ಸಸ್ಯಹಾರಿ ಧ್ಯಾನದ ಸವಾಲು

ನಮ್ಮಲ್ಲಿ ಅನೇಕರಿಗೆ ಮಾಂಸಾಹಾರವನ್ನು ತಿನ್ನುವುದೆಂದರೆ ಒಂದು ನಂಬಿಕೆಯಾಗಿರಬಹುದು ಅಥವಾ ನಾಲಿಗೆ ರುಚಿಯನ್ನು ತೀರಿಸಿಕೊಳ್ಳುವ ಒಂದು ರೀತಿಯಾಗಿರಬಹುದು. ಅದರಲ್ಲಿ ಯಾವ ತಪ್ಪನ್ನೂ ಕಾಣುವುದಿಲ್ಲ. ಒಮ್ಮೆ ಅದರ ಸ್ವಾದವನ್ನು ರುಚಿಸಿದ ನಂತರ, ಮಾಂಸಾಹಾರವನ್ನು ತಿನ್ನದೆ ಇರುವುದು ಬಹಳ ಕಷ್ಟ.

ಕಾಲವು ಬದಲಿಸುತ್ತಿದೆ ಮತ್ತು ಸಸ್ಯಾಹರಕ್ಕೆ ತಿರುಗುವುದರಿಂದ ಸಿಗುವ ಅನೇಕ ಆರೋಗ್ಯದ ಲಾಭಗಳ ಬಗ್ಗೆ ವಾರ್ತೆಗಳು, ಸಂಶೋಧನೆ ಮತ್ತು ಸಾಕ್ಷ್ಯ ಚಿತ್ರಗಳು ಹೊರ ಬಂದಿವೆ. ಪ್ರಾಣಿ ಅಭಿವೃದ್ಧಿ, ಪರಿಸರದ ಆರೈಕೆ, ಆರೋಗ್ಯವಾದ ಹೃದಯ, ಹೀಗೆ ಅನೇಕಾನೇಕ ಕಾರಣಗಳಿವೆ. ಗೂಗಲ್‍ನಲ್ಲಿ ಹುಡುಕಿದಾಗ, “ಸಸ್ಯಾಹಾರಿ ಏಕಾಗಬೇಕು?” ಎಂದು ಹುಡುಕಿದಾಗ 161,000,000 ಫಲಿತಾಂಶಗಳನ್ನು ತೋರಿಸುತ್ತದೆ!

ನಾವು ಯಾವ ಹೊಸತಾದ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಅಂದುಕೊಳ್ಳುತ್ತಿರಬಹುದು. ನೀವು ನಿತ್ಯ ಧ್ಯಾನ ಮಾಡುವವರಾಗಿದ್ದರೆ, ಸಸ್ಯಾಹಾರವನ್ನು ಪಾಲಿಸಿದರೆ, ಅದರಿಂದ ಎಷ್ಟು ಲಾಭಗಳು ಉಂಟಾಗುತ್ತವೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ.

ಈ ಎಲ್ಲಾ ಲಾಭಗಳನ್ನು ನೀವೇ ಸ್ವತಃ ಅನುಭವಿಸಲು ಸಾಧ್ಯವಾದ, 31 ದಿವಸಗಳ “ಸಸ್ಯಾಹಾರಿ ಧ್ಯಾನದ ಸವಾಲ”ನ್ನು ಸ್ವೀಕರಿಸಿದಾಗ ಆಗುತ್ತದೆ. ಮಾತುಗಳಿಗಿಂತಲೂ ವೈಯಕ್ತಿಕ ಅನುಭವವೇ ಲೇಸು ಎಂಬುದೇ ನಮ್ಮ ನಂಬಿಕೆ. ಕೇವಲ ಒಂದು ತಿಂಗಳು ಸಸ್ಯಾಹಾರಿಯಾಗಿ, ಅದರಿಂದ ನಿಮ್ಮ ಧ್ಯಾನದ ಮೇಲೆ ಯಾವ ರೀತಿಯ ಪ್ರಭಾವವುಂಟಾಗುತ್ತದೆ, ಎಂದು ನೀವೇ ಸ್ವಯಂ ಕಂಡುಕೊಳ್ಳಿ.

ಈ ಸವಾಲನ್ನು ಸ್ವೀಕರಿಸಲು ನಿಮಗೆ ಬಹಳ ಧೈರ್ಯ ಬೇಕೆಂದು ನೆನಪಿಟ್ಟುಕೊಳ್ಳಿ. ಆದರೆ ನಿಮ್ಮಲ್ಲಿ ಬಲವಾದ ಛಲವಿರುವುದರಿಂದ, ಇದು ನೀವಂದುಕೊಂಡಷ್ಟು ಕಷ್ಟವಲ್ಲ. ಈ ಸವಾಲನ್ನು ನೀವು ಮುಂದುವರಿಸವಂತೆ ಸಹಾಯ ಮಾಡಲು ನಾವು ಸದಾ ಲಭ್ಯವಾಗಿರುತ್ತೇವೆ.

ಸೂಚನೆ : ಈ ಸವಾಲನ್ನು ತೆಗೆದುಕೊಳ್ಳುವ ಮೊದಲು ಮತ್ತು ಸವಾಲನ್ನು ತೆಗೆದುಕೊಂಡು ಮುಗಿಸಿದ ನಂತರದ ಅನುಭವವು, ನೀವೆಷ್ಟು ಮಾಂಸಾಹಾರ ತಿನ್ನುತ್ತಿದ್ದಿರಿ ಎಂಬುದರ ಮೇಲೆ ಅವಲಂಬಿಸಿದೆ.

ಈ ಸವಾಲನ್ನು ಪರಿಚಯಿಸುವ ಮೊದಲು ಸ್ವಲ್ಪ ಹಿನ್ನಡೆದು, ಸಸ್ಯಾಹಾರಿ ಧ್ಯಾನಸ್ಥರಾಗಿರುವುದು ಏಕೆ ಒಳ್ಳೆಯದು ಎಂದು ತಿಳಿಯೋಣ.

ಆಳವಾದ ಧ್ಯಾನ

ಈ ಪಯಣವು ಅತೀ ಅಮೂಲ್ಯವಾದದ್ದು, ಸೃಜನಶೀಲವಾದದ್ದು ಮತ್ತು ವೈಯಕ್ತಿಕವಾದದ್ದು, ಅಲ್ಲವೆ? ಜೀವನದ ಬಗ್ಗೆ ನಾವು ಹೊಂದಿರುವ ಧೋರಣೆ ಮತ್ತು ನಾವು ತಿನ್ನುವ ಆಹಾರವು ನಮ್ಮ ಆಂತರಿಕ ಪಯಣದ ಮೇಲೆ ಪ್ರಭಾವವನ್ನು ಬೀರುತ್ತದೆ ಎನ್ನುತ್ತಾರೆ.

ನಿಮ್ಮ ಕೆಲಸವನ್ನು 100% ಮಾಡಿದಾಗ ಮತ್ತು ತಾಜಾ ಆಹಾರವಾದ ತಾಜಾ ಹಣ್ಣುಗಳನ್ನು, ತರಕಾರಿಗಳನ್ನು, ಧಾನ್ಯಗಳನ್ನು ತಿಂದಾಗ ಆಳವಾದ ಧ್ಯಾನವನ್ನು ಎಂದಾದರೂ ಅನುಭವಿಸಿದ್ದೀರೆ? ಇಂತಹ ಆಹಾರವು ಹೊಟ್ಟೆಗೆ

ಹಗುರವಾಗಿರುತ್ತದೆ, ಹೆಚ್ಚು ಪ್ರಾಣಶಕ್ತಿಯನ್ನು ಹೊಂದಿರುತ್ತದೆ. (ಪ್ರಾಣ ಎಂದರೆ ನಿಮ್ಮನ್ನು ಸಕ್ರಿಯವಾಗಿಡುವ, ಉತ್ಸಾಹದಿಂದಿಡುವ, ನಿಮ್ಮ ಸುತ್ತಲೂ ಇರುವ ವಾತಾವರಣವನ್ನು ಸಕಾರಾತ್ಮಕವಾಗಿಡುವ ಶಕ್ತಿ).

ಖಂಡಿತವಾಗಿಯೂ ಆಹಾರವು ನಮ್ಮ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ನಮ್ಮ ಚೈತನ್ಯದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಗಿಡಗಳಿಗೆ ಪ್ರಾಣಿಗಳಿಗಿಂತಲೂ ಸೂಕ್ಷ್ಮವಾದ ಚೈತನ್ಯವಿದೆ. ಆದ್ದರಿಂದ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನುವುದರಿಂದ ದೇಹವು ಹಗುರಾಗಿರುತ್ತದೆ. ಇದರಿಂದ ನೀವು ಆಳವಾದ ಧ್ಯಾನದೊಳಗೆ ಹೊಕ್ಕಬಹುದು.

ಆದ್ದರಿಂದ, ಸಸ್ಯಾಹಾರವನ್ನು ಸೇವಿಸುತ್ತಿದ್ದಾಗ ಧ್ಯಾನ ಮಾಡಿದರೆ ನಿಮ್ಮ ಮನಸ್ಸು ದೇಹದೊಡನೆ ಬೆಸೆಯುತ್ತದೆ. ಸುಲಭವಾಗಿ ಉನ್ನತ ಸ್ಥಿತಿಯನ್ನು ಪಡೆಯಬಹುದು.

ಶೀಘ್ರ ಲಾಭಗಳು

ಸಸ್ಯಾಹಾರದೊಡನೆ ಧ್ಯಾನದ ಅಭ್ಯಾಸವನ್ನು ಮಾಡಿದಾಗ, ಧ್ಯಾನದ ಪ್ರಭಾವ ಮತ್ತು ಲಾಭಗಳನ್ನು ಬೇಗನೆ ಅನುಭವಿಸಬಹುದು. ಆದ್ದರಿಂದ, ಸವಾಲನ್ನು ಸ್ವೀಕರಿಸಲು ಸಿದ್ಧರಾಗಿರುವಿರೆ?

ಸವಾಲು

1) ನೀವು ನಿತ್ಯ ಧ್ಯಾನಿಗಳಾಗಿರುವುದರಿಂದ, ಕನಿಷ್ಠ ಪಕ್ಷ ದಿನಕ್ಕೊಮ್ಮೆಯಾದರೂ ಧ್ಯಾನ ಮಾಡುತ್ತಿರುವಿರಿ ಎಂದು ಅಂದುಕೊಳ್ಳುತ್ತೇವೆ. ನಿಮ್ಮ ಧ್ಯಾನದ ಅಭ್ಯಾಸವನ್ನು ಹಾಗೆಯೇ ಮುಂದುವರಿಸುತಿರಿ.

ನೀವು ನಿತ್ಯಧ್ಯಾನಿಗಳಾಗಿರದಿದ್ದರೆ, ನಿಮ್ಮ ಅಭ್ಯಾಸವನ್ನು ಮಾಡಲು ನಿಮಗೆ ಒಗ್ಗುವಂತಹ ಸಮಯವನ್ನು ಕಂಡುಕೊಳ್ಳಬೇಕೆಂಬುದೇ ನಮ್ಮ ಸಲಹೆ.

2) ಮುಂದಿನ 31 ದಿನಗಳವರೆಗೆ ಸಸ್ಯಾಹಾರವನ್ನು ಸೇವಿಸಿ. ನಿಮಗೆ ಯಾವ ಆಹಾರ ಒಳ್ಳೆಯದು ಎಂಬುದನ್ನು ಓದಿ ತಿಳಿಯಿರಿ.

ನೀವು ಮಾಂಸಾಹರಕ್ಕೇ ಒಗ್ಗಿ ಹೋಗಿರುವುದರಿಂದ ಸಸ್ಯಾಹರಕ್ಕೆ ತಿರುಗುವುದು ಆರಂಭದಲ್ಲಿ ಅಷ್ಟು ಸುಲಭವಾದ ವಿಷಯವಲ್ಲ ಎಂದು ನಮಗೆ ಗೊತ್ತು. ಆದ್ದರಿಂದ, ಈ ಸವಾಲನ್ನು ಎದುರಿಸುವಾಗ ನೀವು ಎದುರಿಸುವ ಕೆಲವು ವಿಘ್ನಗಳನ್ನು ಈಗ ನೋಡೋಣ. ಅದಕ್ಕೆ ಸೂಕ್ತವಾದ ಪರಿಹಾರವನ್ನೂ ಸಹ ನೀಡಲು ಯತ್ನಿಸುತ್ತೇವೆ.

ಆ ರುಚಿಯ ಅಭಾವ ನನ್ನನ್ನು ಕಾಡುತ್ತಿದೆ

ನಮ್ಮ ಸಲಹೆ :-

#1 ಅದೇ ಸಾಂಬ್ರಾಣಿಗಳನ್ನು ಬಳಸಿ : ನಿಮ್ಮ ಮಾಂಸಾಹಾರದಲ್ಲಿ ಹಾಕುವ ಅದೇ ಸಾಂಬ್ರಾಣಿಗಳನ್ನು ಬಳಸಿ. ಅವುಗಳಿಗೆ ನೀವು ಒಗ್ಗಿ ಹೋಗಿರುತ್ತೀರಿ ಮತ್ತು ಆಹಾರಕ್ಕೆ ರುಚಿಯನ್ನು ಕೊಡುವುದೇ ಅದು. ಅದೃಷ್ಟಕರವಾಗಿ ಈ ಎಲ್ಲಾ ಸಾಂಬ್ರಾಣಿಗಳೂ ಸಸ್ಯಾಹಾರವೇ. ಇವುಗಳನ್ನು ನಿಮ್ಮ ಸಸ್ಯಾಹಾರದಲ್ಲಿ ಬಳಸಿದರೆ ನಿಮ್ಮ ಸಸ್ಯಾಹಾರದ ಅಡುಗೆಗಳಲ್ಲಿ ಬಳಸಿದಾಗ ಅದೇ ರುಚಿಯನ್ನು ನೀಡುತ್ತವೆ. ನಿಮ್ಮ ಮಾಂಸಾಹಾರದಲ್ಲಿ ಬಳಸುವ ಅದೇ ಸಾಂಬ್ರಾಣಿಗಳನ್ನು ಬಳಸಿ ಅದೇ ರೀತಿಯ ಸಸ್ಯಾಹಾರಿ ಅಡುಗೆಯನ್ನು ಮಾಡಿ. ಸುಲಭವಾಯಿತಲ್ಲ?

ಇದರ ಬದಲಿಗೆ ಅಂಗಡಿಯಿಂದ ಸೋಯಅನ್ನು ಕೊಂಡು ತಂದು, ಅದೇ ಸಾಂಬ್ರಾಣಿಗಳನ್ನು ಬಳಸಿ ಅಡುಗೆ ಮಾಡಿ. ಇದು ಪೂರ್ಣವಾಗಿ ಸಸ್ಯಾಹಾರಿಯಾಗಿದ್ದು, ಮಾಂಸಾಹಾರವನ್ನು ತಿಂದμÉ್ಟೀ ತೃಪ್ತಿಯು ನಿಮಗೆ ಸಿಗುತ್ತದೆ.

#2 ಹೆಚ್ಚು ಸಸ್ಯಾಹಾರದ ರೀತಿಗಳನ್ನು ತಿನ್ನಲು ನಿಮ್ಮ ನಾಲಿಗೆಯನ್ನು ಸಿದ್ಧಪಡಿಸಿ : ಜೀವನದಲ್ಲಿ ಎಲ್ಲದ್ದಕ್ಕೂ ಒಳ್ಳೆಯ ಪರ್ಯಾಯವಿದೆ. ಅದಕ್ಕಾಗಿ ನೀವು ಸೃಜನಶೀಲರಾಗಿರಬೇಕು ಮತ್ತು ನವೀನವಾದ ಸಸ್ಯಾಹಾರದ ಅಡುಗೆಗಳ ರುಚಿಯನ್ನು ಸವಿಯಬೇಕು.

31 ದಿನಗಳು ಬಹಳ ದೀರ್ಘವಾದ ಕಾಲ

ನಮ್ಮ ಸಲಹೆ :

ಸಹನೆಯನ್ನು ಹೊಂದಿ : ರಾತ್ರೋರಾತ್ರಿ ಸಸ್ಯಾಹಾರಿಗಳಾಗಲು ಸಾಧ್ಯವಾಗದಿರಬಹು, ಆದರೆ ಕಾಲಕ್ರಮೇಣವಾಗಿ ನಿಮ್ಮ ಹಂಬಲ ಕುಗ್ಗುತ್ತದೆ. ಈ 31 ದಿವಸಗಳ ಕಾಲ ಸಸ್ಯಾಹಾರಿಗಳಾಗಿರುವುದರಿಂದ, ಈ ಸವಾಲನ್ನು ಬಿಡುವ ಮನಸ್ಸು ಎದ್ದರೂ ಅದನ್ನು ತಡೆಯಬಹುದು.

“ಕೇವಲ ಇಂದಿನ ದಿನ ಮಾತ್ರ ನಾನು ಮಾಂಸಾಹಾರ ತಿನ್ನುವುದಿಲ್ಲ” ಎಂಬಂತಹ ಅಲ್ಪ ಗುರಿಗಳನ್ನು ಮಾತ್ರ ಹೊಂದಿ. ಒಂದೇ ದಿನಕ್ಕಾಗಿ ತಿನ್ನದಿರುವುದು ಅμÉ್ಟೀನು ಕಷ್ಟಕರವಾಗಿ ತೋರುವುದಿಲ್ಲ. ಇದನ್ನು ಪ್ರತಿದಿನ ಬೆಳಿಗ್ಗೆ ಹೇಳಿಕೊಳ್ಳಿ. ಹೀಗೆ ಮಾಡುವುದರಿಂದ ಕೊನೆಗೆ ಒಳ್ಳೆಯದೇ ಆಗುತ್ತದೆ. “ಇನ್ನು ಕೆಲವೇ ದಿನಗಳಿವೆ, ಏನಾಗುತ್ತದೊ ನೋಡೋಣ. ನನಗಾಗಿ ಕೆಲವು ಸುಂದರವಾದ ಅನುಭವಗಳು ಕಾಯುತ್ತಿರಬಹುದು. ನನ್ನ ಹೊಟ್ಟೆಯನ್ನು ಆರೋಗ್ಯಕರವಾಗಿ ಮಾಡಿಕೊಳ್ಳುತ್ತಿದ್ದೇನೆ. ಪರಿಸರಕ್ಕೆ ಒಳ್ಳೆಯದನ್ನು ಮಾಡುತ್ತಿದ್ದೇನೆ” ಎಂದು ನಿಮ್ಮನ್ನು ನೆನಪಿಸಿಕೊಳ್ಳಿ. ನಿಮಗಾಗಿ ಅಲ್ಲದಿದ್ದರೂ, ಪರಿಸರಕ್ಕಾಗಿಯಾದರೂ ಮಾಡಿ.

ಇದರಲ್ಲಿ ನಾನು ಸೋಲುತ್ತಿದ್ದೇನೆ. ನನಗೆ ಮತ್ತಷ್ಟು ಧೈರ್ಯ ಬೇಕು

ನಮ್ಮ ಸಲಹೆ :

#1 ನಿಮ್ಮ ಪ್ರೀತಿಪಾತ್ರರಿಗೆ ಪ್ರಮಾಣ ಮಾಡಿ : ಇಲ್ಲಿ ಪ್ರೇಮವೇ ಆಯುಧ. ನಿಮ್ಮ ಪ್ರೀತಿಪಾತ್ರರಿಗೆ, ಈ ಸವಾಲನ್ನು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಸುತ್ತೀರಿ ಎಂದು ಪ್ರಮಾಣ ಮಾಡಿ. ಯಾರಿಂದ ನೀವು ನಿಜವಾಗಿಯೂ ಧೈರ್ಯವನ್ನು ಪಡೆಯಬಲ್ಲಿರೊ ಅವರ ಬಳಿ ಪ್ರಮಾಣ ಮಾಡಿ. ಅಂತಹ ವ್ಯಕ್ತಿ ಯಾರೆಂದು ನಿಮಗೆ ಖಂಡಿತವಾಗಿಯೂ ತಿಳಿದಿರುತ್ತದೆ.

#2 ನಿಮ್ಮ ಧ್ಯಾನವನ್ನು ತಪ್ಪಿಸಬೇಡಿ : ಧ್ಯಾನ ಮತ್ತು ಸಸ್ಯಾಹಾರವು ಒಂದಕ್ಕೊಂದು ಪೂರಕವಾದವು. ಸಸ್ಯಾಹಾರವು ಆಳವಾದ ಧ್ಯಾನವಾಗಲು ನಿಮಗೆ ಸಹಾಯ ಮಾಡಿದಂತೆಯೆ ಧ್ಯಾನದಿಂದ, ಮಾಂಸಾಹಾರವನ್ನು ಬಿಡುವ ಮನೋಬಲವು ನಿಮ್ಮಲ್ಲಿ ಬರುತ್ತದೆ.

#3 ಪ್ರಭಾವದ ಬಗ್ಗೆ ಅರಿವನ್ನು ಹೊಂದಿ : ಸಸ್ಯಾಹಾರದೊಡನೆ ನೀವು ಧ್ಯಾನ ಮಾಡುತ್ತಿದ್ದಾಗ ಆಳವಾದ ಧ್ಯಾನವನ್ನು ಅನುಭವಿಸುತ್ತೀರಿ. ಅನುಭವದ ಬಗ್ಗೆ ಅರಿವನ್ನು ಹೊಂದುವುದರಿಂದ ನಿಮ್ಮ ಬದ್ಧತೆಯನ್ನು ರಕ್ಷಿಸಿಕೊಳ್ಳಬಹುದು. ಬೇಕಿದ್ದರೆ ನಿಮ್ಮ ಅನುಭವಗಳನ್ನು ಒಂದು ಡೈರಿಯಲ್ಲಿ ಬರೆದಿಡಬಹುದು. ಪ್ರತಿದಿನ ನಿಮ್ಮ ಅನುಭವದ ಬಗ್ಗೆ ಐದು ವಾಕ್ಯಗಳನ್ನು ಬರೆಯಿರಿ. “ಇಂದಿನ ದಿನದ ದ್ಯಾನವೇಕೆ ಅಷ್ಟು ಬೇರೆಯಾಗಿತ್ತು? ಅದು ಸುಲಭವಾಗಿತ್ತೆ, ಕಷ್ಟವಾಗಿತ್ತೆ? ಅತೀ ಕಷ್ಟಕರವಾದ ಭಾಗ ಯಾವುದು?” ಎಂಬುದರ ಬಗ್ಗೆ ಬರೆಯಿರಿ.

ಇತರ ಸವಾಲುಗಳೇನಾದರೂ ಇದ್ದರೆ ತಿebಣeಚಿm.meಜiಣಚಿಣioಟಿ@ಚಿಡಿಣoಜಿಟiviಟಿg.oಡಿg ಗೆ ಬರೆಯಿರಿ ಮತ್ತು ನಿಮಗೆ ಪರಿಹಾರವನ್ನು ನೀಡಲು ನಮ್ಮ ಪೂರ್ಣ ಯತ್ನವನ್ನು ಮಾಡುತ್ತೇವೆ. ಸವಾಲನ್ನು ತೆಗೆದುಕೊಂಡು ನೀವೇ ಸ್ವತಃ ಅದರ ಫಲಿತಾಂಶಗಳನ್ನು ಅನುಭವಿಸಿ, ಅವುಗಳನ್ನು ನಮ್ಮೊಡನೆ ಹಂಚಿಕೊಳ್ಳುವುದನ್ನು ಮರೆಯಬೇಡಿ! ನಿಮಗೆ ಶುಭವಾಗಲಿ.