ಮನಸ್ಸು. ನಿಮ್ಮ ಏಕಾಗ್ರತೆಯನ್ನು ಮತ್ತಷ್ಟು ಸುಧಾರಿಸಲು ನಿಮ್ಮ ಮನಸ್ಸಿಗೆ ತರಬೇತಿಯನ್ನು ಹೇಗೆ ನೀಡಲು ಸಾಧ್ಯ? ಏಕಾಗ್ರತೆಯು ನಮ್ಮೊಳಗೆ ಸಹಜವಾಗಿರುವ ಒಂದು ಸಾಮಥ್ರ್ಯ. ಮನಸ್ಸಿಗೆ ವಿಶ್ರಾಂತಿ ನೀಡಿದರೆ ಸಾಕು, ಸಹಜವಾಗಿಯೇ ನಮ್ಮ ಏಕಾಗ್ರತೆಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ನೀಡಲು ನಿಮ್ಮ ಬಳಿ ಅನೇಕ ಆಯ್ಕೆಗಳಿರಬಹುದಾದರೂ ಅದರಿಂದ ಏಕಾಗ್ರತೆಯು ಸ್ಥಿರವಾಗಿರಬಹುದು ಅಥವಾ ಇಲ್ಲದಿರಬಹುದು.

ಏಕಾಗ್ರತೆಯನ್ನು ಸುಧಾರಿಸಲು ಧ್ಯಾನವನ್ನೇಕೆ ಮಾಡಬಹುದು?

ಧ್ಯಾನದ ನಿತ್ಯಾಭ್ಯಾಸದಿಂದ ನಿಮ್ಮ ಗಮನವನ್ನು ಕೊಡುವ ಸಾಮಥ್ರ್ಯವು ಸುಧಾರಿಸುತ್ತದೆಂದು ಅನೇಕ ಸಂಶೋಧನೆಗಳು ತಿಳಿಸಿವೆ. ಧ್ಯಾನದಿಂದ ಮನಸ್ಸು ವಿಶ್ರಾಂತಿ ಪಡೆದು, ವರ್ತಮಾನದಲ್ಲಿರುತ್ತದೆ. ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯು, ಧ್ಯಾನವನ್ನು ಮಾಡುತ್ತಿರುವವರು ಕೆಲಸಗಳನ್ನು ಉತ್ತಮವಾಗಿ ಮಾಡಿ ಮುಗಿಸುತ್ತಾರೆಂದೂ ಮತ್ತು ಧ್ಯಾನ ಮಾಡದಿರುವವರಿಗೆ ಏನಾದರೂ ಸಮಸ್ಯೆಯನ್ನು ಎದುರಿಸಿದರೆ ಅವರು ಅಷ್ಟು ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸುವುದಿಲ್ಲವೆಂದು ತಿಳಿಸಿದೆ. ಧ್ಯಾನಕ್ಕಾಗಿ ಏಕಾಗ್ರತೆ ಬೇಕು ಎಂದು ಜನರು ಹೇಳಿರುವುದನ್ನು ಕೇಳಿದ್ದೇವೆ. ಆದರೆ ಗುರುದೇವ್ ಶ್ರೀ ಶ್ರೀ ರವಿಶಂಕರರು, “ಧ್ಯಾನವೆಂದರೆ ಏಕಾಗ್ರತೆಯನ್ನು ಮಾಡದಿರುವ ಒಂದು ಕಲೆ. ಧ್ಯಾನದ ನಿತ್ಯಾಭ್ಯಾಸವನ್ನು ಮಾಡುತ್ತಲಿದ್ದಾಗ ಏಕಾಗ್ರತೆ, ಜಾಗೃತಿ ತಾನಾಗಿಯೇ ಬರುತ್ತದೆ” ಎನ್ನುತ್ತಾರೆ.

ಧ್ಯಾನದೊಡನೆ ಇತರ ಕೆಲವು ಅಭ್ಯಾಸಗಳನ್ನು ಮಾಡಿಕೊಂಡಾಗ ನಿಮ್ಮ ಏಕಾಗ್ರತಾ ಶಕ್ತಿಯೂ ಹೆಚ್ಚುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಧ್ಯಾನವನ್ನು ಆಳವಾಗಿ ಮಾಡಿಕೊಳ್ಳಲು ಕೆಲವು ಸೂಚಿಗಳು

ಂ) ಉಸಿರನ್ನು ಗಮನಿಸುವುದು ಉಸಿರು ಪ್ರಾಣದ ಮುಖ್ಯ ಮೂಲ. ನಿಮ್ಮ ಉಸಿರಿನ ಅರಿವನ್ನು ತಂದುಕೊಳ್ಳುವುದರಿಂದ ಪ್ರಶಾಂತಿಯನ್ನು ಅನುಭವಿಸುತ್ತೀರಿ. ಒಂದು ಸರಳವಾದ ಸೂಚಿಯೆಂದರೆ ನಿಮಗೆಂದು ಒಂದು ಮೌನವಾದ ಮೂಲೆಯನ್ನು ಹುಡುಕಿಕೊಳ್ಳುವುದು. ಎರಡನೆಯ ಹೆಜ್ಜೆಯೆಂದರೆ ನಿಮ್ಮ ಉಸಿರಿನ ಸಹಜ ಲಯದ ಮೇಲೆ ಎರಡು ನಿಮಿಷಗಳವರೆಗೆ ಮಂದವಾದ ಗಮನವನ್ನಿಡಿ. ಮೂರನೆಯ ಹೆಜ್ಜೆಯೆಂದರೆ ಧ್ಯಾನ ಮಾಡುವುದು. ಈ ಯಾವುದೇ ನಿರ್ದೇಶಿತ ಧ್ಯಾನಗಳನ್ನು ನೀವು ಮಾಡಿ, ಮನಸ್ಸಿನ ಸ್ತಬ್ಧತೆ ಮತ್ತು ಪ್ರಶಾಂತತೆಯನ್ನು ಅನುಭವಿಸಿ.

ಃ) ಪ್ರಾಣಾಯಾಮಗಳು

ಪ್ರಾಣಾಯಾಮದ ಮುಖ್ಯ ಅಂಶವೆಂದರೆ ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ಬಿಗಿ ಹಿಡಿಯುವುದು ಮತ್ತು ಉಸಿರನ್ನು ಹೊರಗೆ ಬಿಡುವುದು. ನಿಮ್ಮ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಶಕ್ತಿಯ ಮಟ್ಟಗಳನ್ನು ಹೆಚ್ಚಿಸಿಕೊಳ್ಳಲು ಪ್ರಾಣಾಯಾಮಗಳು ಅವಶ್ಯಕ. ನಾಡಿಶೋಧನ ಪ್ರಾಣಾಯಾಮವನ್ನು (ಒಂದು ಮೂಗಿನ ಹೊಳ್ಳೆಯಲ್ಲಿ ಉಸಿರನ್ನು ಒಳಗೆ ತೆಗೆದುಕೊಂಡು ಮತ್ತೊಂದು ಮೂಗಿನ ಹೊಳ್ಳೆಯಲ್ಲಿ ಉಸಿರನ್ನು ಹೊರಗೆ ಬಿಡುವುದು) ಕೆಲ ನಿಮಿಷಗಳವರೆಗೆ ಮಾಡಿದ ನಂತರ ಧ್ಯಾನವನ್ನು ಮಾಡಲು ಪ್ರಾರಂಭಿಸಿ. ಇದರಿಂದ ಮನಸ್ಸು ಸಂತೋಷವಾಗಿರುತ್ತದೆ, ಕೆಂದ್ರಿಕೃತವಾಗಿರುತ್ತದೆ ಮತ್ತು ಪ್ರಶಾಂತವಾಗಿರುತ್ತದೆ.

ಅ) ಸುದರ್ಶನ ಕ್ರಿಯೆ ಸುದರ್ಶನ ಕ್ರಿಯೆಯಲ್ಲಿ ನಿರ್ದಿಷ್ಟವಾದ ಸಹಜವಾದ ಉಸಿರಾಟದ ಲಯವಿದೆ. ಇದು ದೇಹ, ಮನಸ್ಸು ಹಾಗೂ ಭಾವನೆಗಳ ನಡುವೆ ಸಾಮರಸ್ಯವನ್ನು ಉಂಟು ಮಾಡುತ್ತದೆ. ಈ ಶಕ್ತಿಶಾಲಿಯಾದ, ಆದರೂ ಸರಳವಾದ ಉಸಿರಾಟದ ಪ್ರಕ್ರಿಯು ಒತ್ತಡವನ್ನು ನಿವಾರಿಸುತ್ತದೆ, ಮನಸ್ಸಿಗೆ ಪ್ರಶಾಂತಿ ಮತ್ತು ಏಕಾಗ್ರತೆಯನ್ನು ತಂದುಕೊಡುತ್ತದೆ. ಸಂಶೋಧನೆಗಳು, ಸುದರ್ಶನ ಕ್ರಿಯೆಯ ಅಭ್ಯಾಸಿಗರಲ್ಲಿ ಉತ್ತಮ ರೋಗನಿರೋಧಕ ಶಕ್ತಿ, ಹೆಚ್ಚಿನ ದೇಹ ದಾಢ್ರ್ಯತೆ ಮತ್ತು ಸುಸ್ಥಿರವಾದ ಹೆಚ್ಚಿನ ಶಕ್ತಿಯ ಮಟ್ಟಗಳು ಇರುತ್ತವೆಂದು ತಿಳಿಸುತ್ತವೆ.

ಆ) ಏಕಾಗ್ರತೆಯ ಪ್ರಾಣಾಯಾಮ

ಈ ಎರಡುವರೆ ನಿಮಿಷಗಳ ಪ್ರಕ್ರಿಯೆಯಿಂದ ಮೂರು ಗಂಟೆಗಳ ಕಾಲ ಸತತವಾಗಿ ಏಕಾಗ್ರತೆಯನ್ನು ಹೆಚ್ಚಿಸಿ ಉಳಿಸುತ್ತದೆ. ಆರ್ಟ್ ಆಫ್ ಲಿವಿಂಗ್ ವಿಶೇಷವಾಗಿ ನಿಯೋಜಿಸಿರುವ ಮಕ್ಕಳ ಹಾಗೂ ಹದಿ ಹರೆಯದ ಮಕ್ಕಳ ಕಾರ್ಯಕ್ರಮದಲ್ಲಿ ಏಕಾಗ್ರತೆಯ ಪ್ರಾಣಾಯಾಮವನ್ನು ಹೇಳಿಕೊಡಲಾಗುತ್ತದೆ. ಏಕಾಗ್ರತೆಯ ಪ್ರಾಣಾಯಾಮವು ಮನಸ್ಸಿನ ಛಿದ್ರತೆಯನ್ನು ಕುಗ್ಗಿಸುವಲ್ಲಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಬಲು ಪರಿಣಾಮಕಾರಕ.

ಏಕಾಗ್ರತೆಯನ್ನು ಹೆಚ್ಚಿಸಲು ಇತರ ಸೂಚಿಗಳು

1) ದೈಹಿಕ ಚಟುವಟಿಕೆ/ಯೋಗ

ದೈಹಿಕ ಚಟುವಟಿಕೆಯು ಅವಶ್ಯಕವಾಗಿರುವ ಕಾರಣವೆಂದರೆ, ಅದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಸೂರ್ಯ ನಮಸ್ಕಾರಗಳನ್ನು ಅಥವಾ ಇತರ ಯಾವುದೇ ಯೋಗಾಸನಗಳ ಸರಣಿಗಳನ್ನು ನಿಧಾನ ಗತಿಯಲ್ಲಿ ಮಾಡಿ.

ನಿಮ್ಮ ಪ್ರತಿಯೊಂದು ಚಲನೆಯ ಮೇಲೂ ಗಮನವನ್ನಿಡಿ ಮತ್ತು ಅದನ್ನು ನಿಧಾನ ಗತಿಯಲ್ಲಿ, ಉಸಿರಿನ ಮೇಲೆ ಗಮನವನ್ನಿಡುತ್ತಾ ಮಾಡಿ. ಕೇವಲ 20 ನಿಮಿಷಗಳ ಯೋಗದಿಂದ ಮೆದುಳಿನ ಚಟುವಟಿಕೆಗಳ ಪ್ರಚೋದನೆಯಾಗುತ್ತದೆ ಮತ್ತು ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಏಕಾಗ್ರತೆಯನ್ನು ಸಹಜವಾದ ರೀತಿಯಲ್ಲಿ ಹೆಚ್ಚಿಸಿಕೊಳ್ಳುವ ಒಂದು ರೀತಿಯೇ ಯೋಗ.

2) ಆರೋಗ್ಯಕರವಾಗಿ ತಿನ್ನಿ ನೀವೇನು ತಿನ್ನುತ್ತೀರೊ ಅದೇ ಅಗುತ್ತೀರಿ. ನೀವು ತಿನ್ನುವ ಆಹಾರ ಕೇವಲ ದೇಹದ ಮೇಲೆ ಮಾತ್ರ ಪರಿಣಾಮವನ್ನು ಬೀರದೆ, ಮನಸ್ಸು, ಆಲೋಚನೆ, ಬುದ್ಧಿ ಮತ್ತು ಅರಿವಿನ ಮೇಲೆ ಪ್ರಭಾವವನ್ನು ಬೀರುತ್ತದೆ. ಮೆದುಳಿಗೆ ನೀಡುವ ಆರೋಗ್ಯಕರವಾದ ಆಹಾರದಿಂದ ನಿಮ್ಮ ಸ್ಮೃತಿ ಮತ್ತು ಬುದ್ಧಿ ತೀಕ್ಷವಾಗಿರುತ್ತದೆ ಮತ್ತು ನಿಮ್ಮ ಭಾವನೆಯು ಉತ್ಥಾಪಿತವಾಗುತ್ತದೆ. ನೀವು ತಿನ್ನುವ ಜಂಕ್ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿ, ಮಾಂಸಾಹಾರವನ್ನು ತಿನ್ನುವುದನ್ನು ಕಡಿಮೆ ಮಾಡಬೇಕೆಂದು ಅನೇಕ ತಜ್ಞರು ಹೇಳುತ್ತಾರೆ.

3) ವರ್ತಮಾನದ ಕ್ಷಣದಲ್ಲಿರಿ ಏಕಾಗ್ರತೆಯನ್ನು ಸುಧಾರಿಸಿಕೊಳ್ಳುವುದೇ ಮುಖ್ಯ ಅಭ್ಯಾಸ. ಏಕಾಗ್ರತೆಯನ್ನು ಹೊಂದಲು ಈಗ, ವರ್ತಮಾನದ ಕ್ಷಣದಲ್ಲಿರಿ. ನೀವು ಅರಿವನ್ನು ತಂದು ಕೊಂಡ ತಕ್ಷಣ ಅಲೆಯುತ್ತಿರುವ ಮನಸ್ಸನ್ನು ಉಸಿರಿನ ಸಹಾಯದಿಂದ ವರ್ತಮಾನದ ಕ್ಷಣಕ್ಕೆ ಕರೆತನ್ನಿ. ಮನಸ್ಸಿನ ಪ್ರಜ್ಞೆಯನ್ನು ಜೀವನದ ರೀತಿಯನ್ನಾಗಿ ಮಾಡಿಕೊಳ್ಳಿ.

ದಿನನಿತ್ಯದ ಜೀವನದಲ್ಲಿ ಏಕಾಗ್ರತೆಯನ್ನು ಹೊಂದುವುದರಿಂದ ದೀರ್ಘ ವ್ಯಾಪಿಯಾದ ಬಹುಮಾನಗಳು ಸಿಗುತ್ತವೆ. ಆದ್ದರಿಂದ ಏಕಾಗ್ರತೆಯನ್ನು ಮತ್ತಷ್ಟು ತೀಕ್ಷ್ಣವಾಗಿಸಿಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡುವುದು ಒಳಿತು. ಆದ್ದರಿಂದ, ಸಕ್ರಿಯವಾಗಿ ನಿಮ್ಮ ಗಮನವನ್ನು ಹೆಚ್ಚಿಸಲು ನೀವು ಸಮಯವನ್ನು ಕೊನೆಯ ಸಲ ಕಳೆದದ್ದು ಯಾವಾಗ? ನಿಮ್ಮಲ್ಲಿ ನೀವು ಕಾಣಬೇಕೆಂದಿರುವ ವ್ಯತ್ಯಾಸವನ್ನು ಕಾಣಲು ಈಗಲೇ ಹೆಜ್ಜೆಯನ್ನು ಮುಂದಿಡಿ.

ಆರ್ಟ್ ಆಫ್ ಲಿವಿಂಗ್‍ನ ಹ್ಯಾಪಿನೆಸ್ ಕಾರ್ಯಕ್ರಮವು ನಿಮ್ಮ ಆಂತರಿಕ ಶಕ್ತಿಯನ್ನು ಪ್ರಚೋದಿಸಿ, ಅದನ್ನು ಬದ್ಧವಾದ ರೀತಿಯಲ್ಲಿ ಮತ್ತು ಕ್ರಿಯಾತ್ಮಕವಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ಮಾಡಬಹುದು. ಈ ಕಾರ್ಯಕ್ರಮವು ಸಹಜ ಅಭ್ಯಾಸಗಳಾದ ಯೋಗಾಸನಗಳನ್ನು, ಧ್ಯಾನವನ್ನು ಮತ್ತು ಸುದರ್ಶನಕ್ರಿಯೆಯಂತಹ ನೀವು ಎದುರಿಸಬಹುದಾದ ಸವಾಲುಗಳು ಮನಸ್ಸಿಗೆ ವಿಶ್ರಾಂತಿ ನೀಡಿ, ಏಕಾಗ್ರತೆಯನ್ನು ತರಲು, ನೀವು ಎಂದಾದರೂ ಸ್ವಲ್ಪ ಸಮಯವನ್ನು ತೆಗೆದುಕೊಂಡು ನಿಮ್ಮ ದಿನಚರಿಯನ್ನು ಗಮನಿಸಿದ್ದೇರೆ?

ಏನನ್ನು ಓದುತ್ತೀರಿ?

ಟಿವಿ ಅಥವಾ ಲ್ಯಾಪ್‍ಟಾಪ್‍ನೊಂದಿಗೆ ಎಷ್ಟು ಸಮಯವನ್ನು ಕಳೆಯುತ್ತೀರಿ?

ನೀವು ಯಾವ ರೀತಿಯ ಸಂಘದೊಡನಿರುತ್ತೀರಿ?

ಮನಸ್ಸಿನ ಉದ್ರೇಕವನ್ನು ಹೆಚ್ಚಿಸುವಂತಹ ಕಥೆಗಳನ್ನು, ಮಾಸಪತ್ರಿಕೆಗಳನ್ನು, ಜಾಹೀರಾತುಗಳನ್ನು ಅಥವಾ ಸುದ್ದಿಯನ್ನು ಕೇಳಿ, ಓದುವುದರಿಂದ ಮನಸ್ಸು ಮತ್ತಷ್ಟು ಉದ್ರೇಕಗೊಳ್ಳುತ್ತದೆ ಮತ್ತು ಮನಸ್ಸಿನ ಚಡಪಡಿಕೆ ಹೆಚ್ಚುತ್ತದೆ. ಟಿವಿ ಮತ್ತು ಅಂತರ್ಜಾಲವು ಮನಸ್ಸನ್ನು ತುಂಬಿ, ಅಸಂಬದ್ಧವಾದ ಮಾತುಕತೆಯನ್ನು ಮನಸ್ಸಿನಲ್ಲಿ ತುಂಬಿಬಿಡುತ್ತದೆ. ಅದರ ಬದಲಿಗೆ, ಹಗುರವಾದ ಆಧ್ಯಾತ್ಮಿಕ ಗ್ರಂಥಗಳನ್ನು ಓದುವ ಹವ್ಯಾಸವನ್ನು ಕಲ್ಪಿಸಿಕೊಳ್ಳಿ ಅಥವಾ ಸ್ಫೂರ್ತಿದಾಯಕವಾದ ಆಲೋಚನೆಗಳನ್ನು, ಗರಿಗೆದರುವ ಆಲೋಚನೆಗಳನ್ನು, ತತ್ವಗಳನ್ನು ಶೋಧಿಸಿ ಅಥವಾ ಪ್ರಕೃತಿಯೊಡನೆ ನಡೆಯಿರಿ. ಇದರಿಂದ ಮನಸ್ಸು ನೆಲೆನಿಲ್ಲಿ, ಏಕಾಗ್ರತೆಯು ಹೆಚ್ಚುತ್ತದೆ.

ಉಸಿರಾಟದ ವ್ಯಾಯಾಮಗಳನ್ನು ಹೊಂದಿದೆ. ಇದರಿಂದ ನಿಮ್ಮ ಗಮನ ಹೆಚ್ಚುತ್ತದೆ ಮತ್ತು ಅಲೆಯುತ್ತಿರುವ ನಿಮ್ಮ ಮನಸ್ಸನ್ನು ಅರ್ಥ ಪೂರ್ಣವಾದ ಮತ್ತು ಎಲ್ಲರ ಅಂತಿಮ ಬಯಕೆಯುಳ್ಳ ಗತಿಯತ್ತ ಕೊಂಡೊಯ್ಯಬಹುದು. ನಿಮ್ಮ ಬಳಿಯಲ್ಲಿ ಸಂತೋಷದ ಕಾರ್ಯಕ್ರಮವನ್ನು ಇಲ್ಲಿ ಕಂಡು ಹಿಡಿಯಿರಿ!